Tag: ಮಲ್ಲಿಕಾರ್ಜುನ್ ಖರ್ಗೆ

  • ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

    ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

    – ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ; ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರುತ್ತಾರೆ

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಸಿಎಂ ಆಗೋ ಅರ್ಹತೆ ಇತ್ತು. ಆದರೆ ಆಗಲಿಲ್ಲ. ಆದ್ರೀಗ ಸಿಎಂ ಸ್ಥಾನಕ್ಕಿಂತ ದೊಡ್ಡ ಸ್ಥಾನವಾದ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ (R V Deshpande) ತಿಳಿಸಿದ್ದಾರೆ.

    ಸಿಎಂ ಸ್ಥಾನದ ತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಜೊತೆ ನಾವು ಕೆಲಸ ಮಾಡಿದ್ದೇವೆ. ಧರ್ಮಸಿಂಗ್ ಹಾಗೂ ಎಸ್.ಎಂ ಕೃಷ್ಣ (S.M Krishna) ಸರ್ಕಾರದಲ್ಲಿ ಖರ್ಗೆ ಅವರು ಸಚಿವರಿದ್ರು. ಖರ್ಗೆಯವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇತ್ತು. ಆ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಮಾಡಿ ಎಸ್.ಎಂ ಕೃಷ್ಣ ಅವರನ್ನ ಸಿಎಂ ಮಾಡಿತ್ತು. ಅದನ್ನ ನಾವೆಲ್ಲಾ ಒಪ್ಪಿಕೊಂಡಿದ್ದೆವು ಎಂದಿದ್ದಾರೆ. ಇದನ್ನೂ ಓದಿ: ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆ ಕುಟುಂಬ

    ಖರ್ಗೆ ಅವರು ಇವತ್ತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಸಿಎಂ ಆಗುವ ಎಲ್ಲಾ ಅರ್ಹತೆ ಅವರಿಗೆ ಇದೆ. ಅವರಿಗೆ ಅದಕ್ಕಿಂತ ಹೆಚ್ಚಿನ ಸ್ಥಾನ ಸಿಕ್ಕಿದೆ. ಅದಕ್ಕೆ ನಮಗೆಲ್ಲಾ ಹಾಗೂ ನಾಡಿಗೂ ಅಭಿಮಾನ ಇದೆ. ನಮ್ಮ ದೃಷ್ಟಿಯಲ್ಲಿ ರಾಷ್ಟ್ರ ಅಧ್ಯಕ್ಷ ಎಂದರೆ ಸಿಎಂಗಿಂತ ದೊಡ್ಡ ಸ್ಥಾನ. ಅವರ ಮಾತನ್ನ ನಮ್ಮ ಸಿಎಂ ಕೇಳಬೇಕು. ತೆಲಂಗಾಣ ಸಿಎಂ ಕೂಡಾ ಕೇಳಬೇಕಾಗುತ್ತದೆ. ಅವರಿಗೆ ಅಂತಹ ಗೌರವ ಸ್ಥಾನ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Operation Sindoor Debate | ಹೋರಾಡಿದ್ದು ಸೇನೆ, ಕ್ರೆಡಿಟ್‌ ಬಯಸುತ್ತಿರೋದು ಮೋದಿ – ಪ್ರಿಯಾಂಕಾ ಗಾಂಧಿ ಕಿಡಿ

    ಖರ್ಗೆ ಅವರು ಎಲ್ಲಿಯೂ ಕೂಡ ಸಿಎಂ ಆಗ್ತೀನಿ ಎಂದು ಹೇಳಿಲ್ಲ. ಅವರಿಗೆ ಅವಕಾಶ ಮಾತ್ರ ಇರಲಿಲ್ಲ. ನನಗೂ ಸಿಎಂ ಆಗುವ ಅರ್ಹತೆ ಇತ್ತು. ಆದರೆ ಅವಕಾಶ ಸಿಕ್ಕಿಲ್ಲ. ಏನು ಮಾಡೋದು ಈಗ ಅಂತ ಹೇಳಿದ್ದಾರೆ. ಅವರಿಗೆ ಅವಕಾಶ ಇದ್ದಿದ್ದು ನಿಜ, ಅರ್ಹತೆ ಇದ್ದಿದ್ದು ನಿಜ. ಆದರೆ ಅವರು ಅಧಿಕಾರದ ಹಿಂದೆ ಬಿದ್ದವರಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ. ಯಾವ ಬದಲಾವಣೆಯು ಇಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಮುಂದೆಯೂ ಇರ್ತಾರೆ. ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿಯವರ ಸಂಪೂರ್ಣ ಆಶೀರ್ವಾದ ಸಿದ್ದರಾಮಯ್ಯ ಅವರಿಗೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್‌ ಶಾ

    ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿಲುವು ನೀಡದ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಈಗಾಗಲೇ ಹೇಳಿದೆ. ಕಾಂಗ್ರೆಸ್ ಪಕ್ಷ ಸಭೆ ಮಾಡಿ ಸಿದ್ದರಾಮಯ್ಯ ಅವರನ್ನ ಸಿಎಂ ಆಗಿ ಅಯ್ಕೆ ಮಾಡಿದೆ. ಇದು ಒಂದು ವರ್ಷಕ್ಕೆ ಮಾತ್ರ ಅಲ್ಲ. ಐದು ವರ್ಷಕ್ಕೆ ಆಯ್ಕೆ ಮಾಡಿದೆ. ಬದಲಾವಣೆ ಮಾಡುವ ಅಧಿಕಾರ ಹೈಕಮಾಂಡ್‌ಗೆ ಇದೆ, ಇಲ್ಲ ಅಂತ ನಾನು ಹೇಳಲ್ಲ. ಸಿಎಂ ಬದಲಾವಣೆ ಆಗುವ ರೀತಿ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿಲ್ಲ. ಎಲ್ಲರು ಒಂದಾಗಿ ಕೆಲಸ ಮಾಡ್ತಿದ್ದೇವೆ. ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ. ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಮಹಾರಾಷ್ಟ್ರ ಬಿಜೆಪಿ ಉನ್ನತ ಸಭೆಯಲ್ಲಿ ಭಾಗಿ; ಅದಾನಿ-ಬಿಜೆಪಿ ನಂಟಿನ ಬಗ್ಗೆ ಖರ್ಗೆ ಹೇಳಿದ್ದೇನು?

    ಮಹಾರಾಷ್ಟ್ರ ಬಿಜೆಪಿ ಉನ್ನತ ಸಭೆಯಲ್ಲಿ ಭಾಗಿ; ಅದಾನಿ-ಬಿಜೆಪಿ ನಂಟಿನ ಬಗ್ಗೆ ಖರ್ಗೆ ಹೇಳಿದ್ದೇನು?

    ಕಲಬುರಗಿ: ಗೌತಮ್ ಅದಾನಿ (Gautam Adani)  ದೇಶ ಲೂಟಿ ಮಾಡುತ್ತಿದ್ದಾರೆ. ರಿಯಾಕ್ಷನರಿ ಸರ್ಕಾರಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ.

    2019ರಲ್ಲಿಯೇ ಬಿಜೆಪಿ (BJP) ಮೈತ್ರಿಕೂಟಕ್ಕೆ ಜಿಗಿಯುವ ನಾಟಕ ಮಾಡಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, ಅದಾನಿ-ಬಿಜೆಪಿ ನಂಟಿನ ಬಗ್ಗೆ ಮೊನ್ನೆ ಸ್ಫೋಟಕ ಹೇಳಿಕೆ ನೀಡಿದ್ದರು. 2019ರಲ್ಲಿ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಗೌತಮ್ ಅದಾನಿ ಪಾಲ್ಗೊಂಡಿದ್ದ ಮಾಹಿತಿ ನೀಡಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಮುಡಾ ಕೇಸಲ್ಲಿ ಆಪ್ತರಿಗೆ ಸತತ 9 ಗಂಟೆ ಇಡಿ ಡ್ರಿಲ್; ಸಿಎಂಗೂ ಸಮನ್ಸ್ ಸಾಧ್ಯತೆ

    ಇಂದು (ಗುರುವಾರ) ಇದಕ್ಕೆ ಪೂರಕವಾದ ಆರೋಪವನ್ನು ಮಲ್ಲಿಕಾರ್ಜುನ ಖರ್ಗೆ ಮಾಡಿದ್ದು, ಗೌತಮ್ ಅದಾನಿ ದೇಶದ ಸಂಪತ್ತನ್ನು ಲೂಟಿ ಮಾಡ್ತಿದ್ದಾರೆ. ಅದಾನಿಯಂತಹ ಬಂಡವಾಳ ಶಾಹಿಗಳಿಂದ ಮೋದಿ-ಅಮಿತ್ ಶಾ ಹಣ ಪಡೆದು ಚುನಾವಣೆ ನಡೆಸುತ್ತಿದ್ದಾರೆ. ಅದಾನಿಯಂತಹ ಉದ್ಯಮಿಗಳನ್ನು ಬೆಳೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: Cyclone Effect: ತಮಿಳುನಾಡಿನಲ್ಲಿ 2 ದಿನ ಮಳೆ ಸಾಧ್ಯತೆ

    ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಅದಾನಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಶಿಂಧೆ ಸರ್ಕಾರ ಧಾರಾವಿಯನ್ನು ಅದಾನಿಗೆ ಹಸ್ತಾಂತರಿಸಿದೆ. ಮಹಾರಾಷ್ಟ್ರದಲ್ಲಿ ಇರುವುದು ಜನರ ಸರ್ಕಾರ ಅಲ್ಲ. ಅದಾನಿ ಸರ್ಕಾರ ಎಂದೆಲ್ಲಾ ಆರೋಪ ಮಾಡಿದ್ದಾರೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು

  • ಖರ್ಗೆಗೆ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ: ರಮೇಶ್‌ ಜಿಗಜಿಣಗಿ ಹೊಸ ಬಾಂಬ್‌

    ಖರ್ಗೆಗೆ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ: ರಮೇಶ್‌ ಜಿಗಜಿಣಗಿ ಹೊಸ ಬಾಂಬ್‌

    ವಿಜಯಪುರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಎಲ್ಲೋ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ. ನನ್ನ ಕಡೆ ರೆಕಾರ್ಡ್‌ ಇಲ್ಲ ಎಂದು ಸಂಸದ ರಮೇಶ್‌ ಜಿಗಜಿಣಗಿ (Ramesh Jigajinagi) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಮುಡಾ ಹಗರಣ (MUDA Scam) ವಿಚಾರದ ಬಗ್ಗೆ ಮಾತನಾಡುವ ವೇಳೆ, ಇನ್ನೊಂದು ವಿಷಯ ನನಗೆ ರಾತ್ರಿ ಗೊತ್ತಾಗಿದೆ. ಸನ್ಮಾನ್ಯ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಗ್ರೇಟ್ ಅಪವಾದ ಬಂದಿದೆ. ನನ್ನ ಕಡೆ ರೆಕಾರ್ಡ್‌ ಇಲ್ಲ. ಅವರಿಗೆ ಎಲ್ಲೋ ಒಂದು ಲ್ಯಾಂಡ್ ಅಲಾಟ್ ಆಗಿದೆಯಂತೆ. ಶಿವಮೊಗ್ಗ ಜಿಲ್ಲೆಯಲ್ಲಿ 60 ಎಕರೆ ಅಲಾಟ್ ಆಗಿದೆಯಂತೆ ಎಂದಿದ್ದಾರೆ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

    ಇದು ಒಂದೇ ಹಗರಣನಾ? ಇನ್ನು ಎಷ್ಟು ಇದಾವೆ ಬಿಚ್ಚಲಾ? ಇನ್ನೂ ಇವೆ, ಸಂದರ್ಭ ಬರ್ಲಿ ಹೇಳ್ತೀನಿ. ಸಿದ್ದರಾಮಣ್ಣಂದು ನನಗೆ ಗೊತ್ತಿಲ್ಲ. ಸಚಿವ ಮಹದೇವಪ್ಪ ಹೇಳಿಕೆ ನೋಡಿದ್ದೇನೆ. ಅದು ಬೇರೆ ಲ್ಯಾಂಡ್ ಇದೆ ಅಂತಾ ಹೇಳಿದ್ದಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ.

    ಕೇಂದ್ರ ಸಚಿವ ಸ್ಥಾನ ವಿಚಾರವಾಗಿ ಬಿಜೆಪಿ ಹೈಕಮಾಂಡ್‌ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ನನಗೆ ಮಂತ್ರಿ ಕೊಡುವ ಅವಶ್ಯಕತೆ ಇಲ್ಲ. ನನಗೆ ಅವಶ್ಯಕತೆ ಇರೋದು ಜನರದ್ದು. ಆದರೆ ಜನರು ನಾನು ಮರಳಿ ಬಂದ ಮೇಲೆ ಥೂ ಥೂ ಅಂತಾ ಉಗುಳಿದರು. ನಾವು ಮೊದಲೆ ಹೇಳಿದ್ದೆವು. ನಿಮಗೆ ದಲಿತರಿಗೆ ಈ ಬಿಜೆಪಿ ಪಕ್ಷ ವಿರೋಧಿ ಇದೆ ಅಂತಾ. ನನಗೋಸ್ಕರ ಅಲ್ಲ ಜನರ ಒತ್ತಡಕ್ಕಾಗಿ ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೂರಜ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಇದು ಎಂತಹ ಅನ್ಯಾಯ ಒಬ್ಬ ದಲಿತ ಮನುಷ್ಯನಿಗೆ. ದಕ್ಷಿಣ ಭಾರತದಲ್ಲಿ ನಾನೊಬ್ಬನೆ ದಲಿತ ಗೆದ್ದು ಬಂದಿದ್ದೇನೆ. ಏಳು ಚುನಾವಣೆಯಲ್ಲಿ ಆಯ್ಕೆ ಆಗಿ ಬಂದಿದ್ದೇನೆ. ಎಲ್ಲ ಮೇಲ್ವರ್ಗದ ಜಾತಿಯವರು ಸಚಿವರಾಗಿದ್ದಾರೆ. ದಲಿತರೇನು ಬಿಜೆಪಿಗೆ ಸಪೋರ್ಟ್‌ ಮಾಡಿಲ್ವಾ? ನನಗೆ ತುಂಬಾ ಅದರ ಬಗ್ಗೆ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ನಾವು ಶಿಸ್ತುಬದ್ಧವಾಗಿ, ಒಗ್ಗಟ್ಟಿನಿಂದ ಇರಬೇಕು- CWC ಸಭೆಯಲ್ಲಿ ಖರ್ಗೆ ಮಾತು

    ನಾವು ಶಿಸ್ತುಬದ್ಧವಾಗಿ, ಒಗ್ಗಟ್ಟಿನಿಂದ ಇರಬೇಕು- CWC ಸಭೆಯಲ್ಲಿ ಖರ್ಗೆ ಮಾತು

    ನವದೆಹಲಿ: ನಾವು ಶಿಸ್ತಿನಿಂದ ಒಗ್ಗಟ್ಟಾಗಿರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಭೆಯನ್ನು (CWC Meeting) ಉದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಹೋದಲ್ಲೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾವಾರು ಮತಗಳಲ್ಲಿ ಹೆಚ್ಚಳವನ್ನು ಕಂಡಿದ್ದೇವೆ. ಇದನ್ನು ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಮಣಿಪುರದಲ್ಲಿ ನಾವು ಎರಡೂ ಸ್ಥಾನಗಳನ್ನು ಗೆದ್ದಿದ್ದೇವೆ. ನಾಗಾಲ್ಯಾಂಡ್, ಅಸ್ಸಾಂ ಮತ್ತು ಮೇಘಾಲಯದಲ್ಲಿಯೂ ಸ್ಥಾನಗಳನ್ನು ಗೆದ್ದಿದ್ದೇವೆ ಎಂದರು.

    ಮಹಾರಾಷ್ಟ್ರದಲ್ಲಿ ನಾವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಎಲ್ಲಾ ವರ್ಗದ ಜನರು ಬೆಂಬಲಿಸಿದ್ದಾರೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ (Congress) ಪಕ್ಷವು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಮತದಾರರ ಪ್ರಾಬಲ್ಯವನ್ನು ನಾವು ನೋಡಿದ್ದೇವೆ. ಹೀಗಾಗಿ ನಗರ ಪ್ರದೇಶಗಳಲ್ಲೂ ನಮ್ಮ ಅಸ್ತಿತ್ವವನ್ನು ತೋರಬೇಕು ಎಂದು ಕರೆ ನೀಡಿದರು.

    ನಾವು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರ್ಕಾರ ರಚಿಸಿದ್ದ ರಾಜ್ಯಗಳಲ್ಲಿ ನಮ್ಮ ಸಾಧನೆಯನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಅಂತಹ ಪ್ರತಿಯೊಂದು ರಾಜ್ಯಗಳ ಬಗ್ಗೆ ನಾವು ಶೀಘ್ರದಲ್ಲೇ ಪ್ರತ್ಯೇಕ ಚರ್ಚೆಗಳನ್ನು ನಡೆಸಬೇಕಾಗಿದೆ. ಈ ಮೂಲಕ ನಾವು ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಒಲವು ಹೊಂದಿರುವ ರಾಜ್ಯಗಳಾಗಿವೆ, ಅಲ್ಲಿ ನಾವು ಅವಕಾಶಗಳನ್ನು ಹೊಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕುಮಾರ್ ಬಂಗಾರಪ್ಪ ನಿವಾಸಕ್ಕೆ ಶಿವಣ್ಣ ಅಭಿಮಾನಿಗಳಿಂದ ಮುತ್ತಿಗೆ

    ನಾವು ಶಿಸ್ತಿನಿಂದ ಇರಬೇಕು, ಒಗ್ಗಟ್ಟಾಗಿರಬೇಕು. ಜನರು ತಮ್ಮ ನಂಬಿಕೆಯನ್ನು ಮರಳಿ ಪಡೆದಿದ್ದಾರೆ ಮತ್ತು ಅವರು ನಂಬಿಕೆ ಇಡುವಂತೆ ನಾವು ಮಾಡಬೇಕು. ನಾವು ಈ ತೀರ್ಪನ್ನು ನಿಜವಾದ ನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

  • Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    ನವದೆಹಲಿ: ಲೋಕಸಭಾ ಚುನಾವಣೆಗೆ (Loksabha Elections 2024) ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಬಿಜೆಪಿಯಿಂದ (BJP First List) ಈಗಾಗಲೇ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇದೀಗ ಮಹಾಶಿವರಾತ್ರಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಈ ಶುಭದಿನದಂದು ಕಾಂಗ್ರೆಸ್‌ ಕೂಡ ತನ್ನ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ (Congress First List) ಬಿಡುಗಡೆ ಮಾಡಿದೆ.

    ಗುರುವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ನವದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (CEC) ಸಭೆ ನಡೆದಿತ್ತು. ಈ ಸಭೆಯಲ್ಲಿ 60 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಇಂದು (ಶುಕ್ರವಾರ) ಸಂಜೆ 7 ಗಂಟೆಗೆ ದೆಹಲಿಯ ಕೆಪಿಸಿಸಿ ಕಚೇರಿಯಲ್ಲಿ ಅಜಯ್‌ ಮಾಕೇನ್‌ ಹಾಗೂ ಕೆ.ಸಿ ವೇಣುಗೋಪಾಲ್‌ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಮಾತನಾಡಿ ಮೊದಲು ಶಿವರಾತ್ರಿ ಮತ್ತು ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿದರು. ಭಾರತ್ ಜೋಡೋ ಯಾತ್ರೆ ಮುಂಬೈನಲ್ಲಿ ಅಂತ್ಯವಾಗಲಿದೆ. ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳಿಗೆ ಆಹ್ವಾನ ನೀಡಿದೆ. ಯುವ ನ್ಯಾಯ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಗ್ಯಾರಂಟಿಯಾಗಿದೆ ಎಂದರು.

    ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಲ್ಲಿ ಖಾಲಿಯಾಗಿರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪರೀಕ್ಷೆ ಪತ್ರಿಕೆ ಲೀಕ್ ತಡೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಗುರುವಾರ ಸಿಇಸಿ ಸಭೆ ನಡೆಯಿತು. 39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ರಾಹುಲ್ ಗಾಂಧಿ (Rahul Gandhi) ಹೆಸರು ಪಟ್ಟಿಯಲ್ಲಿದೆ. 39ರಲ್ಲಿ  15 ಜನರಲ್ ಕ್ಯಾಟಗರಿ, 24 ಮೈನಾರಿಟಿ, 12 ಮಂದಿ (50 ವರ್ಷದೊಳಗಿನ ಅಭ್ಯರ್ಥಿ)ಗಳು ಪಟ್ಟಿಯಲ್ಲಿದ್ದಾರೆ ಎಂದರು.

    ಮೊದಲ ಪಟ್ಟಿಯಲ್ಲಿರುವ ಪ್ರಮುಖರು ?: ರಾಹುಲ್ ಗಾಂಧಿ (ವಯನಾಡ್, ಕೇರಳ), ಭೂಪೇಶ್ ಬಘೇಲ್ (ರಾಜನಂದಗಾಂವ್, ಛತ್ತೀಸ್‌ಗಢ), ತಾಮ್ರಧ್ವಜ್ ಸಾಹು (ಮಹಾಸಮುಂಡ್, ಛತ್ತೀಸ್‌ಗಢ), ಶಶಿ ತರೂರ್ (ತಿರುವನಂತಪುರ, ಕೇರಳ), ಹೈಬಿ ಈಡನ್ (ಎರ್ನಾಕುಲಂ, ಕೇರಳ), ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ, ಕರ್ನಾಟಕ)ದಿಂದ ಸ್ಪರ್ಧಿಸಲಿದ್ದಾರೆ.

    ಯಾರೆಲ್ಲ ಇದ್ದಾರೆ:  ಅನಂತ ಸ್ವಾಮಿ ಗಡ್ಡದೇವರಮಠ  (ಹಾವೇರಿ), ಎಸ್​ಪಿ ಮುದ್ದಹನುಮೇಗೌಡ (ತುಮಕೂರು), ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ), ವೆಂಕಟರಮಣೇ ಗೌಡ  (ಸ್ಟಾರ್ ಚಂದ್ರು) (ಮಂಡ್ಯ), ಗೀತಾ ಶಿವರಾಜ್ ಕುಮಾರ್ (ಶಿವಮೊಗ್ಗ), ಶ್ರೇಯಸ್ ಪಟೇಲ್ (ಹಾಸನ), ರಾಜು​ ಅಲಗೂರು (ವಿಜಯಪುರ)ಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗಳಾಗಿದ್ದಾರೆ.

    ಕೇರಳದಿಂದ 15 ಅಭ್ಯರ್ಥಿಗಳ ಹೆಸರನ್ನು ಘೊಷಣೆ ಮಾಡಲಾಗಿದೆ. ರಾಜಮೋಹನ್ ಉನ್ನಿಥಾನ್ (ಕಾಸರಗೋಡು), ಕೆ.ಸುಧಾಕರನ್ (ಕಣ್ಣೂರು), ಶಾಫಿ ಪರಂಬಿಲ್ (ವಡಕರ), ರಾಹುಲ್ ಗಾಂಧಿ (ವಯನಾಡ್), ಎಂ.ಕೆ. ರಾಘವನ್ (ಕೋಳಿಕೋಡ್), ವಿ.ಕೆ. ಶ್ರೀಕಂದನ್ (ಪಾಲಕ್ಕಾಡ್), ರಮ್ಯಾ ಹರಿದಾಸ್ (ಆಲತ್ತೂರ್ (SC), ಕೆ. ಮುರಳೀಧರನ್ (ತ್ರಿಶೂರ್), ಬೆನ್ನಿ ಬಹನನ್ (ಚಾಲಕುಡಿ), ಹೈಬಿ ಈಡನ್ (ಎರ್ನಾಕುಲಂ), ಡೀನ್ ಕುರಿಯಾಕೋಸ್ (ಇಡುಕ್ಕಿ), ಕೋಡಿಕುನ್ನಿಲ್ ಸುರೇಶ್ (ಮಾವೇಲಿಕ್ಕರ (SC), ಆಂಟೊ ಆಂಟೋನಿ (ಪತ್ತನಂತಿಟ್ಟ), ಅಡೂರ್ ಪ್ರಕಾಶ್ (ಅಟ್ಟಿಂಗಲ್), ಡಾ. ಶಶಿ ತರೂರ್ (ತಿರುವನಂತಪುರಂ) ಇವರುಗಳನ್ನು ಈ ಬಾರಿ ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

    ಛತ್ತೀಸ್​ಗಢದಲ್ಲಿ ಮಾಜಿ ಸಿಎಂ ಭೂಪೇಶ್​ ಬಘೇಲ್​ ಸೇರಿ 6 ಮಂದಿಗೆ ಟಿಕೆಟ್ ನೀಡಲಾಗಿದೆ. ಡಾ. ಶಿವಕುಮಾರ್ ದಹರಿಯಾ (ಜಂಜಗಿರ್ – ಚಂಪಾ (SC), ಜ್ಯೋತ್ಸ್ನಾ ಮಹಂತ್ (ಕೊರ್ಬಾ), ರಾಜೇಂದ್ರ ಸಾಹು (ದುರ್ಗ್), ವಿಕಾಸ್ ಉಪಾಧ್ಯಾಯ (ರಾಯ್ಪುರ), ತಾರಧ್ವಜ್ ಸಾಹು (ಮಹಾಸಮುಂಡ)ಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

    ತೆಲಂಗಾಣದಿಂದ 4 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಸುರೇಶ್ ಕುಮಾರ್ ಶೆಟ್ಕರ್ (ಜಹೀರಾಬಾದ್), ಸುನೀತಾ ಮಹೇಂದರ್ ರೆಡ್ಡಿ (ಚೇವೆಲ್ಲಾ), ಕುಂದೂರು ರಘುವೀರ್ (ನಲ್ಗೊಂಡ), ಪೋರಿಕ ಬಲರಾಮ್ ನಾಯಕ್ (ಮಹಬೂಬಾಬಾದ್-ST)ಗೆ ಟಿಕೆಟ್ ಘೋಷಿಸಲಾಗಿದೆ. ಜೊತೆಗೆ ಮೊಹಮ್ಮದ್‌ ಹಮ್ದುಲ್ಲಾ ಸೈಯದ್‌ (ಲಕ್ಷದ್ವೀಪ-ST), ವಿನ್ಸೆಂಟ್‌ ಹೆಚ್‌ ಪಾಲಾ (ಶಿಲ್ಲಾಂಗ್-‌ ST, ಮೇಘಾಲಯ), ಸಲೆಂಗ್‌ ಎ ಸಂಗ್ಮಾ (ತುರಾ-ST, ಮೇಘಾಲಯ), ಎಸ್‌ ಸಪಾಂಗ್‌ಮೆರೆನ್‌ ಜಮಿರ್‌ (ನಾಗಾಲ್ಯಾಂಡ್), ಗೋಪಾಲ್‌ ಚೆಟ್ರಿ (ಸಿಕ್ಕಿಂ) ಕಣದಲ್ಲಿದ್ದಾರೆ.

  • ಇಡಿ, ಐಟಿಯನ್ನು ಮೋದಿ, ಅಮಿತ್ ಶಾ ಕಂಟ್ರೋಲ್ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ್ ಖರ್ಗೆ

    ಇಡಿ, ಐಟಿಯನ್ನು ಮೋದಿ, ಅಮಿತ್ ಶಾ ಕಂಟ್ರೋಲ್ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ್ ಖರ್ಗೆ

    ಬೀದರ್: ಇಡಿ ಹಾಗೂ ಐಟಿಯನ್ನು ನರೇಂದ್ರ ಮೋದಿ (Narendra Modi) ಹಾಗೂ ಅಮಿತ್ ಶಾ (Amit Shah) ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಆರೋಪಿಸಿದ್ದಾರೆ.

    ನಗರದ ನೆಹರೂ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ನಾಯಕರಿಗೆ ಇಡಿ, ಐಟಿ ಹಾಗೂ ಮೋದಿ ಭಯವಿದೆ. ಕಾಂಗ್ರೆಸ್‍ನಿಂದ ಲಾಭ ತೆಗೆದುಕೊಂಡ ಯಾರ ಬಳಿಯೂ ಧೈರ್ಯವಿಲ್ಲದೇ ಬಿಜೆಪಿಗೆ ಹೋಗುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಸಹಕಾರ ಕೊಡದೇ ಇದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುವುದಿಲ್ಲ. ಈ ಸಂವಿಧಾನವನ್ನು ಮೋದಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್‍ಗೆ ಸಹಕಾರ ನೀಡಲೇಬೇಕು ಎಂದಿದ್ದಾರೆ. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ: ಎಎಪಿ ಅಭ್ಯರ್ಥಿಗೆ ಗೆಲುವು ಘೋಷಿಸಿದ ಸುಪ್ರೀಂ ಕೋರ್ಟ್

    ಎಲ್ಲರಿಗೂ ಉಚಿತವಾಗಿ ನಾವು ಪಡಿತರ ಅಕ್ಕಿಯನ್ನು ಕೊಡುತ್ತಿದ್ದೇವೆ. ನೆಹರೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದರು. ಮೋದಿ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾರೆ. ರಾಮಮಂದಿರದಲ್ಲಿ ರಾಜಕೀಯ ಏಕೆ ಬಂತು? ಮೋದಿ ಜನ, ಧರ್ಮ, ಜಾತಿಯನ್ನ ಬೇರೆ ಬೇರೆ ಮಾಡಲು ನೋಡುತ್ತಾರೆ. ಈ ಬಾರಿ ಮೋದಿಯವರನ್ನು ಅಧಿಕಾರದಿಂದ ಹೊರಗೆ ಕಳಿಸಿ, ಮುಂದಿನ ಪೀಳಿಗೆಯನ್ನು ರಕ್ಷಣೆ ಮಾಡಬೇಕಿದೆ. ಎಲ್ಲಾ ಬಡವರಿಗೆ ಹೋಗುತ್ತವೆ ಎಂದು ಮೋದಿ ಎಲ್ಲಾ ನೇಮಕಾತಿಗಳನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಮೀಡಿಯಾಗಳ ಮಾಲೀಕರು ಶ್ರೀಮಂತರ ಕೈಯಲ್ಲಿದ್ದು, ಹಲವು ಟಿವಿಗಳು ಒಬ್ಬ ಮಾಲೀಕರ ಕೈಯಲ್ಲಿವೆ ಎಂದು ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸರಿಯಾದ ಮಾದರಿಯಲ್ಲಿ ಮನವಿ ಸಲ್ಲಿಸಿ, ಕೇಂದ್ರದ ಅನುದಾನ ಬರುತ್ತದೆ: ಕಾಂಗ್ರೆಸ್‌ಗೆ ಬೊಮ್ಮಾಯಿ ಠಕ್ಕರ್

  • ಮಲ್ಲಿಕಾರ್ಜುನ ಖರ್ಗೆಯಂತವ್ರ ಹೊಟ್ಟೆಯಲ್ಲಿ ಪ್ರಿಯಾಂಕ್ ಖರ್ಗೆಯಂತಹ ಹುಳ ಹುಟ್ಟಿದೆ: ಈಶ್ವರಪ್ಪ

    ಮಲ್ಲಿಕಾರ್ಜುನ ಖರ್ಗೆಯಂತವ್ರ ಹೊಟ್ಟೆಯಲ್ಲಿ ಪ್ರಿಯಾಂಕ್ ಖರ್ಗೆಯಂತಹ ಹುಳ ಹುಟ್ಟಿದೆ: ಈಶ್ವರಪ್ಪ

    – ನನ್ನ ವಿರುದ್ಧ 100 ಎಫ್‍ಐಆರ್ ಹಾಕಿದ್ರೂ ಹೆದರಲ್ಲ

    ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆಯಂತವರ (Mallikarjun Kharge) ಹೊಟ್ಟೆಯಲ್ಲಿ ಪ್ರಿಯಾಂಕ್ ಖರ್ಗೆ ಅಂತಹ ಕೆಟ್ಟ ಹುಳ ಹುಟ್ಟಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯನ್ನು (Priyank Kharge) ಕಾಂಗ್ರೆಸ್ ನವರು ಅಂತಾ ಕರೆಯಲು ಇಷ್ಟಪಡಲ್ಲ. ಇವರು ಯಾರೂ ಕಾಂಗ್ರೆಸ್ ನವರಲ್ಲ. ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ಹಂಚಿಕೊಂಡಿರುವವರು ಎಂದರು.

    ಜೈಲಿಗೆ ಹೋಗಲ್ಲ: ಮುಖ್ಯಮಂತ್ರಿ, ಸುರ್ಜೇವಾಲಾ ಅವರಿಗೆ 10 ಸಾವಿರ ದಂಡ ಕಟ್ಟಿ ಅಂತಾ ಕೋರ್ಟ್ ಹೇಳಿದೆ. ನಾನು ದಂಡ ಕಟ್ಟುವ ಪ್ರಸಂಗ ಬಂದಿಲ್ಲ. ಡಿಸಿಎಂ ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಸುರೇಶ್ ಕೊಟ್ಟಿರುವ ಹೇಳಿಕೆ ಸರಿ ಇದೆಯಾ ಅಂತಾ ಸ್ಪಷ್ಟಪಡಿಸಲಿ. ನಾನು ಬೇಕಾದಷ್ಟು ಹೇಳಿಕೆ ಕೊಟ್ಟಿದ್ದೇನೆ. ಒಂದೇ ಒಂದು ರೂಪಾಯಿ ಪೆನಾಲ್ಟಿ ಕಟ್ಟಿಲ್ಲ. ಒಂದೇ ಒಂದು ದಿನ ಜೈಲಿಗೆ ಹೋಗಿಲ್ಲ ಎಂದು ತಿಳಿಸಿದರು.

    ಸಿದ್ದರಾಮಯ್ಯ ವಿರುದ್ಧ ಕಿಡಿ: ತೆರಿಗೆ ಹಂಚಿಕೆ ಬಗ್ಗೆ ಸುಳ್ಳು ಹೇಳಿಕೆ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯ ಸುಳ್ಳು ಹೇಳ್ತಿದ್ದಾರೆ ಅಂತಾ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಸುಮ್ಮನೆ ಏಕೆ ಸುಳ್ಳು ಹೇಳಿಕೆ ಕೊಡ್ತೀರಾ?, ಶ್ವೇತಪತ್ರ ಹೊರಡಿಸಿ, ಶ್ವೇತಪತ್ರ ಹೊರಡಿಸಲು ಏಕೆ ಭಯ?, ಶ್ವೇತಪತ್ರ ಹೊರಡಿಸಿದರೆ ನಿಮ್ಮ ಬಂಡವಾಳ ಬಹಿರಂಗವಾಗುತ್ತದೆ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ಆರ್ ಎಸ್‍ಎಸ್ (RSS) ಬಗ್ಗೆ ಮಾತನಾಡಿರೋದು ವಾಪಸ್ ಪಡೆಯರಿ. ಆರ್ ಎಸ್ ಎಸ್ ಒಳ್ಳೆಯ ಸಂಸ್ಕಾರ ಕಲಿಸುತ್ತಿದೆ. ನನ್ನ ವಿರುದ್ಧ ಇನ್ನೂ 100 ಎಫ್ ಐಆರ್ ಹಾಕಿ ನಾನು ಹೆದರುವುದಿಲ್ಲ. ನನ್ನ ಹೇಳಿಕೆ ವಿರುದ್ದ ಎಫ್ ಐಆರ್ ಹಾಕಿಸಿದ್ದೀರಾ. ಡಿ.ಕೆಸುರೇಶ್ (SK Suresh) ಹೇಳಿಕೆ ವಿರುದ್ದ ಏಕೆ ಎಫ್‍ಐಆರ್ ಹಾಕಿಲ್ಲ. ರಾಷ್ಟ್ರಭಕ್ತರ ಕಂಡರೆ ಸಿದ್ದರಾಮಯ್ಯ ಅವರಿಗೆ ಅಲರ್ಜಿ. ನಾನು ಡಿ.ಕೆ.ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಅಂತಾ ಹೇಳಿಲ್ಲ. ದೇಶ ವಿಭಜನೆ ಮಾಡುವ ಹೇಳಿಕೆ, ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಿ ಅಂತಾ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.

    ಕ್ಲೀನ್ ಚಿಟ್ ಸಿಗೋ ವಿಶ್ವಾಸ: ನನ್ನ ವಿರುದ್ದ ದಾಖಲಾಗಿದ್ದ ಎಲ್ಲಾ ಪ್ರಕರಣಗಳಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಈಗ ದಾಖಲಾಗಿರುವ ಎಫ್ ಐಆರ್ ನಲ್ಲು ಕ್ಲೀನ್ ಚಿಟ್ ಸಿಗುವ ವಿಶ್ವಾಸ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷೆಯನ್ನು ಸುಧಾರಿಸಿಕೊಳ್ಳಬೇಕು. ಎಲ್ಲರ ಬಗ್ಗಯೂ ಸಿದ್ದರಾಮಯ್ಯ ಏಕ ವಚನದಲ್ಲಿ ಮಾತನಾಡ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧವೂ ಏಕ ವಚನದಲ್ಲಿ ಮಾತನಾಡ್ತಾರೆ. ಅವರ ಭಾಷೆ ಬಳಕೆ ಸರಿಪಡಿಸಿಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಅವರಂತಹ ಚಿಲ್ಲರೆ ಮಾತಿಗೆ ಉತ್ತರ ಕೊಡಲ್ಲ ಎಂದು ಈಶ್ವರಪ್ಪ ಸಿಡಿಮಿಡಿಗೊಂಡರು.

  • I.N.D.I.A ಒಕ್ಕೂಟದಲ್ಲಿ ಮುಂದುವರೆಯುವಂತೆ ಎಲ್ಲರಿಗೂ ಪತ್ರ ಬರೆಯುತ್ತೇನೆ: ಮಲ್ಲಿಕಾರ್ಜುನ್ ಖರ್ಗೆ

    I.N.D.I.A ಒಕ್ಕೂಟದಲ್ಲಿ ಮುಂದುವರೆಯುವಂತೆ ಎಲ್ಲರಿಗೂ ಪತ್ರ ಬರೆಯುತ್ತೇನೆ: ಮಲ್ಲಿಕಾರ್ಜುನ್ ಖರ್ಗೆ

    ಕಲಬುರಗಿ: ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಲಗೊಳಿಸುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟದಲ್ಲಿ (I.N.D.I.A Alliance) ಮುಂದುವರೆಯಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ. ಅಲ್ಲದೇ ಈ ಬಗ್ಗೆ ಮಾತನಾಡುವ ಪ್ರಯತ್ನ ಸಹ ಮಾಡಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ತಿಳಿಸಿದ್ದಾರೆ.

    ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಐ.ಎನ್.ಡಿ.ಐ.ಎ ಒಕ್ಕೂಟ ಬಿಟ್ಟು ಹೋಗುವ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಪ್ರಮುಖವಾಗಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಬಳಿಕ ಸ್ಪಷ್ಟಪಡಿಸುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೀವಂತವಾಗಿದ್ರೆ ಶಾಮನೂರು ಶಿವಶಂಕರಪ್ಪರನ್ನ ಸಸ್ಪೆಂಡ್ ಮಾಡಲಿ: ಹೆಚ್.ವಿಶ್ವನಾಥ್

    ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಲಪಡಿಸುವ ಮನೋಭಾವ ಹೊಂದಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಇತರರೊಂದಿಗೆ ಮಾತನಾಡಿ ತಾವೆಲ್ಲರೂ ಒಗ್ಗಟ್ಟಿನಿಂದ ಒಗ್ಗೂಡಿದಾಗ ಉತ್ತಮ ಫೈಟ್ ಕೊಡಬಹುದಾಗಿದೆ ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

    ಬಿಹಾರದ ರಾಜಕೀಯದಲ್ಲಿ ಬಿಕ್ಕಟ್ಟು ಎದುರಾಗಿದೆ. ಐ.ಎನ್.ಡಿ.ಐ.ಎ ಒಕ್ಕೂಟದಿಂದ ಜೆಡಿಯು ಹೊರಬರುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ. ಬಿಜೆಪಿ ಜೊತೆ ಸೇರಿ ನಿತೀಶ್ ಕುಮಾರ್ (Nitish Kumar) ಸರ್ಕಾರ ರಚನೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರ ನಡುವೆಯೇ ಲಾಲೂ ಪ್ರಸಾದ್ ಯಾದವ್ ಕೆಲ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಐ.ಎನ್.ಡಿ.ಐ.ಎ ಒಕ್ಕೂಟಕ್ಕೆ ಆತಂಕ ಎದುರಾಗಿದೆ. ಇದನ್ನೂ ಓದಿ: ನಿಗಮ-ಮಂಡಳಿ ಬೇಡವೇ ಬೇಡ, ನನಗೆ ಸಚಿವ ಸ್ಥಾನ ಕೊಡಿ: ಶಾಸಕ ಸುಬ್ಬಾರೆಡ್ಡಿ ಪಟ್ಟು

  • I.N.D.I.A ಒಕ್ಕೂಟದಿಂದ ಜೆಡಿಯು ಔಟ್?- ಬಿಜೆಪಿ ಜೊತೆ ಸರ್ಕಾರ ರಚನೆ ಬಹುತೇಕ ಫಿಕ್ಸ್

    I.N.D.I.A ಒಕ್ಕೂಟದಿಂದ ಜೆಡಿಯು ಔಟ್?- ಬಿಜೆಪಿ ಜೊತೆ ಸರ್ಕಾರ ರಚನೆ ಬಹುತೇಕ ಫಿಕ್ಸ್

    – ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

    ಪಾಟ್ನಾ\ಕಲಬುರಗಿ: ಐಎನ್‍ಡಿಐಎ (I.N.D.I.A) ಒಕ್ಕೂಟದಿಂದ ಜೆಡಿಯು (JDU) ಹೊರಬರುವ ಸಾಧ್ಯತೆಗಳು ದಟ್ಟವಾಗಿದೆ.

    ಬಿಹಾರದಲ್ಲಿ ಬಿಜೆಪಿ ಜೊತೆ ನಿತೀಶ್ ಕುಮಾರ್ (Nitish Kumar) ಸರ್ಕಾರ ರಚನೆ ಬಹುತೇಕ ಫಿಕ್ಸ್ ಆಗಿದ್ದು, ಭಾನುವಾರವೇ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿವೆ. ಇಂದು ಸಂಜೆಯೇ ಬಿಜೆಪಿಯು ಮಹತ್ವದ ಸಭೆ ಕರೆದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೇ ಅವರು ಈಗಾಗಲೇ ಪಾಟ್ನಾ ತಲುಪಿದ್ದಾರೆ.

    ಇನ್ನೊಂದೆಡೆ ಬಿಹಾರದಲ್ಲಿ (Bihar) ರಾಜಕೀಯ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವೀಕ್ಷಕರನ್ನ ನೇಮಕ ಮಾಡಿದೆ. ಭೂಪೇಶ್ ಬಘೇಲ್ ಅವರನ್ನು ವೀಕ್ಷಕನನ್ನಾಗಿ ನೇಮಸಿದೆ. ಮಗದೊಂದು ಕಡೆ ಜೆಡಿಯುನ 10 ಶಾಸಕರನ್ನು ಸೆಳೆಯಲು ಲಾಲೂ ಪ್ರಸಾದ್ ಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಇತ್ತ ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಐಎನ್‍ಡಿಐಎ ಒಕ್ಕೂಟದಿಂದ ಜೆಡಿಯೂ ಹೊರ ಹೋಗುವ ಮಾಹಿತಿ ಇಲ್ಲ. ನಾನು ಕೂಡ ಪತ್ರ ಬರೆದಿದ್ದೆನೆ ಅವರ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ. ಅವರ ರಾಜ್ಯಪಾಲರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಊಹಾಪೋಹದ ಬಗ್ಗೆ ನಾನು ಮಾತನಾಡಲ್ಲ ಎಂದರು.

    ನಮ್ಮ ಒಕ್ಕೂಟ ಮುರಿಬಾರದು ಅಂತಾ ಎಲ್ಲ ನಾಯಕರಿಗೂ ಹೇಳುತ್ತಾ ಬಂದಿದ್ದೇನೆ. ಒಂದು ಕಡೆ ಇದ್ರೆ ಮಾತ್ರ ಒಳ್ಳೆಯ ಫೈಟ್ ಕೊಟ್ಟು ಯಶಸ್ವಿಯಾಗುತ್ತದೆ. ಪ್ರಜಾಪ್ರಭುತ್ವ ಉಳಿಸಬೇಕು ಎಂಬವರು ಯಾರು ಸಹ ಆತುರದ ನಿರ್ಧಾರ ಮಾಡುವುದಿಲ್ಲ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ರಾಹುಲ್‌ ಗಾಂಧಿ ಮೇಲೆ‌ ಅಸ್ಸಾಂನಲ್ಲಿ ಎಫ್‌ಐಆರ್- ಅಮಿತ್‌ ಶಾಗೆ ಖರ್ಗೆ ಪತ್ರ

    ರಾಹುಲ್‌ ಗಾಂಧಿ ಮೇಲೆ‌ ಅಸ್ಸಾಂನಲ್ಲಿ ಎಫ್‌ಐಆರ್- ಅಮಿತ್‌ ಶಾಗೆ ಖರ್ಗೆ ಪತ್ರ

    ನವದೆಹಲಿ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatre) ವೇಳೆ ಅಸ್ಸಾಂನಲ್ಲಿ ಉಂಟಾಗಿರುವ ಗದ್ದಲದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ಯಾತ್ರೆ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ದಾಳಿಕೋರರಿಗೆ ಪೊಲೀಸ್ ರಕ್ಷಣೆ ಸಿಗುತ್ತದೆ. ಹೀಗಾಗಿ ನೀವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಎಂದು ಪತ್ರದಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು (Mallikarjun Kharge) ಮನವಿ ಮಾಡಿಕೊಂಡಿದ್ದಾರೆ.

    ಪತ್ರದಲ್ಲೇನಿದೆ..?: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಅಗತ್ಯ ಭದ್ರತೆ ನೀಡುತ್ತಿಲ್ಲ. ಬಿಜೆಪಿ ಕಾರ್ಯಕರ್ತರು (BJP Activist) ಯಾತ್ರೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಅಸ್ಸಾಂ ಪೊಲೀಸರು ದಾಳಿಕೋರರಿಗೆ ರಕ್ಷಣೆ ನೀಡುತ್ತಿದ್ದಾರೆ. ಅಲ್ಲದೆ ಜನವರಿ 21 ರಂದು ಸೋನಿತ್‌ಪುರ ಜಿಲ್ಲೆಯಲ್ಲಿ ನಡೆದ ಯಾತ್ರೆಯ ಮೇಲೆ ದಾಳಿ ನಡೆಸಲಾಯಿತು. ಸ್ಥಳೀಯ ಎಸ್ಪಿಯವರು ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ತಂಡದ ಮೇಲೆ ದಾಳಿ ಮಾಡಿದರು. ಅಲ್ಲದೇ ನಮ್ಮ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ (Jairam Ramesh) ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅವರ ಕಾರಿನ ಮೇಲೆ ದಾಳಿ ಮಾಡಲಾಗಿದೆ ಎಂದು ಎರಡು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

    ಬಿಜೆಪಿ ಕಾರ್ಯಕರ್ತರು ಅಸ್ಸಾಂ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇನ್ ಬೋರಾ ಅವರ ಮೇಲೆಯೂ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಅವರು ಗಾಯಗೊಂಡರು. ಮರುದಿನ ಜನವರಿ 22 ರಂದು ನಾಗಾಂವ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ ಬೆಂಗಾವಲು ಪಡೆಯನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆಯೂ ಅಸ್ಸಾಂ ಪೊಲೀಸರು ಬಿಜೆಪಿ ಕಾರ್ಯಕರ್ತರ ರಕ್ಷಣೆಯನ್ನು ಮುಂದುವರಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

    ಭದ್ರತೆ ಒದಗಿಸಿ: ಈ ವಿಚಾರದಲ್ಲಿ ಗೃಹ ಸಚಿವ ಅಮಿತ್‌ ಶಾ (Amitshah) ಅವರು ಕೂಡಲೇ ಮಧ್ಯ ಪ್ರವೇಶಿಸಿ ಭದ್ರತೆ ಒದಗಿಸಬೇಕು ಎಂದು ಖರ್ಗೆ ಮನವಿ ಮಾಡಿದರು. ನ್ಯಾಯ್‌ ಯಾತ್ರೆಯಲ್ಲಿ ನಡೆದ ಹಲ್ಲೆ ಮತ್ತು ಗಲಾಟೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ದಾಳಿಕೋರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ, ಕ್ರಮವೂ ಕೈಗೊಂಡಿಲ್ಲ. ನಾವು ಯಾತ್ರೆಯನ್ನು ಮುಂದುವರಿಸುತ್ತಿದ್ದೇವೆ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ನ ಯಾವುದೇ ಸದಸ್ಯರಿಗೆ ನೋವಾಗದಂತೆ ನೀವು (ಅಮಿತ್‌ ಶಾ) ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಜೊತೆಗೆ ಅಸ್ಸಾಂ ಸಿಎಂ ಹಾಗೂ ಪೊಲೀಸ್‌ ನಿರ್ದೇಶಕರಾಗಿ ಅಹಿತರ ಘಟನೆ ನಡೆಯದಂತೆ ನೋಡಿಕೊಳ್ಳಲು ನಿರ್ದೇಶನ ನೀಡುವಂತೆ ಕೇಳಿಕೊಂಡಿದ್ದಾರೆ.

    ಜನವರಿ 23 ರಂದು ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಗುವಾಹಟಿಗೆ ಹೋಗದಂತೆ ತಡೆಯಲಾಯಿತು. ಆದರೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್ ಅನ್ನು ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಸಿಎಂ ಆದೇಶದ ಮೇರೆಗೆ ಅಸ್ಸಾಂ ಪೊಲೀಸರು ಸರ್ಕಾರಿ ಆಸ್ತಿ ಹಾನಿ ಮತ್ತು ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು.