Tag: ಮಲ್ಲಿಕಾರ್ಜುನ

  • ಉಪೇಂದ್ರ, ಸಚಿವ ಮಲ್ಲಿಕಾರ್ಜುನ ಕೇಸ್ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕಾನೂನು ಕ್ರಮ: ಜಿ.ಪರಮೇಶ್ವರ್

    ಉಪೇಂದ್ರ, ಸಚಿವ ಮಲ್ಲಿಕಾರ್ಜುನ ಕೇಸ್ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕಾನೂನು ಕ್ರಮ: ಜಿ.ಪರಮೇಶ್ವರ್

    ಬೆಂಗಳೂರು: ನಟ ಉಪೇಂದ್ರ (Upendra) ಹಾಗೂ ಸಚಿವ ಮಲ್ಲಿಕಾರ್ಜುನ (SS Mallikarjun) ಅವರ ಹೇಳಿಕೆಗಳ ಬಗೆಗಿನ ದೂರಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಇಬ್ಬರ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwara) ಹೇಳಿದ್ದಾರೆ.

    ಪರಿಶಿಷ್ಟ ಜಾತಿಯವರ ವಿರುದ್ಧ ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರು ಕೂಡಾ ಇಂತಹ ಹೇಳಿಕೆಗಳನ್ನು ಸಹಿಸಲ್ಲ. ಹೀಗೆ ಮಾತನಾಡೋರು ಅರ್ಥ ಮಾಡಿಕೊಳ್ಳಬೇಕು. ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡೋದು ಯಾರೇ ಆದರು ನಿಲ್ಲಿಸಬೇಕು. ಗಾದೆ ಇದೆ ಅಂತ ಹೇಳಿ ಕೀಳಾಗಿ ಮಾತಾಡೋದು ಸರಿಯಲ್ಲ. ಇದೊಂದು ನಾನ್ಸೆನ್ಸ್ ಹೇಳಿಕೆ ಎಂದು ಕಿಡಿಕಾರಿದರು.

    ಇದನ್ನು ನಿಲ್ಲಿಸಿದರೆ ಒಳ್ಳೆಯದು. ಇದನ್ನು ನಾನು ಕೂಡಾ ಸಹಿಸಲ್ಲ. ಹೀಗೆ ಮಾತನಾಡೋದು ಒಂದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ಲವಾ? ಸಚಿವರೇ ಆಗಲಿ ಯಾರೇ ಆಗಲಿ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ ಕೇಸ್ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ 1 ಕೋಟಿಗೂ ಆಧಿಕ ಅರ್ಜಿ ಸಲ್ಲಿಕೆ

    ಸಚಿವ ಮಲ್ಲಿಕಾರ್ಜುನ ಏನು ಮಾತಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅದರ ಬಗ್ಗೆ ಪೇಪರ್‌ನಲ್ಲಿ ಓದಿದ್ದೇನೆ. ರಾಜಾಜಿನಗರ ಕೇಸ್ ವಿಧಾನಸೌಧಕ್ಕೆ ವರ್ಗಾವಣೆ ಆಗಿದೆ. ಸಾರ್ವಜನಿಕ ಜೀವನದಲ್ಲಿ ಇದ್ದು ಬೇರೆ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡೋದು ಸರಿಯಲ್ಲ. ಹೀಗೆ ಮಾತನಾಡಿದ್ರೆ ಅ ಸಮುದಾಯಕ್ಕೆ ನೋವಾಗಲ್ಲವಾ? ಎರಡೂ ದೂರಿನ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇವೆ. ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಪರಮೇಶ್ವರ್ ಹೇಳಿಕೆ ನೀಡಿದರು. ಇದನ್ನೂ ಓದಿ: ಸಚಿವ ಸಂಪುಟದ ದೋಸ್ತಿಗಳ ನಡುವೆ ಮಹಾ ಬಿರುಕಿದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಶಾಸಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲಬುರಗಿಯಲ್ಲಿ ರೌಡಿ ಕರಿಚಿರತೆ ಎನ್‍ಕೌಂಟರ್- ಬುಲೆಟ್ ಪ್ರೂಫ್ ಜಾಕೆಟ್‍ನಿಂದ ಡಿವೈಎಸ್‍ಪಿ ಪಾರು

    ಕಲಬುರಗಿಯಲ್ಲಿ ರೌಡಿ ಕರಿಚಿರತೆ ಎನ್‍ಕೌಂಟರ್- ಬುಲೆಟ್ ಪ್ರೂಫ್ ಜಾಕೆಟ್‍ನಿಂದ ಡಿವೈಎಸ್‍ಪಿ ಪಾರು

    ಕಲಬುರಗಿ: ಕಲಬುರಗಿ ನಗರದ ಕುಖ್ಯಾತ ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಕರಿಚಿರತೆಯನ್ನು ಪೊಲೀಸರು ಇಂದು ಬೆಳಗಿನ ಜಾವ ಎನ್‍ಕೌಂಟರ್ ಮಾಡಿದ್ದಾರೆ.

    ಜುಲೈ 7 ರಂದು ನಂದೂರ ಗ್ರಾಮದ ಲಕ್ಷ್ಮಿಕಾಂತ ಎಂಬವನನ್ನು ರೌಡಿ ಕರಿ ಚಿರತೆ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ.

    ಲಕ್ಷ್ಮಿಕಾಂತ

    ನಂತರ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಬೆಳಗ್ಗೆ ನಗರದ ಹೊರವಲಯದ ಗ್ರೀನ್ ಸಿಟಿ ಆಶ್ರಯ ಕಾಲೋನಿ ಬಳಿ ಕರಿ ಚಿರತೆ ಅಡಗಿರುವ ಮಾಹಿತಿ ಮೇಲೆ ದಾಳಿ ಮಾಡಿ ಶೂಟೌಟ್ ಮಾಡಿದ್ದಾರೆ.

    ಕಾರ್ಯಾಚರಣೆ ವೇಳೆ ಕರಿಚಿರತೆ ಹಾರಿಸಿದ ಗುಂಡು ಡಿವೈಎಸ್‍ಪಿ ಹುಲ್ಲೂರ ಅವರಿಗೆ ತಾಗಿದೆ. ಆದರೆ ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಂಡಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.

    ಕರಿಚಿರತೆ ಜೊತೆಗಿದ್ದ ಇಬ್ಬರು ಆರೋಪಿಗಳು, ಪೇದೆಗಳಾದ ಆನಂದ ಮತ್ತು ಶ್ರೀಶೈಲ್ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಇದೀಗ ಗಾಯಗೊಂಡ ಪೊಲೀಸರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.