Tag: ಮಳಿಗೆ

  • ಶಿರಸಿ ಮಾರಿಕಾಂಬ ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್ – 1 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮಳಿಗೆಗಳು

    ಶಿರಸಿ ಮಾರಿಕಾಂಬ ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್ – 1 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮಳಿಗೆಗಳು

    ಕಾರವಾರ: ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮಾರ್ಚ್ 3ರಿಂದ 11ರ ವರೆಗೆ ಜಾತ್ರೆ ನಡೆಯಲಿದೆ.

    ಪ್ರತಿ ದಿನ ಜಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಲು ಎಲ್ಲಾ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಶಿರಸಿಯಲ್ಲಿ 400 ಪೊಲೀಸರು, 10 ಸಿಪಿಐ, 3 ಮಂದಿ ಡಿವೈಎಸ್‍ಪಿ, 30 ಪಿಎಸ್‍ಐ, 8 ಡಿಎಆರ್ ತುಕಡಿ, 2 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಿದೆ.

    ಈ ಬಾರಿ ವಾಹನ ಸಂಚಾರ ಸುಗಮವಾಗಲು ಹಾಗೂ ಬರುವ ಭಕ್ತರಿಗೆ ಟ್ರಾಫಿಕ್ ಬಗ್ಗೆ ಮಾಹಿತಿ ನೀಡಲು ಶಿರಸಿ ಪೊಲೀಸ್ ಎಂಬ ವೆಬ್ ಸೈಟ್ ಸಹ ಮಾಡಲಾಗಿದ್ದು, ಇದರ ಮೂಲಕ ಎಲ್ಲಾ ಮಾಹಿತಿಯನ್ನು ಜನರು ಪಡೆಯಬಹುದಾಗಿದೆ. ಜಾತ್ರೆಯಲ್ಲಿ ಮಹಿಳೆಯರ ರಕ್ಷಣೆಗೆ ಒಬವ್ವ ಪಡೆ ಕೂಡ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ಪುಂಡ ಪೋಕರಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದೆ. ಜಾತ್ರೆಯಲ್ಲಿ ದ್ರೋಣ್ ಕ್ಯಾಮೆರಾದ ಮೂಲಕವೂ ಹದ್ದಿನ ಕಣ್ಣು ಇಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್.ಡಿ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಹರಾಜಿನಲ್ಲಿ 1 ಕೋಟಿ ರೂ. ದಾಟಿದ ಜಾತ್ರಾ ಹಂಗಾಮಿ ಮಳಿಗೆ
    ರಾಜ್ಯದ ಅತೀ ದೊಡ್ಡ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾರಿಕಾಂಬ ದೇವಸ್ಥಾನದಿಂದ ಸುತ್ತಮುತ್ತಲೂ ಹಂಗಾಮಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು, ಈ ಬಾರಿ ಹಂಗಾಮಿ ವಾಣಿಜ್ಯ ಮಳಿಗೆಗಳು ಒಂದೇ ದಿನದಲ್ಲಿ 1.9 ಕೋಟಿ ರೂ.ಗೆ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿದೆ. ಇದಲ್ಲದೇ ಇನ್ನೂ ಮಳಿಗೆಗಳ ಹರಾಜು ಪ್ರಕ್ರಿಯೆಗಳಿದ್ದು, ಕನಿಷ್ಟ ಎರಡು ಕೋಟಿ ರೂ. ದಾಟುವ ನಿರೀಕ್ಷೆಯಿದೆ.

  • ಖದೀಮರ ಈರುಳ್ಳಿ ಮೋಹ- ಪೆಟ್ಟಿಗೆ ತುಂಬಾ ಹಣವಿದ್ದರೂ ಕದ್ದಿದ್ದು ಈರುಳ್ಳಿ ಮಾತ್ರ

    ಖದೀಮರ ಈರುಳ್ಳಿ ಮೋಹ- ಪೆಟ್ಟಿಗೆ ತುಂಬಾ ಹಣವಿದ್ದರೂ ಕದ್ದಿದ್ದು ಈರುಳ್ಳಿ ಮಾತ್ರ

    ಕೋಲ್ಕತ್ತಾ: ತರಕಾರಿ ಮಳಿಗೆಗೆ ನುಗ್ಗಿದ ಕಳ್ಳರು ಹಣ ಬಿಟ್ಟು ಈರುಳ್ಳಿಯನ್ನು ಕದ್ದೊಯ್ದಿರುವ ಅಚ್ಚರಿಯ ಘಟನೆ ಕೋಲ್ಕತ್ತಾ ರಾಜ್ಯದ ಮಿಡ್ನಾಪುರ ಜಿಲ್ಲೆಯ ಸುತಹತ ಎಂಬ ನಗರದಲ್ಲಿ ನಡೆದಿದೆ.

    ಪೂರ್ವ ಮಿಡ್ನಾಪುರದಲ್ಲಿದ್ದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಅವರ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಸೋಮವಾರ ರಾತ್ರಿ ಮಳಿಗೆಗೆ ನುಗ್ಗಿರುವ ಕಳ್ಳರು ಗಲ್ಲಾ ಪೆಟ್ಟಿಯಲ್ಲಿನ ಒಂದು ರೂಪಾಯಿಯನ್ನೂ ಮುಟ್ಟಿಲ್ಲ. ಬದಲಾಗಿ ಮಳಿಗೆಯಲ್ಲಿದ್ದ ಈರುಳ್ಳಿಯನ್ನು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ:ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಮೂಟೆಯಷ್ಟು ಈರುಳ್ಳಿ ರಾತ್ರೋರಾತ್ರಿ ಕಳ್ಳತನ

    ಈ ಬಗ್ಗೆ ಅಚ್ಚರಿಯಿಂದ ಪ್ರತಿಕ್ರಿಯಿಸಿದ ಮಾಲೀಕ, ಮಂಗಳವಾರ ಮಳೆಗೆಗೆ ಬಂದು ನೋಡಿದಾಗ ಶಾಕ್ ಆಯ್ತು. ತಕ್ಷಣ ಗಲ್ಲಾ ಪೆಟ್ಟಿಗೆ ತೆರೆದು ನೋಡಿದರೆ ಅದರಲ್ಲಿದ್ದ ಹಣವೆಲ್ಲಾ ಹಾಗೆಯೇ ಇದೆ. ಆದರೆ ಮಳಿಗೆಯಲ್ಲಿ ಜೋಡಿಸಿಟ್ಟಿದ್ದ ಈರುಳ್ಳಿ ನಾಪತ್ತೆಯಾಗಿತ್ತು. ಅದರ ಜೊತೆಗೆ ಶುಂಠಿ, ಬೆಳ್ಳುಳ್ಳಿ ಕೂಡ ಕಳ್ಳತನವಾಗಿತ್ತು. ಸುಮಾರು 50 ಸಾವಿರ ರೂ. ಮೌಲ್ಯದ ಈರುಳ್ಳಿ ಜೊತೆಗೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಒಂದು ನಯಾಪೈಸೆ ಹಣವನ್ನು ಕಂಡೊಯ್ದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರ ಕಣ್ಣಲ್ಲಿ ಕಣ್ಣೀರು ತಂದ ಈರುಳ್ಳಿ ಬೆಲೆ

    ಪಶ್ಚಿಮ ಬಂಗಾಳದಲ್ಲಿ ಕೆ.ಜಿ ಈರುಳ್ಳಿ ಬೆಲೆ 100 ರೂಪಾಯಿ ಗಡಿದಾಟಿದೆ. ಹೀಗಾಗಿ ಬೆಲೆ ಇನ್ನೂ ಹೆಚ್ಚಾಗಬಹುದು, ಅದರಿಂದ ಹೆಚ್ಚು ಹಣ ಪಡೆಯಬಹುದು ಎಂದುಖದೀಮರು ಈರುಳ್ಳಿ ಕಳ್ಳತನ ಮಾಡಿದ್ದಾರೆ.

    ಇತ್ತ ಕರ್ನಾಟಕದಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದಲ್ಲಿ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಳ್ಳರು ಕಿತ್ತು ಕದ್ದೊಯ್ದಿದ್ದಾರೆ.

    ರೈತ ಗುರುಬಸಯ್ಯ ಪ್ರಭುಸ್ವಾಮಿ ಮಠ ಎಂಬವರು ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಸುಮಾರು 34 ರಿಂದ 40 ಮೂಟೆಯಷ್ಟು ಈರುಳ್ಳಿ ಬೆಳೆಯನ್ನು ಕಳ್ಳತನ ಮಾಡಿದ್ದಾರೆ. ಗುರುಬಸಯ್ಯ ಅವರು 1.5 ಎಕರೆ ನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಇನ್ನು ಎರಡು ದಿನದಲ್ಲಿ ಫಸಲು ಕಟಾವು ಮಾಡಬೇಕು ಎಂದು ರೈತ ಎಂದುಕೊಂಡಿದ್ದರು. ಆದರೆ ಫಸಲು ಕೈಗೆ ಬರುವ ಮುನ್ನವೇ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಈರುಳ್ಳಿ ಜೊತೆ ಸುಮಾರು 25 ಕೆಜಿಯಷ್ಟು ಮೆಣಸಿನಕಾಯಿ ಸಹ ಕಳ್ಳತನವಾಗಿದೆ.

    ಈರುಳ್ಳಿ ಬೆಲೆ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಹಾಪ್‍ಕಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 120 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 50 ರಿಂದ 60 ರೂಪಾಯಿ ಇದೆ.

  • ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗ: ಜಿಲ್ಲೆಯ ನವೀಕೃತ ಜೋಯಾಲುಕ್ಕಾಸ್ ಮಳಿಗೆಯನ್ನು ಖ್ಯಾತ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಿಕ್ಕಿರಿದ ಅಭಿಮಾನಿಗಳ ನಡುವೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜಾಯ್ ಅಲುಕ್ಕಾಸ್ ಇನ್ನಿತರರು ಉಪಸ್ಥಿತರಿದ್ದರು.

    ಧ್ರುವ ಸರ್ಜಾ ಮಳಿಗೆ ಉದ್ಘಾಟಿಸಿ ಚಿನ್ನಾಭರಣ, ವಜ್ರ, ವಾಚ್ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ವೈವಿಧ್ಯಮಯ ಶ್ರೇಣಿ ಹಾಗೂ ವಿನ್ಯಾಸಗಳಿಗೆ ಮೆಚ್ಚುಗೆ ಸೂಚಿಸಿದರು. ಈ ಮಳಿಗೆಯಲ್ಲಿನ ಪ್ರಾಚೀನ ಸಂಗ್ರಹಗಳನ್ನು ಒಳಗೊಂಡ ಹರಳುಗಳ ವಿಭಾಗ ಅಪೂರ್ವ ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವಿವಿಧತೆಗೆ ಸಂತಸ ವ್ಯಕ್ತಪಡಿಸಿದರು.

    ನವೀಕೃತ ಮಳಿಗೆ ಆರಂಭಗೊಂಡ ಬೆನ್ನಲ್ಲೇ ಜೋಯಾಲುಕ್ಕಾಸ್ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಪ್ರತಿ ಖರೀದಿಯ ಮೇಲೆ ಖಚಿತವಾದ ಗೃಹ ಬಳಕೆ ವಸ್ತುಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಬೆಳಗ್ಗಿನಿಂದಲೇ ತಮ್ಮ ಪ್ರೀತಿಯ ನಟ ಧ್ರುವ ಸರ್ಜಾ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

    ವೇದಿಕೆ ಮೇಲೆ ಬಂದ ಧ್ರುವ ಸರ್ಜಾ ಶಿವಮೊಗ್ಗ ಅಭಿಮಾನಿಗಳಿಗಾಗಿ ಸಿನಿಮಾ ಡೈಲಾಗ್ ಹೇಳಿ ರಂಜಿಸಿದರು. ಅಲ್ಲದೇ ಜೋಯಾಲುಕ್ಕಾಸ್ ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧ್ರುವ ಸರ್ಜಾ ಹಿಂತಿರುಗುವಾಗ ಅವರಿಗೆ ಅಡ್ಡಲಾದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಳೆ ಬೆಂಗ್ಳೂರಿಗೆ ಆಗಮಿಸಲಿದ್ದಾರೆ ಕಾಲಿವುಡ್ ನಟಿ ಕಾಜಲ್ ಅಗರ್ವಾಲ್

    ನಾಳೆ ಬೆಂಗ್ಳೂರಿಗೆ ಆಗಮಿಸಲಿದ್ದಾರೆ ಕಾಲಿವುಡ್ ನಟಿ ಕಾಜಲ್ ಅಗರ್ವಾಲ್

    ಬೆಂಗಳೂರು: ಟಾಲಿವುಡ್ ಮತ್ತು ಕಾಲಿವುಡ್ ನ ಬಹುಬೇಡಿಕೆಯ ನಟಿ ಕಾಜಲ್ ಅಗರ್ವಾಲ್ ಶನಿವಾರ ಸಿಲಿಕಾನ್ ಸಿಟಿಗೆ ಆಗಮಿಸಲಿದ್ದಾರೆ

    ಇತ್ತೀಚೆಗೆ ಕಾಜಲ್ ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾದಲ್ಲಿ ಐಟಂ ಹಾಡಿಗೆ ನೃತ್ಯ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇವರ ಬದಲು ನಟಿ ತಮನ್ನಾ ಭಾಟಿಯಾ ಅವರು ಆಯ್ಕೆಯಾಗಿದ್ದು, ಶೂಟಿಂಗ್ ಕೂಡ ಮುಗಿಸಿದ್ದಾರೆ.

    ಆದ್ರೆ ಈಗ ನಟಿ ಕಾಜಲ್ ಅವರು ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಬೆಂಗಳೂರಿಗೆ ಬರುತ್ತಿಲ್ಲ. ರಾಜಾಜಿನಗರದಲ್ಲಿರುವ ಮಳಿಗೆಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೆ ಬೆಂಗಳೂರಿಗೆ ಬರುವುದಾಗಿ ಹೇಳಿ ಫೇಸ್ ಬುಕ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಚಕ್ರವ್ಯೂಹ’ ಸಿನಿಮಾದಲ್ಲಿ `ಅರೇ.. ಅರೇ..ಅರೇ.. ಏನಾಯ್ತು’ ಹಾಡಿಗೆ ಇವರ ದನಿ ನೀಡಿದ್ದರು. ಇತ್ತೀಚೆಗೆ ನಟಿ ಪಾರೊಲ್ ಯಾದವ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ರಮೇಶ್ ಅರವಿಂದ್ ಜೊತೆ ನಟಿ ತಮನ್ನಾ ಭಾಟಿಯಾ ಮತ್ತು ಕಾಜಲ್ ಒಟ್ಟಾಗಿ ಕಾಣಿಸಿಕೊಂಡಿದ್ದರು.

    ಸದ್ಯಕ್ಕೆ ರಮೇಶ್ ಅರವಿಂದ ಅವರು ತಮಿಳಿನ `ಕ್ವೀನ್’ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾಗೆ `ಪ್ಯಾರಿಸ್ ಪ್ಯಾರಿಸ್’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ನಟಿ ಕಾಜಲ್ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

    ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

    ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಶೇರು ವಿನಿಮಯ ಕೇಂದ್ರದ ಮಳಿಗೆಯೊಂದು ಇದ್ದಕ್ಕಿದ್ದಂತೆ ಕುಸಿದು 77ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಸೋಮವಾರ ಬಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಎರಡನೇ ಮಳಿಗೆ ಕುಸಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರು ವಿನಿಮಯ ಕೇಂದ್ರವನ್ನು ವೀಕ್ಷಿಸಲು ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ.

    ಕೂಡಲೇ ಎಲ್ಲರನ್ನೂ ಸ್ಟ್ರೆಚರ್ ಸಾಗಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಮಂದಿಯ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದೆ. 2000ನೇ ಇಸ್ವಿಯಲ್ಲಿ ಉಗ್ರರ ಆತ್ಮಹತ್ಯೆ ಬಾಂಬ್ ದಾಳಿಯ ಬಳಿಕ ಇಲ್ಲಿ ನಡೆದ ಎರಡನೇ ಅತಿ ದೊಡ್ಡ ದುರಂತ ಇದಾಗಿದೆ. ಮೊದಲ ಮಹಡಿಯಲ್ಲಿ ಈ ದುರಂತ ಸಂಭವಿಸಿದ್ದು. ಕಾಂಕ್ರೀಟ್ ಕಲ್ಲುಗಳು ಬಿದ್ದಿದ್ದು, ನೀರಿನ ಪೈಪ್‍ಗಳು ಒಡೆದು ಹೋಗಿವೆ.

    ಈ ಘಟನೆ ನಡೆದು ಮಧ್ಯಾಹ್ನದ ಬಳಿಕ  ಶೇರು ವಿನಿಮಯ ಕೇಂದ್ರದಲ್ಲಿ ಎಂದಿನಂತೆ ವ್ಯವಹಾರ ನಡೆದಿದೆ.

    https://www.youtube.com/watch?v=mqltuw7ban8