Tag: ಮಲೈಕಾ ಆರೋರಾ

  • ಕಪೂರ್ ಫ್ಯಾಮಿಲಿಗೆ ಟಕ್ಕರ್ ಕೊಟ್ಟ ಮಲೈಕಾ: ಬ್ರೇಕ್ ಅಪ್ ಅಂತಿದ್ದಾರೆ ಫ್ಯಾನ್ಸ್

    ಕಪೂರ್ ಫ್ಯಾಮಿಲಿಗೆ ಟಕ್ಕರ್ ಕೊಟ್ಟ ಮಲೈಕಾ: ಬ್ರೇಕ್ ಅಪ್ ಅಂತಿದ್ದಾರೆ ಫ್ಯಾನ್ಸ್

    ಬಾಲಿವುಡ್ (Bollywood) ಹಾಟ್ ಬೆಡಗಿ ಮಲೈಕಾ ಆರೋರಾ ಮತ್ತು ಅರ್ಜುನ್ ಕಪೂರ್ (Arjun Kapoor) ದೂರ ದೂರ ಆಗಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ. ತಮ್ಮಿಬ್ಬರ ನಡುವೆ ಸಾಕಷ್ಟು ವಯಸ್ಸಿನ ಅಂತರವಿದ್ದರೂ, ಅರ್ಜುನ್ ಹೊಂದಿಕೊಂಡು ಹೋಗುತ್ತಿದ್ದಾರೆ ಎನ್ನುವ ಮಾತಿತ್ತು. ಇದೀಗ ಕಪೂರ್ ಫ್ಯಾಮಿಲಿಯ ಬಹುತೇಕ ಸದಸ್ಯರ ಸೋಷಿಯಲ್ ಮೀಡಿಯಾ ಅಕೌಂಟ್ ಅನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ್ದರೆ. ಅನ್ ಫಾಲೋ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಅರ್ಜುನ್ ಮತ್ತು ಮಲೈಕಾ ಸ್ನೇಹಕ್ಕೆ ಫುಲ್ ಸ್ಟಾಪ್ ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ಇತ್ತೀಚೆಗಷ್ಟೇ ಮಲೈಕಾ ಆರೋರಾ ಗರ್ಭಿಣಿ ಎನ್ನುವ ವಿಚಾರ ಬಿಟೌನ್ ನಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ವಿಷಯದ ಕುರಿತಾಗಿಯೇ ಅನೇಕರು ಟ್ರೋಲ್ ಕೂಡ ಮಾಡಿದ್ದರು. ಅಧಿಕೃತವಾಗಿ 2ನೇ ಮದುವೆ ಘೋಷಣೆ ಮಾಡದೇ, ಮಲೈಕಾ ಮಗು ಮಾಡಿಕೊಂಡಿದ್ದಾರೆ ಎಂದು ಹಲವರು ಕಾಮೆಂಟ್ ಕೂಡ ಮಾಡಿದ್ದರು. ಈ ಕುರಿತು ಮಲೈಕಾ (Malaika Arora) ಬಾಯ್ ಫ್ರೆಂಡ್, ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದರು.

    ಮಲೈಕಾ ಗರ್ಭಿಣಿ ಎಂದು ಸುಳ್ಳು ಹಬ್ಬಿಸುತ್ತಿರುವವರ ಬಗ್ಗೆ ಕಿಡಿಕಾರಿರುವ ಅರ್ಜುನ್, ‘ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಬೇರೆಯವರ ಜೀವನದಲ್ಲಿ ಯಾರೂ ಆಟವಾಡಬಾರದು. ಬೇರೆಯವರ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ. ಯಾರ ಮನಸ್ಸಿಗೂ ನೋವು ಆಗದಂತೆ ಇರಬೇಕು’ ಎಂದು ಪಾಠವನ್ನೂ ಮಾಡಿದ್ದರು.

    ಈ ನಡುವೆ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ಮಲೈಕಾ ಶೇರ್ ಮಾಡಿದ್ದರು. ಆ ಫೋಟೋ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು. ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಈ ಜೋಡಿ ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

     

    ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿತ್ತು. ಇದೀಗ ಅಪಸ್ವರ ಕೇಳಿ ಬರುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಲೈಕಾ ಆರೋರಾ ಗರ್ಭಿಣಿ ಅಂದವರಿಗೆ ಚಳಿ ಬಿಡಿಸಿದ ನಟ ಅರ್ಜುನ್ ಕಪೂರ್

    ಮಲೈಕಾ ಆರೋರಾ ಗರ್ಭಿಣಿ ಅಂದವರಿಗೆ ಚಳಿ ಬಿಡಿಸಿದ ನಟ ಅರ್ಜುನ್ ಕಪೂರ್

    ಬಾಲಿವುಡ್ (Bollywood) ನಟಿ ಮಲೈಕಾ ಆರೋರಾ ಗರ್ಭಿಣಿ ಎನ್ನುವ ವಿಚಾರ ಬಿಟೌನ್ ನಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ವಿಷಯದ ಕುರಿತಾಗಿಯೇ ಅನೇಕರು ಟ್ರೋಲ್ ಕೂಡ ಮಾಡಿದ್ದರು. ಅಧಿಕೃತವಾಗಿ 2ನೇ ಮದುವೆ ಘೋಷಣೆ ಮಾಡದೇ, ಮಲೈಕಾ ಮಗು ಮಾಡಿಕೊಂಡಿದ್ದಾರೆ ಎಂದು ಹಲವರು ಕಾಮೆಂಟ್ ಕೂಡ ಮಾಡಿದ್ದರು. ಈ ಕುರಿತು ಮಲೈಕಾ (Malaika Arora) ಬಾಯ್ ಫ್ರೆಂಡ್, ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.

    ಮಲೈಕಾ ಗರ್ಭಿಣಿ ಎಂದು ಸುಳ್ಳು ಹಬ್ಬಿಸುತ್ತಿರುವವರ ಬಗ್ಗೆ ಕಿಡಿಕಾರಿರುವ ಅರ್ಜುನ್, ‘ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಬೇರೆಯವರ ಜೀವನದಲ್ಲಿ ಯಾರೂ ಆಟವಾಡಬಾರದು. ಬೇರೆಯವರ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ. ಯಾರ ಮನಸ್ಸಿಗೂ ನೋವು ಆಗದಂತೆ ಇರಬೇಕು’ ಎಂದು ಪಾಠವನ್ನೂ ಮಾಡಿದ್ದಾರೆ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

    ಈ ನಡುವೆ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ಮಲೈಕಾ ಮೊನ್ನೆಯಷ್ಟೇ ಶೇರ್ ಮಾಡಿದ್ದರು. ಈ ಫೋಟೋ ಕೂಡ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಜೋಡಿ ಅಂದರೆ ಅರ್ಜುನ್- ಮಲೈಕಾ ಅರೋರಾ. ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಮಲೈಕಾ ಮಾಡಿದ ಒಂದು ಕೆಲಸದಿಂದ ಅರ್ಜುನ್ ಕಪೂರ್ (Arjun Kapoor) ಸಖತ್ ಟ್ರೋಲ್ (Troll) ಆಗುತ್ತಿದ್ದಾರೆ.

    ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿದೆ.

     

    ಇದೀಗ ‘ನನ್ನ ಲೇಝಿ ಬಾಯ್’ ಎಂದು ಅರ್ಜುನ್ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣದ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೈಕಾ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ನಟನ ಲುಕ್‌ಗೆ ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  • ಬಾಯ್ ಫ್ರೆಂಡ್ ಗೆ ಕಿಸ್ ಕೊಟ್ಟು ನ್ಯೂ ಯಿಯರ್ ಬರಮಾಡಿಕೊಂಡ ಸಿಲೆಬ್ರಿಟಿಗಳು

    ಬಾಯ್ ಫ್ರೆಂಡ್ ಗೆ ಕಿಸ್ ಕೊಟ್ಟು ನ್ಯೂ ಯಿಯರ್ ಬರಮಾಡಿಕೊಂಡ ಸಿಲೆಬ್ರಿಟಿಗಳು

    ಮೊನ್ನೆ ಮೊನ್ನೆಯಷ್ಟೇ ಪವಿತ್ರಾ ಲೋಕೇಶ್ ಅವರಿಗೆ ಟಾಲಿವುಡ್ ನಟ ನರೇಶ್ ಮುತ್ತಿಡುವ ಮೂಲಕ ಮದುವೆ ವಿಷಯವನ್ನು ಬಹಿರಂಗಪಡಿಸಿದ್ದರು. ನಮ್ಮಿಬ್ಬರ ಮಧ್ಯ ಏನೂ ಇಲ್ಲ, ನಾವು ಕೇವಲ ವೃತ್ತಿ ಬಂಧುಗಳು ಎನ್ನುತ್ತಿದ್ದ ಈ ಜೋಡಿ ಕಿಸ್ ಮಾಡುವ ಮೂಲಕ ಮದುವೆ ವಿಷಯ ಮಾತ್ರವಲ್ಲ, ಹೊಸ ವರ್ಷವನ್ನೂ ಬರಮಾಡಿಕೊಂಡಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂತೆಯೇ ಬಾಲಿವುಡ್ ನಲ್ಲೂ ಮತ್ತೊಂದು ಜೋಡಿ ಹೀಗೆಯೇ ಹೊಸ ವರ್ಷವನ್ನು ಸ್ವಾಗತಿಸಿದೆ.

    ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಬಾಲಿವುಡ್ ನಟಿ ಮಲೈಕಾ ಅರೋರ್ ಇಬ್ಬರೂ ಡೇಟಿಂಗ್ ಮಾಡುತ್ತಿರುವುದು ಹೊಸದೇನೂ ಅಲ್ಲ. ಅನೇಕ ಸಲ ವಿದೇಶಕ್ಕೂ ಈ ಜೋಡಿ ಹೋಗಿ ಬಂದಿದೆ. ಒಟ್ಟೊಟ್ಟಿಗೆ ಅನೇಕ ಪಾರ್ಟಿಗಳನ್ನೂ ಮಾಡಿದ್ದಾರೆ. ಮದುವೆ ವಿಚಾರದಲ್ಲಿ ಮುಂದೂಡುತ್ತಲೇ ಬಂದಿರುವ ಮಲೈಕಾ, ತಮ್ಮ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಗೆ ಮುತ್ತಿಡುವ ಮೂಲಕ ನ್ಯೂ ಯಿಯರ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆ ಫೋಟೋವೊಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಮಲೈಕಾ ಡಿವೋರ್ಸ್ ಆದ ನಂತರ ತಮಗಿಂತ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಆಳೆತ್ತೆರದ ಮಗನನ್ನು ಹೊಂದಿರುವ ಮಲೈಕಾ ಈ ಹೊತ್ತಿಗೂ ವಿಶೇಷ ಕಾಸ್ಟ್ಯೂಮ್ ಮತ್ತು ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವುದನ್ನು ಬಿಟ್ಟಿಲ್ಲ. ಈ ವಿಚಾರವಾಗಿ ಅವರು ಹಲವಾರು ಬಾರಿ ಟ್ರೋಲ್ ಕೂಡ ಆಗಿದ್ದಾರೆ. ಇಂದು ಕಿಸ್ ಕೊಟ್ಟಿರುವ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]