Tag: ಮಲೈಕಾ ಅರೋರಾ

  • ತಮಗಿರುವ ಗಂಭೀರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅರ್ಜುನ್ ಕಪೂರ್

    ತಮಗಿರುವ ಗಂಭೀರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅರ್ಜುನ್ ಕಪೂರ್

    ಬಾಲಿವುಡ್ ನಟ ಅರ್ಜುನ್ ಕಪೂರ್ (Arjun Kapoor) ಅವರು ಮಲೈಕಾ ಅರೋರಾ (Malaika Arora) ಜೊತೆ ಬ್ರೇಕಪ್ ಆದ್ಮೇಲೆ ತಮಗಿರುವ ಗಂಭೀರ ಕಾಯಿಲೆಯ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ತಮಗಿರುವ ಅನಾರೋಗ್ಯದ ಸಮಸ್ಯೆ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ: ಸುಮಲತಾ

    ಹಶಿಮೊಟೊ (Hashimoto) ಎಂಬ ಆರೋಗ್ಯ ಸಮಸ್ಯೆಯಿಂದ ಕಾಯಿಲೆಯಿಂದಲೂ ಬಳಲುತ್ತಿರುವುದಾಗಿ ಅರ್ಜುನ್ ಕಪೂರ್ ಹೇಳಿಕೊಂಡಿದ್ದಾರೆ. ಅವರೊಳಗೆ ರೋಗನಿರೋಧಕ ಶಕ್ತಿ, ಅವರ ಥೈರಾಯ್ಡ್‌ಗೆ ಎಂದು ಹಾನಿ ಮಾಡುತ್ತಿತ್ತಂತೆ. ಇದರಲ್ಲಿ ತೂಕವೂ ಹೆಚ್ಚುತ್ತದೆ. ಇದರಿಂದ ನನ್ನ ದೇಹವೂ ಸಾಕಷ್ಟು ತೊಂದರೆ ಎದುರಿಸುತ್ತಿದೆ. ನನಗೆ 30 ವರ್ಷವಿದ್ದಾಗ ಈ ಕಾಯಿಲೆ ಬಂದಿತ್ತು. ನನ್ನ ತಾಯಿ ಮೋನಾ ಕಪೂರ್ ಅವರಿಗೂ ಈ ಕಾಯಿಲೆ ಇತ್ತು. ಅವರ ಸಹೋದರಿ ಅಂಶುಲಾ ಕಪೂರ್‌ಗೂ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

    ಹಶಿಮೊಟೊ ಖಾಯಿಲೆಯ ಜೊತೆಗೆ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ನಾನು ಎಂದಿಗೂ ನಕಾರಾತ್ಮಕ ವ್ಯಕ್ತಿಯಾಗಿರಲಿಲ್ಲ. ಆದರೆ ಆ ಸಮಯದಲ್ಲಿ ನಾನು ತುಂಬಾ ನಕಾರಾತ್ಮಕವಾಗಿ ಯೋಚಿಸುತ್ತಿದ್ದೆ. ಬೇರೆಯವರು ಕೆಲಸ ಮಾಡುವುದನ್ನು ಕಂಡಾಗ ನನಗೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಅನಿಸುತ್ತಿತ್ತು. ನನಗೆ ಸಿನಿಮಾದಲ್ಲಿ ಅವಕಾಶ ಸಿಗುತ್ತದೆಯೇ? ನಂತರ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗದಿದ್ದಾಗ, ನಾನು ವೈದ್ಯರ ಸಹಾಯವನ್ನು ಕೇಳಿದೆ. ಆಗ ನನಗೆ ಲಘು ಖಿನ್ನತೆ ಇದೆ ಎಂದು ತಿಳಿಯಿತು. ಅದಕ್ಕಾಗಿ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಿದ್ದೇನೆ ಎಂದು ಅರ್ಜುನ್ ಕಪೂರ್ ತಿಳಿಸಿದ್ದಾರೆ.

    ಅರ್ಜುನ್ ಕಪೂರ್ ಈ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಲೈಕಾ ಅರೋರಾ ಜೊತೆ ಈ ಕಾರಣಕ್ಕೆ ಬ್ರೇಕಪ್ ಆಯ್ತಾ? ಎಂದೆಲ್ಲಾ ನೆಟ್ಟಿಗರು ಕಾಲೆಳೆದಿದ್ದಾರೆ.

  • ಬ್ರೇಕಪ್‌ ಬಗ್ಗೆ ಪಶ್ಚಾತ್ತಾಪ ಇಲ್ಲ: ಟೀಕಿಸುವವರಿಗೆ ಮಲೈಕಾ ಅರೋರಾ ತಿರುಗೇಟು

    ಬ್ರೇಕಪ್‌ ಬಗ್ಗೆ ಪಶ್ಚಾತ್ತಾಪ ಇಲ್ಲ: ಟೀಕಿಸುವವರಿಗೆ ಮಲೈಕಾ ಅರೋರಾ ತಿರುಗೇಟು

    ಬಾಲಿವುಡ್ ಬೆಡಗಿ ಮಲೈಕಾ ಅರೋರಾ (Malaika Arora) ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅರ್ಜುನ್ ಕಪೂರ್ (Arjun Kapoor) ಜೊತೆಗಿನ ಬ್ರೇಕಪ್ (Breakup) ವಿಚಾರವಾಗಿ ಭಾರೀ ಟೀಕೆ, ಟ್ರೋಲ್‌ಗಳನ್ನು ನಟಿ ಎದುರಿಸುತ್ತಿದ್ದಾರೆ. ಇದೀಗ ಬ್ರೇಕಪ್ ವಿಚಾರಕ್ಕೆ ಟೀಕಿಸುವವರಿಗೆ ಮಲೈಕಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ

    ಸಂದರ್ಶನವೊಂದರಲ್ಲಿ ಮಲೈಕಾ ಮೊದಲ ಬಾರಿಗೆ ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದಿದ್ದಾರೆ. ನಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ಯಾವುದೇ ವಿಷಾದವಿಲ್ಲದೇ ಬದುಕುತ್ತೇನೆ ಹೊರತು ಕೊರಗುವುದಿಲ್ಲ. ಇಂದು ಏನಾದರೂ ಕಲಿತಿದ್ದೀನಿ ಎಂದಾದರೆ ಅದಕ್ಕೆ ಜೀವನದುದ್ದಕ್ಕೂ ನಾನು ಪಡೆದ ಅನುಭವಗಳೇ ಕಾರಣ. ಇದೆಲ್ಲದರಿಂದಲೇ ಇಂದು ಒಂದೊಳ್ಳೆಯ ಜೀವನವನ್ನು ರೂಪಿಸಿಕೊಂಡಿದ್ದೇನೆ ಎಂದಿದ್ದಾರೆ.

    ಇನ್ನೂ ನಾನು ನೋವಿನಿಂದ ಹೊರಬರಲು ಕರೀನಾ ಕಪೂರ್ ಖಾನ್, ಕರೀಷ್ಮಾ ಕಪೂರ್ ಮತ್ತು ಸಹೋದರಿ ಅಮೃತಾ ಅರೋರಾ ಅವರೆಲ್ಲರ ಪಾತ್ರ ಸಾಕಷ್ಟಿದೆ. ಅವರಿಲ್ಲದೆ ನಾನಿಲ್ಲ. ಇಲ್ಲಿಯವರೆಗೂ ನಾನು ಕೈಗೊಂಡ ನಿರ್ಧಾರ ನನ್ನ ಜೀವನವನ್ನು ಉತ್ತಮವಾಗಿ ರೂಪಿಸಿದೆ. ಈ ವಿಷಯದಲ್ಲಿ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಟೀಕಿಸುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ ಮಲೈಕಾ.

  • ಆತ್ಮಹತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಮಲೈಕಾ ತಂದೆ ಹೇಳಿದ್ದೇನು?

    ಆತ್ಮಹತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಮಲೈಕಾ ತಂದೆ ಹೇಳಿದ್ದೇನು?

    ಬಾಲಿವುಡ್ ನಟಿಯರಾದ ಮಲೈಕಾ ಅರೋರಾ (Malaika Arora) ಹಾಗೂ ಅಮೃತಾ ಅರೋರಾ ತಂದೆ ಅನಿಲ್ (Anil) ಅರೋರಾ ಮೆಹ್ತಾ ತಮ್ಮ ಇಳಿ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ 6ನೇ ಮಹಡಿಯಿಂದ ಕೆಳಗೆ ಬಿದ್ದ ಮಲೈಕಾ ತಂದೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು ತನಿಖೆಯೂ ನಡೆಯುತ್ತಿದೆ. ಪತ್ನಿ ಜೋಯಿಸ್‍ರಿಂದ ಅನಿಲ್ ವಿಚ್ಛೇದನ ಪಡೆದಿದ್ದರೂ ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸವಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬಂದರೂ ನಟಿಯ ತಂದೆಯ ಸಾವಿಗೆ ಅಸಲಿ ಕಾರಣ ಏನು ಅನ್ನುವುದರ ಕುರಿತು ಚರ್ಚೆ ಜೋರಾಗಿದೆ. ತಮ್ಮ 62ನೇ ವಯಸ್ಸಿನಲ್ಲಿ ಅದ್ಯಾವ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಅನ್ನುವುದರ ತನಿಖೆ ನಡೆಯುವ ಹಂತದಲ್ಲಿರುವಾಗಲೇ ಅನಿಲ್ ಅರೋರಾ ತಮ್ಮ ಪುತ್ರಿಯರಿಗೆ ಕೊನೆಯ ಬಾರಿ ಕರೆಮಾಡಿ ಕೆಲವೊಂದು ವಿಚಾರ ಹಂಚಿಕೊಂಡಿರುವ ಸುದ್ದಿ ಬೆಳಕಿಗೆ ಬಂದಿದೆ.


    ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಬುಧವಾರ‌ (ಸೆ.12) ಬೆಳಗ್ಗೆ ಬಾಲ್ಕನಿಯಿಂದ ಬಿದ್ದು ಅನಿಲ್ ಅರೋರಾ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಾರಂಭಿಕ ತನಿಖೆಯಲ್ಲಿ ಕಂಡು ಬರುತ್ತಿದೆ. ತಾವಿದ್ದ ಅಪಾರ್ಟ್‌ಮೆಂಟ್‌ನ ಹಾಲ್‍ನಲ್ಲಿ ಪತಿ ಚಪ್ಪಲಿ ಬಿಚ್ಚಿಟ್ಟಿದ್ದನ್ನ ನೋಡಿದ ಪತ್ನಿ ಬಾಲ್ಕನಿ ಬಳಿ ಕಣ್ಣು ಹಾಯಿಸುತ್ತಾರೆ, ಕ್ಷಣಮಾತ್ರದಲ್ಲೇ ಕೆಳಗಿನಿಂದ ಸೆಕ್ಯುರಿಟಿ ಹೆಲ್ಪ್‌ ಅಂತ ಚೀರುವುದು ಕೇಳ್ದಾಗ ಪತ್ನಿಗೆ ಪತಿಯೇ ಬಿದ್ದರು ಎಂದು ಗಮನಕ್ಕೆ ಬಂದಿರುತ್ತದೆ ಎನ್ನಲಾಗುತ್ತಿದೆ. ಪುತ್ರಿಯರಿಬ್ಬರಿಗೂ ಈ ವಿಚಾರ ಬಹಳ ಶಾಕಿಂಗ್ ಆಗಿದ್ದು ಇಬ್ಬರೂ ತಂದೆಯ ಸಾವಿನ ಕುರಿತು ಯಾವುದೇ ಪ್ರತಿಕ್ರಿಯೆ ಇಲ್ಲಿವರೆಗೆ ನೀಡಿಲ್ಲ. ಹಿಂದಿನ ದಿನ ಮಲೈಕಾ ಕೂಡ ಅಪಾರ್ಟ್‌ಮೆಂಟ್‌ಗೆ ಬಂದು ತಂದೆಯನ್ನ ಭೇಟಿಯಾಗಿ ಹೋಗಿದ್ದರು. ಕಾರಣ ಆ ದಿನ ತಂದೆ ಅನಿಲ್ ಅರೋರಾ ಮಗಳಿಗೆ ಕರೆ ಮಾಡಿ ನಾನು ಅಸ್ವಸ್ಥನಾಗಿದ್ದೇನೆ ಹಾಗೂ ಬಳಲಿದ್ದೇನೆ (ಐಎಮ್ ಸಿಕ್ ಆ್ಯಂಡ್ ಟೈಯರ್ಡ್) ಎಂದಿದ್ದರಂತೆ. ಹೀಗಾಗೇ ಹಿಂದಿನ ದಿನ ಮಲೈಕಾ ತಂದೆಯನ್ನ ಭೇಟಿ ಮಾಡಿ ಧೈರ್ಯ ತುಂಬಿ ಬಂದಿದ್ದರು ಎನ್ನಲಾಗುತ್ತೆ. ಆದರೆ ಮರುದಿನ ಬೆಳಗ್ಗೆ ಸಾವಿನ ಸುದ್ದಿ ಕೇಳಿಬಂದಿದೆ. ಅನಿಲ್ ಅರೋರಾ ಮೆಹ್ತಾ ವಯೋಸಹಜ ಮಂಡಿನೋವುನಿಂದ ಬಳಲುತ್ತಿದ್ದರಂತೆ, ಆದರೆ ಇಷ್ಟೇ ಕಾರಣಕ್ಕೆ, ಪ್ರಾಣ ಹಾನಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರೇಕೆ ಅನ್ನೋದು ಅನುಮಾನ ಹುಟ್ಟಿಸುತ್ತಿದೆ.

    ಮಲೈಕಾ ಹಾಗೂ ಅಮೃತಾ ತಮ್ಮ ತಮ್ಮ ಕುಟುಂಬದ ಜೊತೆ ಬೇರೆ ಬೇರೆ ವಾಸಿಸುತ್ತಿದ್ದಾರೆ. ಅಂದಹಾಗೆ, ಇವರ ತಂದೆ- ತಾಯಿ ಅನಿಲ್ ಹಾಗೂ ಜೋಯಿಸ್ ಕೂಡ ಹಲವು ವರ್ಷ ದೂರವಿದ್ದು ಇತ್ತೀಚೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಇದೀಗ ಏಕಾಏಕಿ ತಂದೆ ಪ್ರಾಣ ಕಳೆದುಕೊಳ್ಳಲು ಏನು ಕಾರಣ ಎಂದು ತಿಳಿಯದೆ ಪುತ್ರಿಯರು ಕಂಗಾಲಾಗಿದ್ದಾರೆ. ಗುರುವಾರ ಅಂತ್ಯಕ್ರಿಯೆ ನಡೆದಿದ್ದು ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ರು. ಹೀಗೆ ಮಲೈಕಾ ತಂದೆ ಸಾವಿಗೆ ಕಾರಣ ಅನಾರೋಗ್ಯದ ಸಮಸ್ಯೆಯೇ ಇರಬಹುದಾ ಎಂದು ಚರ್ಚೆ ನಡೆಯುತ್ತಿದೆ. ಮಕ್ಕಳಿಗೆ ಕರೆ ಮಾಡಿ ಮಾತನಾಡಿರುವ ಕೊನೆ ಸಂದೇಶವೇ ಆತ್ಮಹತ್ಯೆಯ ರಹಸ್ಯಕ್ಕೆ ಉತ್ತರವಾ ನೋಡ್ಬೇಕು.

  • ಮಲೈಕಾ ಅರೋರಾ ತಂದೆ ಆತ್ಮಹತ್ಯೆ ಹಿನ್ನೆಲೆ – ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್, ಮಲೈಕಾ ಮನೆಗೆ ಭೇಟಿ

    ಮಲೈಕಾ ಅರೋರಾ ತಂದೆ ಆತ್ಮಹತ್ಯೆ ಹಿನ್ನೆಲೆ – ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್, ಮಲೈಕಾ ಮನೆಗೆ ಭೇಟಿ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ತಂದೆ ಅನಿಲ್ ಅರೋರಾ (Anil Arora) ಆತ್ಯಹತ್ಯೆ ಈ ಹಿನ್ನೆಲೆಯಲ್ಲಿ ಮಲೈಕಾ ಅರೋರಾ ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ (Arjun Kapoor) ಮುಂಬೈ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

    ನಟಿ ಮಲೈಕಾ ಅರೋರಾ ತಂದೆ ಅನಿಲ್ ಅರೋರಾ ಇಂದು (ಸೆ.11) ಬೆಳಗ್ಗೆ ಆತ್ಯಹತ್ಯೆಗೆ ಶರಣಾದರು. ಮುಂಬೈನಲ್ಲಿರುವ (Mumbai) ಬಾಂದ್ರಾದ ತಮ್ಮ ಮನೆಯ ಟೆರೇಸ್‌ನಿಂದ ಹಾರಿ ಆತ್ಯಹತ್ಯೆ ಮಾಡಿಕೊಂಡರು.ಇದನ್ನೂ ಓದಿ: ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

    ತಮ್ಮ ಮನೆಯ 7ನೇ ಮಹಡಿಯಿಂದ ಬಿದ್ದು ಮಲೈಕಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸಾವಿನ ದುಃಖದಲ್ಲಿದ್ದ ಮಲೈಕಾಗೆ ಮಾಜಿ ಪತಿ ಅರ್ಬಾಜ್ ಖಾನ್ (Arbaaz Khan) ಸಂತಾಪ ಸೂಚಿಸಿದರು. ಬಾಲಿವುಡ್‌ನ ಹಲವು ನಟ-ನಟಿಯರು ಭೇಟಿ ನೀಡಿದ್ದು, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ, ಸೈಫ್ ಅಲಿ ಖಾನ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ನಟಿಯ ಎಕ್ಸ್ ಬಾಯಫ್ರೆಂಡ್ ಅರ್ಜುನ್ ಕಪೂರ್ ಕೂಡ ಭೇಟಿ ನೀಡಿದ್ದರು.ಇದನ್ನೂ ಓದಿ: ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

    ಇತ್ತೀಚಿಗಷ್ಟೇ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಅವರ ಮಧ್ಯೆ ಬ್ರೇಕಪ್ ಆಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ರೂಮರ್ಸ್‌ ಹಬ್ಬಿಕೊಂಡಿತ್ತು. ಬ್ರೇಕಪ್ ರೂಮರ್ ನಡುವೆಯೇ ಮಲೈಕಾ ಅರೋರಾ ತಂದೆಯ ಸಾವಿನ ಸುದ್ದಿ ತಿಳಿದು, ಮುಂಬೈ ನಿವಾಸಕ್ಕೆ ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

  • ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

    ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

    ಬಾಲಿವುಡ್‌ ನಟಿ ಮಲೈಕಾ ಅರೋರಾ (Malaika Arora) ತಂದೆ ಅನಿಲ್‌ ಅರೋರಾ (Anil Arora) ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈ ಬಾಂದ್ರಾದ ತಮ್ಮ ಮನೆಯ ಟೆರೇಸ್‌ನಿಂದ ಹಾರಿ ಆತ್ಯಹತ್ಯೆ (Suicide) ಮಾಡಿಕೊಂಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿರಣ್ ರಾಜ್‌ ಸ್ಥಿತಿ ಈಗ ಹೇಗಿದೆ?- ಅವಘಡದ ಬಗ್ಗೆ ವಿವರಿಸಿದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್

    ಇಂದು (ಸೆ.11) ಬೆಳಗ್ಗೆ ತಮ್ಮ ಮನೆಯ 7ನೇ ಮಹಡಿಯಿಂದ ಬಿದ್ದು ಮಲೈಕಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ನಿವಾಸದ ಬಳಿ ಪೊಲೀಸರ ಜೊತೆ ನಟಿಯ ಮಾಜಿ ಪತಿ ಅರ್ಬಾಜ್‌ ಖಾನ್‌ (Arbaaz Khan) ಕೂಡ ಭೇಟಿ ನೀಡಿದ್ದಾರೆ.

    ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅನಿಲ್‌ ಅರೋರಾ ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮಲೈಕಾ, ಅರ್ಜುನ್ ಕಪೂರ್ ಬ್ರೇಕಪ್: ಅಲ್ಲಗೆಳೆದ ನಟಿಯ ಮ್ಯಾನೇಜರ್

    ಮಲೈಕಾ, ಅರ್ಜುನ್ ಕಪೂರ್ ಬ್ರೇಕಪ್: ಅಲ್ಲಗೆಳೆದ ನಟಿಯ ಮ್ಯಾನೇಜರ್

    ಬಾಲಿವುಡ್ ಲವ್ ಬರ್ಡ್ಸ್ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಇಬ್ಬರ ಪ್ರೀತಿಗೆ ಬ್ರೇಕ್ ಬಿದ್ದಿದೆ ಎನ್ನಲಾದ ಸುದ್ದಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಂತೆ ಮಲೈಕಾ ಅರೋರಾ ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ದಾರೆ.

    ಮಲೈರಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ವದಂತಿಯನ್ನು ನಟಿಯ ಮ್ಯಾನೇಜರ್ ಅಲ್ಲಗೆಳೆದಿದ್ದಾರೆ. ಇಬ್ಬರ ಬ್ರೇಕಪ್ ಸುದ್ದಿ ನಿಜನಾ ಎಂದು ಕೇಳಲಾದ ಪ್ರಶ್ನೆಗೆ ಇಲ್ಲ ಇದು ವದಂತಿ ಅಷ್ಟೇ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಬ್ರೇಕಪ್‌ ಸುದ್ದಿಗೆ ಬ್ರೇಕ್‌ ಬಿದ್ದಿದೆ.

    ಅಂದಹಾಗೆ, ಬಿಟೌನ್ ಅಂಗಳದ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೂಡ ಒಬ್ಬರಾಗಿದ್ದರು. ಸಾಕಷ್ಟು ವರ್ಷಗಳಿಂದ ಲಿಪ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

    ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈ ಹಿಂದೆ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದರು.

    ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಗೆಳೆಯನ ಜೊತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬಾತ್ ಟಬ್‌ನಲ್ಲಿ ಕುಳಿತು ನೊರೆಯಿಂದ ಮೈಮುಚ್ಚಿಕೊಂಡ ಪ್ರಣೀತಾ

    ನಾವು ಬಹಳಷ್ಟು ವಿಷಯಗಳನ್ನು ಒಟ್ಟಿಗೆ ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೇವೆ ಮತ್ತು ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ಸಂಬಂಧದಲ್ಲಿ ಯಾವಾಗೂ ನಾವು ಸೇಫ್ ಮತ್ತು ಪಾಸಿಟಿವ್ ಎಂಬ ಭಾವನೆ ಇರಬೇಕು ಎಂದು ನಟಿ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು.

  • ಬಿಟೌನ್ ಟಾಕ್:  ನಟಿ ಮಲೈಕಾ ಅರೋರಾ- ಅರ್ಜುನ್‍ ಕಪೂರ್ ಬ್ರೇಕಪ್

    ಬಿಟೌನ್ ಟಾಕ್: ನಟಿ ಮಲೈಕಾ ಅರೋರಾ- ಅರ್ಜುನ್‍ ಕಪೂರ್ ಬ್ರೇಕಪ್

    ಸೋಷಿಯಲ್ ಮೀಡಿಯಾದಲ್ಲಿ ನಟಿ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಟ್ರೆಂಡಿಂಗ್ ನಲ್ಲಿದ್ದಾರೆ. ಬಿಟೌನ್‍ ನಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಮಲೈಕಾ ಮತ್ತು ಅರ್ಜುನ್ ನಡುವೆ ಬ್ರೇಕ್ ಅಪ್ (Breakup) ಆಗಿದೆಯಂತೆ. ಪರಸ್ಪರ ಇಬ್ಬರೂ ಒಪ್ಪಿಗೆ ಪಡೆದುಕೊಂಡೇ ದೂರವಾಗಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲಿಗೆ ಆರು ವರ್ಷದ ಡೇಟಿಂಗ್ ಸಮಾಚಾರಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ.

    ಬಿಟೌನ್ ಅಂಗಳದ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೂಡ ಒಬ್ಬರಾಗಿದ್ದರು. ಸಾಕಷ್ಟು ವರ್ಷಗಳಿಂದ ಲಿಪ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ  ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

    ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈ ಹಿಂದೆ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದರು.

    ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಇನಿಯನ ಜತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಕೆಲ ದಿನಗಳ ಹಿಂದೆ ಇವರಿಬ್ಬರ ಬ್ರೇಕ್ ಅಪ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಮಲೈಕಾರ ಈ ಮಾತು ಬ್ರೇಕ್ ಅಪ್ ಕಥೆಗೂ ಅಂತ್ಯ ಹಾಡಿತ್ತು.

    ನಾವು ಬಹಳಷ್ಟು ವಿಷಯಗಳನ್ನು ಒಟ್ಟಿಗೆ ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೇವೆ ಮತ್ತು ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ಸಂಬಂಧದಲ್ಲಿ ಯಾವಾಗೂ ನಾವು ಸೇಫ್ ಮತ್ತು ಪಾಸಿಟಿವ್ ಎಂಬ ಭಾವನೆ ಇರಬೇಕು ಎಂದು ಹೇಳಿಕೊಂಡಿದ್ದರು. ಈಗ ನೋಡಿದರೆ ಎಲ್ಲವೂ ಉಲ್ಟಾ ಆಗಿದೆ.

  • ಡಿವೋರ್ಸ್ ಬಗ್ಗೆ ಜನ ಕೀಳಾಗಿ ನೋಡುತ್ತಾರೆ- ಮಲೈಕಾ ಅರೋರಾ

    ಡಿವೋರ್ಸ್ ಬಗ್ಗೆ ಜನ ಕೀಳಾಗಿ ನೋಡುತ್ತಾರೆ- ಮಲೈಕಾ ಅರೋರಾ

    ಬಾಲಿವುಡ್ ಬೆಡಗಿ ಮಲೈಕಾ ಅರೋರಾ (Malaika Arora) 7 ವರ್ಷಗಳ ಹಿಂದೆ ಅರ್ಬಾಜ್ ಖಾನ್ (Arbaaz Khan) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಆದರೆ ಈಗಲೂ ಜನರು ಟೀಕೆ ಮಾಡ್ತಾರೆ ಕೀಳಾಗಿ ನೋಡ್ತಾರೆ ಎಂದು ಡಿವೋರ್ಸ್ ಬಗ್ಗೆ ಮಲೈಕಾ ಅರೋರಾ ಮಾತನಾಡಿದ್ದಾರೆ.

    ಅರ್ಬಾಜ್ ಖಾನ್ ಮತ್ತು ಮಲೈಕಾ 19 ವರ್ಷಗಳ ಕಾಲ ದಾಂಪತ್ಯ ಜೀವನ ಜೊತೆಯಾಗಿ ಕಳೆದಿದ್ದಾರೆ. ಕೆಲ ಮನಸ್ತಾಪಗಳಿಂದ ಇಬ್ಬರೂ ದೂರವಾದರು. ಗಂಡನಿಂದ ದೂರವಾದರೆ ಸಮಾಜ ನೋಡುವ ರೀತಿ ಆಡುವ ಮಾತು ಹೇಗಿರುತ್ತೆ ಎಂದು ನಟಿ ಅಸಮಾಧಾನ ಹೊರಹಾಕಿದ್ದಾರೆ.

    ಸಂದರ್ಶನವೊಂದರಲ್ಲಿ ಡಿವೋರ್ಸ್ ಅನ್ನು ಜನರು ಕೀಳಾಗಿ ನೋಡುತ್ತಾರೆ ಆದರೆ ನನಗೆ ವಿಚ್ಛೇದನದಿಂದ ಖುಷಿ ಸಿಕ್ಕಿದೆ ಎಂದು ಮಲೈಕಾ ಹೇಳಿದ್ದಾರೆ. ನಾನು ಅರ್ಬಾಜ್ ಖಾನ್‌ನಿಂದ ಭಾರಿ ಡಿವೋರ್ಸ್ ಪರಿಹಾರ ಪಡೆದಿದ್ದರಿಂದ ಬೋಲ್ಡ್ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುತ್ತಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ಆಗ ಜನರ ಕಾಮೆಂಟ್ ನನಗೆ ಆಘಾತಕ್ಕೀಡು ಮಾಡಿತ್ತು ಎಂದು ಮಲೈಕಾ ಹೇಳಿದ್ದಾರೆ.

    ಈ ಹಿಂದೆ ಮಲೈಕಾ, ಹೌದು ನಮಗೆ ಡಿವೋರ್ಸ್ ಆಗಿದೆ. ಆದರೆ ನಾವು ಮುಂದೆ ಬಂದಿದ್ದೇವೆ. ಆದರೆ ನೀವಿನ್ನೂ ಅಲ್ಲೇ ಇದ್ದೀರಾ ಎಂದು ಕೆಣಕುವವರಿಗೆ ತಿರುಗೇಟು ನೀಡಿದ್ದರು. ಇದನ್ನೂ ಓದಿ:26ನೇ ವಯಸ್ಸಿಗೆ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ

    ಕಳೆದ ವರ್ಷ ಡಿಸೆಂಬರ್ 24ರಂದು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಅರ್ಬಾಜ್ ಖಾನ್ ಮದುವೆಯಾಗಿದ್ದಾರೆ. ಇತ್ತ ಅರ್ಜುನ್ ಕಪೂರ್ ಜೊತೆ ಮಲೈಕಾ ಅರೋರಾ ಎಂಗೇಜ್ ಆಗಿದ್ದಾರೆ. ಇಬ್ಬರ ಮದುವೆ ಯಾವಾಗ ಎಂದು ಇನ್ನೂ ಅಧಿಕೃತವಾಗಿ ಹೊರಬೀಳಬೇಕಿದೆ.

  • ಮಾಜಿ ಪತಿಯ ಮದುವೆ ಬೆನ್ನಲ್ಲೇ, ಅಚ್ಚರಿ ಹೇಳಿಕೆ ಕೊಟ್ಟ ಮಲೈಕಾ

    ಮಾಜಿ ಪತಿಯ ಮದುವೆ ಬೆನ್ನಲ್ಲೇ, ಅಚ್ಚರಿ ಹೇಳಿಕೆ ಕೊಟ್ಟ ಮಲೈಕಾ

    ವಾರದ ಹಿಂದೆಯಷ್ಟೇ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaaz Khan) ಅವರ ಎರಡನೇ ಮದುವೆ (Marriage) ನಡೆಯಿತು. ನಟಿ ಮಲೈಕಾ ಅರೋರಾ (Malaika Arora) ವಿಚ್ಛೇದನದ ನಂತರ ಒಂಟಿಯಾಗಿಯೇ ಉಳಿದುಕೊಂಡಿದ್ದ ಅರ್ಬಾಜ್, ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ನಡೆಯುತ್ತಿದ್ದಂತೆಯೇ ಅರ್ಬಾಜ್ ಮಾಜಿ ಪತ್ನಿ ಮಲೈಕಾ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

    ಸದ್ಯ ನಟಿ ಮಲೈಕಾ ಅರೋರಾ ರಿಯಾಲಿಟಿ ಶೋನಲ್ಲಿ ನಿರ್ಣಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಶೋನಲ್ಲಿ ಮಲೈಕಾ ಅವರ ಮದುವೆ ವಿಚಾರ ಪ್ರಸ್ತಾಪಿಸಲಾಯಿತು. ಯಾವಾಗ ಮದುವೆ ಆಗಲಿದ್ದೀರಿ ಎಂದು ಕೇಳಲಾಯಿತು. ಕೊಂಚವೂ ಯೋಚನೆ ಮಾಡದೇ ಮುಂದಿನ ವರ್ಷ ಹೊಸ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ.

    ಈಗಾಗಲೇ ಅರ್ಜುನ್ ಕಪೂರ್ ಜೊತೆ ಮಲೈಕಾ ಡೇಟ್ ಮಾಡುತ್ತಿದ್ದಾರೆ. ಸಹಜೀವನ ನಡೆಸುತ್ತಿರುವ ರೀತಿಯಲ್ಲೇ ಬದುಕುತ್ತಿದ್ದಾರೆ. ಅರ್ಜುನ್ ಜೊತೆ ಸಾಕಷ್ಟು ದೇಶಗಳನ್ನೂ ಮಲೈಕಾ ಸುತ್ತಿದ್ದಾರೆ. ಕೊನೆಗೂ ಮದುವೆ ವಿಷಯದ ಕುರಿತು ಮಲೈಕಾ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ತಿಂಗಳು ಮತ್ತು ಡೇಟ್ ಮಾತ್ರ ತಿಳಿಸಿಲ್ಲ.

  • ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಬಾಜ್ ಖಾನ್ ದಂಪತಿ ಪುತ್ರ ಅರ್ಹಾನ್ ಖಾನ್ (Arhaan Khan) ಭಾರತಕ್ಕೆ ಬಂದಿಳಿದಿದ್ದಾರೆ. ತಂದೆ ಅರ್ಬಾಜ್ ಅವರ ಎರಡನೇ ಮದುವೆಯಲ್ಲಿ ಅವರು ಪಾಲ್ಗೊಂಡಿದ್ದಾರೆ. ನೇರವಾಗಿ ತಂದೆಯ ಮದುವೆಯಲ್ಲಿ ಪುತ್ರ ಪಾಲ್ಗೊಂಡಿದ್ದರೆ, ಮಾಜಿ ಪತಿಗೆ ಕೇಕ್ ನೀಡುವ ಮೂಲಕ ಮಲೈಕಾ ಶುಭಾಶಯ ಕೋರಿದ್ದಾರೆ.

    ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ನಿನ್ನೆ (ಡಿ.24) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಸಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

    ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಭಾನುವಾರ ನಡೆದ ನಿಕಾಹ್ ಗಾಗಿ ವಧು ಶುರಾ ಕಾಣ್ ಲೈಟ್ ವೈಟ್ ಪೀಚ್ ಲೆಹೆಂಗಾ ಧರಿಸಿದ್ದರು. ಅರ್ಬಾಜ್ ಕೂಡ ಅಷ್ಟೇ ಗ್ರ್ಯಾಂಡ್ ಆಗಿರುವ ಕಾಸ್ಟ್ಯೂಮ್ ಹಾಕಿಕೊಂಡಿದ್ದರು. ತಮ್ಮ ಇನ್ಸ್ಟಾ ಪೇಜ್ ನಲ್ಲಿ ಮದುವೆ ಕುರಿತು ಅರ್ಬಾಜ್ ಬರೆದುಕೊಂಡಿದ್ದಾರೆ.

    ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿತ್ತು.

     

    ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.