Tag: ಮಲ್ಲಿಕಾರ್ಜನ ಖರ್ಗೆ

  • ಏಕಾಏಕಿ ಮಲ್ಲಿಕಾರ್ಜುನ ಖರ್ಗೆಗೆ Z+ ಸೆಕ್ಯೂರಿಟಿ

    ಏಕಾಏಕಿ ಮಲ್ಲಿಕಾರ್ಜುನ ಖರ್ಗೆಗೆ Z+ ಸೆಕ್ಯೂರಿಟಿ

    ನವದೆಹಲಿ: ಏಕಾಏಕಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭದ್ರತೆ ಹೆಚ್ಚಳವಾಗಿದ್ದು, ಕಳೆದ ಮೂರು ದಿನದಿಂದ ಖರ್ಗೆಗೆ Z+ ಸೆಕ್ಯುರಿಟಿ ನೀಡಲಾಗಿದೆ.

    ಸ್ಟೇಟ್ ಸೆಕ್ಯುರಿಟಿ ಜೊತೆಗೆ ಸಿಆರ್ ಪಿಎಫ್ Z+ ಸಕ್ಯೂರಿಟಿ ಸಹ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 8 ಜನ ಸಿಆರ್‌ಪಿಎಫ್ (CRPF) ಗನ್ ಮ್ಯಾನ್ ಗಳ ನಿಯೋಜಿಸಲಾಗಿದೆ.


    ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಆ ಕಾರಣಕ್ಕೆ ಕಳೆದ ಮೂರು ದಿನದಿಂದ Z+ ಸೆಕ್ಯುರಿಟಿ ನೀಡಲಾಗಿದೆ. ಬೆಂಗಳೂರು ನಿವಾಸಕ್ಕೂ z+ ಸೆಕ್ಯುರಿಟಿ ನಿಯೋಜಿಸಲಾಗಿದೆ.

  • ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ನವದೆಹಲಿ: ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ಸರಣಿ ರೈಲು ಅಪಘಾತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಎಐಸಿಸಿ (AICC) ಅಧ್ಯಕ್ಷ, ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪತ್ರ ಬರೆದಿದ್ದು, ಇಲಾಖೆ ಮೇಲಿನ ನಿರ್ಲಕ್ಷ್ಯಗಳನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ನಾಲ್ಕು ಪುಟಗಳ ಪತ್ರ (Letter) ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ನೇಮಕಾತಿ, ತಾಂತ್ರಿಕ ಸಮಸ್ಯೆ ಮತ್ತು ಹಿಂದಿನ ತನಿಖೆಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲ್ವೇ ಇಲಾಖೆಯಲ್ಲಿ (Railway Department) ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಅಪಘಾತದ ನಡೆದ ವಿಭಾಗದಲ್ಲೂ ಸುಮಾರು 8,278 ಹುದ್ದೆಗಳು ಖಾಲಿ ಇವೆ. 90ರ ದಶಕದಲ್ಲಿ 18 ಲಕ್ಷಕ್ಕೂ ಹೆಚ್ಚು ರೈಲ್ವೇ ಉದ್ಯೋಗಿಗಳಿದ್ದು, ಈಗ ಅದನ್ನು ಸುಮಾರು 12 ಲಕ್ಷಕ್ಕೆ ಇಳಿಸಲಾಗಿದೆ. ಅದರಲ್ಲೂ 3.18 ಲಕ್ಷ ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳನ್ನು ಏಕೆ ಭರ್ತಿ ಮಾಡಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

    ಲೊಕೊ ಪೈಲಟ್‌ಗಳು ಓವರ್ ಟೈಮ್ ಡ್ಯೂಟಿ ಮಾಡುತ್ತಿದ್ದಾರೆ ಎಂದು ಮಂಡಳಿ ಹೇಳಿದೆ. ಲೊಕೊ ಪೈಲಟ್‌ಗಳ ನೇಮಕಾತಿ ಯಾಕೆ ನಡೆದಿಲ್ಲ? ಅವರ ಮೇಲೆ ಹೊರೆ ಹಾಕುವುದು ಜನರ ಸುರಕ್ಷತೆ ಸವಾಲು ಸ್ವೀಕರಿಸಿದಂತೆ. ಮೈಸೂರಿನಲ್ಲಿ ಎರಡು ರೈಲುಗಳ ಡಿಕ್ಕಿ ಸಾಧ್ಯತೆ ಉಲ್ಲೇಖಿಸಿ ಸಿಗ್ನಲ್ ಸಮಸ್ಯೆ ಕ್ರಮಕ್ಕೆ ಒತ್ತಾಯಿಸಿತ್ತು. ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೇ ಮಂಡಳಿಯ ಸಂಪೂರ್ಣ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ಟೀಕಿಸಿದೆ. ಇದರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ರೈಲ್ವೆ ಸುರಕ್ಷತೆ ನಿರ್ಲಕ್ಷ್ಯದ ಬಗ್ಗೆ ಸಿಎಜಿ ಕೂಡ ವರದಿ ನೀಡಿದೆ. 68% ಪ್ರಕರಣಗಳಲ್ಲಿ ತಡವಾಗಿ ತನಿಖಾ ವರದಿ ಸಲ್ಲಿಸಿದ್ದು, ಸೂಕ್ತ ಕ್ರಮವೂ ತೆಗೆದುಕೊಂಡಿಲ್ಲ. ಈ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಅಪಘಾತವಾಗಿ 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ

    2011ರ ಹಿಂದಿನ ಸರ್ಕಾರದ ಅವಧಿಯಲ್ಲಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಯಶಸ್ವಿಯಾಗಿ ರಕ್ಷಾ ಕವಚ್ ಪರೀಕ್ಷಿಸಿತು. ಇದು ರೈಲುಗಳ ಘರ್ಷಣೆಯನ್ನು ತಡೆಯಲು ಉದ್ದೇಶಿಸಲಾಗಿತ್ತು. ನಿಮ್ಮ ಸರ್ಕಾರ ಕವಚ್ ಮರು ನಾಮಕರಣ ಮಾಡಿತು. ಇದಾದ ಮೇಲೂ ಈವರೆಗೂ ಕೇವಲ 4% ಅನುಷ್ಠಾನವಾಗಿದೆ. 100% ತಂತ್ರಜ್ಞಾನ ಅಳವಡಿಕೆಗೆ ವಿಫಲವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

    ಇನ್ನೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಜವಾಬ್ದಾರಿ ಹೊರದೆ ಸಿಬಿಐ (CBI) ತನಿಖೆಗೆ ನೀಡಿದ್ದಾರೆ. ಸಿಬಿಐ ಅಪರಾಧಗಳ ತನಿಖೆಗಿದೆ. ಸಿಬಿಐ ಅಥವಾ ಯಾವುದೇ ಇತರ ಕಾನೂನು ಜಾರಿ ಸಂಸ್ಥೆಯು ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಅವರಿಗೆ ರೈಲ್ವೇ ಸಿಗ್ನಲ್ ಬಗ್ಗೆ ಜ್ಞಾನವೂ ಇರುವುದಿಲ್ಲ. ಅವರಿಂದ ತನಿಖೆ ಹೇಗೆ ನಿರೀಕ್ಷಿಸಬಹುದು? 2016ರಲ್ಲಿ ಕಾನ್ಪುರದಲ್ಲಿ ರೈಲು ಹಳಿ ತಪ್ಪಿ 150 ಮಂದಿ ಪ್ರಾಣ ಕಳೆದುಕೊಂಡರು. ಚುನಾವಣೆ ವೇಳೆ ಪಿತೂರಿ ಎಂದು ಆರೋಪಿಸಿ ಎನ್‌ಐಎ (NIA) ತನಿಖೆಗೆ ನೀಡಿದ್ದಿರಿ. 2018ರಲ್ಲಿ ಎನ್‌ಐಎ ತನಿಖೆಯನ್ನು ಮುಕ್ತಾಯಗೊಳಿಸಿತು. ಆದರೆ ಆರೋಪ ಪಟ್ಟಿ ಸಲ್ಲಿಸಲು ನಿರಾಕರಿಸಿತು. 150 ಮಂದಿಯ ಸಾವಿಗೆ ಹೊಣೆ ಯಾರು ಎಂದು ಕೇಳಿದವರು ಇನ್ನಾದರೂ ಜನರ ಸುರಕ್ಷತೆ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ

  • ವಿಕೃತ ಮನಸ್ಸಿನವರು ಪೆಟ್ರೋಲ್ ಬೆಲೆ 100 ರೂ. ದಾಟಿದ್ರೂ ಪರವಾಗಿಲ್ಲ ಅಂತಾರೆ: ಖರ್ಗೆ

    ವಿಕೃತ ಮನಸ್ಸಿನವರು ಪೆಟ್ರೋಲ್ ಬೆಲೆ 100 ರೂ. ದಾಟಿದ್ರೂ ಪರವಾಗಿಲ್ಲ ಅಂತಾರೆ: ಖರ್ಗೆ

    ಕಲಬುರಗಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ನಾವು ಹೇಳಿದ್ರೆ ಜನ, ವಿರೋಧ ಪಕ್ಷದವರು ಹೇಳುತ್ತಾರೆ ಅಂತಾರೆ. ಕೆಲವು ಜನ ಇಂಥಹ ವಿಕೃತ ಮನಸ್ಸಿನವರಿದ್ದಾರೆ ಅವರು 100 ರೂ. ಆಗಲಿ ಪರವಾಗಿಲ್ಲ ಎನ್ನುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

    ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ 60 ರೂಪಾಯಿಗೆ ಪೆಟ್ರೋಲ್ ದೊರಕುತಿತ್ತು. ಇದೀಗ ನೂರರ ಗಡಿ ದಾಟಿದವರು ಕೇಂದ್ರ ಸರ್ಕಾರದ ವಿರುದ್ಧ ಯಾರು ಕೂಡ ಪ್ರಶ್ನೆ ಮಾಡುತ್ತಿಲ್ಲ. ಕಚ್ಚಾ ತೈಲ ಬೆಲೆ ಕಡಿಮೆ ಇದ್ದರು, ದೇಶದಲ್ಲಿ ಪೆಟ್ರೋಲ್ ಡೀಸೆಲ್ ನೂರರ ಗಡಿ ದಾಟಿದೆ. ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಹೀಗಾಗಿ ಜನ ಸಾಮಾನ್ಯರಿಗೆ ಹೊರೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಬಂದ ಸಾಧು ಮೇಲೆ ಕಾಲಿನಿಂದ ಒದ್ದು ಹಲ್ಲೆ

    ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ಬಗ್ಗೆ ಮಾತನಾಡಿ, ಜೆಡಿಎಸ್ ಮೊದಲ ಬಾರಿಗೆ ಎರಡು ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ರೆ ಕಾಂಗ್ರೆಸ್ ಗೆ ಹಿನ್ನಡೆ ಎಂದು ತಿಳಿದುಕೊಂಡರೆ ಅದು ತಪ್ಪು ಕಲ್ಪನೆ. ಜನ ಈಗ ಜಾಗೃತರಾಗಿದ್ದಾರೆ ಜಾತ್ಯಾತೀತ ತತ್ವದ ಮೇಲೆ ಕಾಂಗ್ರೆಸ್ ನಡೆಯುತ್ತದೆ. ಹಾಗಾಗಿ ಈ ಎರಡು ಕ್ಷೇತ್ರದಲ್ಲಿ ಜನ ಕಾಂಗ್ರೆಸ್‍ಗೆ ಆಶೀರ್ವಾದ ಮಾಡುತ್ತಾರೆ. ಸಂವಿಧಾನ ಉಳಿಸಬೇಕು, ಜಾತ್ಯಾತೀತ ಇರಬೇಕು, ಬಿಜೆಪಿಗೆ ಪಾಠ ಕಲಿಸಬೇಕು ಎಂದು ಕೆಂಡಕಾರಿದರು. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

    ಛತ್ತೀಸ್‍ಗಢದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿ, ಅಲ್ಲಿ ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಪಂಜಾಬ್, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವು ಸರಿಯಾಗಿದೆ. ದೇಶದಲ್ಲೇ ಮೊದಲ ಬಾರಿಗೆ ದಲಿತ ಮುಖ್ಯಮಂತ್ರಿ ಮಾಡಿದ್ದೇವೆ. ಎಲ್ಲರೂ ಅವರಿಗೆ ಸಹಕಾರ ನೀಡಬೇಕು ಎಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ನಿರ್ಧಾರವೆ ಅಂತಿಮ ನಿರ್ಧಾರ ಎಂದರು. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

  • ನನ್ನನ್ನು ಸೋಲಿಸಿದ್ದು ಮೋದಿ, ಶಾ, ಆರ್‌ಎಸ್‌ಎಸ್‌: ಖರ್ಗೆ

    ನನ್ನನ್ನು ಸೋಲಿಸಿದ್ದು ಮೋದಿ, ಶಾ, ಆರ್‌ಎಸ್‌ಎಸ್‌: ಖರ್ಗೆ

    -ಆರ್‌ಎಸ್‌ಎಸ್‌ ಸಿದ್ದಾಂತ ಎಲ್ಲರನ್ನು ಜೀವಿಸಲು ಬಿಡಲ್ಲ
    -ನಾನು ರಾಜಕೀಯ ನಿವೃತ್ತಿ ಪಡೆಯಲ್ಲ

    ಕಲಬುರಗಿ: ನನ್ನನ್ನು ಇಲ್ಲಿನ ಜನ ಹನ್ನೊಂದು ಬಾರಿ ಗೆಲ್ಲಿಸಿದ್ದೀರಿ. ಯಾವುದೋ ಕಾರಣದಿಂದ ನಾನು ಈ ಸಲ ಸೋತೆ. ನನ್ನ ಸೋಲಿಗೆ ಕಲಬುರಗಿ ಯ ಜನ ಕಾರಣರಲ್ಲ. ಬದಲಿಗೆ ಮೋದಿ, ಶಾ ಹಾಗೂ ಆರ್‌ಎಸ್‌ಎಸ್‌ನವರು ಕುತಂತ್ರ ಮಾಡಿ ಸೋಲಿಸಿದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ.

    ನಗರದ ಜೈ ಭವಾನಿ ಫಂಕ್ಷನ್ ಪ್ಯಾಲೇಸ್ ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಜನರ ಹತ್ತಿರದಲ್ಲೇ ಇದ್ದು ಐದು ದಶಕಗಳ ಕಾಲ ಜನ ಸೇವೆ ಮಾಡಿಕೊಂಡಿದ್ದೇನೆ ಜನರಿಂದ ದೂರವಿದ್ದು ಜೀವನ ನಡೆಸುವುದು ಅಸಾಧ್ಯ. ಆದರೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತಾವು ಕಳೆದ ಒಂದು ವರ್ಷ ನಾಲ್ಕು ತಿಂಗಳಿನಿಂದ ಕಲಬುರಗಿಯ ಪುಣ್ಯಭೂಮಿಗೆ ಬರಲಾಗಲಿಲ್ಲ ಎಂದು ಖರ್ಗೆ ತಾವು ತಾಯ್ನಾಡಿಗೆ ಬರದಿರುವ ಕಾರಣ ಬಿಚ್ಚಿಟ್ಟರು. ಇದನ್ನೂ ಓದಿ: ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

    ಇಷ್ಟು ದಿನ ನಾನು ಬರಲಾಗಲಿಲ್ಲ ದೇಶದ ಇಬ್ಬರು ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ದಿನದಂದ ತಮ್ಮನ್ನೆಲ್ಲಾ ನೋಡುವ ಭಾಗ್ಯ ಇಂದು ಒದಗಿಬಂತು. ಸಂಸತ್ತಿನಲ್ಲೇ ಮೋದಿ ಬಹಿರಂಗವಾಗಿ ನನ್ನ ಸೋಲಿನ ಬಗ್ಗೆ ಹೇಳಿದ್ದರು. ಅದರಂತೆ ನಡೆದುಕೊಂಡು ಸೋಲಿಸಿದರು. ಅವರು ವಾರ್ನ್ ಮಾಡಿದ ನಂತರ ನಮ್ಮವರು ಎಚ್ಚರಗೊಳ್ಳಬೇಕಿತ್ತು. ಆದರೆ, ಅವರ ಕುತಂತ್ರ ಅರಿಯಲು ವಿಫಲರಾದರು ಎಂದು ಕಿಡಿಕಾರಿದರು.

    ಇತ್ತೀಚಿಗೆ ಪಿಎಂ ಮನೆಯಲ್ಲಿ ನಡೆದ ಮಾನವ ಹಕ್ಕುಗಳ ಕುರಿತಾದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಆಗ ಮೋದಿ ಹೇಳಿದ್ದೇನೆಂದರೆ ಖರ್ಗೆಜೀ ನೀವು ಹಲವಾರು ವರ್ಷದಿಂದ ಚುನಾವಣೆ ಗೆಲ್ಲುತ್ತಲೆ ಬಂದಿದ್ದೀರಲ್ಲ ಎಂದರು. ಆಗ ನಾನು ಉತ್ತರಿಸಿದೆ, ಮೋದಿಜೀ ನಾನು ನಲವತ್ತೊಂಬತ್ತು ವರ್ಷದಿಂದ ಚುನಾವಣೆ ಗೆಲ್ಲುತ್ತಲೇ ಬಂದಿದ್ದೆ ನೀವು ಅಡ್ಡಗಾಲು ಹಾಕದೇ ಇದ್ದಿದ್ದರೆ ಸತತ ಐವತ್ತು ಬಾರಿ ಗೆದ್ದ ಜನಪ್ರತಿನಿಧಿ ಆಗುತ್ತಿದ್ದೆ ಎಂದು ಹೇಳಿರುವುದಾಗಿ ಹೇಳಿಕೊಂಡರು.  ಇದನ್ನೂ ಓದಿ: ಅಧಿಕಾರ ಇರ್ಲಿ ಇಲ್ಲದೇ ಇರಲಿ ನಾನು ರಾಹುಲ್, ಪ್ರಿಯಾಂಕಾ ಜೊತೆ ಇರುತ್ತೇನೆ: ಸಿಧು

    ದಿನ ದಲಿತರು ಒಂದಾಗುವುದನ್ನು ಬಿಜೆಪಿ ಸಹಿಸುವುದಿಲ್ಲ. ಮೋದಿ, ಯೋಗಿ ಅವರು ದಲಿತರಿಗೆ ಹಿಂದುಳಿವರ್ಗದ ಎಷ್ಟು ಜನರಿಗೆ ಅಧಿಕಾರ ಕೊಟ್ಟಿದ್ದಾರೆ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲಾ ಜನಾಂಗದ ನಾಯಕರಿಗೆ ಮಹತ್ವದ ಖಾತೆ ಕೊಡಲಾಗಿತ್ತು. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ. ಆರ್ಟಿಕಲ್ 371 ಜೆ ದಂತಹ ಪ್ರಮುಖ ಬದಲಾವಣೆಯನ್ನು ಕಾಂಗ್ರೆಸ್ ತಂದಿದೆ. ಬಿಜೆಪಿ ಏನು ಮಾಡಿದೆ? ಮೋದಿ ಈಗಲೂ ನಮಗೆ ಕೇಳುತ್ತಾರೆ, ” ಸತ್ತರ್ ಸಾಲ್ ತುಮ್ನೆ ಕ್ಯಾ ಕೀಯಾ ” ಅಂತ ” ಅರೇ ಹಮ್ನೆ ಇತ್ನೆ ಕಿಯಾ ಇಸ್ ಲಿಯೇ ತುಮ್ ಜಿಂದಾ ಹೈ ” ನಮ್ಮ ಕಾಲದಲ್ಲಿ ಜಾರಿಗೆ ತಂದ ಯೋಜನೆಗಳಿಗೆ ತಡೆಹಿಡಿಯಲಾಗಿದೆ ಇಲ್ಲವೇ ಹೆಸರು ಬದಲಾಯಿಸಿರುವುದು ಮೋದಿ ಸಾಧನೆ. ಪೆಟ್ರೋಲ್ ಡಿಸೇಲ್, ಅಡುಗೆ ಅನಿಲ ಬೆಲೆ ಹೆಚ್ಚಾಗಿದೆ ಇದು ಬಿಜೆಪಿ ಹಾಗೂ ಮೋದಿ ಪ್ರಗತಿ ಎಂದು ಕುಟುಕಿದ ಅವರು ಬೆಲೆಗಳ ಹೆಚ್ಚಳ ಮಾಡಿರುವ ಮೋದಿ ಸರ್ಕಾರಕ್ಕೆ ಏಳು ವರ್ಷದಲ್ಲಿ 25 ಲಕ್ಷ ಕೋಟಿ ಲಾಭವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅ. 7 ರಿಂದ13 ರವರೆಗೆ ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ: ಎಸ್.ಟಿ.ಸೋಮಶೇಖರ್

    ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಹೇಳಿದ ಸುಳ್ಳಗಳನ್ನೇ ಸತ್ಯ ಎಂದು ಬಿಂಬಿಸಿ ಹರಿಬಿಡಲಾಗುತ್ತಿದೆ. ನಾನು ಸಚಿವನಾಗಿದ್ದಾಗ ರೈಲ್ವೇಯಲ್ಲಿ 14.50 ಲಕ್ಷ ನೌಕರರು ಕೆಲಸ ಮಾಡುತ್ತಿದ್ದರು ಈಗ 12.76 ಲಕ್ಷಕ್ಕೆ ಇಳಿದಿದೆ. ನಾಲ್ಕು ಇನ್ಶೂರನ್ಸ್ ಕಂಪನಿಗಳಿಗೆ ಹೊಸ ಕಾನೂನು ತಂದು ತೊಂದರೆ ಕೊಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಟೆಲಿಫೋನ್, ಬ್ಯಾಂಕ್, ಇನ್ಶೂರೆನ್ಸ್, ರೈಲ್ವೇ, ಬಿಇಎಲ್ ಕಂಪನಿಗಳಲ್ಲಿ ಸುಮಾರು ಮೂರು ಕೋಟಿ ಉದ್ಯೋಗ ಕಡಿತಗೊಳಿಸಲಾಗಿದೆ. ಇದನ್ನು ಸರ್ಕಾರವೇ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

    ಭೂ ಸಾಧಾರಣ ಕಾಯಿದೆ ತಂದು ಉಳುವವನೇ ಒಡೆಯ ಎಂದು ಮಾಡಿ ಭೂಮಿ ಇಲ್ಲದವರಿಗೆ ಭೂಮಿ ನೀಡಲಾಗಿತ್ತು. ಆದರೆ ಈಗ ಮೋದಿ ಅವರು ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟುರು. ಶ್ರೀಮಂತರೇ ಹೆಚ್ಚು ಹೆಚ್ಚು ಭೂಮಿ ತೆಗೆದುಕೊಳ್ಳಲು ಅನುಮತಿಕೊಟ್ಟರು. ಇದರಿಂದಾಗಿ ಬಡವರು ಭೂಮಿ ಕಳೆದುಕೊಂಡು ಬಡವರಾದರು. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಯಾರು ಬೇಕಾದರೂ ಎಲ್ಲಿ ಬೇಕಾದರೂ ಖರೀದಿ ಮಾಡಲು ಅನುಮತಿಕೊಟ್ಟರು. ಇವೆಲ್ಲ ಮೋದಿ ಅವರ ಸಾಧನೆಗಳು ಜನಸಾಮಾನ್ಯರು, ರೈತರು ತೀವ್ರ ತೊಂದರೆಗೊಳಗಾದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮದ ಜಾತಿಯ ಜನರು ಜೀವಿಸಬೇಕು ಆದರೆ ಆರ್‍ಎಸ್‍ಎಸ್ ಸಿದ್ದಾಂತ ಇಂತದಕ್ಕೆಲ್ಲ ಅವಕಾಶ ನೀಡುವುದಿಲ್ಲ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಬುದ್ದ, ಬಸವ ಅಂಬೇಡ್ಕರ್ ಅವರ ತತ್ವ ಸಿದ್ದಾಂತಕ್ಕೆ ವಿರೋಧ ನೀತಿಗಳ ಬಗ್ಗೆ ಜನ ಜಾಗೃತರಾಗಿರಬೇಕು. ತತ್ವಸಿದ್ದಾಂತಗಳ ವಿರೋಧ ಹೊಂದಿರುವುದಕ್ಕಾಗಿ ಬಿಜೆಪಿ, ಆರ್‌ಎಸ್‌ಎಸ್‌ನವರು ಕುತಂತ್ರ ಮಾಡಿ ನನ್ನನ್ನು ಸೋಲಿಸಿದ್ದರು, ನೀವು ಸೋಲಿಸಿದ್ದಲ್ಲ. ರಾಜ್ಯಸಭೆ ಸದಸ್ಯತ್ವ ಮುಗಿದ ನಂತರ ನೀವು ನಿವೃತ್ತರಾಗುತ್ತೀರಲ್ಲ ಎಂದು ಯಾರೋ ಒಬ್ಬರು ಕೇಳುತ್ತಿದ್ದರು. ನಾನು ಹೇಳೋದೇನೆಂದರೆ, ನಾನು ನನ್ನ ಕೊನೆಯ ಉಸಿರು ಇರುವವರೆಗೆ ಪಲಾಯನ ಮಾಡದೆ, ಜನರ ಸೇವೆಯೇ ಮಾಡುತ್ತೇನೆ. ಅದಕ್ಕೆ ರಾಜಕೀಯ ಅಧಿಕಾರದ ಅವಶ್ಯಕತೆ ಇಲ್ಲ ಎಂದರು.

    ಸಾರ್ವಜನಿಕ ಇಲಾಖೆ, ಸರ್ಕಾರಿ ಸಂಘಗಳ ಸ್ಥಾಪನೆ, ಖಾಸಗಿ ವಲಯ, ಮೈಕ್ರೋ ಇಂಡಸ್ಟ್ರೀ ಹಾಗೂ ಮೈಕ್ರೋ ಎಕಾನಮಿ ಜವಾಹರಲಾಲ್ ನೆಹರು ಅವರ ಸಾಧನೆಯಾಗಿತ್ತು. ನಿಮ್ಮ ಸಾಧನೆ ಏನು? ಸಾರ್ವಜನಿಕ ವಲಯವನ್ನು ಖಾಸಗಿಯವರ ಪಾಲು ಮಾಡಲಾಗುತ್ತಿದೆ. ವೈಟ್ ರೆವ್ಯೂಲೇಷನ್ ಹಾಗೂ ಗ್ರೀನ್ ರೆವ್ಯೂಲೇಷನ್ ನಂತಹ ಪ್ರಮುಖ ನಿರ್ಧಾರಗಳು ನೆಹರು ಅವರ ಕೊಡುಗೆಯಾಗಿದೆ. ಆರ್ಟಿಕಲ್ 371ಜೆ ದಿಂದಾಗಿ ಇಂದು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೀಟು ಸಲೀಸಾಗಿ ಸಿಗುತ್ತಿವೆ. ಏಳು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಭಾಗದಲ್ಲಿ ನೇಮಕಾತಿ ನಡೆದರೆ ಶೇ.8 ರಷ್ಟು ಉದ್ಯೋಗ ಮೀಸಲಾತಿ ಕೊಡಬೇಕು. ಇದನ್ನು ಕಾನೂನು ಮಾಡಿದ್ದು ಕಾಂಗ್ರೆಸ್ ಪಕ್ಷ, ಸೋನಿಯಾಗಾಂಧಿ. ಇಂತಹ ಮಹತ್ತರ ನಿರ್ಧಾರ ಮಾಡಿ ತನ್ನ ಕ್ಷೇತ್ರದ ಎಂಪಿ ಬೇರೆ ಯಾರಾದರು ಮಾಡಿದ್ದಾರೆಯೇ? ಹಾಗೆ ಮಾಡಿದ್ದು ತೋರಿಸಿದರೆ ನಾನು ಇಂದೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲೆಸೆದರು.

    ತೆಲಂಗಾಣದಲ್ಲಿ ಆರ್ಟಿಕಲ್ 371 ಡಿ ತರಬೇಕಾದರೆ ಜನರು ಗುಂಡೇಟು ತಿನ್ನಬೇಕಾಯಿತು, ರಕ್ತಹರಿಸಬೇಕಾಯಿತು. ಆದರೆ ನಮ್ಮಲ್ಲಿ ಯಾರು ಹಾಗೆ ಮಾಡಿದ್ದಾರೆ? ಒಂದೇ ಒಂದು ಪ್ರತಿಭಟನೆ ಆಗದೆ ಆರ್ಟಿಕಲ್ 371 ಜೆ ಜಾರಿಗೆ ಬಂದಿದೆ ಎಂದರು. ಇಂದು ದೇಶದಲ್ಲಿ ಮುಕ್ತವಾದ ಸ್ವಾತಂತ್ರ್ಯ ಯಾರಿಗಿದೆ? ಪತ್ರಿಕೆಯವರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ. ಪೆಗಾಸಸ್ ನಂತ ಸಂಸ್ಥೆಯಿಂದ ಮಾಹಿತಿ ಕಳ್ಳತನವಾಗುತ್ತಿದೆ. ಇಷ್ಟೆಲ್ಲ ಆದರೂ ಕೂಡಾ ಮೋದಿ, ಮೋದಿ, ಮೋದಿ ಎನ್ನುತ್ತಿದ್ದಾರೆ ಎಂದರು. ಇದನ್ನೂ ಓದಿ: ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

    ತತ್ವಸಿದ್ದಾಂತದ ಮೇಲೆ ನಾನು ರಾಜಕಾರಣ ಮಾಡುತ್ತೇನೆ. ಕೊನೆಯ ಉಸಿರು ಇರುವವರೆಗೆ ನಾನು ಜನರ ಪರ ಹೋರಾಡುತ್ತಲೇ ಇರುತ್ತೇನೆ. ನಿವೃತ್ತಿಯಾಗುವ ಮಾತೇ ಇಲ್ಲ. ನಮ್ಮ ಕಾಂಗ್ರೆಸ್ ಪಕ್ಷವನ್ನ ಮುಗಿಸುವುದು ಸಾಧ್ಯವೇ ಇಲ್ಲ ಎಂದರು.

    ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮುಖ್ಯ ಸಚೇತಕ ಹಾಗೂ ಶಾಸಕರಾದ ಡಾ ಅಜಯ್ ಸಿಂಗ್, ಶಾಸಕರಾದ ಕನೀಜ್ ಫಾತೀಮಾ, ಶರಣಬಸಪ್ಪಗೌಡ ದರ್ಶನಾಪುರ, ರಾಜಶೇಖರ್ ಪಾಟೀಲ್, ಎಂ. ವೈಪಾಟೀಲ್, ಮಾಜಿ ಸಚಿವರಾದ ಡಾ ಶರಣಪ್ರಕಾಶ ಪಾಟೀಲ್, ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ್, ಶರಣಪ್ಪ ಮಟ್ಟೂರು, ತಿಪ್ಪಣ್ಣಪ್ಪ ಕಮಕನೂರು, ಮಾಜಿ ಶಾಸಕರಾದ ವೆಂಕಟಪ್ಪ ನಾಯಕ, ಜಿಪಂ, ತಾಪಂ ಸದಸ್ಯರು, ಮಹಾನಗರಪಾಲಿಕೆ ಸದಸ್ಯರು ಸೇರಿದಂತೆ ಮತ್ತಿತರು ಇದ್ದರು.

  • ಡಿಸೆಂಬರ್ 9ರ ಬಳಿಕ ಗುಡ್‍ನ್ಯೂಸ್-ಮೈತ್ರಿಯ ಸುಳಿವು ನೀಡಿದ ಖರ್ಗೆ

    ಡಿಸೆಂಬರ್ 9ರ ಬಳಿಕ ಗುಡ್‍ನ್ಯೂಸ್-ಮೈತ್ರಿಯ ಸುಳಿವು ನೀಡಿದ ಖರ್ಗೆ

    ಬೆಂಗಳೂರು: ಡಿಸೆಂಬರ್ 9ರ ಬಳಿಕ ಗುಡ್‍ನ್ಯೂಸ್ ನೀಡುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೈತ್ರಿಯ ಸುಳಿವು ನೀಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ. ಇತ್ತೀಚೆಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರದ ದುರುಪಯೋಗ ನಡೆದಿದೆ. ಪ್ರತಿಯೊಂದು ಚುನಾವಣೆಗಳಲ್ಲಿ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಅಭ್ಯರ್ಥಿಗಳಿಗೆ ಹೆದರಿಸಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಹೋಗಿರುವ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಸೋಲುತ್ತಾರೆ. ಅನರ್ಹರಿಗೆ ರಾಜ್ಯದ ಜನರು ಬುದ್ಧಿ ಕಲಿಸಲಿದ್ದಾರೆ. ಎನ್‍ಸಿಪಿ ಮತ್ತು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಸ್ಪರ್ಧೆ ಮಾಡಿದ್ದ ಶೇ.79ರಷ್ಟು ಅಭ್ಯರ್ಥಿಗಳು ಸೋತಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿಯೂ ಪಕ್ಷಾಂತರಿಗಳಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

    ಉಪಚುನಾವಣೆ ಕರ್ನಾಟಕಕ್ಕೆ ಮಾತ್ರವಲ್ಲ, ಬೇರೆ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಕ್ಷುಲ್ಲಕ ಕಾರಣಗಳಿಗಾಗಿ ಪಕ್ಷ ಬಿಟ್ಟು ಹೋಗಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹೆಚ್ಚಿನ ಕೆಲಸ ಪಡೆದವರೇ ಈ ರೀತಿ ಕೆಲಸ ಆಗಿಲ್ಲ ಅಂತಾ ಮಾತನಾಡಿ ಹೋಗಿದ್ದಾರೆ. ಅದಕ್ಕೆ ಏನ್ ಹೇಳಬೇಕು ಹೇಳಿ. ನಾನು ಕೂಡ ಇನ್ನೆರಡ್ಮೂರು ದಿನ ಪ್ರಚಾರ ಮಾಡ್ತೀನಿ, ಸತ್ಯವನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಪ್ರಶ್ನಿಸಿದಾಗ ಡಿಸೆಂಬರ್ 9ರವರೆಗೂ ತಾಳ್ಮೆಯಿಂದಿರಿ. ನಂತರ ಗುಡ್‍ನ್ಯೂಸ್ ನೀಡುತ್ತೇವೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಪ್ರಚಾರ ವಿಚಾರದ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಮುಂದೆ ಸಿಎಂ ಯಾರು? ನಾಯಕತ್ವದ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ಈಗ ಕಾಂಗ್ರೆಸ್ ರಿಯಾಲಿಟಿ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದೆ. ಪ್ರತಿ ಸಾರಿ ನಾನು ಸಿಎಂ, ಎಐಸಿಸಿ ಅಧ್ಯಕ್ಷ ಎಂದು ಹೇಳಿಯೇ ನನ್ನ ಹೀಗೆ ಮಾಡಿ ಕೂರಿಸಿದ್ದೀರಾ ಎಂದು ಖರ್ಗೆ ಹಾಸ್ಯ ಚಟಾಕಿ ಹಾರಿಸಿದರು.

    ಹಣ ಬಲದ ಮೇಲೆ ಬಿಜೆಪಿ ಚುನಾವಣೆ ಗೆಲ್ಲುವ ಪ್ರಯತ್ನ ಸಾಕಷ್ಟು ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಇಂತಹ ಪ್ರಯತ್ನಗಳಲ್ಲಿ ಕೆಲವು ಸಹ ಯಶಸ್ವಿಯಾಗಿದ್ದಾರೆ. ಹಣ ನಡೆಯಲಿಲ್ಲ ಅಂದ್ರೆ ಧರ್ಮ ಜಾತಿ ಮಾತುಗಳನ್ನಾಡಿ ಜನರನ್ನ ಭಾವುಕರನ್ನಾಗಿ ಮಾಡಿ ಸಿಂಪಥಿ ಮೂಲಕ ಮತ ಪಡೆಯಲು ಮುಂದಾಗುತ್ತಾರೆ. ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಹಣದ ಹೊಳೆ ಹರಿಯುತ್ತೆ ಎಂದು ಬಿಜೆಪಿಯವರು ಪ್ರಚಾರ ಮಾಡಿದರು. ನೆರೆ ಹಾನಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಪ್ರಧಾನಿಗಳಾದ ಮೋದಿ ಅವರು ಕರ್ನಾಟಕಕ್ಕೇ ಬರಲಿಲ್ಲ. ಕರ್ನಾಟಕವನ್ನು ಮೂಸಿಯೂ ನೋಡಲಿಲ್ಲ. ಪ್ರಧಾನಿಗಳು ಯಡಿಯೂರಪ್ಪರ ಮೇಲಿನ ಸಿಟ್ಟನ್ನು ಕರ್ನಾಟಕದ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಪ್ರವಾಹಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಣ ತರಲು ರಾಜ್ಯದ ಬಿಜೆಪಿ ನಾಯಕರು ಪ್ರಯತ್ನಿಸಲಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಬರೀ ಸರ್ಕಾರವನ್ನ ಹೇಗೆ ಉಳಿಸಿಕೊಳ್ಳಬೇಕು ಅನ್ನೋದ್ರಲ್ಲೇ ತೊಡಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಂವಿಧಾನ ಉಳಿಸುವುದಕ್ಕೋಸ್ಕರ ಮೈತ್ರಿ ಪಕ್ಷಗಳ ಜತೆ ಮಾತುಕತೆಗೆ ಸಿದ್ಧವಾಗಿದ್ದೇವೆ. ಮಹಾರಾಷ್ಟ್ರದಲ್ಲಿ ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಹೊಂದಾಣಿಕೆಗೆ ನಮ್ಮ ಅಧ್ಯಕ್ಷರಿಗೆ ಇಷ್ಟ ಇರಲಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದ್ದರು. ಆದರೆ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕೆಂದು ಬಹುತೇಕ ಪಕ್ಷಗಳು ಮನವಿ ಮಾಡಿದ್ದವು. ಸಂವಿಧಾನ ಉಳಿವಿವಾಗಿ ಯುಪಿಎ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಹೋಗುತ್ತೇವೆ ಎಂದು ತಿಳಿಸಿದರು.

    https://www.youtube.com/watch?v=_U7Ge3cF018

  • ಖರ್ಗೆಗೆ ಪುತ್ರ ವ್ಯಾಮೋಹ – ನಾವು ನಿಮ್ಮ ಮಕ್ಕಳಂತೆ ಅಲ್ವಾ ಎಂದ್ರು ಉಮೇಶ್ ಜಾಧವ್

    ಖರ್ಗೆಗೆ ಪುತ್ರ ವ್ಯಾಮೋಹ – ನಾವು ನಿಮ್ಮ ಮಕ್ಕಳಂತೆ ಅಲ್ವಾ ಎಂದ್ರು ಉಮೇಶ್ ಜಾಧವ್

    – ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ ಎಂದಿದ್ದ ಖರ್ಗೆಗೆ ತಿರುಗೇಟು!

    ಕಲಬುರಗಿ: ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ ಎಂದು ಕಿಡಿಕಾರಿದ್ದ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ತಿರುಗೇಟು ನೀಡಿದ್ದು, ಜಾಧವ್ ಡೈರಿಯಲ್ಲಿ ಹೊಟ್ಟೆ ಕಿಚ್ಚಿನ ಶಬ್ದ ಇಲ್ಲ. ಖರ್ಗೆ ಅವರು ಪುತ್ರ ವ್ಯಾಮೋಹದಿಂದ ಪ್ರಿಯಾಂಕ್ ಖರ್ಗೆ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಖರ್ಗೆಯವರು ಪುತ್ರ ವ್ಯಾಮೋಹದಿಂದ ಪ್ರಿಯಾಂಕ್ ಖರ್ಗೆಯವರನ್ನು ರಕ್ಷಿಸುತ್ತಿದ್ದಾರೆ. ಆದರೆ ಉಮೇಶ್ ಜಾಧವ್ ಮತ್ತು ಅಜಯ್ ಸಿಂಗ್ ಇಬ್ಬರು ಕೂಡ ನಿಮ್ಮ ಮಕ್ಕಳ ಇದ್ದಂತೆ. ಸಾಮಾಜಿಕ ನ್ಯಾಯದ ಪರವಾಗಿ ಮಾತಾಡುವ ಖರ್ಗೆಯವರಿಗೆ ನಾನು, ಅಜಯ್ ಸಿಂಗ್, ಖನೀಜ್ ಫಾತಿಮಾ ಕಾಣಿಸಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

    ತಮ್ಮ ಹೇಳಿಕೆಯಲ್ಲಿ ಅಜಯ್ ಸಿಂಗ್ ಅವರ ಹೆಸರನ್ನು ಪ್ರಸ್ತಾಪ ಮಾಡುವ ಮೂಲಕ ತಮ್ಮ ಬೆಂಬಲಕ್ಕೆ ಅಜಯ್ ಇದ್ದಾರೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಅಲ್ಲದೇ ಹಲವರು ನಾಯಕರು ದೈಹಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕೂಡ ನನ್ನ ಜೊತೆ ಮಾನಸಿಕವಾಗಿ ಇದ್ದಾರೆ. ಜಾರಕಿಹೊಳಿ ಅವರು ನನ್ನ ಸ್ನೇಹಿತರು ನಿಜ. ಆದರೆ ಸದ್ಯಕ್ಕೆ ನನ್ನ ಜೊತೆ ಯಾರು ಸಂಪರ್ಕ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಜಾಧವ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿರುವ ಖರ್ಗೆ ಅವರೆ ಮತ್ತೆ ನನ್ನ ಬಗ್ಗೆ ಮಾತನಾಡುತ್ತಾರೆ. ದೆಹಲಿಯಲ್ಲಿ ಕೂತು ತಮಗೆ ಬೇಕಾದವರಿಗೆ ಸಚಿವ ಸ್ಥಾನ ಕೊಡಿಸುತ್ತಾರೆ. ಕೇಳಿದರೆ ನನಗೆ ಅಷ್ಟು ಶಕ್ತಿ ಇಲ್ಲ ಎನ್ನುತ್ತಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಸೇರಿದಂತೆ ಬಳ್ಳಾರಿ ಬೇರೆ ಜಿಲ್ಲೆಗಳಲ್ಲಿ ಯಾರು ಎಂಎಲ್‍ಸಿ, ಸಚಿವರು ಆಗಿದ್ದಾರೆ ಎನ್ನುವುದು ತಿಳಿದಿದೆ. ಬೇರೆ ನಾಯಕರು ಏಕೆ ಸಚಿವ ಸ್ಥಾನ ಪಡೆಯಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅವಗಿಂತ ಮೇಲಿನ ಅಧಿಕಾರಕ್ಕೆ ಬರಲು ಬೇರೆ ಯಾರಿಗೂ ಅವಕಾಶವಿಲ್ಲ ಎಂಬುವುದು ಎಲ್ಲರಿಗೂ ತಿಳಿದಿದೆ ಎಂದರು.

    ಇದೇ ವೇಳೆ ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಕುರಿತು ಸ್ಪಷ್ಟನೆ ನೀಡಿದ ಅವರು, ವಿಧಾನಸಭಾ ಸ್ಪೀಕರ್ ಅವರ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ. ಹೀಗಾಗಿ ನನ್ನ ರಾಜೀನಾಮೆ ಅಂಗಿಕಾರ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಿಜೆಪಿಯವರು ಜನರಿಗೆ ಹೀಗೆ ಮೋಸ ಮಾಡ್ತಾಯಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಬಿಜೆಪಿಯವರು ಜನರಿಗೆ ಹೀಗೆ ಮೋಸ ಮಾಡ್ತಾಯಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ನಾವು ಮಾಡಿದ ಕಾರ್ಯಕ್ರಮಗಳಿಗೆ ಬಿಜೆಪಿಯಿಂದ ಹೊಸ ಹೆಸರು. ಇದು ಬಿಜೆಪಿಯವರಿಂದ ಜನರಿಗೆ ಆಗ್ತಿರುವ ಮೋಸ. ಇವರಿಗೆ 40 ತಿಂಗಳಲ್ಲಿ ಒಂದು ಸಣ್ಣ ರೈಲು ನಡೆಸುವುದಕ್ಕಾಗಲ್ಲ. ಇವರ ಅವಧಿಯಲ್ಲಿ 27 ರೈಲು ದುರಂತಗಳು ಜರುಗಿವೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ನಗರದಲ್ಲಿ ಕೆಪಿಸಿಸಿ, ಒಬಿಸಿ ಘಟಕದ ವತಿಯಿಂದ ಪುರಭವನದಲ್ಲಿ ಮಾಜಿ ಸಿಎಂ ದಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬುಲೆಟ್ ರೈಲು ತರುತ್ತವೆ ಅಂತಿದ್ದಾರೆ. ಮೊದಲು ರೈಲ್ವೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ. ಅದು ಬುಲೆಟ್ ಟ್ರೈನ್ ತರ್ತಿರೋದು  ಕಾರ್ಪೋರೇಟ್  ಕುಳಗಳಿಗಾಗಿ ಜನರಿಗಾಗಿಯಲ್ಲ ಎಂದರು.

    500 ಕಿ.ಮೀ ಬುಲೆಟ್ ಟ್ರೈನ್ 1 ಲಕ್ಷ ಕೋಟಿ ರೂ. ಖರ್ಚು ಮಾಡ್ತಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್‍ಗೂ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಕ್ಲಬ್‍ಗಳಿಗೆ ಬಿಜೆಪಿಯವರು ಯಾಕೆ ವಿರೋಧಿಸ್ತಿಲ್ಲ. ಅದು ಸರ್ಕಾರಿ ಜಾಗದಲ್ಲಿ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ ಎಂದು ಹೇಳಿದರು.

    ಬಿಜೆಪಿಯವ್ರು ಮೀಸಲಾತಿಯನ್ನ ರದ್ದು ಮಾಡಲು ಯೋಚಿಸ್ತಿದ್ದಾರೆ. ಮೋದಿ ಅವರಿಗೆ ಅಧಿಕಾರ ಕೊಟ್ರೆ ಡಿಕ್ಟೇಟರ್ ಶಿಪ್ ಬರುತ್ತೆ. ಮೋದಿ ಆಡಳಿತದಿಂದ ಪ್ರಜಾಪ್ರಭುತ್ವ ಬರಲ್ಲ. ಯುವಜನ ಇದನ್ನು ಮನಗಾಣಬೇಕು. ಈ ದೇಶದ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಆದರೆ ಈ ದೇಶ ಉಳಿಯಬೇಕಾದರೆ ಕಾಂಗ್ರೆಸ್ ಆಡಳಿತ ಬರಬೇಕು. ಗೋರಕ್ಷಣೆ ಹೆಸರಲ್ಲಿ ಗೋರಕ್ಷಕರು ಅಮಾಯಕರ ಪ್ರಾಣ ತೆಗೆಯುತ್ತಿದ್ದಾರೆ. ಹಾಲು ಕೊಂಡೊಯ್ಯುವರ ಮೇಲೂ ಗೋರಕ್ಷಕರಿಂದ ಹಲ್ಲೆ ಆಗ್ತಿದೆ. ಹಿಂದೂಸ್ತಾನವಾಗಿಯೇ ಉಳಿಸಿ ಹಿಂಸೆಯ ಸ್ಥಾನ ಮಾಡಬೇಡಿ ಎಂದರು.

    ರಾಜೀವ್ ಗಾಂಧಿ ಯುವ ಸಮೂಹಕ್ಕೆ ರಾಜಕೀಯದಲ್ಲಿ ಅವಕಾಶ ಕೊಡಬೇಕೆಂದು ಅವರ ಬಯಕೆಯಾಗಿತ್ತು. ಅದಕ್ಕಾಗಿ ಅವರು 18 ವರ್ಷಕ್ಕೆ ಮತದಾನಕ್ಕೆ ಅವಕಾಶ ಕೊಟ್ರು. ಹಾಗೆ ಅಧಿಕಾರ ವಿಕೇಂದ್ರಿಕರಣಕ್ಕೆ ಸಹ ಅವಕಾಶ ಮಾಡಿಕೊಟ್ಟಿದ್ದಾರೆ. ಮೊಬೈಲ್, ಕಂಪ್ಯೂಟರ್ ಪರಿಚಯ ಮಾಡಿದಾಗ ತುಂಬಾ ಜನ ವಿರೋಧಿಸಿದರು. ಆದರೆ ಅವತ್ತು ಟೀಕೆ ಮಾಡಿದವರೇ ಇವತ್ತು ನಾಲ್ಕು ನಾಲ್ಕು ಮೊಬೈಲ್ ಇಟ್ಕೊಂಡಿದ್ದಾರೆ ಎಂದು ಹೇಳಿದರು.

    ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸಾಧಕರಿಗೆ ಅರಸು ಗೌರವ ಪುರಸ್ಕಾರವನ್ನು ನೀಡಲಾಯಿತು. ಸಾಹಿತಿ ಚನ್ನಣ್ಣ ವಾಲೀಕಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ ವಾಡ್ ಮತ್ತು ವೇದಾ ಕೃಷ್ಣಮೂರ್ತಿಗೆ ಗೌರವ ಪುರಸ್ಕಾರ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಸಂಸದರಾದ ಮುನಿಯಪ್ಪ, ಸಚಿವ ಕೆ ಜೆ ಜಾರ್ಜ್, ಎಂಎಲ್‍ಸಿ ಬೋಸ್ ಇದ್ದರು.