Tag: ಮಲ್ಲೇಶ್ವರಂ

  • ಮಲ್ಲೇಶ್ವರದಲ್ಲಿ ಬೇಕರಿಗೆ ನುಗ್ಗಿದ ಲಾರಿ – ತಪ್ಪಿದ ಭಾರೀ ದುರಂತ

    ಮಲ್ಲೇಶ್ವರದಲ್ಲಿ ಬೇಕರಿಗೆ ನುಗ್ಗಿದ ಲಾರಿ – ತಪ್ಪಿದ ಭಾರೀ ದುರಂತ

    ಬೆಂಗಳೂರು: ನಿಯಂತ್ರಣ ತಪ್ಪಿ ಲಾರಿಯೊಂದು (Lorry) ಬೇಕರಿಗೆ ನುಗ್ಗಿದ ಘಟನೆ ಮಲ್ಲೇಶ್ವರದಲ್ಲಿರುವ (Malleshwaram) ಲಿಂಕ್ ರಸ್ತೆಯಲ್ಲಿ ನಡೆದಿದೆ.

    ಬೆಳಗಿನ ಜಾವದಲ್ಲಿ ಈ ಘಟನೆ ನಡೆದಿದ್ದರಿಂದ ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ. ಹಗಲಿನಲ್ಲಿ ಘಟನೆ ನಡೆದಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು.ಇದನ್ನೂ ಓದಿ: ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

     

    ಬೆಳಗಿನ ಜಾವ 4:30ಕ್ಕೆ ಈ ಘಟನೆ ನಡೆದಿದೆ. ಲಾರಿ ಗುದ್ದಿದ ಪರಿಣಾಮ ಬೇಕರಿಯ ಬಾಗಿಲು ಜಖಂಗೊಂಡು ಗೋಡೆ ಹಾಳಾಗಿದೆ. ಪುಟ್‌ಪಾತ್ ಕಾಂಕ್ರಿಟ್ ಕುಸಿದಿದೆ. ಮಲ್ಲೇಶ್ವರಂ ಪೊಲೀಸರು ಲಾರಿ ಮತ್ತು ಚಾಲಕನ  ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದ್ಯಾ ಅಥವಾ ಬ್ರೇಕ್ ಫೇಲ್ ಆಗಿ ಈ ಘಟನೆ ನಡೆದಿದ್ಯಾ ಎನ್ನುವುದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ.

  • ಕೋವಿಡ್ ಆತಂಕ – ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

    ಕೋವಿಡ್ ಆತಂಕ – ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಹಾಮಾರಿ ಕೊರೊನಾ(Corona) ರಾಜ್ಯಕ್ಕೆ ಮತ್ತೆ ವಕ್ಕರಿಸಿಕೊಂಡಿದ್ದು, ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೋವಿಡ್ ಪಾಸಿಟಿವ್ ಕಾಣಿಸಿದೆ.

    ಮಲ್ಲೇಶ್ವರಂನ(Malleshwaram) 45 ವರ್ಷದ ವ್ಯಕ್ತಿಗೆ ಹಾಗೂ ರಾಜಾಜಿನಗರದ(Rajajinagara) 38 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇವರಿಬ್ಬರಿಗೂ ಕೋವಿಡ್ ಕಾಣಸಿಕೊಂಡಿದ್ದು, ಇಬ್ಬರನ್ನು ಹೋಂ ಐಸೂಲೇಷನ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: 3 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ಕೊರೊನಾ – ದೇಶದ ಹಲವು ರಾಜ್ಯಗಳಲ್ಲಿ JN1 ಎಂಟ್ರಿ

    ಬೆಂಗಳೂರಿನಲ್ಲಿ ವೈಟ್‌ಫೀಲ್ಡ್‌ನ(Whitefield) 84 ವರ್ಷದ ವೃದ್ಧ ಮೇ 17ರಂದು ಕೊರೊನಾಗೆ ಬಲಿಯಾಗಿದ್ದಾರೆ. ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೊರೊನಾಗೆ ತುತ್ತಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ಇವೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್(Covid Positive) ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಾಲುಗಳಿಗೆ ಹಗ್ಗ ಕಟ್ಟಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

    ಶನಿವಾರ ರಾಜ್ಯದಲ್ಲಿ 108 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ ಐವರಿಗೆ ಕೋವಿಡ್ ಬಂದಿದೆ. ಶನಿವಾರ ಬೆಂಗಳೂರಲ್ಲಿ 2, ಮೈಸೂರು 2 ಹಾಗೂ ವಿಜಯನಗರದಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಗಿತ್ತು.

  • ಬೆಂಗಳೂರು | ಶಿರಡಿ ಸಾಯಿಬಾಬಾರ ಮೂಲ ಪಾದುಕೆ ದರ್ಶನಕ್ಕೆ ಮುಗಿಬಿದ್ದ ಭಕ್ತಸಾಗರ – ಇಂದು ಕೊನೇ ದಿನ

    ಬೆಂಗಳೂರು | ಶಿರಡಿ ಸಾಯಿಬಾಬಾರ ಮೂಲ ಪಾದುಕೆ ದರ್ಶನಕ್ಕೆ ಮುಗಿಬಿದ್ದ ಭಕ್ತಸಾಗರ – ಇಂದು ಕೊನೇ ದಿನ

    ಬೆಂಗಳೂರು: ಇದೇ ಮೊದಲ ಬಾರಿಗೆ ಸಾಯಿಬಾಬಾರ ಮೂಲ ಪಾದುಕೆಗಳು ಬೆಂಗಳೂರಿನ (Bengaluru) ಸಾಯಿ ಮಂದಿರಕ್ಕೆ ಬಂದಿವೆ. ಈ ಪಾದುಕೆಯ ಆಶೀರ್ವಾದಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದು, ಇಂದು ದರ್ಶನಕ್ಕೆ ಕೊನೆಯ ದಿನವಾಗಿದೆ. ಈ ಪಾದುಕೆಯ ಮಹತ್ವ, ವಿಶೇಷದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಶಿರಡಿ (Shiradi) ಸಂಸ್ಥಾನದ ಮೂಲ ಪಾದುಕೆಯನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಕ್ತರಿಗಾಗಿ ದರ್ಶನಕ್ಕೆ ಇಡಲಾಗಿದೆ. ಮಲ್ಲೇಶ್ವರಂನ (Malleshwaram) ಸಾಯಿ ಮಂದಿರದಲ್ಲಿ ಮೂಲ ಪಾದುಕೆಯನ್ನು ಇಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆದಿದ್ದಾರೆ.ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

    ಶಿರಡಿ ಸಾಯಿ ಬಾಬಾರ ಮೂಲ ಪಾದುಕೆ ಕೇವಲ ಮೂರು ಕಡೆಗಳಲ್ಲಿ ಮಾತ್ರ ಇದೆ. ಒಂದು ಸಂಸ್ಥಾನದಲ್ಲಿ, ಒಂದು ಮ್ಯೂಸಿಯಂನಲ್ಲಿ ಹಾಗೂ ಮೂರನೇಯದು ಬೆಂಗಳೂರಿನ ಸಾಯಿ ಮಂದಿರಲ್ಲಿದೆ. ಅಪರೂಪದಲ್ಲಿ ಅಪರೂಪಕ್ಕೆ ಸಿಗುವ ಈ ಮೂಲ ಪಾದುಕೆಯ ದರ್ಶನಕ್ಕೆ ಜನ ಮುಗಿಬಿದ್ದಿದ್ದಾರೆ. ಶಿರಡಿಯಿಂದ ಬಂದಿರುವ ಅರ್ಚಕರ ತಂಡವೇ ಮಧ್ಯಾಹ್ನ 12 ಗಂಟೆಗೆ ಶಿರಡಿ ಆರತಿ, ಸಂಜೆ ಆರೂವರೆಗೆ ದೂಪಾರ್ಥಿ ಪೂಜೆ ಮಾಡುತ್ತಾರೆ. ಗುರುವಾರದಿಂದ ಭಕ್ತರಿಗೆ ಅವಕಾಶ ಕಲ್ಪಿಸಿದ್ದು, ಇಂದು ಕೊನೆಯ ದಿನವಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಇರಲಿದೆ.

    ಏ.16ನೇ ತಾರೀಖಿಗೆ ಮೂಲ ಪಾದುಕೆ ಬೆಂಗಳೂರಿಗೆ ಬಂದಿದೆ. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಸಾಯಿ ಮಂದಿರಕ್ಕೆ ಮೆರವಣಿಗೆ ಮೂಲಕ ಪಾದುಕೆಯನ್ನು ಸಾಯಿ ಸನ್ನಿದಿಗೆ ತಂದು ಇಡಲಾಗಿದೆ. ಈ ಪಾದುಕೆಯನ್ನು ಕೆಲವೇ ಕೆಲವು ಸಾಯಿ ಮಂದಿರಗಳಲ್ಲಿ ಭಕ್ತರ ದರ್ಶನಕ್ಕೆ ಕಳುಹಿಸಿ ಕೊಡುವ ಧಾರ್ಮಿಕ ಪದ್ಧತಿ ಇದೆ. ಅದರಂತೆ ಈ ಬಾರಿ ಮಲ್ಲೇಶ್ವರಂನ ಸಾಯಿ ಮಂದಿರಕ್ಕೆ ಪಾದುಕೆ ಬಂದಿದ್ದು, ಭಕ್ತರು ಸಾಯಿ ಬಾಬಾರ ಕೃಪೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ

  • ತಲೆಗೆ ಮೊಟ್ಟೆ ಏಟು – ಆಸ್ಪತ್ರೆಯಿಂದ ಮುನಿರತ್ನ ಡಿಸ್ಚಾರ್ಜ್‌

    ತಲೆಗೆ ಮೊಟ್ಟೆ ಏಟು – ಆಸ್ಪತ್ರೆಯಿಂದ ಮುನಿರತ್ನ ಡಿಸ್ಚಾರ್ಜ್‌

    ಬೆಂಗಳೂರು: ರಾಜರಾಜೇಶ್ವರಿ ನಗರದ (RR Nagara) ಬಿಜೆಪಿ ಶಾಸಕ ಮುನಿರತ್ನ(Munirathna) ಅವರು ಮಲ್ಲೇಶ್ವರದ ಕೆಸಿ ಜನರಲ್‌ ಆಸ್ಪತ್ರೆಯಿಂದ (KC General Hospital) ಡಿಸ್ಚಾರ್ಜ್‌ ಆಗಿದ್ದಾರೆ.

    ತಲೆಗೆ ಪೆಟ್ಟಾದ ಹಿನ್ನೆಲೆಯಲ್ಲಿ ಅಬ್ಸರ್‌ವೇಷನ್‌ನಲ್ಲಿ ಇರುವಂತೆ ವೈದ್ಯರು ಮುನಿರತ್ನ ಅವರಿಗೆ ಸೂಚಿಸಿದ್ದರು. ಬುಧವಾರದ ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆದಿದ್ದ ಮುನಿರತ್ನ ಗುರುವಾರ ಬೆಳಗ್ಗೆ ಡಿಸ್ಚಾರ್ಜ್‌ ಆಗಿದ್ದಾರೆ.

     

    ಈ ಸಂದರ್ಭದಲ್ಲಿ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಈಗ ನಾನು ಏನು ಹೇಳುವುದಿಲ್ಲ. ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದರು.

    ಗುರುವಾರ ಲಗ್ಗೆರೆ ವಾರ್ಡ್‌ನಲ್ಲಿರುವ ಲಕ್ಷ್ಮಿ ದೇವಿ ನಗರದಲ್ಲಿ ವಾಜಪೇಯಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದಾಗ ಮೊಟ್ಟೆ ದಾಳಿ ನಡೆದಿತ್ತು. ಕೂಡಲೇ ದಾಳಿಕೋರರನ್ನು ಮುನಿರತ್ನ ಬೆಂಬಲಿಗರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

     

    ಈ ದಾಳಿ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್, ಕುಸುಮಾ, ಹನುಮಂತರಾಯಪ್ಪ ಇದ್ದಾರೆ. ಪೊಲೀಸರು ಇಲ್ಲದಿದ್ರೆ ನನ್ನ ಕೊಲೆ ಆಗುತ್ತಿತ್ತು. ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕುಸುಮಾ ಶಾಸಕಿ ಆಗಬೇಕು ಎಂದು ಇತ್ತೀಚಿಗೆ ಕೆಲವರು ಧಮ್ಕಿ ಹಾಕ್ತಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.

  • ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಪ್ರಕರಣ – ಕಿಂಗ್‌ಪಿನ್ ಸೇರಿ 10 ಮಂದಿ ಅರೆಸ್ಟ್

    ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಪ್ರಕರಣ – ಕಿಂಗ್‌ಪಿನ್ ಸೇರಿ 10 ಮಂದಿ ಅರೆಸ್ಟ್

    ಬೆಂಗಳೂರು: ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ (Seat Block) ಮಾಡುವ ದಂಧೆಯಲ್ಲಿ ತೊಡಗಿದ್ದ 10 ಆರೋಪಿಗಳನ್ನು ಮಲ್ಲೇಶ್ವರಂ (Malleshwaram) ಪೊಲೀಸರು ಬಂಧಿಸಿದ್ದಾರೆ.

    ಒಟ್ಟು 10 ಜನರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳ ಪೈಕಿ ಕೆಲವರನ್ನು ಹರ್ಷ, ಪ್ರಕಾಶ್, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಅವಿನಾಶ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

    ಈ ಗ್ಯಾಂಗ್ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಮಾಡುತ್ತಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕೌನ್ಸಲಿಂಗ್‌ಗೆ ಹಾಜರಾಗಿ ಕಾಲೇಜು ಆಯ್ಕೆಯಾಗದೇ ಇರುವವರನ್ನು ಗುರಿಯಾಗಿಸಿಕೊಂಡಿದ್ದರು. ಈ ರೀತಿ ನಾನಾ ಕಾರಣಗಳಿಂದ 2,625 ವಿದ್ಯಾರ್ಥಿಗಳು ಸೀಟ್ ರಿಜೆಕ್ಟ್ ಮಾಡಿದ್ದರು.

    ಕೆಇಎ (KEA) ನೌಕರ ಅವಿನಾಶ್‌ನ ಸಹಾಯದಿಂದ ಪಡೆದ ಪಾಸ್‌ವರ್ಡ್‌ನಿಂದ ಸರ್ಕಾರಿ ಸೀಟ್ ಪಡೆದು ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್ ಬ್ಲಾಕ್ ಮಾಡುತ್ತಿದ್ದರು. ಆ ಸೀಟ್‌ಗಳನ್ನು ಲಕ್ಷಾಂತರ ರೂ.ಗೆ ಮ್ಯಾನೇಜ್‌ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್ ಮಾಡುತ್ತಿದ್ದರು. ಕಾಲೇಜಿನ ಮ್ಯಾನೇಜ್‌ಮೆಂಟ್ ಹಾಗೂ ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡುವುದರಲ್ಲಿ ತೊಡಗಿದ್ದರು.

    ಆರೋಪಿ ಪ್ರಕಾಶ್ ದೂರು ದಾಖಲಾಗಿದೆ ಎಂದು ಗೊತ್ತಾದ ಕೂಡಲೇ ತಮ್ಮ ಬಳಿಯಿದ್ದ ಲ್ಯಾಪ್‌ಟಾಪ್‌ಗಳನ್ನು ಕಡೂರಿನ ತನ್ನ ಜಮೀನಿನಲ್ಲಿ ಸುಟ್ಟುಹಾಕಿ ಸಾಕ್ಷಿ ನಾಶ ಮಾಡಿದ್ದ. ಸದ್ಯ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.ಇದನ್ನೂ ಓದಿ: ಹುಟ್ಟೂರಿಗೆ ಶೋಭಿತಾ ಮೃತದೇಹ – ಇಂದು ಅಂತ್ಯಕ್ರಿಯೆ

  • ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    -ನ.25, 26ರಂದು ಬಸವನಗುಡಿಯಲ್ಲಿ ಪರಿಷೆ, 3 ಲಕ್ಷ ಜನ ಭಾಗಿ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಮತ್ತು ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯ (Kadalekai Parishe) ದಿನಾಂಕವನ್ನ ಮುಜರಾಯಿ ಇಲಾಖೆ (Muzrai Department) ಘೋಷಣೆ ಮಾಡಿದೆ. ಎರಡು ದಿನಗಳ ಕಾಲ ಈ ಪರಿಷೆ ನಡೆಸಲು ನಿರ್ಧರಿಸಿದೆ. ಈ ಬಾರಿಯ ಕಡಲೆಕಾಯಿ ಪರಿಷೆ ಹಲವು ವಿಶೇಷತೆಗಳಿಂದ ಕೂಡಿರಲಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಬಸವನಗುಡಿ ಕಡಲೆಕಾಯಿ ಪರಿಷೆ ಮಾಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ನವೆಂಬರ್ 25 ಮತ್ತು 26ರಂದು ಎರಡು ದಿನಗಳ ಕಾಲ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವಾರು ಸಲಹೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್‌ ಬಂದಿತ್ತು: ಸಿಎಂ ಬಾಂಬ್‌

    ಇನ್ನೂ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನವೆಂಬರ್ 15 ರಿಂದ 3 ದಿನಗಳ ಕಾಲ ನಡೆಯಲಿದೆ. ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ. ಪರಿಷೆಗೆ ಬರುವವರು ಮತ್ತು ವ್ಯಾಪಾರಸ್ಥರು ಪ್ಲಾಸ್ಟಿಕ್ ಬಿಟ್ಟು, ಬಟ್ಟೆ ಚೀಲವನ್ನೆ ಬಳಸಬೇಕು ಎಂಬ ನಿಯಮ ಜಾರಿ ಮಾಡಲಾಗುತ್ತದೆ. ಇನ್ನು ಈ ಪರಿಷೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ರಝಾಕರು ಮುಸ್ಲಿಮರಲ್ಲ, ಸುಟ್ಟಿದ್ದು ನಮ್ಮನೆ, ಹೋಗಿದ್ದು ನಮ್ಮವರ ಜೀವ, ಯೋಗಿಗೆ ಏನಾಗಬೇಕು? – ಪ್ರಿಯಾಂಕ್ ತಿರುಗೇಟು

    ಕಳೆದ ಬಾರಿ ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿರೋ ಆರೋಪ ಎದ್ದಿತ್ತು. ಹೀಗಾಗಿ ಈ ಬಾರಿ ಆ ರೀತಿ ಅಕ್ರಮಗಳು ನಡೆಯದಂತೆ ಕ್ರಮವಹಿಸಿ ಯಶಸ್ವಿಗೊಳಿಸಲು ಪ್ಲ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಗುರುವಾರ ಬಿಎಸ್‌ವೈ, ರಾಮುಲುಗೆ ಬಿಗ್‌ ಡೇ!

  • ಮನೆಯ ಮುಂದೆ ಆಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಮಹಿಳೆ

    ಮನೆಯ ಮುಂದೆ ಆಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಮಹಿಳೆ

    ಬೆಂಗಳೂರು: ಎರಡೂವರೆ ವರ್ಷದ ಹೆಣ್ಣು ಮಗುವನ್ನು ಮಾತನಾಡಿಸಿ ಮಹಿಳೆಯೊಬ್ಬಳು ಅಪಹರಿಸಿರುವ ಘಟನೆ ನಗರದ ಮಲ್ಲೇಶ್ವರಂ (Malleshwaram) ಪೈಪ್‌ಲೈನ್‌ನ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

    ಅಪಹರಣಕ್ಕೊಳಗಾದ ಮಗುವನ್ನು ದಿವ್ಯ ಭಾರತಿ ಹಾಗೂ ಲೋಕೇಶ್ ದಂಪತಿಯ ಪುತ್ರಿ ನವ್ಯ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಇಡಿ ನೋಟಿಸ್‌ ನೀಡಿದೆ ಎಂದು ನಿಮ್ಗೆ ಹೇಳಿದ್ದು ಯಾರು? – ಸಿಎಂ

    ಇಂದು (ನ.7) ಬೆಳಗ್ಗೆ 9:20ರ ಸುಮಾರಿಗೆ ಈ ಘಟನೆ ನಡೆದಿದೆ. ತಾಯಿ ಮೊದಲ ಮಗುವನ್ನು ಶಾಲೆಗೆ ಕಳಿಸಲು ರೆಡಿ ಮಾಡುತ್ತಿದ್ದರು. ಈ ವೇಳೆ ನವ್ಯ ಮನೆಯ ಹೊರಗೆ ಆಟವಾಡುತ್ತಿದ್ದಳು. ಮನೆ ಬಳಿ ಅಪರಿಚಿತ ಮಹಿಳೆಯೊಬ್ಬಳು ಬಂದು ಮಗುವನ್ನು ಮಾತನಾಡಿಸಿ ಕರೆದೊಯ್ದಿದ್ದಾಳೆ. ಮಗುವನ್ನು ಅಪಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದು, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಆಧಾರ್ ಅಪ್‌ಡೇಟ್‌ಗಾಗಿ ಬ್ಯಾಂಕ್ ಹೆಸರಲ್ಲಿ ಲಿಂಕ್ – 18 ಲಕ್ಷ ರೂ. ವಂಚನೆ

  • ಗೇಟ್‌ ಬಿದ್ದು ಬಾಲಕ ಸಾವು – ವಾರ್ಡ್‌ ಸಹಾಯಕ ಎಂಜಿನಿಯರ್‌ ಅಮಾನತು

    ಗೇಟ್‌ ಬಿದ್ದು ಬಾಲಕ ಸಾವು – ವಾರ್ಡ್‌ ಸಹಾಯಕ ಎಂಜಿನಿಯರ್‌ ಅಮಾನತು

    ಬೆಂಗಳೂರು: ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾತ್ರೇಯ ವಾರ್ಡ್‌ನ (Dattatreya Ward) ಸಹಾಯಕ ಎಂಜಿನಿಯರ್‌ ಟಿ .ಶ್ರೀನಿವಾಸ ರಾಜು ಅವರನ್ನು ಅಮಾನತುಗೊಳಿಸಲಾಗಿದೆ.

    ಪಾಲಿಕೆ ಉಪಯುಕ್ತ ಅಡಳಿತ ವಿಭಾಗ ತಕ್ಷಣವೇ ಜಾರಿಗೆ ಬರುವಂತೆ ಅದೇಶ ಹೊರಡಿಸಿದೆ. ಕರ್ತವ್ಯ ನಿರ್ಲಕ್ಷ್ಯ, ಗೇಟ್ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸಿಲ್ಲ, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ್ದಕ್ಕೆ ಬಿಬಿಎಂಪಿ (BBMP) ಅಡಳಿತ ವಿಭಾಗದ ಉಪ ಅಯುಕ್ತರು ಅಮಾನತು ಮಾಡಿ ಅದೇಶ ಪ್ರಕಟಿಸಿದ್ದಾರೆ.

    ಘಟನೆ ಬಗ್ಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ಅವರಿಗೆ ನೋಟಿಸ್‌ ನೀಡಲಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ನೋಟಿಸ್

    ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ನಿರಂಜನ್‌ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ (Gate) ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದ.

     

  • ಮೈದಾನದ ಗೇಟ್ ಬಿದ್ದು ಮಗು ಸಾವು – ತನಿಖೆ ನಡೆಸುವಂತೆ ಬಿಬಿಎಂಪಿ ಕಮಿಷನರ್‌ಗೆ ಗುಂಡೂರಾವ್ ಸೂಚನೆ

    ಮೈದಾನದ ಗೇಟ್ ಬಿದ್ದು ಮಗು ಸಾವು – ತನಿಖೆ ನಡೆಸುವಂತೆ ಬಿಬಿಎಂಪಿ ಕಮಿಷನರ್‌ಗೆ ಗುಂಡೂರಾವ್ ಸೂಚನೆ

    ಬೆಂಗಳೂರು: ಮಲ್ಲೇಶ್ವರಂ (Malleshwaram) ಬಿಬಿಎಂಪಿ ಮೈದಾನದ ಗೇಟ್ ಬಿದ್ದು ಮಗು ಸಾವನ್ನಪ್ಪಿರುವ ಘಟನೆಗೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ (Dinesh Gundurao) ತಿಳಿಸಿದ್ದಾರೆ.

    ಮಲ್ಲೇಶ್ವರಂ ಬಿಬಿಎಂಪಿ ಆಟದ ಮೈದಾನದಲ್ಲಿ ಗೇಟ್ ಬಿದ್ದು 11 ವರ್ಷದ ಬಾಲಕ ನಿರಂಜನ್ ಸಾವಿಗೀಡಾಗಿದ್ದು, ಈ ಬಗ್ಗೆ ಅಗತ್ಯ ತನಿಖೆ ನಡೆಸಲು ಬಿಬಿಎಂಪಿ ಕಮಿಷನರ್‌ಗೆ ಸೂಚನೆ ನೀಡಿದರು.ಇದನ್ನೂ ಓದಿ: MUDA Scam | ಸಿಎಂಗೆ ಬಿಗ್‌ ಡೇ – ಪ್ರಾಸಿಕ್ಯೂಷನ್‌ ಭವಿಷ್ಯ ನಾಳೆ ನಿರ್ಧಾರ

    ಮೈದಾನಕ್ಕೆ 4 ವರ್ಷದ ಹಿಂದೆ ಗೇಟ್ ಅಳವಡಿಸಲಾಗಿದೆ. ಸಂಬಂಧಪಟ್ಟವರಿಂದ ವರದಿ ತರಿಸಿಕೊಳುತ್ತೇವೆ. ಕಳಪೆ ಮಾಡಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಈ ಕುರಿತು ಯಾರಿಂದಲೂ ದೂರು ಬಂದಿರಲಿಲ್ಲ. ಕಾರ್ಯಕರ್ತರ ಗಮನಕ್ಕೂ ಬಂದಿಲ್ಲ. ಯಾರಿಂದ ಲೋಪ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅವರಿಗೆ ಸೂಚನೆ ನೀಡಲಾಗಿದೆ ಎಂದರು.

    ಇದೇ ವೇಳೆ ಸಚಿವ ದಿನೇಶ್ ಗುಂಡುರಾವ್ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಸೂಚಿಸಿ, ದುರಂತಕ್ಕೆ ದುಃಖ ವ್ಯಕ್ತಪಡಿಸಿದರು. ಕುಟುಂಬಕ್ಕೆ ಬಿಬಿಎಂಪಿಯಿಂದ 5 ಲಕ್ಷ ರೂ. ಹಾಗೂ ಗಾಂಧಿ ನಗರ ಬ್ಲಾಕ್ ಕಾಂಗ್ರೆಸ್ (Congress) ವತಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಅಲ್ಲದೇ ಬಾಲಕನ ಸಹೋದರಿಯ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ಆರ್.ಗುಂಡೂರಾವ್ ಫೌಂಡೇಶನ್ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.ಇದನ್ನೂ ಓದಿ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಬೆನ್ನಲ್ಲೇ ದರ್ಶನ್‌ಗೆ ಐಟಿ ಕಂಟಕ

  • ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

    ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

    ಬೆಂಗಳೂರು: ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾಗಿರುವ ಘಟನೆ ಮಲ್ಲೇಶ್ವರಂ (Malleshwaram) ಬಿಬಿಎಂಪಿ (BBMP) ಗ್ರೌಂಡ್‌ನಲ್ಲಿ ನಡೆದಿದೆ.

    ನಿರಂಜನ್ (10) ಮೃತ ಬಾಲಕ. ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಟ ಆಡಲು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದು, ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿದೆ. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಣಕಾಸು ವಿಚಾರಕ್ಕೆ ವ್ಯಕ್ತಿಗೆ ಜೀವ ಬೆದರಿಕೆ – ಯುಪಿ ಸಂಸದನ ಪುತ್ರನ ವಿರುದ್ಧ ಎಫ್‍ಐಆರ್

    ಮಲ್ಲೇಶ್ವರಂ ಫೈಪ್‌ಲೈನ್‌ನಲ್ಲಿ ವಾಸವಾಗಿದ್ದ ಆಟೋ ಚಾಲಕ ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮೊದಲನೇ ಪುತ್ರ ನಿರಂಜನ್. ಮಲ್ಲೇಶ್ವರಂನ ಬಿಬಿಎಂಪಿ ಶಾಲೆಯಲ್ಲಿ ಬಾಲಕ 5ನೇ ತರಗತಿಯಲ್ಲಿ ಓದುತ್ತಿದ್ದ. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ