Tag: ಮಲ್ಲಿಕಾರ್ಜುನ್ ಖರ್ಗೆ

  • ಕಲಬುರಗಿ ಕ್ಷೇತ್ರದ ಅಭಿವೃದ್ಧಿ ಉದಾಹರಿಸಿ ಖರ್ಗೆಗೆ ಮೋದಿ ತಿರುಗೇಟು

    ಕಲಬುರಗಿ ಕ್ಷೇತ್ರದ ಅಭಿವೃದ್ಧಿ ಉದಾಹರಿಸಿ ಖರ್ಗೆಗೆ ಮೋದಿ ತಿರುಗೇಟು

    – ದಲಿತರನ್ನು ಸೋಲಿಸಿದ್ದೀರಿ ಎಂದು ಖರ್ಗೆ ಅಳುತ್ತಾರೆ
    – ಆ ಕ್ಷೇತ್ರದ ಜನರು ಮತ್ತೊಬ್ಬ ದಲಿತನನ್ನು ಆಯ್ಕೆ ಮಾಡಿದ್ದಾರೆ

    ನವದೆಹಲಿ: 1.70 ಕೋಟಿ ಜನ್ ಧನ್ (Jan Dhan) ಖಾತೆಯನ್ನು ತೆರೆಯಲಾಗಿದೆ. ಕಲಬುರಗಿಯಲ್ಲಿ 8 ಲಕ್ಷ ಖಾತೆಗಳು ತೆರೆದಿವೆ. ದಲಿತರನ್ನು ಸೋಲಿಸಿದ್ದೀರಿ ಎಂದು ಖರ್ಗೆ ಅಳುತ್ತಾರೆ. ಆದರೆ ಅಲ್ಲಿಯ ಜನರು ಮತ್ತೊಬ್ಬ ದಲಿತನನ್ನು ಆಯ್ಕೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ (Mallikarjun Kharge) ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದರು.

    ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕಳೆದ 3-4 ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ. ನಾವು ಜನ್ ಧನ್ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ದೇಶಾದ್ಯಂತ 48 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಕರ್ನಾಟಕದಲ್ಲಿ 1.70 ಕೋಟಿ ಖಾತೆ ತೆರೆದಿವೆ. ನಾವು ಶಾಶ್ವತ ಪರಿಹಾರಗಳತ್ತ ಸಾಗುತ್ತಿದ್ದೇವೆ. ವಿಷಯಗಳನ್ನು ಎತ್ತಿಕೊಂಡು ಸಮಸ್ಯೆಗಳನ್ನು ಸೃಷ್ಟಿಸಿದ ನಂತರ ನಾವು ಓಡಿಹೋಗುವುದಿಲ್ಲ. ನಾವು ದೇಶದ ಪ್ರಮುಖ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಪರಿಹಾರಗಳನ್ನು ಹುಡುಕುತ್ತೇವೆ ಎಂದು ಹೇಳಿದರು.

    ಪ್ರತಿ ಬಾರಿ ನಾನು ಕಲಬುರಗಿಗೆ ಭೇಟಿ ನೀಡಿದಾಗ ದಲಿತನನ್ನು ಸೋಲಿಸಲಾಗಿದೆ ಎಂದು ಖರ್ಗೆ ಆರೋಪ ಮಾಡುತ್ತಾರೆ. ಖರ್ಗೆ ಅವರು ಕಲಬುರಗಿಯಲ್ಲಿ ಆಗಿರುವ ಕೆಲಸವನ್ನು ನೋಡಬೇಕು. ಕರ್ನಾಟಕದಲ್ಲಿ (Karnataka) 1.70 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅದರಲ್ಲೂ ಕಲಬುರಗಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಎಷ್ಟೋ ಜನರು ಖಾತೆ ತೆರೆಯುತ್ತಿರುವಾಗ ಯಾರದ್ದೋ ಒಬ್ಬರದ್ದು ಖಾತೆ ಮುಚ್ಚುತ್ತಿದೆ. ನನಗೆ ನೋವು ಅರ್ಥವಾಗುತ್ತದೆ ಎಂದು ಹೇಳಿ ಕಾಲೆಳೆದರು.

    ತಂತ್ರಜ್ಞಾನದ ಶಕ್ತಿಯಿಂದ ನಾವು ಕಾರ್ಮಿಕ ಸಂಸ್ಕೃತಿಯನ್ನು ಪರಿವರ್ತಿಸಿದ್ದೇವೆ. ವೇಗವನ್ನು ಹೆಚ್ಚಿಸುವುದು ಮತ್ತು ಪ್ರಮಾಣವನ್ನು ಹೆಚ್ಚಿಸುವುದರ ಮೇಲೆ ನಮ್ಮ ಗಮನವಿದೆ. ಸಬ್ ಕಾ ಸಬ್ ಕಾ ವಿಕಾಸ್ ಅರ್ಥ ಎಲ್ಲರಿಗೂ ಯೋಜನೆಗಳನ್ನು ತಲುಪಿಸುವುದಾಗಿದೆ ಎಂದರು.

    ಆದಿವಾಸಿಗಳ ವಿಚಾರದಲ್ಲಿ ಹಿಂದಿನ ಸರ್ಕಾರದ ನಿಯತ್ತಾಗಿ ಕೆಲಸ ಮಾಡಿದ್ದರೆ, ಇಂದು ನಾನು ಇಷ್ಟು ಶ್ರಮ ಹಾಕುವ ಪ್ರಮೇಯ ಬರುತ್ತಿರಲಿಲ್ಲ. ಇಂದು ನಾವು ಆದಿವಾಸಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದೆ. 3 ಕೋಟಿ ಆದಿವಾಸಿ ಜನರ ಜೀವನದಲ್ಲಿ ಬದಲಾವಣೆ ತಂದಿದ್ದೇವೆ. ನಿಜವಾದ ಜಾತ್ಯತೀತತೆ ಎಂದರೆ ಸರ್ಕಾರಿ ಯೋಜನೆಗಳ ಪ್ರಯೋಜನಗಳು ಎಲ್ಲಾ ಅರ್ಹ ಫಲಾನುಭವಿಗಳನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

    ಈ ವೇಳೆ ಪ್ರತಿಪಕ್ಷಗಳ ಸಂಸದರು ಮೋದಿ- ಅದಾನಿ ಭಾಯಿ- ಭಾಯಿ ಎಂದು ಘೋಷಣೆ ಕೂಗುತ್ತಿದ್ದಾಗ ಖರ್ಗೆ ಅವರು ಪ್ರಧಾನಿ ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ತಮ್ಮ ಹೆಡ್‍ಫೋನ್ ಅನ್ನು ಕಿವಿಗೆ ಒತ್ತಿಕೊಂಡಿರುವುದು ಕಂಡುಬಂತು.

    ಖರ್ಗೆ ಹೇಳಿದ್ದೇನು?: ಪ್ರಧಾನಿ ಅವರು ಸದನದಲ್ಲಿ ಹೆಚ್ಚು ಸಮಯವನ್ನು ಕಳೆಯಬೇಕು. ಆದರೆ ನಾನಿಲ್ಲಿ ಸದನದಲ್ಲಿ ಮಾತನಾಡುತ್ತಿದ್ದರೆ ಮೋದಿ ನನ್ನ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಹೆಚ್‌ಡಿಕೆ ಒಕ್ಕಲಿಗರನ್ನು ಓಲೈಸಲು ಬೇರೆ ಸಮುದಾಯಗಳನ್ನ ಒಡೆಯುತ್ತಿದ್ದಾರೆ : ಸಿಪಿವೈ

    ನಮ್ಮ ಜವಾಬ್ದಾರಿಯುತ ಸಚಿವರು, ಸಂಸದರು ಹಿಂದೂ- ಮುಸ್ಲಿಂ ವಿಚಾರ ವಿವಾದ ಸೃಷ್ಟಿಸುತ್ತಿದ್ದಾರೆ. ಅವರಿಗೆ ಬೇರೆ ಯಾವುದೇ ವಿಷಯ ಸಿಗುವುದಿಲ್ಲವೇ? ಪರಿಶಿಷ್ಟ ಜಾತಿಯವರು ದೇವಸ್ಥಾನ ಪ್ರವೇಶಿಸಿದಕ್ಕೆ ಹಲ್ಲೆ ಮಾಡಲಾಗುತ್ತಿದೆ. ಅವರನ್ನು ಹಿಂದೂ ಎಂದು ಪರಿಗಣಿಸಿದ್ದರೆ, ಎಸ್‍ಸಿಗಳಿಗೆ ದೇವಾಲಯ ಪ್ರವೇಶಿಸಲು ಏಕೆ ಅವಕಾಶ ನೀಡುತ್ತಿಲ್ಲ ಅಥವಾ ಅವರಿಗೆ ಸುಶಿಕ್ಷಿತರಾಗಲು ಏಕೆ ಬಿಡುತ್ತಿಲ್ಲ? ಎಸ್‍ಸಿಗಳ ಮನೆಗಳಲ್ಲಿ ಊಟ ಮಾಡುವ ಫೋಟೋಗಳೊಂದಿಗೆ ಅನೇಕ ಸಚಿವರು ಶೋ ಆಫ್ ಮಾಡುತ್ತಿದ್ದಾರೆ ಎಂದು ಖರ್ಗೆ ಟೀಕಾಪ್ರಹಾರ ನಡೆಸಿದ್ದರು. ಇದನ್ನೂ ಓದಿ: ಹೆಚ್‌ಡಿಕೆಯ ಬ್ರಾಹ್ಮಣ ಸಿಎಂ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ: ಬಿಎಸ್‌ವೈ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಕ್ಷ ತೊರೆದಿದ್ದ ಘಟಾನುಘಟಿ ಕಾಶ್ಮೀರ ನಾಯಕರು ಮತ್ತೆ ಕಾಂಗ್ರೆಸ್ ಸೇರ್ಪಡೆ

    ಪಕ್ಷ ತೊರೆದಿದ್ದ ಘಟಾನುಘಟಿ ಕಾಶ್ಮೀರ ನಾಯಕರು ಮತ್ತೆ ಕಾಂಗ್ರೆಸ್ ಸೇರ್ಪಡೆ

    ಶ್ರೀನಗರ: ಮಾಜಿ ಸಿಎಂ ಗುಲಾಂ ನಬಿ ಆಜಾದ್ (Ghulam Nabi Azad) ಅವರ ರಾಜೀನಾಮೆಯ ಬೆನ್ನಲ್ಲೇ ಪಕ್ಷಬಿಟ್ಟು ಹೋಗಿದ್ದ ಹಲವು ನಾಯಕರು ಭಾರತ್ ಜೋಡೋ ಯಾತ್ರೆ (Bharat Jodo Yatra) ಜಮ್ಮು ಮತ್ತು ಕಾಶ್ಮೀರ (Jammu And Kashmir) ಪ್ರವೇಶಿಸುವ ಮುನ್ನವೇ ಮತ್ತೆ ಪಕ್ಷ ಸೇರ್ಪಡೆಯಾಗಿದ್ದಾರೆ

    ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಪೀರ್ಜಾದಾ ಮೊಹಮ್ಮದ್ ಸಯೀದ್, ಮುಜಾಫರ್ ರ‍್ರೆ, ಬಲ್ವಾನ್ ಸಿಂಗ್, ಮೊಹಿಂದರ್ ಭಾರದ್ವಾಜ್, ಭೂಷಣ್ ಡೋಗ್ರಾ, ವಿನೋದ್ ಶರ್ಮಾ, ನರಿಂದರ್ ಶರ್ಮಾ, ನರೇಶ್ ಶರ್ಮಾ, ಅಂಬ್ರಿಶ್ ಮಗೋತ್ರಾ, ಸುಭಾಷ್ ಭಗತ್, ಬದ್ರಿ ನಾಥ್ ಶರ್ಮಾ, ವರುಣ್ ಮಗೋತ್ರ, ಅನುರಾಧ ಶರ್ಮಾ, ವಿಜಯ್ ತಾರ್ಗೋತ್ರ ಮತ್ತು ಚಂದರ್ ಪ್ರಭಾ ಶರ್ಮಾ ಸೇರಿದಂತೆ ಹಲವು ಹಿರಿಯ ನಾಯಕರು ಶುಕ್ರವಾರ ಪಕ್ಷಕ್ಕೆ ಮರಳಿದ್ದಾರೆ.

    ಬಲ್ವಾನ್ ಸಿಂಗ್ ಮತ್ತು ತಾರಾ ಚಂದ್, ಗುಲಾಮ್ ನಬಿ ಆಜಾದ್ ಅವರ ನಿಷ್ಠಾವಂತರು. ಈ ಹಿಂದೆ ಕಾಂಗ್ರೆಸ್ ತೊರೆದು ಡೆಮಾಕ್ರಟಿಕ್ ಆಜಾದ್ ಪಾರ್ಟಿ (DAP) ಸೇರಿದ್ದರು. ಆದ್ರೆ ಪಕ್ಷವಿರೋಧಿ ಚಟುವಟಿಕೆಗಳಿಂದಾಗಿ ಆಜಾದ್ ಕೆಲವರನ್ನ ಡಿಎಪಿ ಯಿಂದ ಹೊರಹಾಕಿದ್ದರು. ಇದನ್ನೂ ಓದಿ: ಕರ್ನಾಟಕ-ಕೇರಳ ಗಡಿಯಲ್ಲಿ ರಿಂಗಣಿಸಿ ಆತಂಕ ಸೃಷ್ಟಿಸಿದ ಸ್ಯಾಟಲೈಟ್ ಫೋನ್

    ಇಂದು ಹಲವಾರು ನಾಯಕರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal) ಸುದ್ದಿಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ (Congress) ಪಾಲಿಗೆ ಬಹುದೊಡ್ಡ ದಿನ ಎಂದು ಹರ್ಷಗೊಂಡಿದ್ದಾರೆ. ಇದನ್ನೂ ಓದಿ: ದೇಶ ಕಾಯುವಾಗ ನಾವು ನಿಯತ್ತಿನ ನಾಯಿಗಳೇ – ಸಿದ್ದುಗೆ ಸಿ.ಟಿ ರವಿ ಗುದ್ದು

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಎಐಸಿಸಿ ರಾಜ್ಯ ಉಸ್ತುವಾರಿ ರಜನಿ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ: ಸಿ.ಟಿ. ರವಿ

    ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ: ಸಿ.ಟಿ. ರವಿ

    ಬೆಳಗಾವಿ: ಇಟಲಿ ಕಾಂಗ್ರೆಸ್‍ನ (Congress) ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ, ಬದಲಿಗೆ ಚೀನಾ (China), ಪಾಕಿಸ್ತಾನದ (Pakistan) ಪರ ಬೊಗಳುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ವಿವಾದಾತ್ಮಕ ಹೇಳಿಕೆ ನೀಡಿದರು.

    ಸುದ್ದಿಗರಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಭಾಗವಹಿಸಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆಯವರು (Mallikarjun Kharge) ಹೇಳಿದ್ದಾರೆ. ಆದರೆ ಭಾರತೀಯ ಜನಸಂಘ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದೆ. ಸರ್ವಾಧಿಕಾರಿ ಇಂದಿರಾ ಗಾಂಧಿಯನ್ನು ಕೆಳಗೆ ಇಳಿಸಿದರು. ಖರ್ಗೆಯವರು ಅಂದಿನ ದಿನಮಾನ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

    ಖರ್ಗೆಯವರೇ ಸ್ವಾತಂತ್ರ್ಯ ಸಿಕ್ಕಿರುವುದು ದೇಶ ಲೂಟಿ ಹೊಡೆಯಲಿಕ್ಕಾ? ಕಾಂಗ್ರೆಸ್ ನಾಯಿಗಳಿಗೂ ಫೈವ್ ಸ್ಟಾರ್ ಟ್ರೀಟ್ಮೆಂಟ್ ಸಿಗಬೇಕೆಂದು ಲೂಟಿ ಮಾಡಿದ್ದೀರಾ? ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ, ಈಗಿರುವುದು ಇಟಲಿ ಕಾಂಗ್ರೆಸ್ ಎಂದು ಕಿಡಿಕಾರಿದರು. ಇದನ್ನೂ ಓದಿ: 5 ಲಕ್ಷದ ವಾಚ್‌ ವಿವಾದ: ದೇಶಭಕ್ತಿಯ ಟ್ವಿಸ್ಟ್‌ ನೀಡಿ ಸವಾಲೆಸೆದ ಅಣ್ಣಾಮಲೈ

    ಇಟಲಿ ನಾಯಿ ನಮ್ಮ ಸೈನಿಕರ ವಿರುದ್ಧ ಬೊಗಳುತ್ತದೆ. ದೇಶ ವಿರೋಧಿ ಇಟಲಿ ನಾಯಿಯನ್ನು ಈಗಿನ ಕಾಂಗ್ರೆಸ್ ಸಾಕುತ್ತಿದೆ ಎಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಪರೋಕ್ಷವಾಗಿ ನಾಯಿಗೆ ಹೋಲಿಸಿದರು. ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತ ಆಗದಿದ್ರೆ ಇಂಜಿನಿಯರ್‌ಗಳ ಸಂಬಳ ಕಟ್: BBMP ಕಮಿಷನರ್ ವಾರ್ನಿಂಗ್

    Live Tv
    [brid partner=56869869 player=32851 video=960834 autoplay=true]

  • ಪಕ್ಷಕ್ಕೆ ತೊಂದರೆಯಾದ್ರೆ ನೀವಿಬ್ಬರೇ ಕಾರಣ – ಸಿದ್ದು, ಡಿಕೆಶಿಗೆ ಕೆ.ಸಿ ವೇಣುಗೋಪಾಲ್ ಖಡಕ್ ವಾರ್ನಿಂಗ್

    ಪಕ್ಷಕ್ಕೆ ತೊಂದರೆಯಾದ್ರೆ ನೀವಿಬ್ಬರೇ ಕಾರಣ – ಸಿದ್ದು, ಡಿಕೆಶಿಗೆ ಕೆ.ಸಿ ವೇಣುಗೋಪಾಲ್ ಖಡಕ್ ವಾರ್ನಿಂಗ್

    ಬೆಂಗಳೂರು: ಪಕ್ಷಕ್ಕೆ ಹಿನ್ನಡೆಯಾದರೆ ನೀವಿಬ್ಬರೇ ಕಾರಣ ಹೊರತು ಬೇರೆಯವರಲ್ಲ. ನಿಮ್ಮಿಬ್ಬರ ಮಾತು, ವಿಭಿನ್ನ ಹೇಳಿಕೆಗಳೇ ಪಕ್ಷಕ್ಕೆ ಮುಳುವಾಗಬಹುದು. ಎಚ್ಚರಿಕೆಯಿಂದ ಮಾತನಾಡಿ ಎಂದು ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal), ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ ಶಿವಕುಮಾರ್‌ಗೆ (DK Shivakumar) ಖಡಕ್ ಸೂಚನೆ ನೀಡಿದ್ದಾರೆ.

    ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಮಾತನಾಡಿದ ಕೆ.ಸಿ ವೇಣುಗೋಪಾಲ್, ನಿಮ್ಮಿಬ್ಬರ ನಡೆ ಮತ್ತು ನುಡಿ ಪಕ್ಷಕ್ಕೆ ಸವಾಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ರಾಷ್ಟ್ರಮಟ್ಟದಲ್ಲಿ ಪಕ್ಷದ ಅಸ್ತಿತ್ವ ಉಳಿಸುವ ಗೆಲುವಾಗಲಿದೆ. ಪಕ್ಷ ಇದ್ದರೆ ವ್ಯಕ್ತಿ, ಪಕ್ಷವೇ ಸೋತರೆ ಯಾರು ಏನು ಮಾಡಲು ಆಗಲ್ಲ. ನಿಮ್ಮಿಬ್ಬರ ಮಾತು, ವಿಭಿನ್ನ ಹೇಳಿಕೆಗಳೇ ಪಕ್ಷಕ್ಕೆ ಮುಳುವಾಗಬಹುದು ಎಚ್ಚರಿಕೆಯಿಂದ ಮಾತನಾಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಎಲೆಕ್ಷನ್ ಗೆಲ್ಲಲು ಕಾಂಗ್ರೆಸ್ ರೋಡ್‌ಮ್ಯಾಪ್ – ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

    ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಅನಗತ್ಯ ಹೇಳಿಕೆಗಳು ಬೇಡ. ಪಕ್ಷಕ್ಕೆ ಹಿನ್ನಡೆ ಆದರೆ ನೀವಿಬ್ಬರೆ ಕಾರಣ ಹೊರತು ಬೇರೆಯವರಲ್ಲ. ಇದನ್ನ ನೆನಪಿನಲ್ಲಿ ಇಟ್ಟುಕೊಂಡು ಮುಂದುವರಿಯಿರಿ. ಮುಂಚಿತವಾಗಿ 150 ಸ್ಥಾನ ಘೋಷಣೆ ಮಾಡಿದರೆ ಆಗುವ ಪರಿಣಾಮಗಳ ಬಗ್ಗೆ ಯೋಚನೆ ಮಾಡಿ ಹೇಳಿ. ಅದೇ ಅನುಕೂಲಕರ ಅನ್ನಿಸಿದ್ರೆ ಹಾಗೇ ಮಾಡೋಣ. ಒಟ್ಟಾರೆ ಇನ್ನು ನಾಲ್ಕು ತಿಂಗಳಲ್ಲಿ ಇಬ್ಬರ ಪ್ರತಿಷ್ಟೆಯ ಕಾರಣಕ್ಕೆ ಪಕ್ಷಕ್ಕೆ ಹಿನ್ನಡೆಯಾದರೆ ಹೈಕಮಾಂಡ್ ಅದನ್ನ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜೊತೆ ಸಿನಿಮಾ ಮಾಡುವೆ : ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

  • ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ

    ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ

    ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ಯಾತ್ರೆಯು (Bharat Jodo Yatra) ಸಹಾಯ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ತಿಳಿಸಿದರು.

    ಹಿಮಾಚಲ ಪ್ರದೇಶದಲ್ಲಿ (Himachal Pradesh) ಕಾಂಗ್ರೆಸ್ (Congress) ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೋ ಯಾತ್ರೆ ಬಗ್ಗೆ ಹಿಮಾಚಲ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಹೋದಾಗ ಕೂಡ ಉತ್ತಮ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ಉತ್ತಮ ಬಹುಮತದಿಂದ ಪಕ್ಷಕ್ಕೆ ಗೆಲುವು ಬಂದಿದೆ ಎಂದು ಅಭಿಪ್ರಾಯಪಟ್ಟರು.

    ಆ ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಪಟ್ಟಿ ಕೊಟ್ಟಿದ್ದೆವು. ಅದಕ್ಕೆ ನಮಗೆ ಅಲ್ಲಿನ ಜನ ಒಗ್ಗೂಡಿಸಿ ಗೆಲ್ಲಿಸಿದ್ದಾರೆ. ಇದರಲ್ಲಿ ಹೆಚ್ಚಿನ ಪಾತ್ರ ಪ್ರಿಯಾಂಕಾ ವಾದ್ರಾದ್ದು ಇದೆ. ಸಾಕಷ್ಟು ರ‍್ಯಾಲಿ, ಸಮಾವೇಶ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಇದೇ ವೇಳೆ ಗುಜರಾತ್ ಚುನಾವಣೆಯಲ್ಲಿ (Gujarat Election) ಕಾಂಗ್ರೆಸ್ ಸೋಲಿನ ಬಗ್ಗೆ ಮಾತನಾಡಿದ ಅವರು, ಗುಜರಾತ್ ಸೋಲಲು ಕಾರಣ ಸಾಕಷ್ಟು ಇವೆ. ಪಕ್ಷ ಇಷ್ಟು ಕೆಳ ಮಟ್ಟಕ್ಕೆ ಬರಲು ಕ್ಯಾಂಪೇನ್ ಮಾಡಿಲ್ಲ. ಕಳೆದ ಬಾರಿ ಅತೀ ಹೆಚ್ಚು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆವು. ಆದರೆ ಹಲವು ಕಡೆ ಕಡಿಮೆ ಅಂತರದಲ್ಲಿ ಸೋತಿದ್ದೆವು. ಈ ಸಲ ಕೆಲವು ಪಕ್ಷ ಹೊಸದಾಗಿ ಬಂದು ನಮ್ಮ ಮತ ಕೆಡಿಸಿವೆ. ಅಸ್ತಿತ್ವದಲ್ಲಿ ಇಲ್ಲದ ಪಕ್ಷ ಬಂದು ಮತಗಳ ವಿಭಜನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಗೆದ್ದಿದ್ಹೇಗೆ?

    ಗುಜರಾತ್ ಸೋಲಿಗೆ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಕಾರಣವಾಗಿದೆ. ಒಂದು ವರ್ಷದಿಂದ ಮೋದಿ ಪ್ರಚಾರ ಮಾಡಿದ್ದಾರೆ. ಮಣ್ಣಿನ ಮಗ ಅಂತಾ ಹೇಳಿದ್ದು, ದಾಖಲೆಯ ರೋಡ್ ಶೋ, ಮತದಾನದ ದಿನ ನಡೆದುಕೊಂಡು ಬಂದು ಮತದಾನ ಮಾಡಿದ ಗಿಮಿಕ್‍ಗಳು ನಮ್ಮ ಸೋಲಿಗೆ ಕಾರಣವಾಗಿದೆ. ಆದರೆ ಅವರ ಪ್ರಚಾರದ ಹಕ್ಕು ಅವರು ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಅಧಿಕಾರ – ಛತ್ತೀಸ್‌ಗಢಕ್ಕೆ ಶಾಸಕರು ಶಿಫ್ಟ್‌

    Live Tv
    [brid partner=56869869 player=32851 video=960834 autoplay=true]

  • ನಮ್ಮದು 3 ಬಾಗಿಲು ಆದ್ರೆ, ಬಿಜೆಪಿ ಅವ್ರದ್ದು 12 ಬಾಗಿಲು: ಡಿಕೆಶಿ

    ನಮ್ಮದು 3 ಬಾಗಿಲು ಆದ್ರೆ, ಬಿಜೆಪಿ ಅವ್ರದ್ದು 12 ಬಾಗಿಲು: ಡಿಕೆಶಿ

    ಶಿವಮೊಗ್ಗ: ನಮ್ಮದು 3 ಬಾಗಿಲು ಆದರೆ, ಬಿಜೆಪಿಯವರದ್ದು (BJP) ಮನೆಯೊಂದು 12 ಬಾಗಿಲು ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಟೀಕಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆಗೆ ತಿರುಗೇಟು ನೀಡಿದರು. ಅವರ ಮನೆ ಅವರು ಮೊದಲು ರಿಪೇರಿ ಮಾಡಿಕೊಳ್ಳಲಿ. ಅವರ ಸರ್ಕಾರವೇ ಕಲುಷಿತವಾಗಿದೆ. ಬಿಜೆಪಿ, ಕಾಂಗ್ರೆಸ್ (Congress) , ಜೆಡಿಎಸ್ (JDS) ಮೂರು ಸೇರಿ ಸರ್ಕಾರ ರಚನೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಎಲ್ಲಾ ಕಡೆ ಆಪರೇಷನ್ ಕಮಲ ನಡೆಯುತ್ತಿದೆ. ತೆಲಂಗಾಣದಲ್ಲಿ ಆಪರೇಷನ್ ಕಮಲ ಬಹಿರಂಗವಾಗಿದೆ. ಇನ್ನೂ ರಾಜ್ಯದಲ್ಲಿ ಆಪರೇಷನ್ ಕಮಲ ಮೂಲಕ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ

    ಈಶ್ವರಪ್ಪನಿಂದಾಗಿ ಶಿವಮೊಗ್ಗದಲ್ಲಿ ಗಲಾಟೆ ಆಗುತ್ತಿದೆ. ಶಿವಮೊಗ್ಗದ ಗಲಾಟೆಯಿಂದಾಗಿ ಇಲ್ಲಿ ಯಾರು ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ತಾಕತ್ ಇದ್ದರೆ ಶಿವಮೊಗ್ಗದಲ್ಲಿ ಉದ್ದಿಮೆದಾರರನ್ನು ಕರೆತಂದು ಹೂಡಿಕೆ ಮಾಡಲಿ. ಚುನಾವಣೆಗೆ ನಾವು ಯಾವಾಗಲೂ ಸಿದ್ಧರಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ತೊಲಗಿಸಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ: ಸಿದ್ದರಾಮಯ್ಯ

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅ.6 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಖರ್ಗೆ ಅವರಿಗೆ ಅದ್ಧೂರಿ ಸ್ವಾಗತಕ್ಕೆ ಎಲ್ಲಾ ತಯಾರಿ ನಡೆಸುತ್ತಿದ್ದೇನೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಖರ್ಗೆ ಸ್ವಾಗತಕ್ಕೆ ಬೆಂಗಳೂರಿಗೆ ಬರಬೇಕು. ಇನ್ನು 3 ದಿನದಲ್ಲಿ ಚುನಾವಣೆ ದೃಷ್ಟಿಯಿಂದ ಮಹತ್ವದ ನಿರ್ಣಯ ಪ್ರಕಟಿಸುತ್ತೇನೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • 80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ

    80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ

    ಬೆಂಗಳೂರು: ಕಾಂಗ್ರೆಸ್‍ನ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಸಚಿವ ಆರ್. ಅಶೋಕ್ (R Ashok) ಲೇವಡಿ ಮಾಡಿದರು.

    ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಬಸ್ ಯಾತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‍ನವರ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ (Mallikarjun Kharge) ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ. ಆದರೆ ಆ ಡ್ರೈವರ್ ಬ್ಯಾಕ್‍ಸೀಟ್‍ನಲ್ಲಿ ಸೋನಿಯಾ ಗಾಂಧಿ (Sonia Gandhi) ಇದ್ದಾರೆ. ಬಸ್‍ನ ಸ್ಟೇರಿಂಗ್, ಸೀಟು ಎಲ್ಲವೂ ಸೋನಿಯಾ ಗಾಂಧಿ ಕೈಯಲ್ಲಿ ಇರಲಿದೆ. ಖರ್ಗೆ ರಿಮೋಟ್ ಕಂಟ್ರೋಲ್ ಅಧ್ಯಕ್ಷ ಅಷ್ಟೇ ಎಂದು ಟೀಕಿಸಿದರು.

    ಕಾಂಗ್ರೆಸ್ ಅವರು ಬಸ್, ರೈಲು, ಏನಾದರೂ ಬಿಡಲು ಕರ್ನಾಟಕದ (Karnataka) ಜನ ಇವರನ್ನು ನಂಬುವುದಿಲ್ಲ. ಕಾಂಗ್ರೆಸ್‍ಗೆ ಇದು ಕೊನೆಯ ಚುನಾವಣೆ. ಕಾಂಗ್ರೆಸ್‍ನ ಶವ ಪೆಟ್ಟಿಗೆಯ ಕೊನೆ ಮೊಳೆ ಕರ್ನಾಟಕದ ರಾಜ್ಯದ ಜನ ಹೊಡೆಯುತ್ತಾರೆ ಎಂದರು.

    ಎಸ್‍ಸಿ, ಎಸ್‍ಟಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ (BJP) ನಾಟಕವಾಡ್ತಿದೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮತ್ತು ಅವರ ತಂಡವೇ ನಾಟಕ ಕಂಪನಿ. ಭಾರತ್ ಜೋಡೋ ಪಾದಯಾತ್ರೆ ಮಾಡಿ ನಾಟಕ ಕಂಪನಿ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಓಡೋದು, ಡಿಪ್ಸ್ ಹೊಡೆಯೋದು ಮಾಡಿ ಇದೊಂದು ನಾಟಕ ಕಂಪನಿ ಅಂತಾ ಸಾಬೀತು ಮಾಡಿದೆ ಎಂದು ಕುಟುಕಿದರು.

    ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿ ನೇಮಕ ಮಾಡಿದ್ದು ಸಿದ್ದರಾಮಯ್ಯ ಅಲ್ಲ. ಕುಮಾರಸ್ವಾಮಿಯಾಗಿದ್ದಾರೆ. ಕುಮಾರಸ್ವಾಮಿಗೂ ಸಿದ್ದರಾಮಯ್ಯಗೂ ಎಣ್ಣೆ ಸಿಗೇಕಾಯಿ. ಸಿದ್ದರಾಮಯ್ಯ ಮಾತು ಕೇಳಿ ಕುಮಾರಸ್ವಾಮಿ ಕಮಿಟಿ ನೇಮಕ ಮಾಡಿಲ್ಲ. ಸಿದ್ದಾರಾಮಯ್ಯಗೂ ಕಮಿಟಿಗೂ ಸಂಬಂಧ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಸಿರುಗಟ್ಟಿಸಿ ವೃದ್ಧೆ ಕೊಲೆ- ಅತ್ಯಾಚಾರದ ಆರೋಪ ಮಾಡಿದ ಗ್ರಾಮಸ್ಥರು

    ಕಾಂಗ್ರೆಸ್ 60 ವರ್ಷ ಆಳಿದ್ದರೂ SC-ST ಸಮುದಾಯಕ್ಕೆ ಏನು ಮಾಡಿದ್ರು? ಆದರೆ ಧೈರ್ಯ ಮಾಡಿ, ಚಾಣಕ್ಯ ನಡೆಯಿಂದ ನಮ್ಮ ಸಿಎಂ ಜೇನು ಗೂಡಿಗೆ ಕಲ್ಲು ಹೊಡೆದು ಮೀಸಲಾತಿ ಕೊಡಲಾಗಿದೆ. ಬಿಜೆಪಿ ಯಾವತ್ತು ರಿಯಲ್ ಶೋ ಮಾಡೋ ಪಕ್ಷ. ಕಾಂಗ್ರೆಸ್‍ನದ್ದು ನಾಟಕ ಕಂಪನಿಯಾಗಿದೆ. ನುಡಿದಂತೆ ನಡೆದ ಸರ್ಕಾರ ಬಿಜೆಪಿ ಸರ್ಕಾರ. ಸುಳ್ಳು ನಾಟಕ ಕಂಪನಿ ಕಾಂಗ್ರೆಸ್ ಎಂದರು. ಇದನ್ನೂ ಓದಿ: ಸೂರ್ಯಗ್ರಹಣದ ಎಫೆಕ್ಟ್ – ಬಸ್‍ಗಳು, ಹೋಟೆಲ್‍ಗಳು ಖಾಲಿ, ಖಾಲಿ

    Live Tv
    [brid partner=56869869 player=32851 video=960834 autoplay=true]

  • ವ್ಯವಸ್ಥೆಯನ್ನು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ: ಪ್ರಿಯಾಂಗ್ ವಿರುದ್ಧ ಮಣಿಕಂಠ್ ಕಿಡಿ

    ವ್ಯವಸ್ಥೆಯನ್ನು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ: ಪ್ರಿಯಾಂಗ್ ವಿರುದ್ಧ ಮಣಿಕಂಠ್ ಕಿಡಿ

    ಕಲಬುರಗಿ: ಗುರುಮಠಕಲ್ ಕ್ಷೇತ್ರದಲ್ಲಿ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಶಾಸಕರಾದಾಗಿನಿಂದಲೂ ಖರ್ಗೆಯವರ ಬೆಂಬಲಿಗರು ನನ್ನ ಮೇಲೆ ನಿರಂತರವಾಗಿ ಪ್ರಕರಣ ದಾಖಲಿಸಿಕೊಂಡು ಬಂದಿದ್ದರು. ಈಗಲೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿಂಬಾಲಕರನ್ನು ಬಿಟ್ಟು ಹೆದರಿಸುತ್ತಿದ್ದಾರೆ ಎಂದು ಸಮಾಜ ಸೇವಕ ಮಣಿಕಂಠ ರಾಠೋಡ್ ಆರೋಪಿಸಿದ್ದಾರೆ.

    ಶಾಸಕರ ಕೈಗೊಂಬೆಯಾಗಿ ಪೊಲೀಸರು ಕೆಲಸ ಮಾಡುತ್ತಿದ್ದು, ಅವರನ್ನು ತೆಗೆದು ಹಾಕಲು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಂಡಿದ್ದೆವು. ಆದರೆ ಪುನಃ ಪ್ರಿಯಾಂಕ್ ಖರ್ಗೆಯವರನ್ನು ಕರೆದುಕೊಂಡು ಬಂದಿದ್ದಾರೆ. ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ, ಉದ್ಯೋಗ ಸೃಷ್ಟಿಸಿಲ್ಲ ಎಂದು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಇದನ್ನೂ ಓದಿ: ಊರಿಗೆ ವಾಪಾಸಾಗಲು ಅನುಮತಿಗಾಗಿ ಕಾಯುತ್ತಿದ್ದೇವೆ – ಯಾತ್ರೆಯಿಂದಲೇ ಪಬ್ಲಿಕ್ ಟಿವಿಗೆ ಲೈವ್ ಕೊಟ್ಟ ಕನ್ನಡಿಗರು

    ತಾವು ಶಾಸಕರಾಗಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೇ ಅದರ ವಿರುದ್ಧ ಧ್ವನಿ ಎತ್ತದಂತೆ ಮಾಡುತ್ತಿದ್ದಾರೆ. ಗುರುಮಠಕಲ್‌ನಲ್ಲಿ ರೈಸ್ ಮಿಲ್ ಆರಂಭಿಸಿ, ಉದ್ಯೋಗ ನೀಡಿದ್ದು ನಮ್ಮ ಕುಟುಂಬ. ನಾವು ಸಿಬಿಎಸ್‌ಸಿ ಶಾಲೆ ಆರಂಭಿಸಿದ್ದೆವು. ಆದರೆ ಖರ್ಗೆ ಅವರು 35 ವರ್ಷ ಶಾಸಕರಾಗಿದ್ದರೂ ಏನು ಮಾಡಲಿಲ್ಲ. ಅಕ್ಕಿ ಕಳ್ಳತನದ ಕುರಿತು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ. ನಾನು ಪಡಿತರ ವಿತರಕರಲ್ಲ, ಸಾಗಣೆದಾರರಲ್ಲ ಅದ್ಹೇಗೆ ಕಳ್ಳತನ ಮಾಡಲು ಸಾಧ್ಯ? ಸ್ವಂತಃ ಬಲದ ಮೇಲೆ ಉದ್ಯಮ ಬೆಳೆಸಿಕೊಂಡು ಬಂದಿದ್ದೇವೆ ಎಂದರು. ಇದನ್ನೂ ಓದಿ: ಬೆಳಗಾವಿಗೆ ಮೂರು ದಿನ ಯಲ್ಲೋ ಅಲರ್ಟ್ – ತಹಶೀಲ್ದಾರ್ ಅಕೌಂಟ್‍ನಲ್ಲಿ ಹಣ ಇದೆ ಯಾವುದೇ ಸಮಸ್ಯೆ ಇಲ್ಲ: ಡಿ.ಸಿ ನಿತೇಶ್ ಪಾಟೀಲ್

    Live Tv
    [brid partner=56869869 player=32851 video=960834 autoplay=true]

  • ಆಡಳಿತ ಪಕ್ಷ ನಡೆಸುತ್ತಿರುವ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರಪತಿ ದೇಶಕ್ಕೆ ಅಗತ್ಯವಿದೆ: ಸೋನಿಯಾ

    ಆಡಳಿತ ಪಕ್ಷ ನಡೆಸುತ್ತಿರುವ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರಪತಿ ದೇಶಕ್ಕೆ ಅಗತ್ಯವಿದೆ: ಸೋನಿಯಾ

    ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಲು ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರತಿಪಕ್ಷ ನಾಯಕರನ್ನು ಸಂಪರ್ಕಿಸಿದ್ದಾರೆ.

    ಸೋನಿಯಾ ಗಾಂಧಿ ಅವರು ಕೋವಿಡ್‍ನಿಂದ ಬಳಲುತ್ತಿರುವ ಕಾರಣ ಇತರ ನಾಯಕರೊಂದಿಗೆ ಸಭೆ ನಡೆಸಲು ವಿರೋಧ ಪಕ್ಷದ ನಾಯಕ (ಎಲ್‍ಒಪಿ) ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನಿಯೋಜಿಸಿದ್ದಾರೆ.

    ಸಂವಿಧಾನ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ನಾಗರಿಕರ ಮೇಲೆ ಆಡಳಿತಾರೂಢ ಪಕ್ಷ ನಡೆಸುತ್ತಿರುವ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರಪತಿ ರಾಷ್ಟ್ರಕ್ಕೆ ಅಗತ್ಯವಿದೆ ಎಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿದೆ.

    ಭಾರತದಲ್ಲಿ ಒಡೆದು ಹೋಗಿರುವ ಸಾಮಾಜಿಕತೆಯನ್ನು ಮತ್ತೆ ರಚಿಸುವಂತಹ ಸಾಮಾಥ್ರ್ಯವುಳ್ಳ ಅಧ್ಯಕ್ಷರನ್ನು ಜನ ಆಯ್ಕೆ ಮಾಡುತ್ತಾರೆ. ಚರ್ಚೆಗಳು ಮುಕ್ತ ಮನಸ್ಸಿನಿಂದ ಮತ್ತು ಉತ್ತಮ ಮನೋಭಾವಕ್ಕೆ ಅನುಗುಣವಾಗಿರಬೇಕು. ಇತರ ರಾಜಕೀಯ ಪಕ್ಷಗಳೊಂದಿಗೆ ಕಾಂಗ್ರೆಸ್ ಈ ಚರ್ಚೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಕಾಂಗ್ರೆಸ್ ಭಾವಿಸುತ್ತದೆ ಎಂದು ತಿಳಿಸಲಾಗಿದೆ.

  • ಕಪಿಲ್ ಸಿಬಲ್ ಉತ್ತಮ ವಕೀಲರಾಗಿರಬಹುದು, ಕಾಂಗ್ರೆಸ್ ಪಕ್ಷದ ಉತ್ತಮ ನಾಯಕರಲ್ಲ: ಮಲ್ಲಿಕಾರ್ಜುನ್ ಖರ್ಗೆ

    ಕಪಿಲ್ ಸಿಬಲ್ ಉತ್ತಮ ವಕೀಲರಾಗಿರಬಹುದು, ಕಾಂಗ್ರೆಸ್ ಪಕ್ಷದ ಉತ್ತಮ ನಾಯಕರಲ್ಲ: ಮಲ್ಲಿಕಾರ್ಜುನ್ ಖರ್ಗೆ

    ನವದೆಹಲಿ: ಕಪಿಲ್ ಸಿಬಲ್ (Kapil Sibal)  ಉತ್ತಮ ವಕೀಲರಾಗಿರಬಹುದು, ಕಾಂಗ್ರೆಸ್ ಪಕ್ಷದ ಉತ್ತಮ ನಾಯಕರಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧವಾಗಿ ಕಿಡಿಕಾರಿದ್ದಾರೆ

    ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಅವರು, ಕಪಿಲ್ ಸಿಬಲ್ ಉತ್ತಮ ವಕೀಲರಾಗಿರಬಹುದು ಆದರೆ ಅವರು ಕಾಂಗ್ರೆಸ್ ಪಕ್ಷದ ಉತ್ತಮ ನಾಯಕರಲ್ಲ. ಕಾಂಗ್ರೆಸ್ ಪರ ಕೆಲಸ ಮಾಡಲು ಯಾವ ಗ್ರಾಮಕ್ಕೂ ಹೋಗಿಲ್ಲ. ಉದ್ದೇಶಪೂರ್ವಕವಾಗಿ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    3-4 ತಿಂಗಳು ಕಾಯಬಹುದು, ಚುನಾವಣೆಗಳು ಬರುತ್ತದೆ. ಚುನಾವಣೆಯಲ್ಲಿ ಭಾಗವಹಿಸಬೇಕು, ನಂತರ ಅವರು ತಮ್ಮ ಇಷ್ಟದ ವ್ಯಕ್ತಿಯನ್ನು ತರಬಹುದು ಎಂಬುದು ನನ್ನ ಅಭಿಪ್ರಾಯ. ಆದರೆ ಅವರು ಈಗ ಗಾಂಧಿ ಕುಟುಂಬದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ನಾವು ಒಟ್ಟಾಗಿ ಪಕ್ಷವನ್ನು ಬಲಪಡಿಸಬೇಕು ಮತ್ತು ಅಂತಹ ಹೇಳಿಕೆಗಳನ್ನು ನೀಡುವ ಮೂಲಕ ಅದನ್ನು ದುರ್ಬಲಗೊಳಿಸಬಾರದು ಎಂದಿದ್ದಾರೆ.

    ಕಪಿಲ್ ಸಿಬಲ್ ಹೇಳಿದ್ದೇನು?: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದನ್ನು ಕಂಡು ಗಾಂಧಿಗಳು ನಾಯಕತ್ವದ ಸ್ಥಾನಗಳಿಂದ ದೂರ ಸರಿಯಲು ಮತ್ತು ಇತರರಿಗೆ ಅವಕಾಶ ನೀಡುವ ಸಮಯವಾಗಿದೆ. ಗಾಂಧಿಗಳು ಸ್ವಯಂಪ್ರೇರಣೆಯಿಂದ ದೂರ ಸರಿಯಬೇಕು ಏಕೆಂದರೆ ನಾಮನಿರ್ದೇಶನಗೊಂಡ ಸಂಸ್ಥೆಯು ಅವರು ಅಧಿಕಾರದ ಹಿಡಿತವನ್ನು ಮುಂದುವರಿಸಬಾರದು ಎಂದು ಅವರಿಗೆ ಎಂದಿಗೂ ಹೇಳುವುದಿಲ್ಲ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಲ್ಲ, ಆದರೆ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಈಗಾಗಲೇ ವಾಸ್ತವಿಕ ಅಧ್ಯಕ್ಷರಾಗಿದ್ದಾರೆ. ಹಾಗಿರುವಾಗ ಅವರು ಅಧಿಕಾರದ ಹಿಡಿತವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಏಕೆ ಕೇಳುತ್ತಿದ್ದಾರೆ? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದರು.

    ನಾಯಕತ್ವವು ಕೋಗಿಲೆ ನಾಡಿನಲ್ಲಿದೆ. ನನಗೆ ಸಬ್ ಕಿ ಕಾಂಗ್ರೆಸ್‍ಬೇಕು. ಆದರೆ ಕೆಲವರಿಗೆ ಕುಟುಂಬದ ಕಾಂಗ್ರೆಸ್ ಬೇಕು. ನನ್ನ ಕೊನೆಯ ಉಸಿರು ಇರುವವರೆಗೂ ‘ಸಬ್ ಕಿ ಕಾಂಗ್ರೆಸ್’ ಗಾಗಿ ಹೋರಾಡುತ್ತೇನೆ. ಈ ‘ಸಬ್ ಕಿ ಕಾಂಗ್ರೆಸ್’ ಎಂದರೆ ಭಾರತದಲ್ಲಿ ಬಿಜೆಪಿ ಬೇಡದ ಎಲ್ಲ ಜನರನ್ನು ಒಟ್ಟುಗೂಡಿಸುವುದಾಗಿ ಹೇಳಿದ್ದರು.