Tag: ಮಲೆ ಮಾದೇಶ್ವರ

  • ಫ್ರೀ ಬಸ್ ಟಿಕೆಟ್ ಎಫೆಕ್ಟ್; ಚಾಮರಾಜನಗರದಲ್ಲಿ ಬಸ್ ಡೋರ್ ಮುರಿದ ಮಹಿಳೆಯರು!

    ಫ್ರೀ ಬಸ್ ಟಿಕೆಟ್ ಎಫೆಕ್ಟ್; ಚಾಮರಾಜನಗರದಲ್ಲಿ ಬಸ್ ಡೋರ್ ಮುರಿದ ಮಹಿಳೆಯರು!

    ಚಾಮರಾಜನಗರ: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾಗಿದೆ. ಇದೀಗ ಚಾಮರಾಜನಗರದಲ್ಲಿ (Chamarajanagar) ರಶ್ ಆಗಿ ಪ್ರಯಾಣಿಕರು ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ ಘಟನೆ ನಡೆದಿದೆ.

    ಸೋಮವಾರ ಅಮವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಲೆ ಮಹದೇಶ್ವರ (Male Mahadeshwara) ಬೆಟ್ಟದ ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಬಂದ ಬಸ್ ಏರಲು ನೂಕು ನುಗ್ಗಲು ಉಂಟಾಗಿದೆ. ಅಲ್ಲದೇ ಪ್ರಯಾಣಿಕರು ಬಸ್ ಏರುವಾಗ ಡೋರ್ ಮುರಿದು ಹೋಗಿದೆ. ಇದರಿಂದಾಗಿ ಕಂಡಕ್ಟರ್ ಪರದಾಡಿದ್ದಾರೆ. ಅದರಲ್ಲೂ ವಾರದ ಹಿಂದಷ್ಟೆ ಸಾರಿಗೆ ನಿಗಮ ಬಾಗಿಲು ಹಾಕದೇ ಬಸ್ ಓಡಿಸದಂತೆ ಆದೇಶ ನಿಡಿತ್ತು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಅಕ್ಷರ ಸಂತ ಹರೇಕಳ ಹಾಜಬ್ಬ ಮನವಿ

    ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಪರಿಣಾಮ ಯಾತ್ರಾ ಸ್ಥಳಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಅದೇ ರೀತಿ ಮಲೆ ಮಹದೇಶ್ವರ ದರ್ಶನಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದಾಗಿ ಕೆಎಸ್‍ಆರ್‌ಟಿಸಿ (KSRTC) ಬಸ್‍ಗಳು ತುಂಬಿ ತುಳುಕುತ್ತಿವೆ. ಕೊಳ್ಳೇಗಾಲದ (Kollegala) ಬಸ್ ನಿಲ್ದಾಣದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಬಸ್ ಹತ್ತಲು ಪ್ರಯಾಣಿಕರು ಪರದಾಡುವಂತಾಗಿದೆ.

    ಬೆಳಗ್ಗೆಯಿಂದ ಕಾದರೂ ಕೆಲವರಿಗೆ ರಷ್‍ನಿಂದ ಬಸ್ ಹತ್ತಲು ಆಗಿರಲಿಲ್ಲ. ನಿಲ್ದಾಣದಲ್ಲೇ ಕಾದು ನಿಲ್ಲುವಂತಾಗಿದೆ ಎಂದು ಕೆಲವರು ಗೋಳಾಡಿದ್ದಾರೆ. ಬಸ್‍ಗಳಲ್ಲಿ ಮಹಿಳೆಯರೇ ತುಂಬಿಕೊಳ್ಳುತ್ತಿದ್ದಾರೆ. ನಾವು ಹೇಗೆ ಹೋಗೋದು ಎಂದು ಪುರುಷರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: 15 ದಿನಗಳ ಹಿಂದಷ್ಟೇ ಡಿವೋರ್ಸ್- ಪತ್ನಿಯನ್ನು ಕೊಲ್ಲಲು ಪಿಸ್ತೂಲ್ ಖರೀದಿಸಿ ಅರೆಸ್ಟ್ ಆದ!

  • ಮಾದಪ್ಪನ ದರ್ಶನಕ್ಕೆ ಭಕ್ತರ ದಂಡು- ಹಗ್ಗ ಹಿಡಿದು ನದಿ ದಾಟಿ ಬರುತ್ತಿದ್ದಾರೆ ಜನ

    ಮಾದಪ್ಪನ ದರ್ಶನಕ್ಕೆ ಭಕ್ತರ ದಂಡು- ಹಗ್ಗ ಹಿಡಿದು ನದಿ ದಾಟಿ ಬರುತ್ತಿದ್ದಾರೆ ಜನ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೈ ಮಾದೇಶ್ವರ (Male Mahadeshwara Hills) ಬೆಟ್ಟಕ್ಕೆ ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು (Devotees) ಆಗಮಿಸುತ್ತಿದ್ದಾರೆ. ಆದರೆ ಭಕ್ತರಿಗೆ ಸರಿಯಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆಯೇ ಎಂಬ ಪ್ರಶ್ನೆ ಮೂಡಿದೆ.

    ಪ್ರತಿ ವರ್ಷ ಕಲ್ಲುಮುಳ್ಳುಗಳನ್ನು ಲೆಕ್ಕಿಸದೆ ಕಾಲ್ನಡಿಗೆಯಲ್ಲಿ ಬೆಟ್ಟ ಗುಡ್ಡಗಳನ್ನೇರಿ, ಕಾವೇರಿ ನದಿ ದಾಟಿ ಭಕ್ತರು ಬರುತ್ತಾರೆ. ಈ ವರ್ಷವೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಕಾವೇರಿ ನದಿಯನ್ನು (Kaveri River) ಹಗ್ಗ ಹಿಡಿದುಕೊಂಡೇ ದಾಟಬೇಕಾದ ಪರಿಸ್ಥಿತಿ ಇದೆ. ಕಳೆದ ಬಾರಿ ನದಿ ದಾಟುವಾಗ ಮೂರಕ್ಕೂ ಹೆಚ್ಚು ಭಕ್ತರು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದರು. ಈ ಬಾರಿ ಜಿಲ್ಲಾಡಳಿತದಿಂದ ಎಚ್ಚರಿಕೆ ವಹಿಸಿದೆ ಎನ್ನಲಾಗಿದೆ.

    ಈ ಕಾಲ್ನಡಿಗೆ ಅರಣ್ಯ ಪ್ರದೇಶದ ಮಾರ್ಗವಾಗಿ ಬರುವುದರಿಂದ ಭಕ್ತರಿಗೆ ವನ್ಯ ಮೃಗಗಳಿಂದ ಆಗಬಹುದಾದ ದಾಳಿಯಿಂದ ಕಾಪಾಡಲು ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಮಾರ್ಗಗಳ ನಡುವೆ ದಾನಿಗಳು ನೀರು, ವಿಶ್ರಾಂತಿಗೆ ನೆರಳು, ಊಟ-ತಿಂಡಿ ಜೊತೆಗೆ ತಂಪು ಪಾನೀಯಗಳನ್ನು ನೀಡುತ್ತಿದ್ದಾರೆ.

    ಫೆ. 17ರಂದು ಮಲೈ ಮಾದೇಶ್ವರ ಬೆಟ್ಟದಲ್ಲಿ ದೇವರಿಗೆ ಎಣ್ಣೆ ಮಜ್ಜನ ನಡೆಯಲಿದೆ. ಫೆ. 19 ಹಾಗೂ 20ರಂದು ವಿಶೇಷ ಪೂಜೆಗಳು ನಡೆಯಲಿದೆ. ಫೆ. 21 ರಂದು ಮಹಾ ರಥೋತ್ಸವ ನಡೆಯಲಿದ್ದು ಐದು ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಲೆ ಮಾದಪ್ಪನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸ್ತಿದ್ದ ಅರ್ಚಕ ಸಾವು

    ಮಲೆ ಮಾದಪ್ಪನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸ್ತಿದ್ದ ಅರ್ಚಕ ಸಾವು

    ಚಾಮರಾಜನಗರ: ಮಾದಪ್ಪ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ ಅರ್ಚಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

    ನಾಗಣ್ಣ (40) ಮೃತಪಟ್ಟ ಅರ್ಚಕ. ದೊಡ್ಡಾಣೆ ಗ್ರಾಮದ ನಿವಾಸಿಯಾದ ನಾಗಣ್ಣ, ಮಾರ್ಟಳ್ಳಿಯ ಕಡಬೂರಿನಲ್ಲಿ ವಾಸಿಸುತ್ತಿದ್ದರು. ಉಪ ಅರ್ಚಕರಾದ ನಾಗಣ್ಣ ಅವರಿಗೆ ಈ ತಿಂಗಳು ಮಲೆ ಮಹದೇಶ್ವರ ದೇಗುಲದಲ್ಲಿ ಪೂಜೆ ಮಾಡುವ ಅವಕಾಶ ಸಿಕ್ಕಿತ್ತು. ಇವರು ಎಂದಿನಂತೆ ಇಂದು ಬೆಳಗ್ಗೆಯೂ ಮಾದಪ್ಪನಿಗೆ ಪೂಜೆ ಸಲ್ಲಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಬಾನಂಗಳದಲ್ಲಿ ಹಾರಿದ ಹರ್ಷನ ಭಾವಚಿತ್ರವಿರುವ ಗಾಳಿಪಟ- ಭಾವುಕರಾದ ಹರ್ಷನ ತಾಯಿ

    ಈ ಹಿನ್ನೆಲೆಯಲ್ಲಿ ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ಹನೂರಿಗೆ ಕೊಡೊಯ್ದಿದ್ದಾರೆ. ಆದರೆ ಅಲ್ಲಿನ ವೈದ್ಯರು ನಾಗಣ್ಣ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಯುವಕನಿಗೆ ಚಾಕು ಇರಿತ

    Live Tv
    [brid partner=56869869 player=32851 video=960834 autoplay=true]