Tag: ಮಲೇಷಿಯಾ

  • ತರಬೇತಿ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ಹೆಲಿಕಾಪ್ಟರ್‌ಗಳು- 10 ಮಂದಿ ದುರ್ಮರಣ

    ತರಬೇತಿ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ಹೆಲಿಕಾಪ್ಟರ್‌ಗಳು- 10 ಮಂದಿ ದುರ್ಮರಣ

    ಕೌಲಾಲಂಪುರ್: ಮಲೇಷಿಯಾದಲ್ಲಿ (Malaysia) ನೌಕಾಪಡೆಯ 2 ಹೆಲಿಕಾಪ್ಟರ್‌ಗಳ (Navy Helicopters) ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 10 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಇಂದು ಬೆಳಗ್ಗೆ 9.30ರ ಸುಮಾರಿಗೆ ಲುಮುಟ್ ನೌಕಾ ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಸದ್ಯ ಹೆಲಿಕಾಪ್ಟರ್‌ಗಳ ಡಿಕ್ಕಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ತಂದೆಯ ಕಾರು ಹರಿದು ಪುಟ್ಟ ಕಂದಮ್ಮ ದುರ್ಮರಣ

    ಮಹಿತಿಗಳ ಪ್ರಕಾರ, ರಾಯಲ್ ಮಲೇಷಿಯನ್ ನೇವಿ ಪರೇಡ್‌ಗಾಗಿ ಹೆಲಿಕಾಪ್ಟರ್‌ಗಳು ಪೂರ್ವಾಭ್ಯಾಸ ಮಾಡುತ್ತಿದ್ದಾಗ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ಹೆಲಿಕಾಪ್ಟರ್‌ನಲ್ಲಿದ್ದ 10 ಮಂದಿ ಸಿಬ್ಬಂದಿ ಮೃತಪಟ್ಟಿರುವ ಬಗ್ಗೆ ನೌಕಾಪಡೆ ದೃಢಪಡಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

  • ಮಲೇಷಿಯಾದಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

    ಮಲೇಷಿಯಾದಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

    ರಾಕಿಂಗ್ ಸ್ಟಾರ್ ಯಶ್ (Yash) ಮಲೇಷಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೇಷಿಯಾ (Malaysia) ವಿಮಾನ ನಿಲ್ದಾಣದಲ್ಲಿ ಬಂದಿಳಿದ ನೆಚ್ಚಿನ ನಟನನ್ನು ಅಲ್ಲಿನ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಹುಟ್ಟು ಹಬ್ಬದ ದಿನದಂದು ನಡೆದ ಅಭಿಮಾನಿಗಳ ದುರಂತ ಅಂತ್ಯದ ನೋವಿನಲ್ಲಿದ್ದ ಯಶ್, ಇದೀಗ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

    ಹಾಗಂತ ಅವರು ಮಲೇಷಿಯಾಗೆ ಹೋಗಿದ್ದು, ಶೂಟಿಂಗಾಗಿ ಅಲ್ಲ, ಖಾಸಗಿ ಸಮಾರಂಭದಲ್ಲಿ ಭಾಗಿ ಆಗುವುದಕ್ಕಾಗಿ ಯಶ್ ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಅವರು ಟಾಕ್ಸಿಕ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ ಎನ್ನುವ ಮಾಹಿತಿ ಇದೆ.

     

    ಟಾಕ್ಸಿಕ್ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದೆ. ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕು. ಬಹುತೇಕ ಶೂಟಿಂಗ್ ವಿದೇಶದಲ್ಲಿ ನಡೆಯಲಿದ್ದು, ಕೆಲವು ಭಾಗಗಳನ್ನು ಮಾತ್ರ ಈ ನೆಲದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎನ್ನುವುದು ಹರಿದಾಡುತ್ತಿರುವ ಮಾಹಿತಿ. ಇದಕ್ಕೆ ಚಿತ್ರತಂಡವೇ ಸ್ಪಷ್ಟನೆ ಕೊಡಬೇಕಿದೆ.

  • ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಅಮರಾವತಿ: ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ.

    ಸಮುದ್ರದಲ್ಲಿ ತೇಲುತ್ತಿದ್ದ ರಥವನ್ನು ನೋಡಿದ ಗ್ರಾಮಸ್ಥರು ಅದನ್ನು ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಾಗಿರುವುದರಿಂದಾಗಿ ಇದು ಮಯನ್ಮಾರ್, ಮಲೇಷಿಯಾ ಅಥವಾ ಥೈಲೆಂಡ್‍ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ.

    ಈ ರಥವು ನೋಡಲು ಏಷ್ಯಾ ರಾಷ್ಟ್ರಗಳ ಮಠದ ಆಕಾರವನ್ನು ಹೊಂದಿದೆ. ಚಂಡಮಾರುತದ ಪ್ರಭಾವದಿಂದಾಗಿ ಉಂಟಾದ ಎತ್ತರದ ಅಲೆಗಳ ಕಾರಣದಿಂದಾಗಿ ರಥವು ಕರಾವಳಿಗೆ ಕೊಚ್ಚಿ ಹೋಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದರು. ಜೋತೆಗೆ ಈನ ರಥವನ್ನು ಕೌತುಕದಿಂದ ವೀಕ್ಷಿಸಿದರು. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!

    ಈ ಬಗ್ಗೆ ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಮಾತನಾಡಿ, ಯಾವುದೇ ದೇಶದಿಂದ ಬಂದಿರದಿರಬಹುದು ಅಥವಾ ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿರಬಹುದು. ಇದು ಚಂಡಮಾರುತದ ಪ್ರಭಾವದಿಂದಾಗಿ ಶ್ರೀಕಾಕುಲಂ ತೀರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

  • ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ ವೃದ್ಧ

    ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ ವೃದ್ಧ

    ಕೌಲಾಲಂಪುರ್: ಮೇಕೆಯೊಂದಿಗೆ ಸೆಕ್ಸ್ ಮಾಡಿ ವೃದ್ಧನೊರ್ವ ಸಿಕ್ಕಿಬಿದ್ದು, ಜೈಲು ಪಾಲಾಗಿರುವ ಘಟನೆ ಮಲೇಷಿಯಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

    ಹ್ಯಾರಿ ಹಸನ್(60) ಮೇಕೆ ಜೊತೆಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಮೂಕ ಪ್ರಾಣಿಯೊಂದಿಗೆ ಕೆಟ್ಟ ವರ್ತನೆ ತೋರಿಸಿದ್ದಕ್ಕಾಗಿ, ಮೇಕೆ ಮಾಲೀಕರು ದೂರಿನ ಅನ್ವಯ  ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

    POLICE JEEP

    ಈತ ಕೌಲಾಲಂಪುರದಿಂದ 18 ಮೈಲುಗಳಷ್ಟು ದೂರವಿರುವ ರಾವಾಂಗ್ನಲ್ಲಿ ವಾಸಿಸುತ್ತಿದ್ದನು. ಒಂದು ದಿನ ಮನೆಯ ಹಿಂಭಾಗಹದಲ್ಲಿ ನಾಯಿಯೊಂದು ಬೊಗಳುತ್ತಿರುವ ಶಬ್ಧ ಕೇಳಿಸಿತು. ಇದನ್ನು ಕಂಡ ನೆರೆ ಮನೆಯವರು ವ್ಯಕ್ತಿಯೋರ್ವ ಮೇಕೆಯೊಂದಿಗೆ ಸೆಕ್ಸ್ ಮಾಡುತ್ತಿರುವುದನ್ನು ಕಂಡಿದ್ದಾರೆ. ಹ್ಯಾರಿ ಹಸನ್ನಿಂದಾಗಿ ಮೇಕೆ ಸಾವನ್ನಪ್ಪಿದೆ. ಮನೆಯ ಹಿಂಭಾಗ ಅರೆ ಬೆತ್ತಲೆಯಲ್ಲಿ ಹಸನ್ ಸಿಕ್ಕಿಬಿದ್ದ ಕಾರಣ ಮನೆಯ ಮಾಲೀಕರು ಹ್ಯಾರಿ ಮೇಲೆ ದೂರು ನೀಡಿದರು. ಇದನ್ನೂ ಓದಿ:  ಅಪ್ಪು ಚಿತ್ರದ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತರೆ ಕಲಾವಿದರ ತಂಡ

    ಕೌಲಾ ಕುಬು ಬರು ನ್ಯಾಯಾಲಯದಲ್ಲಿ ಹ್ಯಾರಿ ಹಸನ್ ಪ್ರಾಣಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದ ಮೇಲೆ ಜೈಲು ವಾಸದ ಜೊತೆಗೆ ದಂಡವನ್ನು ತೆರೆಬೇಕಾಗಿ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ

  • ಕಲಬುರಗಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಯುವಕ

    ಕಲಬುರಗಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಯುವಕ

    ಕಲಬುರಗಿ: ಬೇಸಿಗೆ ಕಾಲದಲ್ಲಿ ಹೆಚ್ಚು ಬೇಡಿಕೆ ಇರುವ ಹಣ್ಣು ಕಲ್ಲಂಗಡಿ. ಸಾಧಾರಣ ಕೆಂಪು ಬಣ್ಣದ ಕಲ್ಲಂಗಡಿಯಯನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಕಲಬುರಗಿಯ ಯುವಕನೋರ್ವ ಮಲೇಷಿಯಾ ದೇಶದ ಹಳದಿ ತಳಿಯ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡಿದ್ದಾನೆ.

    ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಬಸವರಾಜ್ ಪಾಟೀಲ್ ಬಿ.ಕಾಂ ಪದವಿಧರನಾಗಿದ್ದರು. ಕೃಷಿಯಲ್ಲಿ ಏನಾದರು ಹೊಸತನವನ್ನು ಕಂಡು ಹಿಡಿದು ಸಾಧನೆ ಮಾಡಬೇಕು ಎಂಬ ಹಂಬಲದಿಂದ ಕೃಷಿಯತ್ತ ಮುಖ ಮಾಡಿದ್ದರು. ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆ ಅತೀ ಹೆಚ್ಚು ಮಾರಾಟವಾಗುವ ಕಲ್ಲಂಗಡಿ ಹಣ್ಣಿನಲ್ಲಿ ಹೊಸ ತಳಿಯ ಹಣ್ಣನ್ನು ಬೆಳೆಯಬೇಕು ಎಂದು ನಿರ್ಧರಿಸಿದ್ದರು. ಅದರಂತೆ ತನ್ನ ಸ್ನೇಹಿತರ ಜೊತೆ ಚರ್ಚಿಸಿ 2 ಎಕರೆ ಪ್ರದೇಶದಲ್ಲಿ ಮಲೇಷಿಯಾದಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ತಳಿಯ ಹಣ್ಣನ್ನು ಬೆಳೆದಿದ್ದಾರೆ. ಇದೀಗ ಈ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಹಳದಿ ಬಣ್ಣದ ಕಲ್ಲಂಗಡಿಗೆ ಫುಲ್ ಡಿಮ್ಯಾಂಡ್ ಬಂದಿದೆ.

    ಹಳದಿ ಬಣ್ಣದ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಅತ್ಯಂತ ರುಚಿಕರವಾಗಿದೆ ಹಾಗೂ ಹೆಚ್ಚು ಇಳುವರಿ ಸಹ ಬರುತ್ತದೆ. ಕೆಂಪು ಕಲ್ಲಂಗಡಿ ಹೊಲ್‍ಸೇಲ್ ದರದಲ್ಲಿ ಪ್ರತಿ ಕೆಜಿಗೆ 6 ರಿಂದ 8 ರೂಪಾಯಿವರೆಗೆ ಮಾರಾಟವಾದರೆ, ಮಲೇಷಿಯಾ ತಳಿಯ ಈ ಹಳದಿ ಕಲ್ಲಂಗಡಿ ಪ್ರತಿ ಕೆಜಿಗೆ 15 ರೂಪಾಯಿ ಮಾರಾಟವಾಗುತ್ತಿದೆ. ಕಲಬುರಗಿಯ ಈ ಯುವಕ ಹಳದಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿದ್ದಾರೆ.

    ಸದ್ಯ ಕಲಬುರಗಿಯ ಈ ವಾಟರ್ ಮೆಲನ್ ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿ ಮಾರಾಟವಾಗುತ್ತಿದೆ. ಇಂದಿನ ದಿನಗಳಲ್ಲಿ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ಪಟ್ಟಣ ಸೇರಿ ಕೈ ಸುಟ್ಟುಕೊಳ್ಳುತ್ತಿರುವ ಯುವಕರಿಗೆ ಕಲಬುರಗಿಯ ಬಸವರಾಜ್ ಮಾದರಿಯಾಗಿದ್ದು, ಕೃಷಿಯಲ್ಲಿಯೇ ಮನಸ್ಸು ಮಾಡಿದ್ರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

  • ವಿಶ್ರಾಂತಿಗಾಗಿ ವಿದೇಶಕ್ಕೆ ಹಾರಿದ ಕುಮಾರಸ್ವಾಮಿ

    ವಿಶ್ರಾಂತಿಗಾಗಿ ವಿದೇಶಕ್ಕೆ ಹಾರಿದ ಕುಮಾರಸ್ವಾಮಿ

    ಬೆಂಗಳೂರು: ಮೈತ್ರಿ ಸರ್ಕಾರ ಪತನವಾದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಬೇಸರಗೊಂಡಿದ್ದು, ಹೆಚ್ಚು ಸಮಯವನ್ನು ವಿಶ್ರಾಂತಿಯಲ್ಲೇ ಕಳೆಯುತ್ತಿದ್ದಾರೆ. ಇದೀಗ ವಿಶ್ರಾಂತಿಗಾಗಿಯೇ ಮಲೇಷ್ಯಾಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಎಲ್ಲ ಜಂಜಾಟಗಳನ್ನು ಬದಿಗೊತ್ತಿ ವಿದೇಶ ಪ್ರವಾಸಕ್ಕೆ ಎಚ್.ಡಿ.ಕುಮಾರಸ್ವಾಮಿ ತೆರಳಿದ್ದು, ನಿನ್ನೆ ತಡ ರಾತ್ರಿ ಇಬ್ಬರು ಆಪ್ತರೊಂದಿಗೆ ವಿಮಾನ ಹತ್ತಿದ್ದಾರೆ. ನಾಲ್ಕು ದಿನಗಳ ಕಾಲ ಮಲೇಷ್ಯಾದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

    ಇತ್ತೀಚೆಗೆ ನೆರೆ ಪೀಡಿತ ಪ್ರದೇಶಗಳಲ್ಲಿ ಎಚ್‍ಡಿಕೆ ಪ್ರವಾಸ ಮಾಡಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ್ದರು. ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಮಾತಿನ ಯುದ್ಧವೇ ನಡೆದಿತ್ತು, ಇಬ್ಬರು ನಾಯಕರು ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದರು. ಇದೀಗ ಎಲ್ಲದರಿಂದ ವಿಶ್ರಾಂತಿ ಪಡೆಯಲು ಮಲೇಷ್ಯಾಗೆ ತೆರಳಿದ್ದಾರೆ.

    ಇತ್ತೀಚೆಗೆ ಎಚ್.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯನವರ ನಡುವೆ ಮಹಾ ಯುದ್ಧವೇ ನಡೆದಿತ್ತು. ಇದಾದ ಬಳಿಕ ಇದು ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ಮಧ್ಯೆ ಪ್ರಾರಂಭವಾಯಿತು. ಇಬ್ಬರು ನಾಯಕರೂ ಸಹ ಆರೋಪ ಪ್ರತ್ಯಾರೋಪಗಳನ್ನು ಮಾಡುವ ಮೂಲಕ ನೇರ ಕದನಕ್ಕೆ ಇಳಿದಿದ್ದರು.

    ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಎಚ್‍ಡಿಕೆ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿ, ಮೈತ್ರಿ ಸರ್ಕಾರದಲ್ಲಿ ಸಿಎಂ ಅಲ್ಲ, `ಎಫ್‍ಡಿಎ (ಫಸ್ಟ್ ಡಿವಿಷನ್) ಕ್ಲರ್ಕ್’ ಆಗಿದ್ದೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ವಿರುದ್ಧ ಹರಿಹಾಯ್ದಿದ್ದರು.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಜೆಡಿಎಸ್ಸೇ ಮೊದಲ ವೈರಿಯಾಗಿತ್ತು. ಮೈತ್ರಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಖುಷಿ ಆಗಿರಲಿಲ್ಲ ಎಂದು ಎಚ್‍ಡಿಕೆ ಆರೋಪಿಸಿದ್ದರು.

    ಕುಮಾರಸ್ವಾಮಿಯಿಂದ ಕಾಂಗ್ರೆಸ್‍ಗೆ ತೊಂದರೆ ಅನ್ನೋದು ಸಿದ್ದರಾಮಯ್ಯ ವಾದವಾಗಿತ್ತು. ಆದರೆ ಪ್ರತಿನಿತ್ಯ ಸಿದ್ದರಾಮಯ್ಯರಿಂದ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿತ್ತು. ಸಿಎಂ ಆಗಿದ್ದಾಗ ನನ್ನ ನೈತಿಕತೆಯನ್ನು ಕುಗ್ಗಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದರು. ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮಯ್ಯರೇ ಮತ್ತೆ ಸಿಎಂ ಆಗಬೇಕು ಎಂದು ಹೇಳುತ್ತಲೇ ಇದ್ದರು. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗಿ ವಾಪಸ್ ಆದರೆ ಮಾತ್ರ ನಮ್ಮ ಬೆಂಬಲ ಎಂದು ಅತೃಪ್ತ ಶಾಸಕರು ಹೇಳಿದ್ದರು. ಅವರ ಮಾತಿನ ಅರ್ಥ ಏನು? ಅತೃಪ್ತರ ಶಾಸಕರನ್ನು ಸಿದ್ದರಾಮಯ್ಯ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಿತ್ತು ತಾನೇ? ಆದರೆ ಸಿದ್ದರಾಮಯ್ಯ ಹಾಗೇ ಮಾಡಲಿಲ್ಲ ಎಂದು ಕಿಡಿಕಾರಿದ್ದರು.

    ಒಂದು ವೇಳೆ ಯಡಿಯೂರಪ್ಪ ಸರ್ಕಾರ ನಡೆಸಲು ವಿಫಲರಾಗಿ ಸರ್ಕಾರ ಪತನವಾದರೆ ಈಗ ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ತಾವು ಮತ್ತೆ ಸಿಎಂ ಆಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಸಿದ್ದರಾಮಯ್ಯ ನಮ್ಮವರೇ ಆಗಿದ್ದು, ಅವರ ಬೆನ್ನಿಗೆ ನಾವು ಚೂರಿ ಇರಿದಿಲ್ಲ. ಜೆಡಿಎಸ್‍ನಲ್ಲಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಪಕ್ಷಕ್ಕೆ ಪರ್ಯಾಯವಾಗಿ ಅಹಿಂದ ಸಂಘಟನೆ ನಡೆಸಿ ಜೆಡಿಎಸ್ ಬೆಳವಣಿಗೆಗೆ ಅಡ್ಡಿ ಆದರು. ಈ ಮೂಲಕ ಜೆಡಿಎಸ್‍ಗೆ ಮೋಸ ಮಾಡಿದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್‍ನಿಂದ ಅವರನ್ನು ಉಚ್ಛಾಟನೆ ಮಾಡಿದೆವು ಎಂದಿದ್ದಾರೆ.

    ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್‍ನವರ ಒತ್ತಡದಲ್ಲಿ ಕೆಲಸ ಮಾಡಬೇಕಿತ್ತು. ಕಾಂಗ್ರೆಸ್ ನನ್ನ ಮೇಲೆ ಸವಾರಿ ಮಾಡಿತು. ವರ್ಗಾವಣೆಯಲ್ಲೂ ಅವರು ಹೇಳಿದ್ದನ್ನೇ ಮಾಡಬೇಕಿತ್ತು. ಡಿಸಿ ವರ್ಗಾವಣೆಯಲ್ಲೂ ನನಗೆ ಸ್ವಾತಂತ್ರ್ಯ ಇರಲಿಲ್ಲ. ವರ್ಗಾವಣೆ ನನ್ನ ವ್ಯಾಪ್ತಿಗೆ ಬಂದರೂ ನಾನು ಕಾಂಗ್ರೆಸ್‍ನವರು ಏನು ಹೇಳುತ್ತಾರೋ ಅದನ್ನೇ ಮಾಡಬೇಕಿತ್ತು, ಇವತ್ತು ಒಳ್ಳೆಯ ವ್ಯಕ್ತಿಗಳಿಗೆ ರಾಜಕೀಯ ಅಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆಯೇ ನನಗೆ ಗ್ಯಾರಂಟಿ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು.

  • ಮೊಬೈಲ್ ಸ್ಫೋಟಗೊಂಡು ಸಿಇಒ ಸ್ಥಳದಲ್ಲೇ ಸಾವು!

    ಮೊಬೈಲ್ ಸ್ಫೋಟಗೊಂಡು ಸಿಇಒ ಸ್ಥಳದಲ್ಲೇ ಸಾವು!

    ಕೌಲಾಲಾಂಪುರ: ಚಾರ್ಜ್ ಇಟ್ಟಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಮಲೇಷಿಯಾದ ಕ್ರಾಡಲ್ ಫಂಡ್ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ನಜೀರ್ ಹಸನ್(45) ಮೃತಪಟ್ಟ ಸಿಇಒ. ಎಂದಿನಂತೆ ಮನೆಯಲ್ಲಿ ಚಾರ್ಜ್ ಗೆ ಇಟ್ಟು ಮಲಗಿದ್ದಾಗ ಮೊಬೈಲ್ ಸ್ಫೋಟಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವರದಿಗಳ ಪ್ರಕಾರ ನಜೀರ್ ಹಸನ್‍ರವರು ತಮ್ಮ ಎರಡು ಸ್ಮಾರ್ಟ್‍ಫೋನ್‍ಗಳನ್ನು ರಾತ್ರಿ ಮಲಗುವ ವೇಳೆ ತಮ್ಮ ಹಾಸಿಗೆಯ ಪಕ್ಕದಲ್ಲೇ ಚಾರ್ಜ್‍ಗೆ ಇಟ್ಟಿದ್ದಾರೆ. ಈ ವೇಳೆ ಇದರಲ್ಲಿ ಒಂದು ಫೋನ್ ಸ್ಫೋಟಗೊಂಡು ಕೊಠಡಿ ತುಂಬಾ ಬೆಂಕಿ ಆವರಿಸಿಕೊಂಡು ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಸಂಬಂಧಿಗಳು, ಹಸನ್‍ರವರು ಬ್ಲಾಕ್ ಬೆರ್ರಿ ಮತ್ತು ಹುವಾವೇ ಕಂಪನಿಯ ಎರಡು ಫೋನ್‍ಗಳನ್ನು ಬಳಸುತ್ತಿದ್ದರು. ಮೊಬೈಲ್ ಸ್ಫೋಟಗೊಂಡು ತಲೆಗೆ ಗಂಭೀರಗಾಯವಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸ್ಫೋಟಗೊಂಡಿರುವ ಮೊಬೈಲ್‍ನಲ್ಲಿ ಯಾವ ಫೋನ್ ಸ್ಫೋಟಗೊಂಡಿದೆ ಎಂಬುದು ತಿಳಿದು ಬಂದಿಲ್ಲ, ಹಸನ್‍ರವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದು, ಕೆಲಸದ ನಿಮಿತ್ತ ಅವರಿಂದ ದೂರವಾಗಿದ್ದರು ಎಂದು ತಿಳಿಸಿದ್ದಾರೆ.

    ಪ್ರಕರಣ ಕುರಿತು ಹೇಳಿಕೆ ನೀಡಿದ ಮಲೇಷಿಯಾ ಪೊಲೀಸರು, ವ್ಯಕ್ತಿ ಮೊಬೈಲ್ ಚಾರ್ಜಿಂಗ್ ಇಟ್ಟಿದ್ದ ವೇಳೆ ಸ್ಫೋಟಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೊಬೈಲ್ ಸ್ಫೋಟದಿಂದ ಉಂಟಾದ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ ಎಂದು ವರದಿ ಬಂದಿದೆ ಎಂದು ಹೇಳಿದ್ದಾರೆ.

  • ಲಾಸ್ಟ್ ಬಾಲ್ ಫಿನಿಶ್: ಮೊದಲ ಏಷ್ಯಾಕಪ್ ಗೆ ಮುತ್ತಿಟ್ಟ ಬಾಂಗ್ಲಾ ವನಿತೆಯರು

    ಲಾಸ್ಟ್ ಬಾಲ್ ಫಿನಿಶ್: ಮೊದಲ ಏಷ್ಯಾಕಪ್ ಗೆ ಮುತ್ತಿಟ್ಟ ಬಾಂಗ್ಲಾ ವನಿತೆಯರು

    ಕೌಲಾಲಂಪುರ: ಮಲೇಷಿಯಾದಲ್ಲಿ ನಡೆದ ಏಷ್ಯಾ ಕಪ್ ಟಿ-20 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದಿದ್ದು, ಈ ಮೂಲಕ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

    ಟೀಂ ಇಂಡಿಯಾ ನೀಡಿದ್ದ 113 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾ ಪರ ನಿಗರ್ ಸುಲ್ತಾನಾ (27) ಹಾಗೂ ರುಮಾನಾ ಅಹ್ಮದ್ (23) ಇಬ್ಬರ ಉತ್ತಮ ಆಟದ ನೆರವಿನಿಂದ ಮೂರು ವಿಕೆಟ್ ಅಂತರದ ಗೆಲುವು ಪಡೆಯಿತು. ಕೊನೆಯ ಓವರ್ ನಲ್ಲಿ ತಂಡದ ಗೆಲುವಿಗೆ 9 ರನ್‍ಗಳ ಅವಶ್ಯಕತೆಯಿತ್ತು. ಈ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ಎಸೆದ ಓವರ್ ನ ಕೊನೆಯ ಎಸೆತದಲ್ಲಿ ಎರಡು ರನ್ ಸಿಡಿಸಿದ ಜಹನ್ಸಾ ಆಲಂ ಬಾಂಗ್ಲಾ ಗೆಲುವಿನ ನಗೆ ಬೀರಲು ಕಾರಣರಾದರು. ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಪೂನಂ ಯಾದವ್ 4 ಓವರ್ ಗಳಲ್ಲಿ 9 ರನ್ ನೀಡಿ 4 ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ನಾಯಕಿ ಹರ್ಮನ್‍ ಪ್ರೀತ್ ಕೌರ್ ಅವರ ಏಕಾಂಗಿಯಾಗಿ ಹೋರಾಟ ನಡೆಸಿ ಅರ್ಧಶತಕ (56) ಸಿಡಿಸಿ ತಂಡ ಗೌರವ ಮೊತ್ತ ಗಳಿಸಲು ಕಾರಣರಾಗಿದ್ದರು. ಇನ್ನುಳಿದಂತೆ ತಂಡದ ಪರ ವೇದಾ ಕೃಷ್ಣಮೂರ್ತಿ (11), ಮಿಥಾಲಿ ರಾಜ್ (11) ಹಾಗೂ ಅಂತಿಮ ಹಂತದಲ್ಲಿ ಜೂಲನ್ ಗೋಸ್ವಾಮಿ (10) ರನ್ ಗಳಿಸಿದರು. ಸ್ಮೃತಿ ಮಂದಣ್ಣ (7), ದೀಪ್ತಿ ಶರ್ಮಾ (4), ಅನುಜಾ ಪಾಟೀಲ್ (3), ತನಿಯ ಭಾಟಿಯಾ (3), ಶಿಖಾ ಪಾಂಡೆ (1) ವೈಫಲ್ಯ ಅನುಭವಿಸಿದರು. ಇನ್ನು ಬಾಂಗ್ಲಾದೇಶದ ಪರ ರುಮಾನಾ ಅಹ್ಮದ್ ಮತ್ತು ಖದಿಜಾ ಟುಲ್ ಕುಬ್ರಾ ತಲಾ 2 ವಿಕೆಟ್ ಪಡೆದಿದ್ದು, ಜಹನ್ಸಾ ಆಲಂ ಮತ್ತು ಸಲ್ಮಾ ಕುಟನ್ ತಲಾ 1 ವಿಕೆಟ್ ಪಡೆದರು.

    ಗಾಯದ ಸಮಸ್ಯೆಯಿಂದ ಪಂದ್ಯಕ್ಕೆ ಅಲಭ್ಯರಾಗಿದ್ದ ಟೀಂ ಇಂಡಿಯಾ ವೇಗಿ ಶಿಖಾ ಪಾಂಡೆ ಭಾರತಕ್ಕೆ ಪಂದ್ಯದಲ್ಲಿ ಹಿನ್ನಡೆ ಉಂಟಾಗಲು ಪ್ರಮುಖ ಕಾರಣವಾಯಿತು. ಫೈನಲ್ ಪಂದ್ಯದ ಸೋಲಿನೊಂದಿಗೆ ಟೀಂ ಇಂಡಿಯಾ ಮಹಿಳಾ ತಂಡ ವಾರದ ಅವಧಿಯಲ್ಲಿ ಎರಡನೇ ಭಾರಿಗೆ ಬಾಂಗ್ಲಾ ವಿರುದ್ಧ ಸೋಲಿನ ಕಹಿ ಅನುಭವಿಸಿದೆ. ಭಾರತದ ಸ್ಫೋಟಕ ಆಟಗಾರ್ತಿ ಮಿಥಾಲಿ ರಾಜ್ ಬಾಂಗ್ಲಾ ವಿರುದ್ಧದ ಎರಡು ಪಂದ್ಯಗಳಲ್ಲಿ ವೈಪಲ್ಯ ಅನುಭವಿಸಿದ್ದರು.

  • ಮಲೇಷಿಯಾದಲ್ಲಿ ಕಿಚ್ಚ ಫ್ಯಾಮಿಲಿ

    ಮಲೇಷಿಯಾದಲ್ಲಿ ಕಿಚ್ಚ ಫ್ಯಾಮಿಲಿ

    ಬೆಂಗಳೂರು: ಇತ್ತೀಚೆಗೆ ನಟ ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯಾ ಸುದೀಪ್ ಮತ್ತು ಮಗಳು ಸಾನ್ವಿ ಜೊತೆ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

    ಸುದೀಪ್ ಮಗಳು ಸಾನ್ವಿಗೆ ಬೇಸಿಗೆ ರಜೆ ಶುರುವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ರಜಾ ಸಿಕ್ಕಿರೆ ಸಾಕು ಮಜಾ ಮಾಡುವ, ಸುತ್ತಾಡುವ ಮೂಡನಲ್ಲಿರುತ್ತಾರೆ. ಆದ್ದರಿಂದ ಸುದೀಪ್ ದಂಪತಿ ಮತ್ತು ಮಗಳು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

    ಸಾಲು ಸಾಲು ಸಿನಿಮಾಗಳ ಶೂಟಿಂಗ್ ನಲ್ಲೂ ಬಿಡುವು ಇದ್ದಾಗ ತಮ್ಮ ಪ್ರೀತಿಯ ಮಗಳು ಮತ್ತು ಪತ್ನಿಯ ಜೊತೆ ಆರು ದಿನಗಳ ಕಾಲ ಮಲೇಷಿಯಾ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಪ್ರವಾಸ ಮುಗಿಸಿ ಬಂದ ನಂತರ ಪ್ರಿಯಾ ಸುದೀಪ್ ಅಲ್ಲಿ ತೆಗೆದ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ನನಗೆ ಇಷ್ಟವಾದ ವ್ಯಕ್ತಿಗಳ ಜೊತೆ ಮರೆಯಲಾಗದ ಮಧುರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.

    ಸುದೀಪ್ ಮೊದಲು ಮಗಳನ್ನ ಜಪಾನ್ ಗೆ ಕರೆದುಕೊಂಡು ಹೋಗಬೇಕೆಂದು ಅಂದುಕೊಂಡಿದ್ದರು. ಆದರೆ ಶೂಟಿಂಗ್ ಇದ್ದುದ್ದರಿಂದ ಆರು ದಿನಗಳ ಕಾಲ ಮಾತ್ರ ರಜೆ ಇತ್ತು. ಆದ್ದರಿಂದ ಮಲೇಷಿಯಾಕ್ಕೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸುದೀಪ್ `ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.

  • ವಿಷಪೂರಿತ ಹಾವು ಕಚ್ಚಿ ಖ್ಯಾತ ಕೋಬ್ರಾ ಕಿಸ್ಸರ್ ಸಾವು

    ವಿಷಪೂರಿತ ಹಾವು ಕಚ್ಚಿ ಖ್ಯಾತ ಕೋಬ್ರಾ ಕಿಸ್ಸರ್ ಸಾವು

    ಕೌಲಾಲಂಪುರ: ಕೋಬ್ರಾ ಕಿಸ್ಸರ್ ಎಂದು ವಿಶ್ವ ಖ್ಯಾತಿ ಪಡೆದಿದ್ದ ಮಲೇಷಿಯಾದ ಅಬು ಝರಿನ್ ಹುಸೇನ್ ಕೋಬ್ರಾ ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ.

    ಪ್ರಪಂಚದಲ್ಲೇ ಅತ್ಯಂತ ವಿಷಪೂರಿತ ಕೋಬ್ರಾ ಹಾವುಗಳಿಗೆ ಕಿಸ್ ಮಾಡುವ ಮೂಲಕ ಅಬು ಹುಸೇನ್ ಪ್ರಸಿದ್ಧಿ ಪಡೆದಿದ್ದರು. ಆದರೆ ಮಲೇಷಿಯಾದ ಬೆಂಟಾಂಗ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೋಬ್ರಾ ಕಚ್ಚಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಿದರು, ಚಿಕಿತ್ಸೆ ವಿಫಲವಾಗಿ ಸಾವನ್ನಪ್ಪಿದ್ದಾರೆ.

    ಈ ಹಿಂದೆ ಹುಸೇನ್ ಕೋಬ್ರಾವನ್ನೇ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿದ್ದರು. ಬಳಿಕ ಈ ಸುದ್ದಿ ಸುಳ್ಳು ಎಂದು ತಿಳಿಯಿತು. ಹುಸೇನ್ ಮಲೇಷಿಯಾದ ಅಗ್ನಿಶಾಮಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಸ್ನೇಹಿತರ ಮೂಲಕ ಕೋಬ್ರಾ ಹಾವುಗಳನ್ನು ಹಿಡಿಯುವ ಕಲೆ ಕಲಿತ ಬಳಿಕ ಹೆಚ್ಚು ಖ್ಯಾತಿ ಪಡೆದಿದ್ದರು. ಅಲ್ಲದೇ ತಮ್ಮ ಈ ಕೌಶಲ್ಯದ ಮೂಲಕವೇ `ಏಷ್ಯಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.

    ಹಲವು ಬಾರಿ ರಕ್ಷಣಾ ಕಾರ್ಯಾಚರಣೆ ನಡೆಸುವ ವೇಳೆ ಕೋಬ್ರಾದಿಂದ ಕಚ್ಚಿಸಿಕೊಂಡಿದ್ದರು. 2015 ರಲ್ಲಿ ಕೋಬ್ರಾ ಕಚ್ಚಿದ ಪರಿಣಾಮ ಎರಡು ದಿನಗಳ ಕಾಲ ಕೋಮಾ ಕ್ಕೆ ಜಾರಿದ್ದರು. ಆದರೆ ಈ ಬಾರಿ ಹುಸೇನ್ ಸಾವಿನಿಂದ ಪಾರಾಗಲು ಸಾಧ್ಯವಾಗಿಲ್ಲ ಎಂದು ಮಲೇಷಿಯಾದ ಅಗ್ನಿಶಾಮಕ ಇಲಾಖೆ ಸ್ಪಷ್ಟಪಡಿಸಿದೆ.