Tag: ಮಲೆ ಮಹದೇಶ್ವರ ಬೆಟ್ಟ

  • ಮಲೆ ಮಹದೇಶ್ವರ ಕೋಟಿ ಒಡೆಯ – 1.94 ಕೋಟಿ ಕಾಣಿಕೆ ಸಂಗ್ರಹ

    ಮಲೆ ಮಹದೇಶ್ವರ ಕೋಟಿ ಒಡೆಯ – 1.94 ಕೋಟಿ ಕಾಣಿಕೆ ಸಂಗ್ರಹ

    ಚಾಮರಾಜನಗರ: ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ 1,94,49,243 ರೂ. ಕಾಣಿಕೆ ಸಂಗ್ರಹವಾಗಿದೆ.

    ಬೆಟ್ಟದಲ್ಲಿ ಹುಂಡಿ ಕಾಣಿಕೆ ಎಣಿಕೆ ನಡೆಸಲಾಯಿತು. ಕಳೆದ 28 ದಿನಗಳ ಅವಧಿಯಲ್ಲಿ 1.94 ಕೋಟಿ ರೂಪಾಯಿ ಭಕ್ತರಿಂದ ಕಾಣಿಕೆ ರೂಪದಲ್ಲಿ ಹರಿದುಬಂದಿದೆ.

    ನಗದು ಹಣದ ಜೊತೆಗೆ 63 ಗ್ರಾಂ ಚಿನ್ನ ಹಾಗೂ ಒಂದು ಕೆಜಿ 510 ಗ್ರಾಂ ಬೆಳ್ಳಿಯ ಆಭರಣಗಳನ್ನು ಸಹ ಭಕ್ತರು ಮಲೆ ಮಹದೇಶ್ವರನಿಗೆ ಸಮರ್ಪಿಸಿದ್ದಾರೆ.

    11 ವಿದೇಶಿ ನೋಟು, 2000 ಮುಖಬೆಲೆಯ ನೋಟುಗಳನ್ನು ಕೂಡ ಭಕ್ತರು ಸಮರ್ಪಿಸಿದ್ದಾರೆ. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರ ಸಮಕ್ಷಮದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ನಡೆಸಲಾಯಿತು.

  • ಮತ್ತೆ ಕೋಟಿ ಒಡೆಯನಾದ ಮಾದಪ್ಪ – 30 ದಿನಗಳಲ್ಲಿ 2.29 ಕೋಟಿ ಕಾಣಿಕೆ ಸಂಗ್ರಹ

    ಮತ್ತೆ ಕೋಟಿ ಒಡೆಯನಾದ ಮಾದಪ್ಪ – 30 ದಿನಗಳಲ್ಲಿ 2.29 ಕೋಟಿ ಕಾಣಿಕೆ ಸಂಗ್ರಹ

    ಚಾಮರಾಜನಗರ: ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Temple) ಹುಂಡಿ ಎಣಿಕೆ ನಡೆದಿದ್ದು, ಮಾದಪ್ಪ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 30 ದಿನಗಳಲ್ಲಿ 2.29 ಕೋಟಿ ರೂ. ಸಂಗ್ರಹವಾಗಿದೆ.

    ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 8 ಗಂಟೆಯವರೆಗೂ ನಡೆಯಿತು. ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್‌ ಬುಕ್‌ ಮಾಡಬಹುದು!

    ಹೊಸ ವರ್ಷದ ಮೊದಲ ತಿಂಗಳು ಅಮಾವಾಸ್ಯೆ, ಹೊಸವರ್ಷದ ರಜಾ ದಿನ, ಸಂಕ್ರಾಂತಿ ಹಬ್ಬ, ಶಬರಿಮಲೆ, ಓಂ ಶಕ್ತಿ ಯಾತ್ರಾರ್ಥಿಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪು ನೋಡ್ಕೊಂಡು ದರ್ಶನ್ ಕೇಸ್‌ನಲ್ಲಿ ಮುಂದಿನ ಕ್ರಮ – ಪರಮೇಶ್ವರ್

    ಈ ವೇಳೆ ಹರಕೆಯ ರೂಪದಲ್ಲಿ 2,29,67,216 ನಗದು 18 ಗ್ರಾಂ ಚಿನ್ನ ಹಾಗೂ 1,200 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಅಲ್ಲದೇ 4,21,505 ರೂ. ಮೌಲ್ಯದ ವಿದೇಶಿ ನೋಟುಗಳು, ಚಲಾವಣೆಯಲ್ಲಿ ಇಲ್ಲದ 2,000 ಮುಖಬೆಲೆಯ 17 ನೋಟುಗಳು ಹುಂಡಿಯಲ್ಲಿ ಎಣಿಕೆ ವೇಳೆ ಸಿಕ್ಕಿವೆ.

    ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕ ಗುರು ಮಲ್ಲಯ್ಯ, ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶಶಿಕುಮಾರ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಬಲಿ – ಗೃಹ ಸಚಿವರಿಗೆ ಮಾಂಗಲ್ಯಸರ ಪೋಸ್ಟ್ ಮಾಡಿದ ಮೃತನ ಪತ್ನಿ

  • ಮಲೆ ಮಹದೇಶ್ವರನಿಗೆ ಆದಾಯ ಭರಪೂರ: ಹುಂಡಿಯಲ್ಲಿ 34 ದಿನಕ್ಕೆ 2.77 ಕೋಟಿ ಸಂಗ್ರಹ

    ಮಲೆ ಮಹದೇಶ್ವರನಿಗೆ ಆದಾಯ ಭರಪೂರ: ಹುಂಡಿಯಲ್ಲಿ 34 ದಿನಕ್ಕೆ 2.77 ಕೋಟಿ ಸಂಗ್ರಹ

    ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರಸ್ವಾಮಿ (Male Mahadeshwara Temple) ದೇಗುಲದ ಹುಂಡಿ ಹಣ ಎಣಿಕೆ ನಡೆದು, ಬರೋಬ್ಬರಿ 2.7 ಕೋಟಿ ಹಣ ಸಂಗ್ರಹವಾಗಿದೆ‌.

    ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಈ ಕುರಿತು ಮಾಹಿತಿ ನೀಡಿದ್ದು, 34 ದಿನಗಳಿಗೆ ಹುಂಡಿಯಲ್ಲಿ 2,77,99,396 ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ: ಮುನಿರತ್ನಗೆ ಡಿಕೆಸು ತಿರುಗೇಟು

    ಭಕ್ತರು ಕಾಣಿಕೆ ರೂಪದಲ್ಲಿ 73 ಗ್ರಾಂ ಚಿನ್ನ ಹಾಗೂ 3.9 ಕೆಜಿ ಬೆಳ್ಳಿಯನ್ನು ಅರ್ಪಿಸಿದ್ದಾರೆ.

    ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು, ಶಕ್ತಿ ಯೋಜನೆ ಪರಿಣಾಮ ಲಕ್ಷಾಂತರ ಮಂದಿ ಭಕ್ತರ ಕ್ಷೇತ್ರಕ್ಕೆ ಬಂದಿದ್ದರು‌. ಈ ಹಿನ್ನೆಲೆ ಕೇವಲ 34 ದಿನಗಳಿಗೆ 2.77 ಕೋಟಿ ಹಣ ಸಂಗ್ರಹವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಹಾಡಿ ಹೊಗಳಿದ ಪ್ರತಾಪ್‌ ಸಿಂಹ

  • ನಟ ಶಿವರಾಜ್‌ಕುಮಾರ್‌ಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ – ಮಲೆ ಮಹದೇಶ್ವರ ಮೊರೆಹೋದ ಫ್ಯಾನ್ಸ್

    ನಟ ಶಿವರಾಜ್‌ಕುಮಾರ್‌ಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ – ಮಲೆ ಮಹದೇಶ್ವರ ಮೊರೆಹೋದ ಫ್ಯಾನ್ಸ್

    ಚಾಮರಾಜನಗರ: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಯಶಸ್ವಿಯಾಗಿ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮಲೆ ಮಹದೇಶ್ವರನ (Male Mahadeshwara Temple) ಮೊರೆ ಹೋಗಿದ್ದಾರೆ.

    ಮೈಸೂರಿನ ಕೆ.ಜಿ.ಕೊಪ್ಪಲಿನ ಶಿವು ಹಾಗೂ ಸ್ನೇಹಿತರು ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಕೆ.ಜಿ.ಕೊಪ್ಪಲಿನ ಶಿವು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವ ಅಷ್ಟೋತರ ಬಿಲ್ವಾರ್ಚನೆ ಪೂಜೆ ಮಾಡಿಸಿದ್ದಾರೆ. ಇವರಿಗೆ ಸ್ನೇಹಿತರಾದ ದರ್ಶನ್, ಅಭಿರಾಜ್, ಮನೋಹರ್, ಟಿ ನಾರಾಯಣ್ ಶಿವಮಲ್ಲು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಭಗವಂತ ನನ್ನಷ್ಟೂ ಆಯಸ್ಸನ್ನ ಶಿವಣ್ಣನಿಗೇ ಕೊಡಲಿ: ಧ್ರುವ ಸರ್ಜಾ

    ಇದಲ್ಲದೆ, ದೇವಸ್ಥಾನದ ಸುತ್ತಲೂ ಮೂರು ಬಾರಿ ಉರುಳು ಸೇವೆ ಮಾಡಿ ಕೇಶ ಮುಂಡನೆ ಮಾಡಿಸುವ ಮೂಲಕ ವಿಶೇಷವಾಗಿ ಹರಕೆ ಸಲ್ಲಿಸಿದ್ದಾರೆ. ‘ಭೈರತಿ ರಣಗಲ್’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಭರ್ಜರಿ ಸ್ವಾಗತ ಕೋರಿ ಚಿತ್ರ ಶತದಿನೋತ್ಸವ ಪೂರೈಸಲೆಂದು ಶುಭ ಕೋರಿದ್ದರು.

    ಶಿವರಾಜ್‌ಕುಮಾರ್‌ ಅವರು ಶಸ್ತ್ರಚಿಕಿತ್ಸೆಗೆ ಅಮೆರಿಕಗೆ ತೆರಳುತ್ತಿದ್ದಾಗಲು ಶಿವು ತಂಡ ಏರ್ಪೋರ್ಟ್‌ಗೆ ಭೇಟಿ ನೀಡಿ ಬೀಳ್ಕೊಡುಗೆ ಮಾಡಿ ವಾಪಸ್ ತೆರಳಿದ್ದರು. ಇದನ್ನೂ ಓದಿ: ಚಿಕಿತ್ಸೆಗಾಗಿ ಅಮೆರಿಕಗೆ ತೆರಳುವ ಮುನ್ನ ಶಿವಣ್ಣ ಭಾವುಕ

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಮಾಸ್ಟರ್ ಪ್ಲ್ಯಾನ್‌ – ತ್ರಿಪಕ್ಷೀಯ ಒಡಂಬಡಿಕೆ

    ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಮಾಸ್ಟರ್ ಪ್ಲ್ಯಾನ್‌ – ತ್ರಿಪಕ್ಷೀಯ ಒಡಂಬಡಿಕೆ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಉದ್ದೇಶದಿಂದ ‘ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ’ (Green Tomorrow, Male Mahadeshwara Hills) ಎಂಬ ಯೋಜನೆ ಅನುಷ್ಠಾನಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

    ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌, ಮೈಸೂರು ಕಾವೇರಿ ಪ್ರದೇಶಿಕ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದನ್ನೂ ಓದಿ: ಬಿಪಿಎಲ್, ಎಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್!

    ಮೂರು ವರ್ಷಗಳ ಯೋಜನೆ ಇದಾಗಿದ್ದು, ತ್ಯಾಜ್ಯ ನಿರ್ವಹಣೆಯ ಎಲ್ಲಾ ವಿಭಾಗಗಳಲ್ಲಿ ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗಲಿದೆ. ಎಲ್‌ಐಸಿ ಹೆಚ್‌ಎಫ್‌ಎಲ್‌ ಸಂಸ್ಥೆಯು ಯೋಜನೆಗೆ ಅಗತ್ಯ ಅನುದಾನ ನೆರವು ನೀಡಲಿದೆ. ಮೈಕಾಪ್ಸ್‌ ಸಂಸ್ಥೆ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದೆ. ಮಲೆ ಮಹದೇಶ್ವರ ಬೆಟ್ಟವನ್ನು ಹಸಿರುಮಯವಾಗಿರುವುದು ಮತ್ತು ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ.

    ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ವಿಶೇಷ ಜಾತ್ರಾ ಮಹೋತ್ಸವ ಸೇರಿದಂತೆ ಅಮವಾಸ್ಯೆ ದಿನಗಳಂದು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಬರುವಂತಹ ಭಕ್ತರು ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಅನೇಕ ತ್ಯಾಜ್ಯಗಳನ್ನ ಅಲ್ಲಲ್ಲಿ ಎಸೆಯುತ್ತಾರೆ. ಈ ಕಸವನ್ನ ಸಮರ್ಪಕವಾಗಿ ನಿರ್ವಹಣೆ ಮಾಡಲು ಈಗ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮುಂದಾಗಿದ್ದು, ‘ಗ್ರೀನ್ ಟುಮಾರೋ, ಎಂಎಂ ಹಿಲ್ಸ್’ ಎಂಬ ಶೀರ್ಷಿಕೆಯಲ್ಲಿ ಹೊಸ ಪ್ರಾಜೆಕ್ಟ್‌ಗೆ ಮುಂದಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌, ಬಿಜೆಪಿ ಶಾಸಕರಿಗೂ ತಟ್ಟಿದ ವಕ್ಫ್ ಬಿಸಿ – ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು

    ತ್ಯಾಜ್ಯ ಮುಕ್ತ ಮಹದೇಶ್ವರ ಬೆಟ್ಟ ಎಂಬ ಶೀರ್ಷಿಕೆಯಡಿ ಮಲೆ ಮಹದೇಶ್ವರ ಬೆಟ್ಟವನ್ನ ಕಸಮುಕ್ತ ಬೆಟ್ಟವನ್ನಾಗಿಸೋದು, ಕಸ ಹಾಗೂ ತ್ಯಾಜ್ಯ ವಿಲೇವಾರಿಯನ್ನ ಸಮರ್ಪಕವಾಗಿ ಮಾಡೋದು, ಮಲೆ ಮಹದೇಶ್ವರ ಬೆಟ್ಟದ ಸುತ್ತಾ ಕಾಡಿದ್ದು ಈ ತ್ಯಾಜ್ಯದಿಂದ ಪ್ರಕೃತಿಯ ಸೌಂದರ್ಯ ಹಾಳು ಮಾಡದೇ ಹಸಿರನ್ನಾಗಿ ಇರಿಸುವುದರ ಜೊತೆಗೆ ಕಾಡು ಪ್ರಾಣಿಗಳಿಗೆ ತ್ಯಾಜ್ಯದಿಂದ ಹಾನಿಯಾಗದಂತೆ ನೋಡಿಕೊಳ್ಳುವುದಾಗಿದು ಮುಖ್ಯ ಉದ್ದೇಶವಾಗಿದೆ. ಶೇಖರಣೆಯಾದ ತ್ಯಾಜ್ಯವನ್ನು ಹೊಸ ತಂತ್ರಜ್ಞಾನದ ಮೂಲಕ ತ್ಯಾಜ್ಯವನ್ನು ಬೇರೆಡೆ ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಬಾಟಲ್ ಹಾಗೂ ವೇಸ್ಟ್ ಪೇಪರ್‌ಗಳನ್ನ ಸಂಗ್ರಹಿಸಿ ಮರು ಬಳಕೆ ಮಾಡುವುದು ಸಹ ಯೋಜನೆ ಉದ್ದೇಶ.

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ- ಈ ಬಾರಿಯೂ ಕೋಟಿ ಒಡೆಯ ಮಾದಪ್ಪ

    ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ- ಈ ಬಾರಿಯೂ ಕೋಟಿ ಒಡೆಯ ಮಾದಪ್ಪ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hill) ಹುಂಡಿ ಎಣಿಕೆ ಮಾಡಲಾಗಿದ್ದು, ಈ ಬಾರಿಯೂ ಮಾದಪ್ಪ ಕೋಟಿ ಒಡೆಯನಾಗಿದ್ದಾನೆ.

    ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 30 ದಿನಗಳ ಅವಧಿಯಲ್ಲಿ 1.76 ಕೋಟಿ ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ರಾಜ್ಯದ ರೈತರಿಗೆ ಗಣೇಶ ಹಬ್ಬಕ್ಕೆ ಕೇಂದ್ರದಿಂದ ಗಿಫ್ಟ್‌ – ಉದ್ದು, ಸೋಯಾಬಿನ್‌ ಬೆಂಬಲ ಬೆಲೆಯಲ್ಲಿ ಖರೀದಿ

    ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಇದನ್ನೂ ಓದಿ:

    ಭೀಮನ ಅಮಾವಾಸ್ಯೆ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದರಿಂದ ಹರಕೆಯ ರೂಪದಲ್ಲಿ 1,76,29,849 ರೂ. ನಗದು, 45 ಗ್ರಾಂ ಚಿನ್ನ ಹಾಗೂ 1.300 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಇದಲ್ಲದೆ ಇ ಹುಂಡಿಯಿಂದ 2,96,469 ರೂ ನಗದು ಬಂದಿದೆ. 20 ಯುಎಸ್‌ಎ ಡಾಲರ್, ಥಾಯ್ಲ್ಯಾಂಡ್ 1, ಶ್ರೀಲಂಕಾ 2, ಅರಬ್ 3 ನೋಟು ಸೇರಿದಂತೆ ಇತರ ದೇಶಗಳ ನೋಟುಗಳು ಬಂದಿವೆ. ಇದಲ್ಲದೆ ಚಲಾವಣೆಯಲ್ಲಿ ಇಲ್ಲದ 2000 ರೂ. ಮುಖಬೆಲೆಯ 11 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಯತ್ನಾಳ್ ಒಡೆತನದ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿ

  • 93 ಗ್ರಾಂ ಚಿನ್ನ, 3.35 ಕೆಜಿ ಬೆಳ್ಳಿ, 2.58 ಕೋಟಿ ರೂ. ನಗದು ಕಾಣಿಕೆ – ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ!

    93 ಗ್ರಾಂ ಚಿನ್ನ, 3.35 ಕೆಜಿ ಬೆಳ್ಳಿ, 2.58 ಕೋಟಿ ರೂ. ನಗದು ಕಾಣಿಕೆ – ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ!

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ (Male Mahadeshwara Temple) ಹುಂಡಿಯಲ್ಲಿ 2 ಕೋಟಿ 58 ಲಕ್ಷ ರೂ.ಗಿಂತಲೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ.

    ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಗಿದ್ದು, ಭಕ್ತರು ಕಳೆದ ಮೂವತ್ತು ದಿನಗಳ ಅವಧಿಯಲ್ಲಿ ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,58,44,097 ರೂ. ಕಾಣಿಕೆ ಸಮರ್ಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ಅರಣ್ಯಗಳಲ್ಲಿ ಆನೆ ಗಣತಿ ಶುರು!

    ಇದರ ಜೊತೆಗೆ 93 ಗ್ರಾಂ ಚಿನ್ನ (Gold), 3 ಕೆಜಿ 350 ಗ್ರಾಂ ಬೆಳ್ಳಿಯನ್ನೂ ಸಹ ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದಲ್ಲದೇ ಸೌದಿ ಅರೇಬಿಯಾ, ಜಪಾನ್, ನೇಪಾಳ ಹಾಗೂ ಕತಾರ್ ದೇಶಗಳ ಕರೆನ್ಸಿ ನೋಟುಗಳು ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ.

    ಸದ್ಯ ಇಲ್ಲದ 2,000 ರೂ. ಮುಖಬೆಲೆಯ 25 ನೋಟುಗಳು‌ ಸಹ ಹುಂಡಿಯಲ್ಲಿ ‌ಕಂಡುಬಂದಿವೆ. ಇದನ್ನೂ ಓದಿ: ಶ್ರೀನಿವಾಸಪ್ರಸಾದ್ ಬಿಜೆಪಿ ತೊರೆಯುವ ಯೋಚನೆ ಮಾಡಿರಲಿಲ್ಲ; `ಕೈ’ ವಿರುದ್ಧ ಸಿಡಿದ ಅಳಿಯ ಹರ್ಷವರ್ಧನ್!

  • ಮಲೆ ಮಹದೇಶ್ವರನಿಗೆ ಹಣದ ಮಳೆ – 1 ತಿಂಗಳಲ್ಲಿ ಕೋಟಿ ಕೋಟಿ ಆದಾಯ, ವಿದೇಶಿ ಕರೆನ್ಸಿಗಳು ಪತ್ತೆ

    ಮಲೆ ಮಹದೇಶ್ವರನಿಗೆ ಹಣದ ಮಳೆ – 1 ತಿಂಗಳಲ್ಲಿ ಕೋಟಿ ಕೋಟಿ ಆದಾಯ, ವಿದೇಶಿ ಕರೆನ್ಸಿಗಳು ಪತ್ತೆ

    ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರನ ಹುಂಡಿಯಲ್ಲಿ  (Hundi) ಭರ್ಜರಿ ಕಾಣಿಕೆ ಸಂಗ್ರಹವಾಗಿದ್ದು, ವಿದೇಶಿ ಕರೆನ್ಸಿಗಳು (Foreign Currency) ಪತ್ತೆಯಾಗಿವೆ.

    ರಾಜ್ಯದ ಪ್ರಸಿದ್ಧ ಯಾತ್ರ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ  (Male Mahadeshwara Hills) ನಡೆದ ಹುಂಡಿ ಹಣ ಎಣಿಕೆಯಲ್ಲಿ ಭರ್ಜರಿ ಹಣ ಸಂಗ್ರಹವಾಗಿದೆ. 30 ದಿನಗಳಿಗೆ ಮಲೆ ಮಹದೇಶ್ವರನಿಗೆ ಹಣದ ಮಳೆಯೇ ಸುರಿದಿದೆ. ಕಳೆದ 1 ತಿಂಗಳಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದ್ದು ಈ ವೇಳೆ ವಿದೇಶಿ ಕರೆನ್ಸಿಗಳು ಸಹ ಪತ್ತೆಯಾಗಿವೆ. ಇದನ್ನೂ ಓದಿ: ಯಾದಗಿರಿಯಲ್ಲಿ ಪಡಿತರ ಅಕ್ಕಿಗೆ ಕನ್ನ – 69,000 ರೂ. ಮೌಲ್ಯದ ಅಕ್ಕಿ ವಶ

    ಕಳೆದ 30 ದಿನಗಳಲ್ಲಿ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರು ಹುಂಡಿಯಲ್ಲಿ ಹಾಕಿದ ಹಣದ ಎಣಿಕೆ ಮಾಡಿಲಾಯಿತು. ಈ ವೇಳೆ ಬರೋಬ್ಬರಿ 2.16 ಕೋಟಿ ರೂಪಾಯಿ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ರಾತ್ರಿ 7 ಗಂಟೆಯವರೆಗೆ ಹುಂಡಿ ಎಣಿಕೆ ನಡೆಸಲಾಯಿತು. ಇದನ್ನೂ ಓದಿ: ಕಟ್ಟಡಗಳ ತೆರಿಗೆ ಭಾರೀ ಏರಿಕೆ – ಜಯಪುರದಲ್ಲಿ ವರ್ತಕರಿಂದ ಅಂಗಡಿ ಬಂದ್‌, ಸರ್ಕಾರದ ವಿರುದ್ಧ ಆಕ್ರೋಶ

    ಉಚಿತ ಪ್ರಯಾಣ, ಹುಣ್ಣಿಮೆ, ಅಮಾವಾಸ್ಯೆ ಹಾಗೂ ಸಂಕ್ರಾತಿ ಹಬ್ಬದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಕೋಟ್ಯಂತರ ಹಣ, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗೃಹಜ್ಯೋತಿಗೆ ಫಿದಾ – ಬೆಸ್ಕಾಂಗೆ ಭೇಟಿ ನೀಡಿದ ತೆಲಂಗಾಣ ಅಧಿಕಾರಿಗಳು

    30 ದಿನಗಳ ಅವಧಿಯಲ್ಲಿ ನಡೆದ ಎಣಿಕೆಯಲ್ಲಿ 2,16,34,614 ರೂ. ಸಂಗ್ರಹವಾಗಿದೆ. ಇದರೊಂದಿಗೆ 78 ಗ್ರಾಂ ಚಿನ್ನ ಮತ್ತು 2.35 ಕೆಜಿ ಬೆಳ್ಳಿ ಸಹ ಸಂಗ್ರಹವಾಗಿದೆ. ಅಲ್ಲದೆ ಈ ಬಾರಿ ವಿದೇಶಿ ಕರೆನ್ಸಿಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿದೆ. 4 ಅಮೆರಿಕನ್ ಡಾಲರ್, ಅಫ್ಘಾನಿಸ್ತಾನದ 10 ಅಫ್ಗಾನಿ, ಮಲೆಷ್ಯಾದ 3 ರಿಂಗಿಟ್, ನೇಪಾಳದ ಮೂರು ನೋಟುಗಳು ಪತ್ತೆಯಾಗಿದೆ. ಜೊತೆಗೆ ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 12 ನೋಟುಗಳು ಸಹ ಹುಂಡಿಯಲ್ಲಿ ಸಿಕ್ಕಿವೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್‌ ಬೋರ್ಡ್‌ ತಯಾರಿ

  • ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯ; ನಾಣ್ಯ ರೂಪದಲ್ಲೇ 13 ಲಕ್ಷ ರೂ. ಕಾಣಿಕೆ

    ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯ; ನಾಣ್ಯ ರೂಪದಲ್ಲೇ 13 ಲಕ್ಷ ರೂ. ಕಾಣಿಕೆ

    ಚಾಮರಾಜನಗರ: ಮಲೆ ಮಹದೇಶ್ವರ (Male Mahadeshwara Hill) ಮತ್ತೆ ಕೋಟಿ ಒಡೆಯನಾಗಿದ್ದಾನೆ. ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, 2.90 ಕೋಟಿ ರೂ. ಸಂಗ್ರಹವಾಗಿದೆ.

    ಶಕ್ತಿ ಯೋಜನೆ ಎಫೆಕ್ಟ್ ಮಹದೇಶ್ವರ ಬೆಟ್ಟಕ್ಕೆ ಮಹಿಳಾ ಭಕ್ತರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ಹೊಸ ವರ್ಷದ ಸಂಭ್ರಮ ಹಿನ್ನೆಲೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಕ್ರಿಮಿನಲ್‍ಗಳು ನಮ್ಮ ಪಕ್ಷದ ಪಿಲ್ಲರ್‌ಗಳು ಎಂದು ಬಿಜೆಪಿ ಘೋಷಿಸಲಿ: ಪ್ರಸಾದ್ ಅಬ್ಬಯ್ಯ

    ಮಲೆ ಮಹದೇಶ್ವರನ ಹುಂಡಿಯಲ್ಲಿ 2.90 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದು ಕಳೆದ ಒಂದು ತಿಂಗಳ ಅವಧಿಯಲ್ಲಿ ಭಕ್ತರು ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,90,00,732 ರೂಪಾಯಿ ಕಾಣಿಕೆ ಸಮರ್ಪಿಸಿದ್ದಾರೆ.

    ಈ ಪೈಕಿ 13 ಲಕ್ಷ ರೂ.ಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಕಾಣಿಕೆ ಸಲ್ಲಿಸಿರುವುದು ವಿಶೇಷವಾಗಿದೆ. ನಗದು ಜೊತೆಗೆ 102 ಗ್ರಾಂ ಚಿನ್ನ, 3 ಕೆಜಿ 155 ಗ್ರಾಂ ಬೆಳ್ಳಿಯನ್ನು ಭಕ್ತರ ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದಲ್ಲದೇ 23 ಅಮೆರಿಕನ್ ಡಾಲರ್‌, ಕೆನಡಾದ 100 ಡಾಲರ್, ಓಮನ್ ದೇಶದ 4 ರಿಯಾಲ್ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ.

    ಚಲಾವಣೆಯಲ್ಲಿ‌ ಇಲ್ಲದ 2,000 ಮುಖಬೆಲೆಯ 12 ನೋಟುಗಳು‌ ಸಹ ಹುಂಡಿಯಲ್ಲಿ ‌ಕಂಡು ಬಂದಿವೆ. ಇದನ್ನೂ ಓದಿ: ಕಠಿಣ ಕ್ರಮ ಕೈಗೊಳ್ಳದಿದ್ರೆ ನಾನೇ NCP ನಾಯಕನ ಕೊಲೆ ಮಾಡ್ತೀನಿ: ಅಯೋಧ್ಯೆ ಅರ್ಚಕ ಕಿಡಿ

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ

    ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hill) ಅಗ್ನಿ ಅವಘಡ ಸಂಭವಿಸಿದೆ. ಲಾಡು ತಯಾರಿಸುವ ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

    ಮಹದೇಶ್ವರ ದೇಗುಲದ (Temple) ಹಿಂಭಾಗದಲ್ಲೇ ಇರುವ ಲಾಡು ತಯಾರಿಸುವ ಘಟಕದಲ್ಲಿ ಬೆಂಕಿ (Fire) ಹೊತ್ತಿಕೊಂಡಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆ ಅಲ್ಲಿನ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.

    ಘಟನೆ ಬಳಿಕ ಪ್ರಾಧಿಕಾರದ ನೌಕರರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಬೆಂಕಿ ಹೊತ್ತಿಕೊಳ್ಳಲು ಸಿಲಿಂಡರ್ ಕಾರಣವೆಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: SSLC, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಎಣ್ಣೆ ಬಾಣಲೆಯಿಂದ ಬೆಂಕಿ ಪ್ರಜ್ವಲಿಸಿ, ಹೆಚ್ಚಿನ ಭಾಗಕ್ಕೆ ಹರಡಿಕೊಂಡಿದೆ. 2 ಟ್ಯಾಂಕರ್ ನೀರಿನ ಮೂಲಕ ಮಹದೇಶ್ವರ ಬೆಟ್ಟದ ಸ್ವಚ್ಛತಾ ಸಿಬ್ಬಂದಿ ಜೊತೆಗೂಡಿ ಬೆಂಕಿ ನಂದಿಸಿದ್ದಾರೆ. ಒಂದು ಭಾಗದ ಗೋಡೆ ಹಾಳಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂದು ಹೇಳಿದ್ದಾರೆ.

    ದೇವಾಲಯದ ಆವರಣದಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಸತತ 1 ಗಂಟೆ ಪರಿಶ್ರಮದ ಬಳಿಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿದ ಸ್ಥಳದಲ್ಲಿ ಪ್ರಾಧಿಕಾರದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Bengaluru Bomb Threat: ಶಾಲೆಗಳು, ದೇವಸ್ಥಾನಗಳಿಗೆ ಭದ್ರತೆ ಒದಗಿಸುತ್ತೇವೆ – ಸಿಎಂ