Tag: ಮಲ್ಲಿಕಾರ್ಜುನ್ ಖರ್ಗೆ

  • ಬಿಎಸ್‍ವೈ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿಲ್ಲ: ಖರ್ಗೆ

    ಬಿಎಸ್‍ವೈ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿಲ್ಲ: ಖರ್ಗೆ

    ಕಲಬುರಗಿ: ಹುಟ್ಟಿದ ಮಗುವಿಗೆ ಹೊಟ್ಟೆಯೊಳಗೆ ವಿಷ ಹೋಗಬಾರದು ಅಂತಾ ನಾಲಿಗೆ ಮೇಲಿನ ವಿಷ ತೆಗೆಯುತ್ತಾರೆ. ಬಿಎಸ್ ಯಡಿಯೂರಪ್ಪ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿರಲಿಕ್ಕಿಲ್ಲ. ಅದಕ್ಕೆ ಹೋದಕಡೆಯಲ್ಲ ಸುಳ್ಳು ಹೇಳುತ್ತಾ ತಿರುಗಾಡುತ್ತಿರುತ್ತಾರೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

    ಅಫಜಲ್ಪುರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಬಿಎಸ್‍ವೈ ಕೀಳಾಗಿ ಮಾತನಾಡುತ್ತಾರೆ. ಆರ್ ಎಸ್‍ ಎಸ್ ಹಿನ್ನೆಲೆಯುಳ್ಳವರ ಬಾಯಲ್ಲಿ ಇದೆಂಥ ಮಾತು, ಇದೆನಾ ಶಿಸ್ತಿನ ಪಕ್ಷ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅಹಿಂದ ವರ್ಗದ ಜನರ ಬಗ್ಗೆ ಕಾಳಜಿಯುಳ್ಳ ಏಕೈಕ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ನಿಮಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ. ಈಗಿರುವ ಸೌಲಭ್ಯಗಳು ಮುಂದುವರೆಯುತ್ತವೆ. ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾ ಗುತ್ತೇದಾರ್ ನನ್ನ ಮೇಲೆ ಸಿಟ್ಟು ಮಾಡಿಕೊಂಡರು. ಸಿಎಂ ಸಿದ್ದರಾಮಯ್ಯ ಮೇಲೆ ಯಾಕೆ ಅವರು ಸಿಟ್ಟು ಮಾಡಿಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದರು.

    ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ನೀಡಿದ ಹಕ್ಕುಗಳನ್ನ ಕಿತ್ತುಕೊಳ್ಳಲು ಬಿಜೆಪಿಯವರು ಹೊರಟಿದ್ದಾರೆ. ಮೋದಿ, ಶಾ ಹೋದ ಕಡೆಯಲ್ಲ ಸುಳ್ಳು ಹೇಳೋದೆ ಮಾಡುತ್ತಿದ್ದಾರೆ. ಹರ್ ಏಕ್ ಜೇಬ್‍ಮೆ ಪಂದ್ರ ಪಂದ್ರ ಲಾಕ್ ಜಮಾ ಕರ್ತೆ ಅಂತಾ ಮೋದಿ ಹೇಳಿದ್ದರು. ಲೇಕಿನ್ ಏಕ್ ಪೈಸೆಬಿ ಜಮಾ ನಹಿ ಹುವಾ ರೈತರಿಗಾಗಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕೇಂದ್ರ ಮಾಡಲಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

  • ಸಿಎಂ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಖರ್ಗೆ

    ಸಿಎಂ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಖರ್ಗೆ

    ಕಲಬುರಗಿ: ಸದಾ ಸಿಎಂ ಸಿದ್ದರಾಮಯ್ಯ ಅವರ ನಿಲುವುಗಳನ್ನು ಸಮರ್ಥಿಸಿ ಸರ್ಕಾರದ ಬೆಂಬಲಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿಲ್ಲುತ್ತಿದ್ದರು. ಇದೀಗ ಅಶೋಕ್ ಖೇಣಿ ಸೇರ್ಪಡೆ ಮತ್ತು ಗದಗ ಜಿಲ್ಲೆಗೆ ವಿಶೇಷ ಸ್ಥಾನಮಾನದ ಸಿಎಂ ನಿರ್ಣಯಗಳಿಂದ ಆಕ್ರೋಶಗೊಂಡಿದ್ದು, ಇದೀಗ ಸಿಎಂ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ.

    ರಾಜ್ಯ ರಾಜಕಾರಣ ಸೇರಿದಂತೆ ಹೈದರಾಬಾದ್ ಕರ್ನಾಟಕದ ಮುಂಚೂಣಿ ನಾಯಕ ಅಂದ್ರೆ ಮಲ್ಲಿಕಾರ್ಜುನ ಖರ್ಗೆ. ಆದರೆ ಇಂತಹ ನಾಯಕನನ್ನು ಇದೀಗ ಸಿಎಂ ಸಿದ್ದರಾಮಯ್ಯ ಸೈಡ್ ಲೈನ್ ಮಾಡಿದ್ದು, ಅದರ ಮೊದಲ ಹೆಜ್ಜೆಯಾಗಿ ಖರ್ಗೆ ವಿರೋಧದ ಮಧ್ಯೆ ನೈಸ್ ಮುಖ್ಯಸ್ಥ ಮತ್ತು ಬೀದರ್ ದಕ್ಷಿಣ ಶಾಸಕರಾಗಿರುವ ಅಶೋಕ್ ಖೇಣಿ ಅವರನ್ನು ಸಿದ್ದರಾಮಯ್ಯ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಖರ್ಗೆ ಅವರು, ಮಾಧ್ಯಮಗಳ ಜೊತೆ ಮಾತನಾಡುತ್ತ ಖೇಣಿ ಪಕ್ಷಕ್ಕೆ ಯಾಕೆ ಬಂದಿದ್ದಾರೋ ಗೊತ್ತಿಲ್ಲ, ಅವರನ್ನು ಯಾರು ಕರೆ ತಂದರು? ಅವರಿಂದ ಏನು ಲಾಭ? ಅಂತಾ ಪರೋಕ್ಷವಾಗಿ ಸಿಎಂ ವಿರುದ್ಧ ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಇನ್ನು ಇತ್ತೀಚೆಗೆ ಹೈಕ ಭಾಗಕ್ಕೆ ಗದಗ ಜಿಲ್ಲೆ ಸೇರ್ಪಡೆಯ ವಿಷಯ ಪದೇ ಪದೇ ಪ್ರಸ್ತಾಪವಾಗುತ್ತಿದೆ. ಕೆಲವರು ರಾಜಕೀಯ ಅಲ್ಲಿನ ಜನರನ್ನ ಒಲೈಸಿಕೊಳ್ಳಲು ಈ ವಿವಾದ ಹುಟ್ಟಿಸಿದ್ದಾರೆ. ಈ ವಿಷಯ ಕುರಿತು ಒಂದು ವೇಳೆ ರಾಜ್ಯ ಸರ್ಕಾರ ಒಪ್ಪಿದರೂ ನಾನು ಒಪ್ಪೋದಿಲ್ಲ ಅಂತಾ ಸರ್ಕಾರಕ್ಕೆ ಮಲ್ಲಿಕಾರ್ಜುನ್ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಬೆದರಿಕೆ ಕರೆ: ಕೇಂದ್ರದಲ್ಲಿ ಬಿಜೆಪಿ ನಾಯರಿಗೆ ಅಷ್ಟೇ ಅಲ್ಲ, ನನಗೂ ಸಹ ಅನಾಮಿಕರಿಂದ ಬೆದರಿಕೆ ಕರೆ ಬರುತ್ತಿವೆ. ಕರೆ ಮಾಡಿ ಬೆದರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಇಲ್ಲ ಸಲ್ಲದ್ದನ್ನು ಬಿಂಬಿಸಿ ಬೆದರಿಸುವ ಕೆಲಸ ನಿರಂತರವಾಗಿ ನಡೆದಿದೆ. ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ದೆಹಲಿಯ ತುಘಲಕ್ ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಆಪ್ತ ಸಹಾಯಕ ಎರಡು ತಿಂಗಳ ಹಿಂದೆಯೇ ದೂರು ದಾಖಲಿಸಿದ್ದಾರೆ. ಅಲ್ಲದೆ, ನಾನೇ ಖುದ್ದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಸ್ಪೀಕರ್ ಅವರಿಗೆ ಲಿಖಿತವಾಗಿ ದೂರು ನೀಡಿದ್ದೇನೆ ಎಂದರು.

  • ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ಕಲಬುರಗಿ: ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪದೇ ಪದೇ ಪ್ರಧಾನಿ ಮೋದಿ ಚಹಾ ಮಾರುತ್ತಿದ್ದೆ ಎಂದು ಚುನಾವಣೆಯಲ್ಲಿ ಹೇಳುವ ಮೂಲಕ ಜನರ ಅನುಕಂಪಗಳಿಸಲು ಮುಂದಾಗುತ್ತಾರೆ. ನಾನು ಕೂಡ ಕೂಲಿ ಕಾರ್ಮಿಕನ ಮಗನಾಗಿದ್ದೆ. ಇದನ್ನೇ ಪದೇ ಪದೇ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ನೀವು ಚಹಾ ಮಾರಾಟ ಮಾಡಿ, ದೇಶ ಮಾರಬೇಡಿ: ಕಾಂಗ್ರೆಸ್ಸಿಗೆ ಮೋದಿ ಟಾಂಗ್

    ನೋಟ್ ಬ್ಯಾನ್, ಜಿಎಸ್‍ಟಿಯಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ತವರು ರಾಜ್ಯದಲ್ಲಿ ಮೋದಿ ಗಾಳಿಯಿಲ್ಲ. ಗುಜರಾತ್‍ನಲ್ಲಿ ಸದ್ಯ ಕಾಂಗ್ರೆಸ್ ಪರ ವಾತಾವರಣವಿದ್ದು, ಅಲ್ಲಿನ ಜನ ಮೋದಿ ಮಾತಿಗೆ ಮರಳಾಗುವುದಿಲ್ಲ ಎಂದರು.

  • ಪರಮೇಶ್ವರ್‍ಗೇ ‘ಕೈ’ ಪಟ್ಟ – ಗೃಹ ಸಚಿವ ಸ್ಥಾನ ತ್ಯಜಿಸಲು ಹೈಕಮಾಂಡ್ ಸೂಚನೆ

    ಪರಮೇಶ್ವರ್‍ಗೇ ‘ಕೈ’ ಪಟ್ಟ – ಗೃಹ ಸಚಿವ ಸ್ಥಾನ ತ್ಯಜಿಸಲು ಹೈಕಮಾಂಡ್ ಸೂಚನೆ

    ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಅವರನ್ನೇ ಮುಂದುವರೆಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆದರೆ ಕೈ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಸಚಿವ ಸ್ಥಾನ ತ್ಯಜಿಸಬೇಕು ಎಂಬ ಸೂತ್ರವನ್ನು ಮುಂದಿಟ್ಟಿದೆ ಎಂದು ವಿಶ್ವಸನೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಪರಮೇಶ್ವರ್ ಮುಂದುವರಿಕೆಗೆ ಹೈಕಮಾಂಡ್ ನಿರ್ಧಾರ ಮಾಡಿದ್ದು, ಪರಮೇಶ್ವರ್ ಅವರನ್ನ ಬದಲಾಯಿಸಿದರೆ ದಲಿತರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಮುಂದೆ ಚುನಾವಣಾ ವರ್ಷ ಇದೆ. ಹೀಗಾಗಿ ಈಗ ಪರಮೇಶ್ವರ್ ಅವರನ್ನು ಬದಲಾಯಿಸಿದರೆ ದಲಿತ ಸಮುದಾಯದವರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಮುಂದಿನ ಚುನಾವಣೆ ವೇಳೆ ಪಕ್ಷದ ವೋಟ್ ಬ್ಯಾಂಕ್‍ಗೆ ತೊಂದರೆ ಎದುರಾಗಲಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಪರಮೇಶ್ವರ್ ಮುಂದುವರೆಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

    ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇಮಕಕ್ಕೆ ಒಮ್ಮತ ಮೂಡಲಿಲ್ಲ. ಡಿಕೆಶಿಗೆ ಹಲವು ಹಿರಿಯ ಮುಖಂಡರಿಂದ ವಿರೋಧ ವ್ಯಕ್ತವಾಯಿತು. ಹೀಗಾಗಿ ಪರಮೇಶ್ವರ್ ಮುಂದುವರಿಕೆ ಹೈಕಮಾಂಡ್ ಸೂತ್ರ ಸಿದ್ಧಪಡಿಸಿದೆ.

    ಸಚಿವ ಸ್ಥಾನ ತೊರೆಯಲು ಪರಮೇಶ್ವರ್‍ಗೆ ಹೈಕಮಾಂಡ್ ಸೂಚನೆ ನೀಡಿದ್ದು, ಗೃಹ ಖಾತೆ ಮತ್ತೆ ಕೆಜೆ ಜಾರ್ಜ್ ಹೆಗಲಿಗೇರುವ ಸಾಧ್ಯತೆ ನಿಚ್ಚಳವಾಗಿದೆ. ಸಿದ್ದರಾಮಯ್ಯನವರ ಅಭ್ಯರ್ಥಿ ಎಸ್.ಆರ್ ಪಾಟೀಲ್ ಅವರನ್ನು ಪರಿಷತ್ ಸಭಾಪತಿ ಹುದ್ದೆಗೆ ತರಲು ಚಿಂತನೆ ನಡೆದಿದೆ. ಸಚಿವ ಸೀತಾರಾಮ್‍ಗೆ ಪರಿಷತ್ ಸಭಾನಾಯಕನ ಹೊಣೆ, ಮೇಲ್ವರ್ಗದ ನಾಯಕರಿಗೆ ಪ್ರಚಾರ ಸಮಿತಿ ಮತ್ತು ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಇಂದು ರಾಹುಲ್ ಗಾಂಧಿ ಜೊತೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.

    ಇದೇ ವೇಳೆ ಸಭೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಯಾರೇ ಅಧ್ಯಕ್ಷರಾದ್ರೂ ಅವರ ಜೊತೆ ಕೆಲಸ ಮಾಡಲು ಸಿದ್ಧ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದಾರೆ.

    ಮೂವರ ನಡುವೆ ಇತ್ತು ಪೈಪೋಟಿ: ದಲಿತ ಸಮುದಾಯದ ಬೆಂಬಲದೊಂದಿಗೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಪರಮೇಶ್ವರ್ ಕಸರತ್ತು ಮಾಡ್ತಿದ್ರೆ, ಒಕ್ಕಲಿಗರ ಜೊತೆ ಉಪಚುನಾವಣೆಗಳಲ್ಲಿ ಕೆಲಸ ಮಾಡಿ ಜಯದ ಹುಮ್ಮಸ್ಸಿನಲ್ಲಿರೋ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಪ್ರಭಾವ ಬೀರಿ ಮತ್ತೊಂದು ಕಡೆ ಲಾಬಿ ಮಾಡಿದ್ದರು. ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆಪ್ತ ಸಚಿವ ಎಂ.ಬಿ. ಪಾಟೀಲ್ ಪರ ಬ್ಯಾಟಿಂಗ್ ಮಾಡಲು ಮುಂದಾಗಿದ್ದರು.

    ಸಚಿವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿದ್ದರು. ಆಶ್ಚರ್ಯ ಎಂಬಂತೆ ರವಿವಾರ ಸಿಎಂ ದೆಹಲಿಗೆ ತೆರಳುವ ವೇಳೆ ಅಧ್ಯಕ್ಷ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಕೂಡ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದರು.

     

  • ವಿಪಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಕುರಿತು ಮಾಹಿತಿಯಿಲ್ಲ, ಊಹಾಪೋಹದ ಬಗ್ಗೆ ಮಾತಾಡಲ್ಲ: ಖರ್ಗೆ

    ವಿಪಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಕುರಿತು ಮಾಹಿತಿಯಿಲ್ಲ, ಊಹಾಪೋಹದ ಬಗ್ಗೆ ಮಾತಾಡಲ್ಲ: ಖರ್ಗೆ

    ಕಲಬುರಗಿ: ವಿಪಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಕುರಿತು ಯಾವುದೇ ಮಾಹಿತಿಯಿಲ್ಲ ಅಂತಾ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ನನ್ನ ಜೊತೆ ಯಾವುದೇ ಚರ್ಚೆ ಮಾಡಿಲ್ಲ. ಹೀಗಾಗಿ ಈ ವಿಷಯ ರಾಹುಲ್ ಗಾಂಧಿಗೆ ಬಿಟ್ಟಿದೆ. ಇನ್ನು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡ್ತಾರೆ ಅನ್ನೋ ಬಗ್ಗೆ ಸಹ ಯಾವುದೇ ಮಾಹಿತಿ ಇಲ್ಲಾ. ಆ ಗೋಜಿಗೂ ಹೋಗಿಲ್ಲ ಅಂದ್ರು.

    ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನ್ನ ಕರೆದು ಕೇಳಿದ್ರೆ ನನ್ನ ಅಭಿಪ್ರಾಯ ಹೇಳಬಹುದು. ಉಹಾಪೋಹಗಳ ಮೇಲೆ ಮಾತಾಡೋದು ಸರಿಯಲ್ಲ. ಹೈಕಮಾಂಡ್ ಏನು ತಿರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧನಾಗಿರುತ್ತೇನೆ. ಅವರು ಏನು ಹೇಳ್ತಾರೋ ಅದನ್ನು ಪಾಲಿಸುತ್ತೇನೆ ಅಂತ ಹೇಳುವ ಮೂಲಕ ಖರ್ಗೆ ಹೈಕಮಾಂಡನತ್ತ ಇದೀಗ ಮುಖ ಮಾಡಿದ್ದಾರೆ.

  • ಕೊನೆಗೂ ಭೂಕಂಪ ಆಯ್ತು: ರಾಹುಲ್‍ಗೆ ಮೋದಿ ಟಾಂಗ್

    ನವದೆಹಲಿ: ಸೋಮವಾರದಂದು ಉತ್ತರ ಭಾರತದ ಹಲವೆಡೆ ಭೂಕಂಪ ಸಂಭವಿಸಿರುವ ಬೆನ್ನಲ್ಲೇ, ಕೊನೆಗೂ ಭೂಕಂಪ ಆಯ್ತು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

    ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕೊನೆಗೂ ಭೂಕಂಪ ಆಯ್ತು. ಭೂಮಿ ತಾಯಿ ಕೋಪಗೊಂಡಿರಬಹುದು ಎಂದರು. ಈ ಹಿಂದೆ ರಾಹುಲ್ ಗಾಂಧಿ, ಮೋದಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ನಾನು ಸಂಸತ್ತಿನಲ್ಲಿ ಮಾತನಾಡಿದ್ರೆ ಭೂಕಂಪವಾಗುತ್ತೆ ಎಂದಿದ್ದರು.

    ಭಾರತದ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಮಾತನಾಡಿದ ಮೋದಿ, ಜನ ಶಕ್ತಿಯಿಂದಲೇ ಒಬ್ಬ ಟೀ ಮಾರುವವರ ಮಗ ದೇಶದ ಪ್ರಧಾನಿಯಾಗಿದ್ದು ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

    ಮಲ್ಲಿಕಾರ್ಜುನ್ ಖರ್ಗೆ ಅವರ ಟೀಕೆಗೆ ಉತ್ತರಿಸಿ, ನಾವು ನಾಯಿಗಳ ಪರಂಪರೆಯಿಂದ ಬೆಳೆದುಬಂದಿಲ್ಲ ಅಂದ್ರು. ಭಗತ್ ಸಿಂಗ್ ಮತ್ತು ಆಝಾದ್‍ರಂತಹವರು ಕೂಡ ಇದ್ದರು ಅನ್ನೋದನ್ನು ಇವರ ಬಾಯಲ್ಲಿ ಕೇಳೇ ಇಲ್ಲ. ಕೇವಲ ಒಂದು ಪರಿವಾರದಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಅಂದುಕೊಂಡಿದ್ದಾರೆ ಅಂತ ಉತ್ತರಿಸಿದ್ರು.

    ಕಾಂಗ್ರೆಸ್‍ನಲ್ಲಿ ಜವಹರ್ ಲಾಲ್ ನೆಹರೂ, ಇಂದಿರಾ ಗಾಂಧಿಯಂತ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ರು. ಆದ್ರೆ ಬಿಜೆಪಿಯಿಂದ ಒಂದು ನಾಯಿ ಕೂಡ ಸತ್ತಿಲ್ಲ ಅಂತ ಖರ್ಗೆ ಹೇಳಿಕೆ ನೀಡಿದ್ದರು.