Tag: ಮಲ್ಲೇಶ್ವರಂ

  • ಮಲ್ಲೇಶ್ವರಂ ಮನೆ ತಲುಪಿದ ಸ್ಪಂದನಾ ಮೃತದೇಹ – ಶಿವಣ್ಣ ದಂಪತಿ ಆಗಮನ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

    ಮಲ್ಲೇಶ್ವರಂ ಮನೆ ತಲುಪಿದ ಸ್ಪಂದನಾ ಮೃತದೇಹ – ಶಿವಣ್ಣ ದಂಪತಿ ಆಗಮನ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

    ಬೆಂಗಳೂರು: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹ ತಡರಾತ್ರಿ 1 ಗಂಟೆ ವೇಳೆಗೆ ಮಲ್ಲೇಶ್ವರಂನ ತವರು ಮನೆ ತಲುಪಿದೆ. ಸಾವಿನಿಂದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಗಣ್ಯರು, ಆಪ್ತರು, ಸ್ನೇಹಿತರು ಹಾಗೂ ಸಿನಿ ತಾರೆಯರು ಕಂಬನಿ ಮಿಡಿದಿದ್ದಾರೆ. ಮೃತದೇಹ ನೋಡುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.

    ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಸ್ಪಂದನಾ ಸ್ನೇಹಿತೆ ನಟಿ ಅನು ಪ್ರಭಾಕರ್‌ ಸೇರಿದಂತೆ ಹಲವು ಗಣ್ಯಮಾನ್ಯರು ಮಲ್ಲೇಶ್ವರಂನ ಮನೆಗೆ ಆಗಮಿಸಿದ್ದಾರೆ. ನಟ ವಿಜಯರಾಘವೇಂದ್ರ, ಶ್ರೀಮುರಳಿ, ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್‌, ಶಾಸಕ ಮುನಿರತ್ನ, ಮಾವ ಚಿನ್ನೇಗೌಡ ಹಲವು ಪ್ರಮುಖರು ಸ್ಥಳದಲ್ಲಿದ್ದಾರೆ. ಅಂಬುಲೆನ್ಸ್‌ ಮಲ್ಲೇಶ್ವರಂನ ತವರು ಮನೆ ತಲುಪುತ್ತಿದ್ದಂತೆ ಮೃತದೇಹ ನೋಡಲು ನೆರೆದಿದ್ದ ಜನ ಮುಗಿಬಿದ್ದರು. ಅಂಬುಲೆನ್ಸ್‌ ಬಳಿ ತಳ್ಳಾಟ, ನೂಕಾಟ ನಡೆಯಿತು.

    ಮಲ್ಲೇಶ್ವರಂನ ಮನೆಗೆ ಪಾರ್ಥಿವ ಶರೀರ ತರಲಾಗಿದ್ದು ಪಾರ್ಥಿವ ಶರೀರ ಪೂಜೆಗೆ ಸಿದ್ಧತೆ ನಡೆಯುತ್ತಿದೆ, ಸ್ಪಂದನಾ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಸ್ನೇಹಿತರು, ಆಪ್ತರು ಈಗಾಗಲೇ ಮಲ್ಲೇಶ್ವರಂನ ಮನೆಯ ಮುಂದೆ ಜಮಾಯಿಸಿದ್ದಾರೆ. ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ, ಮಾವ ಚಿನ್ನೇಗೌಡ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ವಿಜಯ ರಾಘವೇಂದ್ರ ಕುಟುಂಬ ಕೂಡ ಸ್ಪಂದನಾ ಅವರ ತವರು ಮನೆಗೆ ಆಗಮಿಸಿದೆ.

    ಬುಧವಾರ (ಆ.9) ಮಧ್ಯಾಹ್ನ 1 ಗಂಟೆಯವರೆಗೂ ಸ್ಪಂದನಾ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಟುಂಬಸ್ಥರಿಗೆ ಸ್ಪಂದನಾ ಮೃತದೇಹ ಹಸ್ತಾಂತರ – ಮಲ್ಲೇಶ್ವರಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

    ಕುಟುಂಬಸ್ಥರಿಗೆ ಸ್ಪಂದನಾ ಮೃತದೇಹ ಹಸ್ತಾಂತರ – ಮಲ್ಲೇಶ್ವರಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

    ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತಂದ ಮೃತದೇಹವನ್ನ ಸುಮಾರು 30 ನಿಮಿಷಗಳ ಕಸ್ಟಮ್ಸ್‌ ಕ್ಲಿಯರೆನ್ಸ್‌ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.


    ಬ್ಯಾಂಕಾಕ್‌ನಿಂದ ಪಾರ್ಥಿವ ಶರೀರ ಹೊತ್ತ ವಿಮಾನ ಬಂದಿಳಿಯುತ್ತಿದ್ದಂತೆ ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ಕಾರ್ಯ ನಡೆಸಿದರು. ಸುಮಾರು 30 ನಿಮಿಷಗಳ ಕಾಲ ಬಾಕ್ಸ್‌ನಲ್ಲಿ ತಂದಿದ್ದ ಮೃಹದೇಹವನ್ನ ಸ್ಕ್ಯಾನಿಂಗ್‌ ಮಾಡಿ ತಪಾಸಣೆ ಮಾಡಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ನಂತರ ಸ್ಪಂದನಾ ಮೃತದೇಹ ಹೊತ್ತ ಅಂಬುಲೆನ್ಸ್‌ ಏರ್ಪೋರ್ಟ್‌ನಿಂದ ಮಲ್ಲೇಶ್ವರಂ ಮನೆಕಡೆಗೆ ಹೊರಟಿತು.

    ನಟ ವಿಜಯರಾಘವೇಂದ್ರ, ಶ್ರೀಮುರಳಿ, ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್‌, ಶಾಸಕ ಮುನಿರತ್ನ, ಮಾವ ಚಿನ್ನೇಗೌಡ ಹಲವು ಪ್ರಮುಖರು ಏರ್ಪೋರ್ಟ್‌ನಲ್ಲೇ ಇದ್ದು ಮೃತದೇಹವನ್ನ ಸ್ವೀಕರಿಸಿದ್ದಾರೆ. ಮೃತದೇಹ ಹಸ್ತಾಂತರಿಸುತ್ತಿದ್ದಂತೆ ಮಲ್ಲೇಶ್ವರಂ ಮನೆಗೆ ತೆರಳಿದ ವಿಜಯ ರಾಘವೇಂದ್ರ ಪುತ್ರ ಶೌರ್ಯನನ್ನ ಕೈ ಹಿಡಿದೆ ಕರೆತಂದಿದ್ದಾರೆ. ಮಲ್ಲೇಶ್ವರಂನ ಮನೆಗೆ ಪಾರ್ಥಿವ ಶರೀರ ತರಲಾಗುತ್ತಿದ್ದು, ಪಾರ್ಥಿವ ಶರೀರಕ್ಕೆ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪೂಜಾ ವಿಧಿವಿಧಾನ ನೇರವೇರಿದ ಬಳಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಸ್ನೇಹಿತರು, ಆಪ್ತರು ಈಗಾಗಲೇ ಮಲ್ಲೇಶ್ವರಂನ ಮನೆಯ ಮುಂದೆ ಜಮಾಯಿಸಿದ್ದಾರೆ.

    ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂ ಸ್ಪಂದನಾ ನಿವಾಸದ ಮುಂಭಾಗ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ, ಮಾವ ಚಿನ್ನೇಗೌಡ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ವಿಜಯ ರಾಘವೇಂದ್ರ ಕುಟುಂಬ ಕೂಡ ಸ್ಪಂದನಾ ಅವರ ತವರು ಮನೆಗೆ ಆಗಮಿಸಿದೆ. ಇದನ್ನೂ ಓದಿ: Breaking: ಸ್ಪಂದನಾ ಪಾರ್ಥಿವ ಶರೀರ ಹೊತ್ತ ವಿಮಾನ, ಬೆಂಗಳೂರಿಗೆ ಆಗಮನ

    ಬುಧವಾರ (ಆ.9) ಮಧ್ಯಾಹ್ನ 1 ಗಂಟೆಯವರೆಗೂ ಸ್ಪಂದನಾ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಸ್ಪಂದನಾ ಮೃತದೇಹ ಬೆಂಗಳೂರಿಗೆ: ಅಂತಿಮ ದರ್ಶನಕ್ಕೆ ಸಿದ್ಧತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking: ಸ್ಪಂದನಾ ಪಾರ್ಥಿವ ಶರೀರ ಹೊತ್ತ ವಿಮಾನ, ಬೆಂಗಳೂರಿಗೆ ಆಗಮನ

    Breaking: ಸ್ಪಂದನಾ ಪಾರ್ಥಿವ ಶರೀರ ಹೊತ್ತ ವಿಮಾನ, ಬೆಂಗಳೂರಿಗೆ ಆಗಮನ

    ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರ ಹೊತ್ತ ವಿಮಾನ ಬೆಂಗಳೂರಿಗೆ ಆಗಮಿಸಿದೆ. ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತರಲಾದ ಮೃತದೇಹವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುಮಾರು 30 ನಿಮಿಷಗಳ ಕಸ್ಟಮ್ಸ್‌ ಕ್ಲಿಯರೆನ್ಸ್‌ ಪ್ರಕ್ರಿಯೆ ಮುಗಿಸಿದ ಬಳಿಕ ಪಾರ್ಥಿವ ಶರೀರವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

    ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್‌, ಶಾಸಕ ಮುನಿರತ್ನ, ಮಾವ ಚಿನ್ನೇಗೌಡ ಸೇರಿದಂತೆ ಹಲವರು ಸ್ಥಳದಲ್ಲಿದ್ದು ಮೃತದೇಹವನ್ನ ಪಡೆದುಕೊಳ್ಳಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ರಕ್ರಿಯೆ ಮುಗಿಸಿ ಮಲ್ಲೇಶ್ವರಂಗೆ ಮೃತದೇಹ ರವಾನೆ ಮಾಡಲಾಗುವುದು ಸ್ಪಂದನಾ, ಅಂತಿಮ ದರ್ಶನಕ್ಕಾಗಿ ಮಲ್ಲೇಶ್ವರಂ ಮನೆಗೆ ಆಪ್ತರು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಬ್ಯಾಂಕಾಕ್ ಏರ್ ಪೋರ್ಟಿಗೆ ಬಂದ ಸ್ಪಂದನಾ ಮೃತದೇಹ: 8.30ಕ್ಕೆ ಹೊರಡಲಿದೆ ವಿಮಾನ

    ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂ ಸ್ಪಂದನಾ ನಿವಾಸದ ಮುಂಭಾಗ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ, ಮಾವ ಚಿನ್ನೇಗೌಡ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ವಿಜಯ ರಾಘವೇಂದ್ರ ಕುಟುಂಬ ಕೂಡ ಸ್ಪಂದನಾ ಅವರ ತವರು ಮನೆಗೆ ಆಗಮಿಸಿದೆ. ಇದನ್ನೂ ಓದಿ: ರಜನಿ ‘ಜೈಲರ್’ ಬಿಡುಗಡೆ: ರಜೆ ಘೋಷಿಸಿ, ಸಿಬ್ಬಂದಿಗೆ ಉಚಿತ ಟಿಕೆಟ್ ನೀಡಿದ ಕಂಪನಿ

    ಬುಧವಾರ (ಆ.9) ಮಧ್ಯಾಹ್ನ 1 ಗಂಟೆಯವರೆಗೂ ಸ್ಪಂದನಾ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಲವೇ ಗಂಟೆಗಳಲ್ಲಿ ಸ್ಪಂದನಾ ಮೃತದೇಹ ಬೆಂಗಳೂರಿಗೆ: ಅಂತಿಮ ದರ್ಶನಕ್ಕೆ ಸಿದ್ಧತೆ

    ಕೆಲವೇ ಗಂಟೆಗಳಲ್ಲಿ ಸ್ಪಂದನಾ ಮೃತದೇಹ ಬೆಂಗಳೂರಿಗೆ: ಅಂತಿಮ ದರ್ಶನಕ್ಕೆ ಸಿದ್ಧತೆ

    ಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana) ಮೃತದೇಹ ಕೆಲವೇ ಗಂಟೆಗಳಲ್ಲಿ ಬೆಂಗಳೂರಿಗೆ (Bangalore) ಬರಲಿದೆ. ಮೃತದೇಹ ಹೊತ್ತ ವಿಮಾನ ಈಗಾಗಲೇ ಬ್ಯಾಂಕಾಕ್ (Bangkok) ನಿಂದ ಹೊರಟಿದ್ದು, ರಾತ್ರಿ 11.30ರ ಹೊತ್ತಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅದು ಬಂದು ತಲುಪಲಿದೆ. ಈಗಾಗಲೇ ಸ್ಪಂದನಾ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್, ಮಾವ ಚಿನ್ನೇಗೌಡ ಸೇರಿದಂತೆ ಹಲವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

    ಇತ್ತ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂ (Malleswaram) ಸ್ಪಂದನಾ ನಿವಾಸದ ಮುಂಭಾಗ ಸಿದ್ದತೆ ಮಾಡಿಕೊಳ್ಳಲಾಗಿದೆ. ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ, ಮಾವ ಚಿನ್ನೇಗೌಡ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ವಿಜಯ ರಾಘವೇಂದ್ರ ಕುಟುಂಬ ಕೂಡ ಸ್ಪಂದನಾ ಅವರ ತವರು ಮನೆಗೆ ಆಗಮಿಸಿದೆ. ಇದನ್ನೂ ಓದಿ:ಸ್ಪಂದನಾ ನಿಧನ: ಮಲ್ಲೇಶ್ವರಂನಲ್ಲಿ ದರ್ಶನ, ಹರಿಶ್ಚಂದ್ರ ಘಾಟ್‍ ನಲ್ಲಿ ಅಂತಿಮ ಸಂಸ್ಕಾರ

    ಸ್ಪಂದನಾ ಅವರ ತಂದೆಯ ಮನೆಗೆ ಬಹುತೇಕರು ಆಗಮಿಸುತ್ತಿದ್ದು,  ಬಿ.ಕೆ ಶಿವರಾಂ ಮನೆಯಲ್ಲಿ ಕುಟುಂಬಸ್ಥರನ್ನ ಸಮಾಧಾನಿಸುವ ದೃಶ್ಯ ಎಂಥವರನ್ನೂ ಭಾವುಕರನ್ನಾಗಿಸುತ್ತಿದೆ. ಇತ್ತ ಸೊಸೆ ಸ್ಪಂದನಾ ನೆನೆದು ಮಾವ ಚಿನ್ನೇಗೌಡ ಕೂಡ ಭಾವುಕರಾಗಿದ್ದಾರೆ.

    ಇಂದು ರಾತ್ರಿಯಿಂದ ನಾಳೆ ಮಧ್ಯಾಹ್ನ 1 ಗಂಟೆಯವರೆಗೂ ಸ್ಪಂದನಾ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾಂಕಾಕ್ ಏರ್ ಪೋರ್ಟಿಗೆ ಬಂದ ಸ್ಪಂದನಾ ಮೃತದೇಹ: 8.30ಕ್ಕೆ ಹೊರಡಲಿದೆ ವಿಮಾನ

    ಬ್ಯಾಂಕಾಕ್ ಏರ್ ಪೋರ್ಟಿಗೆ ಬಂದ ಸ್ಪಂದನಾ ಮೃತದೇಹ: 8.30ಕ್ಕೆ ಹೊರಡಲಿದೆ ವಿಮಾನ

    ನಿನ್ನೆಯಷ್ಟೇ ಬ್ಯಾಂಕಾಕ್ (Bangkok) ನಲ್ಲಿ ನಿಧನರಾದ ಸ್ಪಂದನಾ (Spandana) ಮೃತದೇಹವನ್ನು ಬ್ಯಾಂಕಾಕ್ ನ ಸುವರ್ಣಭೂಮಿ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಆ ವಿಮಾನವು 8.30ಕ್ಕೆ ಬ್ಯಾಂಕಾಕ್ ನಿಂದ ಹೊರಡಲಿದ್ದು, ಬೆಂಗಳೂರಿಗೆ 11.20ಕ್ಕೆ ಆಗಮಿಸಲಿದೆ. ಅದೇ ವಿಮಾನದಲ್ಲೇ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಜೊತೆ ಪ್ರವಾಸಕ್ಕೆ ತೆರಳಿದ್ದ ಸಂಬಂಧಿಕರು ಕೂಡ ಬೆಂಗಳೂರಿಗೆ  (Bangalore) ಆಗಮಿಸಲಿದ್ದಾರೆ.

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದಕ್ಕಾಗಿ ಮತ್ತು ಆದಷ್ಟು ಬೇಗ ಮೃತದೇಹವನ್ನು ಪಡೆಯುವುದಕ್ಕಾಗಿ ಈಗಾಗಲೇ ಸ್ಪಂದನಾ ಕುಟುಂಬಸ್ಥರು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹೊರಟಿದ್ದಾರೆ. ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ಮತ್ತು ಇತರರು ರಾತ್ರಿ 9 ಗಂಟೆಯ ಹೊತ್ತಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದ್ದಾರೆ. ಇದನ್ನೂ ಓದಿ:ಕುಟುಂಬಕ್ಕೆ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಪೂರ್ಣ

    ಬೆಂಗಳೂರು ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ಅಂಬುಲೆನ್ಸ್ ಮೂಲಕ ಮೃತದೇಹವನ್ನು ಸ್ಪಂದನಾ ಅವರ ತಂದೆಯ ಮನೆಗೆ ತರಲಾಗುತ್ತಿದೆ. ಮಲ್ಲೇಶ್ವರಂನಲ್ಲಿರುವ (Malleswaram) ಬಿ.ಕೆ.ಶಿವರಾಮ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿಯಿಂದಲೇ ಅಂತಿಮ ದರ್ಶನ ಪಡೆಯಬಹುದಾಗಿದೆ.

     

    ಇಂದು ರಾತ್ರಿಯಿಂದ ನಾಳೆ ಮಧ್ಯಾಹ್ನ 1 ಗಂಟೆಯವರೆಗೂ ಸ್ಪಂದನಾ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ ನಿಧನ: ಮಲ್ಲೇಶ್ವರಂನಲ್ಲಿ ದರ್ಶನ, ಹರಿಶ್ಚಂದ್ರ ಘಾಟ್‍ ನಲ್ಲಿ ಅಂತಿಮ ಸಂಸ್ಕಾರ

    ಸ್ಪಂದನಾ ನಿಧನ: ಮಲ್ಲೇಶ್ವರಂನಲ್ಲಿ ದರ್ಶನ, ಹರಿಶ್ಚಂದ್ರ ಘಾಟ್‍ ನಲ್ಲಿ ಅಂತಿಮ ಸಂಸ್ಕಾರ

    ಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ಅವರ ಮೃತದೇಹ ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಸ್ಪಂದನಾ ಅವರ ನಿವಾಸಕ್ಕೆ ಮೃತದೇಹ ಬರಲಿದ್ದು, ಅಲ್ಲಿ ಪೂಜೆಯ ನಂತರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂ (Malleswaram) ಆಟ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.

    ರಾತ್ರಿಯಿಂದಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹರಿಶ್ಚಂದ್ರ ಘಾಟ್‍ ನಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ (Cremation) ಮಾಡಲಾಗುವುದು ಎಂದು ಬಿ.ಕೆ ಹರಿಪ್ರಸಾದ್ ಹೇಳಿದರು. ಇಂದು ಮಧ್ಯಾಹ್ನದವರೆಗೂ ಥೈಲ್ಯಾಂಡ್ ನ ದೇಶದ ಕಸ್ಟಮ್ ಕ್ಲಿಯರೆನ್ಸ್ ಪ್ರಕ್ರಿಯೆಗಳು ನಡೆಯಲಿವೆ. ತದನಂತರ ಸ್ಪಂದನಾ ಮೃತದೇಹ ಕುಟುಂಬಕ್ಕೆ ಹಸ್ತಾಂತರವಾಗಲಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾರನ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದರು ಚಿನ್ನಾರಿಮುತ್ತ ವಿಜಯ್

    ಕಳೆದ ಒಂದು ವಾರದಿಂದ ಸ್ಪಂದನಾ ಸೋದರ ಸಂಬಂಧಿಗಳ ಜೊತೆ ಬ್ಯಾಂಕಾಕ್ (Bangkok) ಪ್ರವಾಸದಲ್ಲಿದ್ದರು. ಭಾನುವಾರ ಅವರಿಗೆ ಹೃದಯನೋವು ಕಾಣಿಸಿಕೊಂಡಿದೆ. ರಾತ್ರಿ ಮಲಗಿದವರು ಎದ್ದೇಳಲಿಲ್ಲ ಎನ್ನುವ ಮಾಹಿತಿಯನ್ನು ಅವರ ಕುಟುಂವಸ್ಥರು ತಿಳಿಸಿದ್ದಾರೆ.  ಈ ವಿಷಯ ತಿಳಿಯುತ್ತಿದ್ದಂತೆಯೇ ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್ ಗೆ ತೆರಳಿದ್ದಾರೆ.

     

    ಭಾನುವಾರ ರಾತ್ರಿ ಬ್ಯಾಂಕಾಕ್ ಹೊರಟ ವಿಜಯ ರಾಘವೇಂದ್ರ, ಸೋಮವಾರ ಬೆಳಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಎರಡೂ ಕುಟುಂಬ ಆಘಾತಕ್ಕೆ ಒಳಗಾಗಿದೆ. ಜೊತೆಗೆ ವಿಜಯ ರಾಘವೇಂದ್ರ ಜೊತೆ ಸಂಪರ್ಕದಲ್ಲಿದ್ದು, ಅಲ್ಲಿನ ಪ್ರಕ್ರಿಯೆಗಳನ್ನು ಮುಗಿಸಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

    ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

    ಬೆಂಗಳೂರು: ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸುರಿದ ಭಾರೀ ಮಳೆಗೆ (Rain) ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ ಇಬ್ಬರ ಸಾವಾಗಿದೆ. ಇದೇ ರೀತಿ ನಗರದ ಆಭರಣದ ಅಂಗಡಿಯೊಂದಕ್ಕೆ (Jewelery Shop) ನೀರು ನುಗ್ಗಿ ಆಭರಣಗಳು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆಯೂ ನಡೆದಿದೆ.

    ಮಲ್ಲೇಶ್ವರಂನ (Malleshwaram) ಭರಣದ ಅಂಗಡಿಯೊಂದಕ್ಕೆ ಮಳೆಯ ನೀರು ನುಗ್ಗಿದ್ದು, ಅಂಗಡಿಯಲ್ಲಿದ್ದ ಅರ್ಧಕ್ಕರ್ಧ ಆಭರಣಗಳು ಕೊಚ್ಚಿ ಹೋಗಿವೆ. ಅಂಗಡಿಯಲ್ಲಿದ್ದ ಫರ್ನಿಚರ್ಸ್, ಜ್ಯುವೆಲ್ಲರಿ ಹಾಗೂ 50 ಸಾವಿರ ರೂ. ಹಣ ಅಂಗಡಿಯ ಹಿಂಭಾಗದ ಬಾಗಿಲಿನ ಮೂಲಕ ಕೊಚ್ಚಿ ಹೋಗಿದೆ.

    ಆಭರಣದ ಅಂಗಡಿ ಆರಂಭವಾಗಿ ಮೇ 27ಕ್ಕೆ 1 ವರ್ಷ ತುಂಬಲಿದೆ. ಆದರೆ ಏಕಾಏಕಿ ಸುರಿದ ಮಳೆಯಿಂದ ಅಂಗಡಿಗೆ ರಭಸವಾಗಿ ನೀರು ನುಗ್ಗಿ ಮಾಲೀಕರು ಬೆಲೆಬಾಳುವ ವಸ್ತುಗಳನ್ನೆಲ್ಲಾ ಕಳೆದುಕೊಂಡಿದ್ದಾರೆ. ಇದೀಗ ಅಂಗಡಿ ಮಾಲಕಿ ಪ್ರಿಯಾ ಏನೂ ತೋಚದೇ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

    ಅಂಗಡಿಗೆ ನೀರು ತುಂಬುತ್ತಿದ್ದಂತೆ ಪ್ರಿಯಾ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಯಾವುದಕ್ಕೂ ಕ್ಯಾರೇ ಅಂದಿರಲಿಲ್ಲ. ಇದೀಗ ಸುಮಾರು 2 ಕೋಟಿ ರೂ. ವೆಚ್ಚದ ಆಭರಣ ಹಾಗೂ ಫರ್ನಿಚರ್ಸ್ಗಳನ್ನು ಮಾಲೀಕರು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

  • ಸಿಎಂ ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಬಿಜೆಪಿ ಕಚೇರಿ ಮೇಲೆ ದಾಳಿ

    ಸಿಎಂ ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಬಿಜೆಪಿ ಕಚೇರಿ ಮೇಲೆ ದಾಳಿ

    ಬೆಂಗಳೂರು: ನೀತಿ ಸಂಹಿತೆ ವಿಚಾರವಾಗಿ ರಾಜ್ಯ ಚುನಾವಣಾಧಿಕಾರಿಗಳು (Election Officers) ಬಿಜೆಪಿಗೆ (BJP) ಶಾಕ್ ನೀಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸುದ್ದಿಗೋಷ್ಠಿ ನಡೆಸುತ್ತಿದ್ದ ಹೊತ್ತಲ್ಲೇ ದಾಳಿ ನಡೆಸಿದ 15 ಅಧಿಕಾರಿಗಳ ತಂಡ ಕೇಸರಿ ತೋರಣಗಳನ್ನು ಕಿತ್ತು ಹಾಕಿದ್ದಾರೆ.

    ಚುನಾವಣೆ (Election) ಹೊತ್ತಲ್ಲಿ ಕೇಸರಿ ತೋರಣ ಕಟ್ಟಿ ಸಂಭ್ರಮಕ್ಕೆ ಮುಂದಾಗಿದ್ದ ಬಿಜೆಪಿ ಮುಖಂಡರಿಗೆ ಅಧಿಕಾರಿಗಳ ದಾಳಿ ಮುಜುಗರ ತಂದಿದೆ. ಮಲ್ಲೇಶ್ವರಂನಲ್ಲಿ (Malleshwaram) ಉದ್ಘಾಟನೆಗೊಂಡಿದ್ದ ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿ ಸಚಿವರೊಂದಿಗೆ ಸಿಎಂ ಸುದ್ದಿಗೋಷ್ಠಿಯಲ್ಲಿ ತೊಡಗಿದ್ದ ವೇಳೆಯಲ್ಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಗೆ ಕಟ್ಟಿದ್ದ ಕೇಸರಿ ತೋರಣಗಳನ್ನು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಇಷ್ಟೇ ಅಲ್ಲದೇ ಚುನಾವಣಾಧಿಕಾರಿಗಳು ಬಿಜೆಪಿಯ ಕೃಷ್ಣಯ್ಯ ಶೆಟ್ಟಿಯವರ ಮನೆಯಲ್ಲಿ ಸಂಗ್ರಹಿಸಿದ್ದ ಆಹಾರದ ಕಿಟ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಅವಧಿ ಮೀರಿ ಸಭೆ ನಡೆಸಿದ್ದ ರೇಣುಕಾಚಾರ್ಯ (Renukacharya) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಳದ ಕಾರಟಗಿಯಲ್ಲಿ (Karatagi) ಬಿಜೆಪಿಯಿಂದ ಆಯೋಜಿಸಿದ್ದ ಬಾಡೂಟಕ್ಕೆ ಅಧಿಕಾರಿಗಳು ದಾಳಿ ನಡೆಸಿ ತಡೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮೀಸಲಾತಿ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ – ಕಾರಜೋಳ

  • ಪಠಾಣ್ ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಹಲ್ಲೆ- ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ

    ಪಠಾಣ್ ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಹಲ್ಲೆ- ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ

    ಬೆಂಗಳೂರು: ಪಠಾಣ್ (Pathaan) ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಜೋಡಿಯೊಂದು ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಘಟನೆ ಮಲ್ಲೇಶ್ವರಂ (Malleshwaram) ಮಂತ್ರಿಮಾಲ್‍ನ (Mantri Square Mall) ಐನಾಕ್ಸ್ (Inox) ಚಿತ್ರಮಂದಿರದಲ್ಲಿ ನಡೆದಿದೆ.

    ನಾಗರಾಜ್ ಹಾಗೂ ಅವರ ಪತ್ನಿ ಪ್ರೇಮ, ಮಗಳು, ಅಳಿಯನ ಜೊತೆ ಪಠಾಣ್ ಚಿತ್ರ ನೋಡಲು ತೆರಳಿದ್ದರು. ಚಿತ್ರ ನೋಡುವಾಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿ ಪದೇ ಪದೇ ಕಿರುಚಾಡುತ್ತಿದ್ದರು. ಎದುರು ಸೀಟಿನಲ್ಲಿದ್ದ ಕುಟುಂಬ ಕಿರುಚಾಡದಂತೆ ಮನವಿ ಮಾಡಿದೆ. ಈ ವೇಳೆ ನಾಗರಾಜ್ ಕುಟುಂಬ ಹಾಗೂ ಜೋಡಿಯ ನಡುವೆ ಕಿರಿಕ್ ನಡೆದು ನಂತರ ಸುಮ್ಮನಾಗಿದ್ದರು. ಇದನ್ನೂ ಓದಿ: ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    POLICE JEEP

    ಸಿನಿಮಾ ಮುಗಿಸಿ ಹೊರಗೆ ಬರುತ್ತಿದ್ದಂತೆ ಜೋಡಿ, ಕುಟುಂಬದೊಂದಿಗೆ ಗಲಾಟೆ ಶುರು ಮಾಡಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿ ಸಹ ತನ್ನ ಹೈ ಹೀಲ್ಡ್ ಚಪ್ಪಲಿಯಿಂದ ಪ್ರೇಮ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.

    ಮಗಳು ಅಳಿಯನ ಮೇಲೆ ಸಹ ಜೋಡಿ ಹಲ್ಲೆ ನಡೆಸಿದೆ. ನಾಗರಾಜ್ ಅವರ ಮಗಳ ಖಾಸಗಿ ಅಂಗ ಮುಟ್ಟಿ ಯುವಕ ಅಸಭ್ಯವಾಗಿ ವರ್ತಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನಾಗರಾಜ್ ಕುಟುಂಬ ದೂರು ದಾಖಲಿಸಿದೆ. 506, 504, 354 ಸೆಕ್ಷನ್‍ನಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

  • ಮೋದಿ ಹುಟ್ಟುಹಬ್ಬ – ಬೆಂಗಳೂರಿನಲ್ಲಿ ವಿಶಿಷ್ಟ ಸರ್ಕಾರಿ ಆಸ್ಪತ್ರೆ ಲೋಕಾರ್ಪಣೆ

    ಮೋದಿ ಹುಟ್ಟುಹಬ್ಬ – ಬೆಂಗಳೂರಿನಲ್ಲಿ ವಿಶಿಷ್ಟ ಸರ್ಕಾರಿ ಆಸ್ಪತ್ರೆ ಲೋಕಾರ್ಪಣೆ

    ಬೆಂಗಳೂರು: ಸೂಕ್ತ ತಪಾಸಣೆ, ಪ್ರಯೋಗಾಲಯ, ಚಿಕಿತ್ಸೆ ಮತ್ತು ಔಷಧಿಗಳು ಉಚಿತವಾಗಿ ಇಲ್ಲವೇ ಕೈಗೆಟುಕುವ ದರದಲ್ಲಿ ಒಂದೇ ಕಡೆ ಲಭ್ಯವಾಗುವಂತಹ ‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ವು (ಸಿಯುಪಿಎಚ್‌ಸಿ) ಮಲ್ಲೇಶ್ವರಂ(Malleswaram) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ಇಡೀ ದೇಶದಲ್ಲೇ ವಿನೂತನವಾಗಿರುವ ಈ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆಯನ್ನು(Hospital) ಪ್ರಧಾನಿ ನರೇಂದ್ರ ಮೋದಿಯವರ(Narenndra Modi) 72ನೇ ಹುಟ್ಟುಹಬ್ಬವಾದ ಶನಿವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಉದ್ಘಾಟಿಸಿದ್ದಾರೆ.

    ನಗರದಲ್ಲಿ ಪ್ರಪ್ರಥಮವಾಗಿ ಬಿಬಿಎಂಪಿ(BBMP) ಮತ್ತು ಮಣಿಪಾಲ್(Manipal) ಹೆಲ್ತ್ ಎಂಟರ್‌ಪ್ರೈಸ್ ಸಹಯೋಗದಲ್ಲಿ ಈ ವಿನೂತನ ಮತ್ತು ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಹಲವು ಸಾರ್ವಜನಿಕರು ಕೂಡ ದೇಣಿಗೆ ನೀಡಿದ್ದಾರೆ. ಇಲ್ಲಿ ಪ್ರಯೋಗಾಲಯ, ಡಿಜಿಟಲ್ ಎಕ್ಸ್‌ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಪಿಎಫ್‌ಟಿ ಮತ್ತು ಇಸಿಜಿ ಸೌಲಭ್ಯಗಳು ಸಿಗುತ್ತವೆ. ಇದಲ್ಲದೆ, ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಹ ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ತುರ್ತು ಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಪ್ರಧಾನಮಂತ್ರಿಗಳ ಜನೌಷಧ ಕೇಂದ್ರ ಎಲ್ಲವೂ ಇಲ್ಲಿ ಲಭ್ಯವಿರಲಿದ್ದು, ಒಳರೋಗಿಗಳ ವಿಭಾಗವೂ ಇದೆ. ಅಲ್ಲದೆ ಆಸ್ಪತ್ರೆಯಲ್ಲಿ ಇಎಂಆರ್ (ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್) ವ್ಯವಸ್ಥೆಯೂ ಇದೆ.

    ಇಂತಹ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಲ್ಲೇಶ್ವರಂ ಕ್ಷೇತ್ರದ ನಾಗಪ್ಪ ಬ್ಲಾಕ್, ಗಾಂಧಿ ಗ್ರಾಮ, ಯಶವಂತಪುರ ಮತ್ತು ಮತ್ತೀಕೆರೆಗಳಲ್ಲಿ ಕೂಡ ಆಸ್ಪತ್ರೆಗಳನ್ನು ಹೀಗೆಯೇ ನವೀಕರಿಸಲಾಗಿದ್ದು, ಇವು ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ. ಈ ಆಸ್ಪತ್ರೆಗಳಿಗೆ ನಗರೋತ್ಥಾನ ಯೋಜನೆಯಡಿ ತಲಾ 1.50 ಕೋಟಿ ರೂ. ಕೊಡಲಾಗುತ್ತಿದೆ. ಉಳಿದ ಎರಡು ವಾರ್ಡುಗಳಲ್ಲೂ ಇಂತಹ ಸಿಯುಪಿಎಚ್‌ಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನೂ ಓದಿ: ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ

    ಈ ಆಸ್ಪತ್ರೆಗೆ ಬರುವವರಿಗೆ ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಒದಗಿಸಲಾಗುವುದು. ಇಲ್ಲಿ ವೈದ್ಯಕೀಯ ಗ್ಯಾಸ್‌ ಪೈಪ್‌ಲೈನ್‌ ಸಹಿತ ಆಕ್ಸಿಜನ್ ಜನರೇಟರ್ ಸೌಲಭ್ಯವನ್ನೂ ಅಳವಡಿಸಿಕೊಳ್ಳಲಾಗಿದೆ. ಹಾಗೆಯೇ ಪರಿಣತ ವೈದ್ಯರು ಹೊರರೋಗಿಗಳ ವಿಭಾಗದಲ್ಲಿ ನೆರವು ನೀಡಲಿದ್ದಾರೆ. ಬಿಬಿಎಂಪಿ ಮತ್ತು ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಗಳಡಿ ಈ ಆಸ್ಪತ್ರೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬ ವೈದ್ಯರು ರಜೆಯ ಮೇಲಿದ್ದಾಗ ಮತ್ತೊಬ್ಬ ವೈದ್ಯರು ಕರ್ತವ್ಯದ ಮೇಲಿರುತ್ತಾರೆ. ಯುನೈಟೆಡ್ ವೇ ಎನ್ನುವ ಕಂಪನಿಯವರು ಈ ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ.

    ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಜನರಲ್ಲಿ ಒಳ್ಳೆಯ ಭಾವನೆ ಇಲ್ಲ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಇದನ್ನು ಮನಗಂಡು, ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಪುನಃ ವಿಶ್ವಾಸ ಮೂಡಿಸುವಂತಹ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ ಗರಿಷ್ಠ 150 ಜನರಿಗೆ ಚಿಕಿತ್ಸೆ ಕೊಡಬಹುದು. ಇಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳನ್ನು ಮಣಿಪಾಲ್ ಸಮೂಹದ ಆಸ್ಪತ್ರೆಗಳ ಮೂಲಕ ಸರಕಾರಿ ದರದಲ್ಲಿ ಕೊಡಲಾಗುವುದು. ಈ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

    ಬೆಂಗಳೂರು ನಗರದ ಜನಸಂಖ್ಯೆ 1.3 ಕೋಟಿಯಷ್ಟಿದೆ. ಹೀಗಿರುವಾಗ ಪ್ರತೀ 2-3 ಲಕ್ಷ ಜನರಿಗೆ ಒಂದಂತೆಯಾದರೂ ಇಂತಹ ಸಿಯುಪಿಎಚ್‌ಸಿ ಅಗತ್ಯವಿದೆ. ಇದನ್ನು ಪರಿಗಣಿಸಿ ಇಂತಹ ಮೊಟ್ಟಮೊದಲ ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಪೊರೇಟ್‌ ವಲಯವನ್ನೂ ಸೇರಿಸಿಕೊಳ್ಳಲಾಗಿದ್ದು, ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ರಾಷ್ಟ್ರೀಯ ಮಟ್ಟದ ಎಲ್ಲ ಆರೋಗ್ಯ ಕಾರ್ಯಕ್ರಮಗಳ ವ್ಯಾಪ್ತಿಯಲ್ಲಿನ ಸೇವೆಗಳೂ ಸುಲಭವಾಗಿ ಸಿಗುತ್ತವೆ.

    ದಂತ ಪರೀಕ್ಷೆ, ಕಣ್ಣಿನ ಪರೀಕ್ಷೆ, ಹೃದ್ರೋಗ ಪರೀಕ್ಷೆ, ಡಿಜಿಟಲ್‌ ಎಕ್ಸ್‌ರೇ, ಪ್ರಯೋಗಾಲಯಗಳು, ಮಲ, ಮೂತ್ರ, ರಕ್ತ ಮತ್ತು ಕಫ ಪರೀಕ್ಷೆ, ಪಿಎಫ್‌ಟಿ ಪರೀಕ್ಷೆ ಫಿಸಿಯೋಥೆರಪಿ, ತುರ್ತು ಚಿಕಿತ್ಸಾ ಸೌಲಭ್ಯ, ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್, ಇಸಿಜಿ, ವೈದ್ಯಕೀಯ ಪೈಪ್‌ಲೈನ್‌ ಸಹಿತ ಆಕ್ಸಿಜನ್ ಜನರೇಟರ್ ಮತ್ತು ಜನೌಷಧಿ ಕೇಂದ್ರ ಹಾಗೂ ತಜ್ಞ ವೈದ್ಯರ ಲಭ್ಯತೆ. ಮಲ್ಲೇಶ್ವರಂ ಶಾಸಕ , ಸಚಿವರೂ ಆದ ಡಾ.ಸಿಎನ್ ಅಶ್ವಥನಾರಾಯಣ್ ಅವರ ಒತ್ತಾಸೆ, ಕಾಳಜಿಯಿಂದ ಈ ಯೋಜನೆ ಜಾರಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]