Tag: ಮಲೈಕಾ ಅರೋರಾ ಖಾನ್

  • 2 ತಿಂಗಳು ಮೊದಲೇ ಮಲೈಕಾಗೆ ಬರ್ತ್ ಡೇ ವಿಶ್-ಫ್ಯಾನ್ಸ್ ಗೆ ಮಲೈಕಾ ಹೇಳಿದ್ದು ಹೀಗೆ

    2 ತಿಂಗಳು ಮೊದಲೇ ಮಲೈಕಾಗೆ ಬರ್ತ್ ಡೇ ವಿಶ್-ಫ್ಯಾನ್ಸ್ ಗೆ ಮಲೈಕಾ ಹೇಳಿದ್ದು ಹೀಗೆ

    ಮುಂಬೈ: ಬಾಲಿವುಡ್ ಅರ್ನಾಕಲಿ ಮಲೈಕಾ ಅರೋರಾಗೆ ಅಭಿಮಾನಿಗಳು ಎರಡು ತಿಂಗಳು ಮೊದಲೇ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಅಭಿಮಾನಿಗಳ ವಿಶ್ ನೋಡಿದ ಮಲೈಕಾ ನನ್ನ ಬರ್ತ್ ಡೇ ಅಕ್ಟೋಬರ್ 23ರಂದು ತಿಳಿಸಿದ್ದಾರೆ.

    ಬುಧವಾರ ಬೆಳಗ್ಗೆ ಅನೇಕ ಅಭಿಮಾನಿಗಳು ಮಲೈಕಾಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟು ಹಬ್ಬದ ಶುಭ ಸಂದೇಶವನ್ನು ತಿಳಿಸಿದ್ದಾರೆ. ಇದನ್ನು ಗಮನಿಸಿದ ಮಲೈಕಾ, ಅಕ್ಟೋಬರ್ 23ರಂದು ನನ್ನ ಬರ್ತ್ ಡೇ ಇದೆ. ಹಾಗಾಗಿ ನಿಮ್ಮ ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಿಟ್ಟುಕೊಳ್ಳಿ. ವಿಕಿಪಿಡಿಯಾ ನನ್ನ ಹುಟ್ಟು ಹಬ್ಬದ ದಿನಾಂಕ ತಪ್ಪಾಗಿ ದಾಖಲಾಗಿದೆ. ಇದೂವರೆಗೂ ನನಗೆ ವಿಶ್ ಮಾಡಿದ ಅಭಿಮಾನಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರ ನಂತರ ಒಬ್ಬರು ವಿಶ್ ಮಾಡಿದ್ದಾರೆ. ಮಲೈಕಾ ಹುಟ್ಟು ಹಬ್ಬದ ಸುದ್ದಿ ವೈರಲ್ ಆಗುತ್ತಿದ್ದಂತೆ ಕೆಲವು ಮಾಧ್ಯಮಗಳು ಸಹ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸಿವೆ. ಕೊನೆಗೆ ಸ್ವತಃ ಮಲೈಕಾ ನನ್ನ ಹುಟ್ಟು ಹಬ್ಬ ಅಕ್ಟೋಬರ್ 23ರಂದು ಹೇಳಿದಾಗ ಮಾತ್ರ ಎಲ್ಲರಿಗೂ ನಿಜ ವಿಷಯ ಗೊತ್ತಾಗಿದೆ.

    https://www.instagram.com/p/BYIf4fAFx3G/?taken-by=malaikaarorakhanofficial

    https://www.instagram.com/p/BX9lnRKlXzu/?taken-by=malaikaarorakhanofficial

    https://www.instagram.com/p/BXwoq-VFGnP/?taken-by=malaikaarorakhanofficial

    https://www.instagram.com/p/BXrM-vxFSJ3/?taken-by=malaikaarorakhanofficial