Tag: ಮಲೆ ಮಹದೇಶ್ವರ ಬೆಟ್ಟ

  • ಮಳೆಗಾಗಿ ಮಲೆ ಮಹದೇಶ್ವರನ ಮೊರೆ ಹೋದ ಸಿಎಂ; ವಿಶೇಷ ಪೂಜೆ, ಬೆಳ್ಳಿ ರಥ ಸೇವೆ

    ಮಳೆಗಾಗಿ ಮಲೆ ಮಹದೇಶ್ವರನ ಮೊರೆ ಹೋದ ಸಿಎಂ; ವಿಶೇಷ ಪೂಜೆ, ಬೆಳ್ಳಿ ರಥ ಸೇವೆ

    ಚಾಮರಾಜನಗರ: ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದು ಬುಧವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಅಲ್ಲದೇ ರಾಜ್ಯದಲ್ಲಿ ಕಾವೇರಿ ಕಿಚ್ಚು ಕೂಡ ಹೆಚ್ಚಾಗಿದ್ದು, ಮಳೆಗಾಗಿ ಮಹದೇಶ್ವರನಲ್ಲಿ ಪ್ರಾರ್ಥಿಸಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಈಶಾನ್ಯ ರಾಜ್ಯವನ್ನು ‘ಯುದ್ಧಭೂಮಿಯಾಗಿ’ ಪರಿವರ್ತಿಸಲಾಗಿದೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

    ಸಚಿವರಾದ ಕೆ.ವೆಂಕಟೇಶ್, ಹೆಚ್.ಸಿ.ಮಹದೇವಪ್ಪ ಜೊತೆಗೂಡಿ ಬಂದ ಸಿದ್ದರಾಮಯ್ಯ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ದಂಡ ಹಿಡಿದು, ಬೆಳ್ಳಿ ರಥ ಸೇವೆ ನೆರವೇರಿಸಿದ್ದಾರೆ. ಬಳಿಕ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನ ಭೇಟಿ ಮಾಡಿ, ನಂತರ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಲ ಮಾಡಿ ಅದ್ಧೂರಿ ಮದುವೆ ಮಾಡೋದು ಅನಾರೋಗ್ಯಕಾರಿ: ಸಿದ್ದರಾಮಯ್ಯ

    ಸಾಲ ಮಾಡಿ ಅದ್ಧೂರಿ ಮದುವೆ ಮಾಡೋದು ಅನಾರೋಗ್ಯಕಾರಿ: ಸಿದ್ದರಾಮಯ್ಯ

    – ಮಹದೇಶ್ವರ ಬೆಟ್ಟದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 37 ನವಜೋಡಿ

    ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿಂದು (Male Mahadeshwara Hills) ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 37 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಮಲೆಮಹದೇಶ್ವರನ ತಪೋ ಭೂಮಿಯಲ್ಲಿ 37 ಮಂದಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನವಜೋಡಿಗಳಿಗೆ ಮಂಗಳಸೂತ್ರ ವಿತರಿಸಿ ಶುಭ ಹಾರೈಸಿದರು‌. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ

    ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಸಾಲ ಮಾಡಿ ಅದ್ಧೂರಿ ಮದುವೆ (Marriage) ಮಾಡುವುದು ಅನಾರೋಗ್ಯಕಾರಿ. ಮೊದಲು ವ್ಯವಸಾಯಕ್ಕೆಂದು ಸಾಲ ಮಾಡಿ, ಮದುವೆ ಮಾಡುವುದನ್ನ ನಿಲ್ಲಿಸಿ ಎಂದು ಕರೆ ನೀಡಿದರು.

    ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಅದ್ಧೂರಿ ಮದುವೆಗಳು ಬಹಳ ದೊಡ್ಡ ಹೊರೆಯಾಗುತ್ತವೆ. ಜೀವನ ಪರ್ಯಂತ ಸಾಲ ತೀರಿಸುತ್ತಾ ಕೂರಬೇಕಾಗುತ್ತದೆ. ಆದ್ದರಿಂದ ಸರಳ ಮತ್ತು ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ಈಶಾನ್ಯ ರಾಜ್ಯವನ್ನು ‘ಯುದ್ಧಭೂಮಿಯಾಗಿ’ ಪರಿವರ್ತಿಸಲಾಗಿದೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

    ಮಹದೇಶ್ವರನ ಬೆಟ್ಟ ಆಧ್ಯಾತ್ಮಿಕ ಮಹತ್ವ ಇರುವ ಪುಣ್ಯ ಸ್ಥಳ. ಶೂದ್ರರು, ಶ್ರಮಿಕರು, ಬಡವರು, ಎಲ್ಲಾ ಜಾತಿಯವರ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಕಾರಣಕ್ಕೇ ನನಗೆ ಈ ಕ್ಷೇತ್ರದ ಬಗ್ಗೆ ಅತ್ಯಂತ ಶ್ರದ್ಧೆ ಮತ್ತು ಗೌರವ ಇದೆ. ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಈಗ ಪ್ರಾಧಿಕಾರದ ಆದಾಯವೂ ಹೆಚ್ಚಾಗಿದೆ. ಶಕ್ತಿ ಯೋಜನೆಯ ಪರಿಣಾಮ ಭಕ್ತರು, ಅದರಲ್ಲೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಹದೇಶ್ವರನ ದರ್ಶನ ಪಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಮುಂದಿನ 5 ವರ್ಷಗಳಲ್ಲಿ ಮಲೆ ಮಹದೇಶ್ವರ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸ್ತೀವಿ ಎಂದ ಸಿಎಂ, ಇಲ್ಲಿ ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾಷ್ಟ್ರಪತಿ ಭವನ ಇನ್ಮುಂದೆ ತಪೋಭವನ: ಮಲೆ ಮಹದೇಶ್ವರ ಬೆಟ್ಟದಲ್ಲಿರುವ ರಾಷ್ಟ್ರಪತಿ ಭವನದ ಹೆಸರು ಬದಲಾಗಿದೆ. ಇನ್ನು ಮುಂದೆ ಇದು ತಪೋಭವನ. ಮಹದೇಶ್ವರ ತಪಸ್ಸು ಮಾಡಿದ ಶಕ್ತಿ ಕೇಂದ್ರ ಇದು, ಆದ್ದರಿಂದ ಇದನ್ನು ನಾವು ತಪೋಭವನ ಎಂದು ಕರೆಯಬೇಕು. ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯ ಸಲಹೆಯಂತೆ ತಪೋ ಭವನ ಎಂದು ಬದಲಾಯಿಸಿದ್ದೇವೆ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ – 2.50 ಕೋಟಿ ರೂ. ಸಂಗ್ರಹ

    ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ – 2.50 ಕೋಟಿ ರೂ. ಸಂಗ್ರಹ

    ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಸ್ವಾಮಿ (Male Mahadeshwara Hill) ದೇವಾಲಯ ಹುಂಡಿಯಲ್ಲಿ (Hundi) 2.50 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

    Mahadeshwara Hills

    ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಎಣಿಕೆ ನಡೆಸಲಾಯಿತು. ಈ ವೇಳೆ ಹುಂಡಿಯಲ್ಲಿ 2.50 ಕೋಟಿ ರೂಪಾಯಿಗು ಹೆಚ್ಚು ಹಣ ಸಂಗ್ರಹವಾಗಿದೆ. ತಡರಾತ್ರಿವರೆಗೂ ನಡೆದ ಹುಂಡಿ ಎಣಿಕೆ ನಡೆದಿದ್ದು, 2,50,85,794 ರೂಪಾಯಿ ನಗದು, 122 ಗ್ರಾಂ ಚಿನ್ನ, 2.71 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ. ಕಳೆದ 36 ದಿನಗಳ ಅವಧಿಯಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ಇದಾಗಿದ್ದು, 14 ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯದ ರೂಪದಲ್ಲಿ ಕಾಣಿಕೆಯನ್ನು ಭಕ್ತರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್‌ ಇಸುದನ್‌ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ

    ಇತ್ತೀಚೆಗಷ್ಟೇ ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಹಾಗು ಎಸ್‍ಬಿಐ ಸಹಯೋಗದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಇ- ಹುಂಡಿ ಸ್ಥಾಪಿಸಿದೆ. ಭಕ್ತರು ಕ್ಯೂಆರ್ ಕೋಡ್ ಬಳಕೆ ಮಾಡಿ ದೇವರಿಗೆ ಕಾಣಿಕೆ ಅರ್ಪಿಸಬಹುದಾಗಿದೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್

    ಇ-ಹುಂಡಿಗೆ ಸಂಪೂರ್ಣ ಭದ್ರತೆ ವಹಿಸಲಾಗಿದೆ. ವರ್ಷಕ್ಕೆ ಮೂರು ಬಾರಿ ನಡೆಯವ ಜಾತ್ರೆ ಹಾಗು ಪ್ರತಿ ಅಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಮಹದೇಶ್ವರನ ಸನ್ನಿಧಿಗೆ ಬರುತ್ತಾರೆ. ದೇವಾಲಯ ಒಳಾಂಗಣದಲ್ಲಿ ಹುಂಡಿಗಳನ್ನು ಇಡಲಾಗಿದ್ದು, ಭಕ್ತರು ಹುಂಡಿಗಳಲ್ಲೇ ಹಾಕಿ ತಮ್ಮ ಕಾಣಿಕೆ ಸಲ್ಲಿಸಬೇಕಿತ್ತು. ನೂಕು ನುಗ್ಗಲಿನ ಕಾರಣ ಕಾಣಿಕೆ ಸಲ್ಲಿಸಲು ಸಹ ಹಲವು ರೀತಿಯ ಅಡಚಣೆಗಳು ಎದುರಾಗುತ್ತಿದ್ದವು. ಆದರೀಗ ಇ-ಹುಂಡಿ ಸ್ಥಾಪನೆ ಮಾಡಲಾಗಿದ್ದು, ಈ ಮೂಲಕ ಕೂಡ ಭಕ್ತರು ಕಾಣಿಕೆಯನ್ನು ಸಲ್ಲಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ

    ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ

    ಚಾಮರಾಜನಗರ: ಮಾದಪ್ಪನ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ದಟ್ಟಾರಣ್ಯದಲ್ಲಿ ಕಲ್ಲುಮುಳ್ಳಿನ ಹಾದಿ ನಡುವೆಯೂ ಮಹದೇಶ್ವರನ ದರ್ಶನ ಮಾಡುತ್ತಾರೆ. ಇದನ್ನರಿತ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಗುಡ್ ನ್ಯೂಸ್‍ವೊಂದನ್ನು ನೀಡುತ್ತಿದೆ.

    ಹೌದು ರಾಜ್ಯದಲ್ಲಿರುವ ದೇಗುಲಗಳಲ್ಲಿ ಅತೀ ಹೆಚ್ಚು ಆದಾಯ ಬರುವ ಎರಡನೇ ದೇವಾಲಯ ಎಂದರೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಅದರಲ್ಲೂ ದೀಪಾವಳಿ, ಶಿವರಾತ್ರಿ ಹಬ್ಬದ ವೇಳೆಯಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಈ ಸಮಯದಲ್ಲಿ ಭಕ್ತರು ಹರಕೆ ಮಾಡಿಕೊಂಡು ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ದಟ್ಟ ಕಾಡಿನ ನಡುವೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಕಾಡಿನ ನಡುವೆ ಕೆಲವು ಕಡೆ ದುರ್ಗಮ ಹಾದಿಗಳಿವೆ. ಈ ಹಾದಿಯಲ್ಲಿ ಭಕ್ತರು ನಡೆಯಲು ಸಾಕಷ್ಟು ಪ್ರಯಾಸ ಪಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಮಲೆ ಮಹದೇಶ್ವರ ಪ್ರಾಧಿಕಾರದವರು ಕಾಡಿನ ನಡುವೆ ದುರ್ಗಮ ಹಾದಿ ಇರುವ ಕಡೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗಿದೆ.

    ಮಲೆ ಮಹದೇಶ್ವರ ಪ್ರಾಧಿಕಾರ ಈಗಾಗಲೇ ಮೆಟ್ಟಿಲು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ತಾಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ 7 ಕಿ.ಮೀ ಮೆಟ್ಟಿಲು ನಿರ್ಮಾಣವಾಗುತ್ತಿದೆ. ಈಗಾಗಲೇ 2 ಕಿಮೀ ನಷ್ಟು ಮೆಟ್ಟಿಲು ಮಾಡುವ ಕೆಲಸ ನಡೆದಿದೆ. ಇನ್ನೆರಡು ತಿಂಗಳಲ್ಲಿ ಮೆಟ್ಟಿಲು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಈ ಕುರಿತಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಭಕ್ತರೊಬ್ಬರು, ಈ ಕಾಡಿನಲ್ಲಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಭಕ್ತರಿಗೂ ಸಂತಸ ತಂದಿದೆ. ಇಷ್ಟು ವರ್ಷ ನಾವು ಕಾಡಿನ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನು ಲೆಕ್ಕಿಸದೇ ನಡೆಯುತ್ತಿದ್ದೆವು. ಈ ವೇಳೆ ಕಲ್ಲು ಬಡಿದು ಕಾಲಿಗೆ ಗಾಯವಾಗಿರುವ ಉದಾಹರಣೆ ಸಹ ಇವೆ. ಸದ್ಯ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ನಾವು ಸಹ ಆರಾಮಾಗಿ ಕಾಡಿನ ಮಧ್ಯೆ ನಡೆದು ಹೋಗಬಹುದು ಎಂದು ಹೇಳುತ್ತಾರೆ.

    ಒಟ್ಟಾರೆ ಭಕ್ತರ ಅನುಕೂಲಕ್ಕಾಗಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಮಾದಪ್ಪನ ಭಕ್ತರಿಗೆ ಖುಷಿ ನೀಡಿದೆ. ಇಷ್ಟು ದಿನ ಕಾಡಿನ ದುರ್ಗಮ ಹಾದಿಯಲ್ಲಿ ನಡೆದು ಮಾದಪ್ಪನ ದರ್ಶನ ಪಡೆಯುತ್ತಿದ್ದ ಭಕ್ತರು ಇನ್ಮುಂದೆ ಕಾಡಿನ ನಡುವೆ ಸಹಾ ಸುಗಮ ಹಾದಿಯಲ್ಲಿ ಸಾಗಬಹುದಾಗಿದೆ. ಇದನ್ನೂ ಓದಿ: ಪಿಎಸ್‍ಐ ಆಯ್ತು, ಇದೀಗ ಕೆಪಿಟಿಸಿಎಲ್ ಎಕ್ಸಾಂನಲ್ಲಿ ಗೋಲ್‍ಮಾಲ್

    Live Tv
    [brid partner=56869869 player=32851 video=960834 autoplay=true]

  • ಲಡ್ಡು ಜೊತೆಗೆ 2.19 ಲಕ್ಷ ರೂ. ಬಂದಿದ್ದ ಹಣ ವಾಪಸ್ ನೀಡಿದ ಭಕ್ತ!

    ಲಡ್ಡು ಜೊತೆಗೆ 2.19 ಲಕ್ಷ ರೂ. ಬಂದಿದ್ದ ಹಣ ವಾಪಸ್ ನೀಡಿದ ಭಕ್ತ!

    ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆ ಬಂದಿದ್ದ ಹಣವನ್ನು ಭಕ್ತ ಹಿಂದುರುಗಿಸಿದ್ದಾರೆ.

    ಬೆಂಗಳೂರು ಜಿಲ್ಲೆ ಯಶವಂತಪುರ ತಾಲೂಕು ಮೇದರಹಳ್ಳಿಯ ನರಸಿಂಹಮೂರ್ತಿ ಹಣ ಹಿಂದಿರುಗಿಸಿದ ಭಕ್ತ. ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ಹಣ ಹಿಂದಿರುಗಿಸಿದ್ದಾರೆ.

    ಈ ಸಂಬಂಧ ಮಾತನಾಡಿದ ನರಸಿಂಹಮೂರ್ತಿ, ಮನೆಯಲ್ಲಿ ಪ್ರಸಾದದ ಜೊತೆ ಹಣವಿರುವುದನ್ನು ನೋಡಿ ಗಾಬರಿಗೊಂಡಿದ್ದೆ. ತಕ್ಷಣ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದೆ ಎಂದರು.

    ನರಸಿಂಹ ಮೂರ್ತಿ ಅವರು ಜುಲೈ 29ರಂದು ಅಭಿಷೇಕದ ಪ್ರಸಾದದ ಟಿಕೆಟ್ ಪಡೆದಿದ್ದರು. ಪ್ರಸಾದದ ಚೀಲಗಳನ್ನು ನೀಡುವಾಗ ಹಣವಿದ್ದ ಚೀಲವೊಂದನ್ನು ಸಹ ಆಕಸ್ಮಿಕವಾಗಿ ನೌಕರ ನಾಗಭೂಷಣ ಕೊಟ್ಟಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು.

    ಈ ಸಂಬಂಧ ಮಲೆ ಮಹದೇಶ್ವರಬೆಟ್ಟದ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಭಕ್ತ ಹಣ ವಾಪಸ್ ನೀಡುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು- ಲಡ್ಡು ಜೊತೆಗೆ ಭಕ್ತನ ಕೈ ಸೇರಿದ 2.19 ಲಕ್ಷ ರೂ.!

    ಮಲೆ ಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು- ಲಡ್ಡು ಜೊತೆಗೆ ಭಕ್ತನ ಕೈ ಸೇರಿದ 2.19 ಲಕ್ಷ ರೂ.!

    ಚಾಮರಾಜನಗರ: ಲಡ್ಡು ಜೊತೆಗೆ 2.19 ಲಕ್ಷ ರೂ. ಭಕ್ತನ ಕೈ ಸೇರುವ ಮೂಲಕ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಾಗಿದೆ. ಇದನ್ನೂ ಓದಿ: ಈ ಕಾರಣಕ್ಕಾಗಿ ಅನುಷ್ಕಾ ಶೆಟ್ಟಿ ಕ್ಯಾಮೆರಾ ಕಣ್ಣಿಂದ ದೂರವಿದ್ದಾರೆ

    ವಿಶೇಷ ದರ್ಶನಕ್ಕೆ ಟಿಕೆಟ್ ನೀಡಲು ಕುಳಿತಿದ್ದ ಸಿಬ್ಬಂದಿ ಭಕ್ತನಿಗೆ ಲಾಡು ಜೊತೆಗೆ ಹಣದ ಚೀಲ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನು ಸಹ ಇಡಲಾಗಿದ್ದ ಹಿನ್ನೆಲೆ ಹಣ ಸಹಿತ ಬ್ಯಾಗ್ ಅನ್ನು ಸಿಬ್ಬಂದಿ ಭಕ್ತನಿಗೆ ನಿಡಿದ್ದಾರೆ.

    ಜನದಟ್ಟಣೆ ಹೆಚ್ಚಾಗಿ ಗಾಬರಿಯಲ್ಲಿ ಯಾಮಾರಿದ ಸಿಬ್ಬಂದಿ ಈ ಎಡವಟ್ಟು ಮಾಡಿದ್ದು, ವಿಚಾರ ತಿಳಿದು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕೋಟ್ಯಧೀಶನಾದ ಮಾದಪ್ಪ- 34 ದಿನಗಳಲ್ಲಿ 2.58 ಕೋಟಿ ರೂ. ಸಂಗ್ರಹ

    ಮತ್ತೆ ಕೋಟ್ಯಧೀಶನಾದ ಮಾದಪ್ಪ- 34 ದಿನಗಳಲ್ಲಿ 2.58 ಕೋಟಿ ರೂ. ಸಂಗ್ರಹ

    ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ವೇಳೆ 2,57,25,859 ಕೋಟಿ ರೂ. ಸಿಕ್ಕಿದೆ.

    ಶುಕ್ರವಾರ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಆಗ 2,57,25,859 ಕೋಟಿ ರೂ. ಜೊತೆಗೆ 127 ಗ್ರಾಂ ಚಿನ್ನ, 3.447 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದನ್ನೂ ಓದಿ: ನೀರೆಂದರೆ ಈಕೆಗೆ ಅಲರ್ಜಿ, ಮೈಗೆ ತಾಗಿದರೆ ಸಾಕು ಆ್ಯಸಿಡ್ ಬಿದ್ದಂತಾಗುತ್ತಂತೆ!

    ಕೊರೊನಾ ನಂತರ ಮಹದೇಶ್ವರ ದರ್ಶನಕ್ಕೆ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಣದ ಜೊತೆಗೆ ಚಿನ್ನ ಬೆಳ್ಳಿ ಕೂಡ ಭಕ್ತರು ಮಾದಪ್ಪನ ಹುಂಡಿಗೆ ಹಾಕಿದ್ದಾರೆ.

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಭೂ ಕುಸಿತ – ಸಂಚಾರ ಅಸ್ತವ್ಯಸ್ತ

    ಮಲೆ ಮಹದೇಶ್ವರ ಬೆಟ್ಟದಲ್ಲಿ ಭೂ ಕುಸಿತ – ಸಂಚಾರ ಅಸ್ತವ್ಯಸ್ತ

    ಚಾಮರಾಜನಗರ: ಮೈಸೂರಿನ ಚಾಮುಂಡಿ ಬೆಟ್ಟದ ಬಳಿಕ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿ ಕೆಲತಾಸು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    Mahadeshwara Hill

    ಕಳೆದ ಒಂದು ವಾರದಿಂದ ಭರ್ಜರಿ ಮಳೆಯಾಗುತ್ತಿದ್ದು, ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಪಾಲಾರ್ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ಭತ್ತ ಕಟಾವು ಯಂತ್ರ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೆಸಿಬಿ ಸಹಾಯದಿಂದ ಕುಸಿತ ಉಂಟಾದ ಸ್ಥಳದಲ್ಲಿ ಕಲ್ಲು, ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    Mahadeshwara Hill

    2019ರಲ್ಲೂ ಜೋರು ಮಳೆಯಿಂದಾಗಿ ಸುಮಾರು 10 ಕಡೆ ಭೂ ಕುಸಿತ ಉಂಟಾಗಿ ಆತಂಕ ಸೃಷ್ಟಿಯಾಗಿತ್ತು. ಸದ್ಯ ಮಳೆಯಿಂದಾಗಿ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಕೆಲ ಕಾಮಗಾರಿಗೂ ಅಡಚಣೆ ಉಂಟಾಗಿದೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

  • ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲ ಮಾದಪ್ಪನ ದರ್ಶನ- ಭಕ್ತರ ಆಕ್ರೋಶ

    ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲ ಮಾದಪ್ಪನ ದರ್ಶನ- ಭಕ್ತರ ಆಕ್ರೋಶ

    ಚಾಮರಾಜನಗರ: ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗೆ ಮಾದಪ್ಪನ ದರ್ಶನವಿಲ್ಲ. ಹೀಗಾಗಿ ಭಕ್ತರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

    ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಈ ಅವೈಜ್ಞಾನಿಕ ಆದೇಶ ಹೊರಡಿಸುವ ಮೂಲಕ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಕೊರೊನಾ ಕಾರಣದಿಂದ ಮುಡಿ ಸೇವೆ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದೆ. ಹೀಗಾಗಿ ಭಕ್ತರಿಗೆ ಕೇವಲ ಮಾದಪ್ಪನ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ

    ಆದರೆ ಭಕ್ತಾದಿಗಳ ಒತ್ತಾಯಕ್ಕೆ ಹೆಚ್ಚು ಶುಲ್ಕ ಪಡೆದು ಕದ್ದು ಮುಚ್ಚಿ ಮುಡಿ ಸೇವೆ ಮಾಡಿಸಲಾಗುತ್ತಿದೆ. ಹೀಗಾಗಿ ಅನಧಿಕೃತವಾಗಿ ಮುಡಿ ತೆಗೆಯುತ್ತಿದ್ದವರಿಗೆ ಪ್ರಾಧಿಕಾರ ನೋಟಿಸ್ ನೀಡಿತ್ತು. ಮುಡಿ ತೆಗೆಯುವುದನ್ನ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೂ ಪ್ರಾಧಿಕಾರದ ಹೊರ ಆವರಣ ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಬರುವಾಗಲೇ ಬೇರೆ ಕಡೆಗಳಿಂದ ಮುಡಿ ಮಾಡಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಮುಡಿ ಮಾಡಿಸಿಕೊಂಡ ಬರುವ ಯಾರೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಒಳ ಆವರಣದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಸದ್ಯ ಈ ಅವೈಜ್ಞಾನಿಕ ಆದೇಶಕ್ಕೆ ಭಕ್ತರು ರೊಚ್ಚಿಗೆದ್ದಿದ್ದಾರೆ.

  • ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ: ಯತ್ನಾಳ್

    ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ: ಯತ್ನಾಳ್

    ಚಾಮರಾಜನಗರ: ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ ಕಲಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

    ಮಲೆ ಮಹದೇಶ್ವರ ಬೆಟ್ಟದಲ್ಲಿ ಮೀಸಲಾತಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌಡ ಲಿಂಗಾಯತ ಸಮುದಾಯ ಒಂದಾಗಿರುವುದು ಸಂತದ ವಿಚಾರವಾಗಿದೆ. ನಮ್ಮ ಸಮುದಾಯ ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿದೆ. ನೀವೆಲ್ಲರೂ ಇಂದು ಪ್ರತಿಜ್ಞೆ ಮಾಡಿದ್ದೀರಾ. ಯಾರಾದರೂ ಎರಡು ಸಾವಿರ ಕೊಟ್ರೆ ಮತವನ್ನು ಅವರಿಗೆ ಹಾಕಬೇಡಿ. ದುಡ್ಡು ತಗೊಂಡು ಯಾರು ಕೆಲಸ ಮಾಡಿದ್ದಾರೆ ಅವರಿಗೆ ನಿಮ್ಮ ಮತವನ್ನು ಹಾಕಿ ಎಂದು ಸಲಹೆ ನೀಡಿದರು.ಇದನ್ನೂ ಓದಿ:ಅರಗ ಜ್ಞಾನೇಂದ್ರಗೆ ಅಲ್ಪನಿಗೆ ಐಶ್ವರ್ಯ ಸಿಕ್ಕ ಹಾಗೇ ಆಗಿದೆ: ಬಿ.ಕೆ ಸಂಗಮೇಶ್

    ಅತ್ಯಂತ ಒಳ್ಳೆ ಸಮಯದಲ್ಲಿ ಹೋರಾಟ ಮಾಡುತ್ತಿದ್ದೇವೆ. 18 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತೆ. ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ ಕಲಸಿಲಾಗುವುದು. ಇಂದು, ನಾಳೆ, ಸಂಜೆ ಶೀಘ್ರವೇ ಕ್ಯಾಬಿನೆಟ್‍ನಲ್ಲಿ ಚರ್ಚೆ ಅಂಥೆಲ್ಲಾ ಕಾಲಾಹರಣ ಮಾಡಬೇಡಿ. 18 ತಿಂಗಳುಗಳ ಕಾಲ ನಿರಂತರ ಹೋರಾಟ ಮಾಡಿದ್ದು, ನಾನು ಈಗಾಗಲೇ ಮೀಸಲಾತಿ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಮೀಸಲಾತಿ ಕೊಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ:ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳು ಯಾರೇ ಆಗಿರಲಿ ಕಠಿಣ ಕ್ರಮ: ಸಿಎಂ