Tag: ಮಲೇಗಾಂವ್

  • ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ

    ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ

    ಲ್ಮಾನ್ ಖಾನ್ (Salman Khan) ನಟನೆಯ ಟೈಗರ್ 3 ಸಿನಿಮಾ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಟಿಸಿ ಘಟನೆ ನಡೆದಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ (Shah Rukh Khan) ಅತಿಥಿ ಪಾತ್ರವೊಂದನ್ನು ಮಾಡಿದ್ದಾರೆ. ಅವರ ಎಂಟ್ರಿಗೆ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದಾರೆ. ಹಾಗಾಗಿ ಥಿಯೇಟರ್ ತುಂಬಾ ಪಟಾಕಿಯ ಕಿಡಿಗಳು ಹಾರಾಡಿವೆ. ಹೊಗೆ ತುಂಬಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಮಹಾರಾಷ್ಟ್ರದ ಮಲೇಗಾಂವ್ (Malegaon) ನಲ್ಲಿ ಮೊನ್ನೆಯಿಂದ ಟೈಗರ್ 3 (Tiger 3) ಸಿನಿಮಾ ಪ್ರದರ್ಶನ ನಡೆಯುತ್ತಿದೆ. ನಿನ್ನೆ ದೀಪಾವಳಿ ಆಗಿದ್ದರಿಂದ ಸಾಕಷ್ಟು ಅಭಿಮಾನಿಗಳು ಥಿಯೇಟರ್ ಗೆ ಆಗಮಿಸಿ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಕೆಲ ಕಿಡಿಗೇಡಿ ಅಭಿಮಾನಿಗಳು ಶಾರುಖ್ ಖಾನ್ ಎಂಟ್ರಿಗೆ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದಾರೆ. ಹೀಗಾಗಿ ಥಿಯೇಟರ್ ತುಂಬೆಲ್ಲ ಪಟಾಕಿಯ ಕಿಡಿಗಳು ತುಂಬಿಕೊಂಡಿದ್ದವು.

    ಈ ಕುರಿತು ಥಿಯೇಟರ್ ಮಾಲೀಕರು ಮಾಧ್ಯಮಗಳ ಜೊತೆ ಮಾತನಾಡಿ, ಅಭಿಮಾನಿಗಳಿಂದಾಗಿ ಥಿಯೇಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಾಕಷ್ಟು ಹಾನಿ ಕೂಡ ಆಗಿದೆ. ಈ ರೀತಿಯಲ್ಲಿ ಮಾಡುವುದು ಸರಿಯಲ್ಲ. ಅಭಿಮಾನಿಗಳು ಅಭಿಮಾನವನ್ನು ಥಿಯೇಟರ್ ಹೊರಗೆ ತೋರಿಸಬೇಕು. ಕೆಲವರಿಂದಾಗಿ ಹೆಚ್ಚಿನ ಜನರಿಗೆ ತೊಂದರೆ ಆಗಿದೆ ಎಂದಿದ್ದಾರೆ.

  • ಪ್ರಗ್ಯಾ ಸಿಂಗ್ ಠಾಕೂರ್ ಅರ್ಜಿ ತಿರಸ್ಕರಿಸಿದ ಎನ್‍ಐಎ ನ್ಯಾಯಾಲಯ

    ಪ್ರಗ್ಯಾ ಸಿಂಗ್ ಠಾಕೂರ್ ಅರ್ಜಿ ತಿರಸ್ಕರಿಸಿದ ಎನ್‍ಐಎ ನ್ಯಾಯಾಲಯ

    ಮುಂಬೈ: ಬಿಜೆಪಿ ಸಂಸದೆ ಹಾಗೂ ಮಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ಎನ್‍ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಸ್ಫೋಟದ ಕುರಿತು ವಿಚಾರಣೆ ಸಮಯದಲ್ಲಿ ಪ್ರತಿಬಾರಿಯೂ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಎನ್‍ಐಎ ವಿಶೇಷ ನ್ಯಾಯಾಲಯ ತಿಸ್ಕರಿಸಿದೆ.

    ಪ್ರಗ್ಯಾ ಸಿಂಗ್ ಠಾಕೂರ್ ಹಾಗೂ ಇತರ ಆರೋಪಿಗಳು ವಾರಕ್ಕೊಂದು ಬಾರಿ ಹಾಜರಿರುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಆದ್ರೆ ಗುರುವಾರ ಮಾತ್ರ ಪ್ರಜ್ಞಾ ಸಿಂಗ್ ಹಾಜರಿಗೆ ನ್ಯಾಯಾಲಯ ವಿನಾಯ್ತಿಯನ್ನು ನೀಡಿತ್ತು.

    ಅನಾರೋಗ್ಯ, ಭೋಪಾಲ್‍ನಿಂದ ಮುಂಬೈಗೆ ಪ್ರಯಾಣ ಮತ್ತು ಸಂಸದೆಯ ಭದ್ರತೆ ದೃಷ್ಟಯಿಂದ ವಿಚಾರಣೆಗೆ ಪ್ರತಿ ಬಾರಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಪ್ರಗ್ಯಾ ಅವರು ಅರ್ಜಿ ಸಲ್ಲಿಸಿದ್ದರು. ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಅಧಿವೇಶನಕ್ಕೆ ಹಾಜರಾಗದಿದ್ದರೆ ವಿಪ್ ಜಾರಿಗೊಳಿಸಲಾಗುತ್ತದೆ. ಹೀಗಾಗಿ ಪ್ರತಿ ಬಾರಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಇದೇ ವೇಳೆ ಪ್ರಜ್ಯಾ ಸಿಂಗ್ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

    ನ್ಯಾಯಾಧೀಶರಾದ ವಿನೋದ್ ಪಡಾಲ್ಕರ್ ಪಕ್ಷದ ನಿಯಮ ಪಾಲಿಸುವುದು ಹಾಗೂ ಸಂಸತ್‍ಗೆ ಹಾಜರಾಗುವುದು ಅಗತ್ಯ. ಆದರೆ ಈ ಕುರಿತು ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಹೇಳಿದರು. ಪ್ರಗ್ಯಾ ಸಿಂಗ್ ಠಾಕೂರ್ ಅವರು ಕಳೆದ ಬಾರಿ ನ್ಯಾಯಾಲಯಕ್ಕೆ ಹಾಜರಾದಾಗ ಯಾವುದೇ ಸ್ಫೋಟದ ಬಗ್ಗೆ ನನಗೆ ತಿಳಿದಿಲ್ಲ ಎಂದು ತಿಳಿಸಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]