Tag: ಮಲ್ಪೆ

  • ಮಲ್ಪೆಯ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

    ಮಲ್ಪೆಯ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

    ಉಡುಪಿ: ಜಿಲ್ಲೆಯ ಮಲ್ಪೆ (Malpe) ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಶಿಶುವಿನ ತಾಯಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದರಿಂದ ಅಪರಿಚಿತ ವ್ಯಕ್ತಿ ಮೇಲೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸಿದಾಗ ಮಗುವಿನ ತಾಯಿ ಯಾರೆಂದು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಕೇಸ್‌ – ಗುಂಡೇಟಿಗೆ ಬಲಿಯಾದ ಆರೋಪಿ ಫೋಟೊ ರಿಲೀಸ್‌

    ಪ್ರಕರಣ ಕುರಿತು ಉಡುಪಿ ಎಸ್‌ಪಿ ಡಾ.ಅರುಣ್ ಕುಮಾರ್ ಮಾತನಾಡಿ, ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನವಜಾತ ಶಿಶು ಶವ ಪತ್ತೆ ಪ್ರಕರಣ ದಾಖಲಾಗಿದೆ. ಜಾಮಿಯಾ ಮಸೀದಿ ಆವರಣದ ಶೌಚಾಲಯದಲ್ಲಿ ಪತ್ತೆಯಾಗಿದೆ. ಕಾರ್ಮಿಕರಿಗೋಸ್ಕರ ನಿರ್ಮಿಸಿದ್ದ ಶೌಚಾಲಯದಲ್ಲಿ ಶವ ಪತ್ತೆಯಾಗಿತ್ತು. ಮಸೀದಿಯವರು ಪ್ರಕರಣ ಗಮನಕ್ಕೆ ಬಂದಾಗ ದೂರು ನೀಡಿದ್ದಾರೆ. ಈ ಮಗುವಿನ ಶವ ಎಲ್ಲಿಂದ ಬಂತು ಎಂದು ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು.

    ಸ್ಥಳೀಯ ಯುವತಿಯೊಬ್ಬಳ ಮಗು ಇದು ಎಂಬುದು ಗೊತ್ತಾಗಿದೆ. ಆಕೆಯಿಂದ ಸ್ವ-ಇಚ್ಛಾ ಹೇಳಿಕೆ ಪಡೆಯಲಾಗಿದೆ. ಆಕೆ ತನ್ನದೇ ಮಗು ಎಂದು ಒಪ್ಪಿಕೊಂಡಿದ್ದಾಳೆ. ಏಳೂವರೆಯಿಂದ ಎಂಟು ತಿಂಗಳು ನಡುವಯಸ್ಸಿನ ಭ್ರೂಣ ಇದಾಗಿದೆ. ಯಾವುದೇ ಪ್ರೊಸೀಜರ್ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಏಕಾಏಕಿ ಹೊಟ್ಟೆನೋವು ಬಂದಿರುವುದರಿಂದ ಶೌಚಾಲಯಕ್ಕೆ ತೆರಳಿದ್ದಾಳೆ. ಶೌಚಾಲಯದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಸದ್ಯ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಕೆಲವೊಂದು ಅನುಮಾನಾಸ್ಪದ ಆಡಿಯೋಗಳು ವೈರಲ್ ಆಗಿವೆ. ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ವಿಜಯನಗರ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆ – ವರುಣನ ಅಬ್ಬರಕ್ಕೆ ನೆಲಕಚ್ಚಿದ ಪಪ್ಪಾಯ

  • ಉಡುಪಿ| ಸೇಂಟ್ ಮೇರಿಸ್ ದ್ವೀಪ ಬಳಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆ

    ಉಡುಪಿ| ಸೇಂಟ್ ಮೇರಿಸ್ ದ್ವೀಪ ಬಳಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆ

    – ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೇ ಮೀನುಗಾರರು ಪರದಾಟ

    ಉಡುಪಿ: ಮಲ್ಪೆ ಆಳ ಸಮುದ್ರದಲ್ಲಿ ಓಮನ್ ಬೋಟ್ ಪತ್ತೆಯಾಗಿದೆ. ಉಡುಪಿ ಸೇಂಟ್ ಮೇರಿಸ್ ದ್ವೀಪ ಸಮೀಪ ಓಮನ್ ಮೂಲದ ಮೀನುಗಾರಿಕಾ ಬೋಟ್ ಕಂಡುಬಂದಿದೆ.

    ಓಮನ್ ಹಾರ್ಬರ್‌ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬೋಟ್ ಬಂದಿದೆ. ಬೋಟ್‌ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ. ಇದರಲ್ಲಿ ತಮಿಳುನಾಡು ಮೂಲದ ತಂಡ ಮೀನುಗಾರಿಕ ವೃತ್ತಿ ನಡೆಸುತ್ತಿತ್ತು.

    ಸಂಬಳ ಹಾಗೂ ಆಹಾರ ನೀಡದೆ ಓಮನ್ ಬೋಟ್ ಮಾಲೀಕ ಸತಾಯಿಸುತ್ತಿದ್ದ. ಪಾಸ್‌ಪೋರ್ಟ್ ವಶಕ್ಕೆ ಪಡೆದು ಚಿತ್ರಹಿಂಸೆ ನೀಡಿದ್ದ. ಪ್ರಾಣ ಭಯದಿಂದ ಓಮನ್ ಹಾರ್ಬಾರ್‌ನಿಂದ ಮೀನುಗಾರರು ತಪ್ಪಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

    ಸಮುದ್ರ ಮಾರ್ಗದಲ್ಲಿ 4 ಸಾವಿರ ಕಿಮೀ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ವಿದೇಶಿ ಬೋಟ್ ಬಂದಿತ್ತು. ಕಾರವಾರ ದಾಟಿ ಮಲ್ಪೆಯತ್ತ ಪ್ರಯಾಣ ಬೆಳೆಸಿದೆ. ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೆ ಮೀನುಗಾರರು ಪರದಾಡಿದ್ದಾರೆ.

    ಮೀನುಗಾರರ ಮಾಹಿತಿಯಿಂದ ಬೋಟ್ ಹಾಗೂ ಮೀನುಗಾರರನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿದ್ದಾರೆ. ಅಮರ್ಥ್ಯ ಕೋಸ್ಟ್ ಗಾರ್ಡ್ಶಿಪ್‌ನಿಂದ ವಿದೇಶಿ ಹಡಗು ಹಾಗೂ ಮೀನುಗಾರರನ್ನು ವಶಕ್ಕೆ ಪಡೆಯಲಾಗಿದೆ. ಪಾಸ್‌ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಉಡುಪಿ: ಮಲ್ಪೆಯಲ್ಲಿ (Malpe)  ಕಳೆದ ಮೂರು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ7 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು (Bangladesh Citizen) ಉಡುಪಿ ಪೊಲೀಸರು ಬಂಧಿಸಿದ್ದಾರೆ.

    ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಬಂಧಿತರು. ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದಿದ್ದ ಬಾಂಗ್ಲಾದೇಶೀಯರನ್ನು ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪೈಕಿ ಉಸ್ಮಾನ್ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ. ಆರೋಪಿಗಳು ಸಿಕ್ಕಿಂನಲ್ಲಿ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿದ್ದರು.

     

    ಸಿಕ್ಕಿಬಿದ್ದಿದ್ದು ಹೇಗೆ?
    ಬಂಧನಕ್ಕೆ ಒಳಗಾಗಿರುವ ಮಾಣಿಕ್‌ ಹುಸೈನ್‌ ನಕಲಿ ಪಾಸ್‌ಪೋರ್ಟ್‌ ಬಳಸಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈ ಪರಾರಿಯಾಗಲು ಯತ್ನಿಸಿದ್ದ. ವಿಮಾನ‌ ನಿಲ್ದಾಣದಲ್ಲಿ ದಾಖಲಾತಿ ಪರಿಶೀಲಿಸುವ ಸಂದರ್ಭದಲ್ಲಿ ಅನುಮಾನಗೊಂಡ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಆತ ಅಕ್ರಮವಾಗಿ ಬಾಂಗ್ಲಾದೇಶದಿಂದ ನುಸುಳಿ ನಕಲಿ ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌ ಪಡೆದ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಈತನ ಬಗ್ಗೆ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈತನನ್ನು ಬಂಧಿಸಿದ ಬಳಿಕ ಈತನೊಂದಿಗೆ ಮತ್ತಷ್ಟು ಜನ ಬಾಂಗ್ಲಾದೇಶಿ ಪ್ರಜೆಗಳು ದೇಶದೊಳಗೆ ನುಸುಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈತ ನೀಡಿದ ಮಾಹಿತಿ ಆಧಾರದಲ್ಲಿ ಮತ್ತೆ 6 ಮಂದಿಯನ್ನು ಉಡುಪಿಯ (Udupi) ಮಲ್ಪೆ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ.

  • ಅಲೆ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್

    ಅಲೆ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್

    ಕಾರವಾರ: ಅರಬ್ಬೀ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತದಿಂದ ಮೀನುಗಾರಿಕೆಗೆ (Fishing) ತೆರಳಿದ್ದ ಮಲ್ಪೆ ಬೋಟ್‌ಗೆ (Malpe Boat) ಭಾರೀ ಅಲೆಗಳ ಕಾರಣದಿಂದ ಹಾನಿಯಾಗಿ ಸಮುದ್ರಭಾಗದಲ್ಲಿ ಸಿಲುಕಿಕೊಂಡಿದೆ.

    ಭಾರೀ ಅಲೆಗಳ ಕಾರಣದಿಂದ ಮಲ್ಪೆ ಮೂಲದ ಬೋಟ್ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಬಲೆ‌ ಸಿಲುಕಿಕೊಂಡ ಕಾರಣ ಮುಂದೆ ಸಾಗಲಾಗದೇ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಕೂಡಲೇ ಮೀನುಗಾರರನ್ನು ರಕ್ಷಿಸಿ ಭಟ್ಕಳ ಮೂಲದ ಬೋಟ್‌ಗೆ ಹಗ್ಗ ಕಟ್ಟಿ ಎಳೆದು ತರಲಾಗುತ್ತಿತ್ತು. ಇದನ್ನೂ ಓದಿ: ಬಿಜೆಪಿಗೆ ರವೀಂದ್ರ ಜಡೇಜಾ ಸೇರ್ಪಡೆ

    ತೀರ ಪ್ರದೇಶಕ್ಕೆ ಎಳೆದು ತರುವ ಮುನ್ನವೇ ಹಗ್ಗ ತುಂಡಾಗಿ ಭಟ್ಕಳದ (Bhatkal) ಹೆಬಳೆ ಪಂಚಾಯತ್‌ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಸದ್ಯ ಬೋಟ್‌ ಸಿಲುಕಿಕೊಂಡಿದೆ.

    ಅಲೆಗಳ ಅಬ್ಬರ ಹೆಚ್ಚಾಗ್ಗಿರುವುದರಿಂದ ಬೋಟ್‌ ಅನ್ನು ಹೊರತರಲಾರದೇ ಹಾಗೆಯೇ ಬಿಡಲಾಗಿದೆ.

  • 10 ವರ್ಷಗಳಿಂದ ಮತ ಹಾಕಿದ್ದಕ್ಕೆ ಏನ್ ಮಾಡಿದ್ದೀರಿ?- ಮೀನುಗಾರರಿಂದ ಕರಂದ್ಲಾಜೆಗೆ ತರಾಟೆ

    10 ವರ್ಷಗಳಿಂದ ಮತ ಹಾಕಿದ್ದಕ್ಕೆ ಏನ್ ಮಾಡಿದ್ದೀರಿ?- ಮೀನುಗಾರರಿಂದ ಕರಂದ್ಲಾಜೆಗೆ ತರಾಟೆ

    ಉಡುಪಿ: ಇಲ್ಲಿನ (Udupi) ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ (National Highways Authority) ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಮೀನುಗಾರರ ಮುಖಂಡರು (Fishermen Leaders) ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

    ಮಲ್ಪೆ – ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಮೀನುಗಾರರ ಮುಖಂಡ ಕಿಶೋರ್ ಡಿ.ಸುವರ್ಣ ತಕರಾರು ತೆಗೆದಿದ್ದಾರೆ. ಈ ವೇಳೆ ಸರ್ವಋತು ಮಲ್ಪೆ ಬಂದರಿನ ಬಗ್ಗೆ ನಿಮಗೆ ನಿರ್ಲಕ್ಷ್ಯ ಏಕೆ? ಮಲ್ಪೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿಲ್ಲ. ರಸ್ತೆಯ ಸರ್ವೆ, ಪರಿಹಾರದ ಬಗ್ಗೆ ಜನರಿಗೆ ಗೊಂದಲಗಳಿವೆ. ಭೂಮಿಯ ಪರಿಹಾರ ಕಾರ್ಯ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ. ಕೋಟ್ಯಂತರ ಆದಾಯ ಇರುವ ಈ ರಸ್ತೆ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಏಕೆ? ಎಂದು ಸಚಿವೆಯನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಮ್ಮ ಹೊಟ್ಟೆ ಹಸಿಯುವಂತೆ ಮಾಡಿ ಉತ್ತರ ಪ್ರದೇಶಕ್ಕೆ ಅನುದಾನ ಕೊಡಬೇಡಿ: ಕೇಂದ್ರಕ್ಕೆ ಸಿಎಂ ಚಾಟಿ

    ಅಲ್ಲದೇ ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ ಗೆಲ್ಲಿಸಿದ್ದೇವೆ. ನೀವು ನಮ್ಮ ಮೇಲೆ ಯಾಕೆ ವಿಶ್ವಾಸ ಇಟ್ಟಿಲ್ಲ? ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ? ರಸ್ತೆಗೆ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಕರೆದಿಲ್ಲ ಎಂದು ಮನವಿ ನೀಡಲು ಬಂದ ಮೀನುಗಾರರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು?

  • ಮಲ್ಪೆ ಕಡಲಲ್ಲಿ ಕರಿ ಸುಳಿಗಾಳಿ – ಆಗಸಕ್ಕೆ ಚಿಮ್ಮಿದ ಸಮುದ್ರದ ನೀರು

    ಮಲ್ಪೆ ಕಡಲಲ್ಲಿ ಕರಿ ಸುಳಿಗಾಳಿ – ಆಗಸಕ್ಕೆ ಚಿಮ್ಮಿದ ಸಮುದ್ರದ ನೀರು

    ಉಡುಪಿ: ಮಲ್ಪೆ ಕಡಲಿನಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡಿದೆ. ಸೂರ್ಯಾಸ್ತದ ಸಂದರ್ಭ ಆಕಾಶದಲ್ಲಿ ಕಾರ್ಮೋಡ ಆವರಿಸಿತ್ತು. ಇತ್ತ ತುಂತುರು ಮಳೆ ಕೂಡ ಆರಂಭವಾಗಿತ್ತು. ಈ ಸಂದರ್ಭ ಸಮುದ್ರದ ನಡುವೆ ಸುಳಿಗಾಳಿ ಎದ್ದಿದೆ.

    ಬಿಸಿಲು ಮತ್ತು ತಂಪಿನ ವಾತಾವರಣ ಏಕಕಾಲದಲ್ಲಿ ನಿರ್ಮಾಣವಾದ ಸಂದರ್ಭ ನಿರ್ವಾತ ಪ್ರದೇಶ ಉಂಟಾಗಿ ಸಮುದ್ರದ ನೀರು ಆಗಸಕ್ಕೆ ಚಿಮ್ಮಿದೆ. ಮಲ್ಪೆ ಕಡಲತೀರದಲ್ಲಿ ಸಾವಿರಾರು ಪ್ರವಾಸಿಗರು ಸೇರಿದ್ದರಿಂದ ಅಪರೂಪದ ದೃಶ್ಯವನ್ನು ಎಲ್ಲರೂ ಕಣ್ತುಂಬಿಕೊಂಡರು. ಇದನ್ನೂ ಓದಿ: ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್

    ಸುಳಿಗಾಳಿಗೆ ಮೀನುಗಾರಿಕಾ ಬೋಟ್ ಸಿಲುಕಿದ್ದರೆ ಅವಘಡ ಸಂಭವಿಸುತ್ತಿತ್ತು. ಈ ಹಿಂದೆ ಒಂದು ಬೋಟ್ ಮಗುಚಿಬಿದ್ದಿತ್ತು. ಬೋಟ್‍ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿತ್ತು ಎಂದು ಸ್ಥಳೀಯರೊಬ್ಬರು ಈ ಹಿಂದಿನ ಮಾಹಿತಿ ಹಂಚಿಕೊಂಡಿದ್ದು, ಬೇಸಿಗೆ ಕಾಲದಲ್ಲಿ ಕಾರ್ಮೋಡ ಆವರಿಸಿ ಮಳೆಯಾದರೆ ಸಮುದ್ರದಲ್ಲಿ ಸುಳಿಗಾಳಿ ಕಾಣಿಸುತ್ತದೆ ಎಂದು ಈ ಹಿಂದಿನ ಘಟನೆ ಬಗ್ಗೆ ಮೆಲುಕು ಹಾಕಿದರು.

  • ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ

    ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ

    ಉಡುಪಿ: ಹಿಜಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

    ಸೈಪ್ ಹಲ್ಲೆಗೊಳಗಾದ ಯುವಕ. ಮಲ್ಪೆಯಲ್ಲಿರುವ ಹೈದರ್ ಅಲಿ ಎಂಬವರ ಬಿಸ್ಮಿಲ್ಲಾ ಹೋಟೆಲ್‍ಗೆ ಆಗಮಿಸಿದ 70 -100 ಮಂದಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ದುಷ್ಕರ್ಮಿಗಳು ಹೊಟೇಲ್‍ನಲ್ಲಿದ್ದ ಅವರ ಮಗ ಸೈಪ್(20) ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಹೋಟೆಲಿನ ಗಾಜುಗಳು ಪುಡಿಯಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಿಜಬ್‍ಧಾರಿಗೆ ಬ್ಯಾಂಕ್ ವಹಿವಾಟ ನಡೆಸದಂತೆ ನಿರ್ಬಂಧ

    ಹಲ್ಲೆಗೆ ಒಳಗಾಗಿರುವ ಸೈಫ್‍ನನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹಿಜಬ್ ದೂರುದಾರೆ ಹಜ್ರಾ ಶಿಫಾ ಟ್ವೀಟ್ ಮಾಡಿ, ಹಿಜಬ್‍ನ್ನು ಮುಂದುವರಿಸಿದ್ದಕ್ಕಾಗಿ ನನ್ನ ಅಣ್ಣನ ಮೇಲೆ ಹಾಗೂ ಹೊಟೇಲ್ ಮೇಲೆ ದಾಳಿಯಾಗಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಸಂಘಪರಿವಾರದ ಯುವಕರಿಂದ ಹಲ್ಲೆ ಎಂಬ ಆರೋಪಿಸಿದ್ದಾರೆ. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

  • ಮಲ್ಪೆ ಬಂದರಿನಲ್ಲಿ ಸಿಕ್ತು ಹೆಲಿಕಾಪ್ಟರ್ ಫಿಶ್- ಭಾರೀ ಗಾತ್ರದ ಮೀನು ನೋಡಿ ಜನ ಶಾಕ್

    ಮಲ್ಪೆ ಬಂದರಿನಲ್ಲಿ ಸಿಕ್ತು ಹೆಲಿಕಾಪ್ಟರ್ ಫಿಶ್- ಭಾರೀ ಗಾತ್ರದ ಮೀನು ನೋಡಿ ಜನ ಶಾಕ್

    ಉಡುಪಿ: ಅರಬ್ಬೀ ಸಮುದ್ರದಿಂದ ಭಾರೀ ಗಾತ್ರದ ಹೆಲಿಕಾಪ್ಟರ್ ಫಿಶ್‍ನನ್ನು ಬಲೆಹಾಕಿ ಹಿಡಿಯಲಾಗಿದೆ. ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೆಲಿಕಾಪ್ಟರ್ ಮೀನಿನ ಗಾತ್ರ ಆಕಾರ ನೋಡಿದರೆ ಆಶ್ಚರ್ಯಗೊಳ್ಳುತ್ತಾರೆ.

    Helicopter fish

    ಉಡುಪಿಯ ಮಲ್ಪೆ ಬಂದರಿನಲ್ಲಿ ಭಾರೀ ಗಾತ್ರ ಉದ್ದ ಬಾಲ, ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆಯಿರುವ ಬಲು ಅಪರೂಪದ ಮೀನು ಸಿಕ್ಕಿದೆ. ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನಲ್ಲಿ ಬಲೆ ಬೀಸಲಾಗಿತ್ತು. ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರೀ ಗಾತ್ರದ ಈ ಮೀನು ಬಿದ್ದಿದೆ. ಇದನ್ನೂ ಓದಿ:  ಅತ್ಯಾಚಾರಕ್ಕೆ ನಿರಾಕರಿಸಿದ ಗೃಹಿಣಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ

    Helicopter fish

    ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದೆ. ಹೆಲಿಕಾಪ್ಟರ್ ಫಿಶ್ ಅಂತ ಅಡ್ಡ ಹೆಸರಿದೆ. ಭಾರೀ ಗಾತ್ರದ ಮೀನು 84 ಕಿಲೋ ತೂಗುತ್ತಿತ್ತು. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ ನ ಮಾಂಸ ಇಷ್ಟ ಇಲ್ಲ. ಇಲ್ಲಿನವರಿಗೆ ಅದರ ರುಚಿ ಹಿಡಿಸುವುದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್ ನ ಮಾಂಸವನ್ನು ಖರೀದಿ ಮಾಡುತ್ತಾರೆ. ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ನೆಮ್ಮಿನನ್ನು ರವಾನೆ ಮಾಡಲಾಯಿತು. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‍ನವರು ದೇಶ ಭಕ್ತರಾ?: ರಾಮಲಿಂಗಾರೆಡ್ಡಿ

    Helicopter fish

    ಬೋಟ್ ಮಾಲೀಕ ಲುಕ್ಮನ್ ಈ ಕುರಿತಂತೆ ಮಾತನಾಡಿ, ಆಳ ಸಮುದ್ರದಲ್ಲಿ ವಿಭಿನ್ನ ಜಾತಿಯ ಮೀನುಗಳು ಬಲೆಗೆ ಬೀಳುತ್ತವೆ ಮನುಷ್ಯರು ಬಳಸುವ ಮೀನುಗಳನ್ನು ನಾವು ತೆಗೆದುಕೊಂಡು ದಡಕ್ಕೆ ಬರುತ್ತೇವೆ. ತಿನ್ನದ ಜಾತಿಯ ಅದೆಷ್ಟೋ ಮೀನುಗಳನ್ನು ಸಮುದ್ರಕ್ಕೆ ಎಸೆದು ಬರುತ್ತೇವೆ. ಹೆಲಿಕಾಪ್ಟರ್ ಫಿಶ್ ಮಾಂಸದ ರುಚಿ ಉಡುಪಿ-ಮಂಗಳೂರು ಮತ್ತು ಕರ್ನಾಟಕದ ಜನಕ್ಕೆ ಇಲ್ಲ. ಕೇರಳದ ಜನ ಇದನ್ನು ಮಾಂಸ ಮಾಡಿ ಬೇರೆ, ಬೇರೆ ಖಾದ್ಯಗಳಿಗಾಗಿ ಬಳಸುತ್ತಾರೆ ಎಂದರು. ಇದನ್ನೂ ಓದಿ: ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ- ಯುವಕ ಸಾವು

    ಮತ್ತೊಬ್ಬರು, ಇದು ನೆಮ್ಮೀನ್ ಮೀನಾಗಿದ್ದು. ಸಣ್ಣ ಗಾತ್ರದಲ್ಲಿ ಸಿಕ್ಕರೆ ಈ ಮೀನನ್ನು ಇಲ್ಲಿ ಸಾರು, ಗಸಿ ಮಾಡಲು ಉಪಯೋಗಿಸುತ್ತೇವೆ. ಬಲಿತ ಮೀನುಗಳನ್ನು ಜನ ಖರೀದಿ ಮಾಡುವುದಿಲ್ಲ. ಕೇರಳಕ್ಕೆ ಹೋಗುವ ಮೀನಿನ ವಾಹನಗಳಲ್ಲಿ ಇದನ್ನು ತುಂಬಿ ಕಳುಹಿಸಲಾಗುತ್ತದೆ. ಕಾಸರಗೋಡು – ಮಲಬಾರ್ ಕಡಲತೀರದ ಡಾಬಾಗಳಲ್ಲಿ ಹೋಟೆಲ್‍ಗಳಲ್ಲಿ ಇದನ್ನು ಬಿರಿಯಾನಿ, ತವಾ ಫ್ರೈ ಮಾಡುತ್ತಾರೆ ಎಂದರು. ಸುಮಾರು ನೂರು ಕಿಲೋ ತೂಗುವ ಮೀನುಗಳು ಕೆಲವೊಮ್ಮೆ ಮಲ್ಪೆ, ಬೈಂದೂರು ಮೀನುಗಾರರ ಬಲೆಗೆ ಸಿಲುಕುತ್ತವೆ ಎಂದು ಹೇಳಿದರು.

  • ಆದಿ ಉಡುಪಿ – ಮಲ್ಪೆ ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಹಸಿರು ನಿಶಾನೆ

    ಆದಿ ಉಡುಪಿ – ಮಲ್ಪೆ ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಹಸಿರು ನಿಶಾನೆ

    ಉಡುಪಿ: ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹೆದ್ದಾರಿಯ ಆದಿ ಉಡುಪಿಯಿಂದ ಮಲ್ಪೆವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ.

    ಈ ಹೆದ್ದಾರಿ ಹಾದು ಹೋಗುವ ಪರ್ಕಳದಿಂದ ಹಿರಿಯಡ್ಕ ವರೆಗೆ ಚತುಷ್ಪಥ ಹಾಗೂ ಹಿರಿಯಡ್ಕದಿಂದ ಹೆಬ್ರಿ ವರೆಗೆ ದ್ವಿಪಥವಾಗಿ ಅಭಿವೃದ್ಧಿಪಡಿಸಲು ಒಟ್ಟು ರೂ. 350 ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಅನುಮೋದನೆ ನೀಡಿದೆ. ಕಳೆದ 20 ವರ್ಷದಿಂದ ಬಹಳ ಬೇಡಿಕೆಯಿದ್ದ ರಸ್ತೆಗೆ ಸರ್ಕಾರ ಅನುಮೋದನೆ ನೀಡಿದ್ದರಿಂದ ಮೀನುಗಾರಿಕಾ ವಹಿವಾಟು, ಮಲ್ಪೆ ಕಡಲ ತೀರಕ್ಕೆ ಪ್ರವಾಸಿಗರ ಓಡಾಟ ಮಾಡಲು ಅನುಕೂಲವಾಗಲಿದೆ.

    ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಂ ಹೆದ್ದಾರಿಯ ಮಲ್ಪೆಯಿಂದ ಹೆಬ್ರಿವರೆಗೆ ಸಮಗ್ರ ಅಭಿವೃದ್ಧಿಯ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ಮಾರ್ಚ್ 23 ರಂದು ಸಂಸದೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಯವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

    ಉಡುಪಿ ಜಿಲ್ಲೆಯ ಬಹು ಬೇಡಿಕೆಯಾಗಿರುವ ಈ ಪ್ರಮುಖ ಹೆದ್ದಾರಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಮುತುವರ್ಜಿವಹಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿ ಹೆದ್ದಾರಿ ಅಭಿವೃದ್ಧಿಯ ಪ್ರಾಮುಖ್ಯತೆಯ ವಸ್ತುಸ್ಥಿತಿಗಳನ್ನು ಮನವರಿಕೆ ಮಾಡಿ ನಂತರ ಯೋಜನೆಗೆ ಅನುಮೋದನೆ ದೊರಕುವವರೆಗೆ ನಿರಂತರವಾಗಿ ಪ್ರಯತ್ನಿಸಿ ಶ್ರಮವಹಿಸಿದ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

  • ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗಿದೆ

    ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗಿದೆ

    ಉಡುಪಿ: ಒಂದೆಡೆ ಕೊರೊನಾ ಮಹಾಮಾರಿ, ಇನ್ನೊಂದೆಡೆ ಮಹಾಮಳೆ, ಚಂಡಮಾರುತ ಈ ಎಲ್ಲ ಗಂಡಾಂತರಗಳಿಂದಾಗಿ ಮೀನುಗಾರರು ಅಕ್ಷರ ಸಹ ನಲುಗಿ ಹೋಗಿದ್ದು, ಕೆಲಸವಿಲ್ಲದಂತಾಗಿ ಅಂತರಾಜ್ಯ ಮೀನುಗಾರರು ತಮ್ಮ ರಾಜ್ಯಗಳತ್ತ ಪಯಣ ಬೆಳೆಸಿದ್ದಾರೆ. ದೋಣಿಗಳನ್ನು ಟೆಂಪೋ ಮೇಲೆ ಹಾಕಿಕೊಂಡು ಸಪ್ಪೆ ಮೋರೆ ಹೊತ್ತು ಊರಿನತ್ತ ನಡೆದಿದಿದ್ದಾರೆ. ಈ ಮೂಲಕ ದೋಣಿ ನೀರ ಬಿಟ್ಟು ನೆಲದ ಮೇಲೆ ಸಾಗಿದೆ.

    ಕೊರೊನಾ, ಮಹಾಮಳೆ ಹಾಗೂ ಚಂಡಮಾರುತದ ಎಫೆಕ್ಟ್ ನಿಂದಾಗಿ ಕಡಲ ಮಕ್ಕಳು ಕೆಲಸವಿಲ್ಲದೆ ಹತಾಶರಾಗಿದ್ದಾರೆ. ಅದರಲ್ಲೂ ಮಲ್ಪೆ ಮೀನುಗಾರಿಕಾ ಬಂದರನ್ನು ನಂಬಿ ಬಂದಿದ್ದ ಹೊರ ರಾಜ್ಯದ ಮೀನುಗಾರರು ಬರಿಗೈಯಲ್ಲಿ ವಾಪಾಸ್ ಹೊರಟಿದ್ದಾರೆ. ಪ್ರಾಕೃತಿಕ ವಿಕೋಪದ ಜೊತೆ ಕೊರೊನಾ ಸಾಂಕ್ರಾಮಿಕ ರೋಗ ಮೀನುಗಾರರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಇದರಿಂದಾಗಿ ಸಂಕಷ್ಟಕ್ಕೊಳಗಾಗಿರುವ ಮೀನುಗಾರರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

    ಕೇರಳ, ತಮಿಳುನಾಡಿನ ಮೀನುಗಾರರು ಕೆಲಸವಿಲ್ಲದೆ ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದು, ಟೆಂಪೋ ಮೇಲೆ ದೋಣಿ ಹೊತ್ತು ತೆರಳಿದ್ದಾರೆ. ಈ ದೃಶ್ಯ ಕಂಡ ಎಂತಹವರಿಗೂ ಕಣ್ಣಂಚಲ್ಲಿ ನೀರು ಬರದಿರದು. ಆ ರೀತಿಯ ಸ್ಥಿತಿಯಲ್ಲಿ ಕಡಲ ಮಕ್ಕಳು ಹೊರಟಿದ್ದಾರೆ. ಟೆಂಪೋಗಳ ಮೇಲೆ ದೊಡ್ಡ ದೋಣಿಗಳನ್ನು ಕಟ್ಟಿಕೊಂಡು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಚಂಡಮಾರುತ, ಮಹಾಮಳೆ, ಕೊರೊನಾ ಎಲ್ಲದರಿಂದಾಗಿ ಮೀನುಗಾರಿಕೆಯೇ ನಡೆದಿಲ್ಲ ಹೀಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸುಮಾರು 6-7 ತಿಂಗಳುಗಳ ಕಾಲ ಮಲ್ಪೆಗೆ ಬಂದು ಮೀನುಗಾರಿಗೆ ನಡೆಸುತ್ತಾರೆ. ಮಳೆಗಾಲ ಬರುತ್ತಿದ್ದಂತೆ ವಾಪಾಸಾಗುತ್ತಿದ್ದರು. ಆದರೆ ಈ ಬಾರಿ ಜೂನ್ ವರೆಗೆ ಲಾಕ್‍ಡೌನ್ ಇದ್ದಿದ್ದರಿಂದ ಮೀನುಗಾರಿಕೆ ನಡೆದಿಲ್ಲ. ನಂತರ ನಿಸರ್ಗ ಚಂಡಮಾರುತದಿಂದಾಗಿ ವಾಯುಭಾರ ಕುಸಿತ ಉಂಟಾಯಿತು. ಹೀಗಾಗಿ ಮೀನುಗಾರಿಕೆಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.