Tag: ಮಲೆಯಾಳಂ ಸಿನಿಮಾ

  • ಜಾನಕಿ V v/s ಸ್ಟೇಟ್ ಆಫ್ ಕೇರಳ ಚಿತ್ರ ಸ್ಟ್ರೀಮಿಂಗ್: ಸ್ವಾತಂತ್ರ್ಯ ದಿನಕ್ಕೆ ಗಿಫ್ಟ್

    ಜಾನಕಿ V v/s ಸ್ಟೇಟ್ ಆಫ್ ಕೇರಳ ಚಿತ್ರ ಸ್ಟ್ರೀಮಿಂಗ್: ಸ್ವಾತಂತ್ರ್ಯ ದಿನಕ್ಕೆ ಗಿಫ್ಟ್

    ಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ (Suresh Gopi) ನಟನೆಯ ‘ಜಾನಕಿ v/s ಸ್ಟೇಟ್ ಆಫ್ ಕೇರಳ’ ಚಿತ್ರಕ್ಕೆ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಸ್ವಾತಂತ್ರ್ಯ ದಿನದಂದು ಈ ಚಿತ್ರ ZEE5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪ್ರವೀಣ್ ನಾರಾಯಣನ್ ಕಥೆ ಬರೆದು ಚಿತ್ರ ನಿರ್ದೇಶಿಸಿದ್ದಾರೆ. ಜೆ ಫಣೀಂದ್ರ ಕುಮಾರ್ ನಿರ್ಮಿಸಿದ್ದಾರೆ. ಸೇತುರಾಮನ್ ನಾಯರ್ ಕಂಕೋಲ್ ಸಹ-ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

    ಸುರೇಶ್ ಗೋಪಿ ಅವರು ವಕೀಲ ಡೇವಿಡ್ ಅಬೆಲ್ ಡೊನೊವನ್ ಪಾತ್ರದಲ್ಲಿ ಮತ್ತು ಅನುಪಮಾ ಪರಮೇಶ್ವರನ್ (Anupama Parameshwaran) ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ದಿವ್ಯ ಪಿಳ್ಳೈ, ಶ್ರುತಿ ರಾಮಚಂದ್ರನ್, ಅಸ್ಕರ್ ಅಲಿ, ಮಾಧವ್ ಸುರೇಶ್ ಗೋಪಿ ಮತ್ತು ಬೈಜು ಸಂತೋಷ್ ಚಿತ್ರದಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ ನಿಧನ

    ಕೇರಳ ಕಾನೂನು ವ್ಯವಸ್ಥೆಯ ಬಗ್ಗೆ ಸಿನಿಮಾ ಇದೆ. ಜಾನಕಿ (ಅನುಪಮಾ) ಬಾಳಲ್ಲಿ ಒಂದು ಘಟನೆ ನಡೆಯುತ್ತದೆ. ಈ ವೇಳೆ ಆಕೆ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಇದು ಚಿತ್ರದ ತಿರುಳು.

    ZEE5 ನ ತಮಿಳು ಮತ್ತು ಮಲಯಾಳಂ ಮಾರ್ಕೆಟಿಂಗ್ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್ ಮಾತನಾಡಿ, ಈ ಸ್ವಾತಂತ್ರ್ಯ ದಿನದಂದು ನಮ್ಮ ಪ್ರೇಕ್ಷಕರಿಗೆ ಜಾನಕಿ v/s ರಾಜ್ಯ ಕೇರಳವನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ. ಸುರೇಶ್ ಗೋಪಿ ಮತ್ತು ಅನುಪಮಾ ಪರಮೇಶ್ವರನ್ ನೇತೃತ್ವದ ತಾರಾಗಣ ಚಿತ್ರದಲ್ಲಿದೆ.

    ಇದೊಂದು ಕೋರ್ಟ್ ಡ್ರಾಮಾವಾಗಿದ್ದು, ಇದು ಮನರಂಜನೆ ನೀಡುವುದಲ್ಲದೆ, ಇದು ಚಿಂತನೆಯನ್ನು ಪ್ರಚೋದಿಸುತ್ತದೆ. ರೂಢಿಗಳನ್ನು ಸವಾಲು ಮಾಡುತ್ತದೆ ಮತ್ತು ಅನೇಕರು ಎದುರಿಸಲು ಹಿಂಜರಿಯುವ ವಾಸ್ತವಗಳನ್ನು ಪ್ರತಿಬಿಂಬಿಸುತ್ತದೆ. ಕೇರಳದಲ್ಲಿ ಬೇರೂರಿರುವ ಈ ಕಥೆ ಈಗ ಇಡೀ ರಾಷ್ಟ್ರದೊಂದಿಗೆ ಮಾತನಾಡುತ್ತದೆ ಎಂಬುದು ನಮಗೆ ಹೆಚ್ಚು ರೋಮಾಂಚನಕಾರಿಯಾಗಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

    ಸುರೇಶ್ ಗೋಪಿ ಮಾತನಾಡಿ, ʻಜಾನಕಿ v/s ಸ್ಟೇಟ್ ಆಫ್ ಕೇರಳʼ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಸಿಕ್ಕ ಪ್ರತಿಕ್ರಿಯೆ ಅಗಾಧವಾಗಿ ಭಾವನಾತ್ಮಕವಾಗಿದೆ, ಪ್ರೇಕ್ಷಕರು ಈ ಕಥೆಯನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನಮ್ಮ ಕಥೆ ಹೇಳುವಿಕೆಯ ಮೇಲೆ ಅವರು ಇಟ್ಟಿರುವ ನಂಬಿಕೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಈಗ ZEE5 ನಲ್ಲಿ ಜಗತ್ತು ಅದನ್ನು ಅನುಭವಿಸಲು ನಾನು ಕಾಯಲು ಸಾಧ್ಯವಿಲ್ಲ. ಡಿಜಿಟಲ್‌ಗೆ ಈ ಹೆಜ್ಜೆ ಇಟ್ಟರೆ ಜಾನಕಿಯ ಧ್ವನಿ, ಅವರ ಹೋರಾಟ, ಅವರ ನೋವು ಮತ್ತು ಅವರ ಧೈರ್ಯವು ಅಂತಿಮವಾಗಿ ಭಾರತದಾದ್ಯಂತ ಮನೆಗಳನ್ನು ತಲುಪುತ್ತದೆ ಎಂದು ಹೇಳಿದರು.

    ನಟಿ ಅನುಪಮಾ ಪರಮೇಶ್ವರನ್ ಮಾತನಾಡಿ, ಜಾನಕಿಯ ಪಾತ್ರವು ನನ್ನ ವೃತ್ತಿಜೀವನದ ಅತ್ಯಂತ ಭಾವನಾತ್ಮಕವಾಗಿ ಬೇಡಿಕೆಯ ಮತ್ತು ಪ್ರತಿಫಲದಾಯಕ ಪ್ರಯಾಣಗಳಲ್ಲಿ ಒಂದಾಗಿದೆ. ಅವರು ಲೆಕ್ಕವಿಲ್ಲದಷ್ಟು ಕೇಳದ ಧ್ವನಿಗಳ ಸಂಕೇತ, ಮತ್ತು ಅವರ ಕಥೆಯನ್ನು ಪ್ರಾಮಾಣಿಕತೆ ಮತ್ತು ಸಹಾನುಭೂತಿಯಿಂದ ಜೀವಂತಗೊಳಿಸುವಲ್ಲಿ ನಾನು ಅಪಾರ ಜವಾಬ್ದಾರಿಯನ್ನು ಅನುಭವಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ನಮಗೆ ದೊರೆತ ಪ್ರೀತಿ ಮತ್ತು ಬೆಂಬಲ ಅಗಾಧವಾಗಿತ್ತು, ಮತ್ತು ಈಗ, ದೇಶಾದ್ಯಂತ ಪ್ರೇಕ್ಷಕರು ZEE5 ನಲ್ಲಿ ಜಾನಕಿ V v/s ಕೇರಳ ರಾಜ್ಯವನ್ನು ಅನುಭವಿಸುತ್ತಾರೆ ಎಂದು ನನಗೆ ನಂಬಲಾಗದಷ್ಟು ಉತ್ಸುಕವಾಗಿದೆ. ಇದು ಆತ್ಮದೊಂದಿಗೆ ಮಾತನಾಡುವ ಕಥೆಯಾಗಿದೆ. ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಜಗತ್ತು ನಿಮ್ಮನ್ನು ಮೌನಗೊಳಿಸಲು ಪ್ರಯತ್ನಿಸಿದಾಗಲೂ ಎದ್ದು ನಿಲ್ಲುವ ಬಗ್ಗೆ. ಜಾನಕಿಯ ಧೈರ್ಯವು ನೋಡುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

  • ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ಬಾಲಿವುಡ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಹವಾ ಎಬ್ಬಿಸಿದ್ದೇ ತಡ ಹಲವು ಫೈಲ್ಸ್ ಗಳು ಅಲ್ಲಲ್ಲಿ ಓಪನ್ ಆಗುತ್ತಿವೆ. ನಾನಾ ರೀತಿಯ ಫೈಲ್ಸ್ ಗಳು ಇನ್ನೂ ಸಿನಿಮಾವಾಗಿ ಬರಲಿ ಎಂಬ ಹಲವರ ಬೇಡಿಕೆಯ ಬೆನ್ನೆಲ್ಲೆ ಕೇರಳದಲ್ಲೊಂದು ಸಿನಿಮಾ ಶುರುವಾಗುತ್ತಿದೆ. ಅದಕ್ಕೆ ‘ದಿ ಕೇರಳ ಸ್ಟೋರಿ’ ಎಂದು ಹೆಸರಿಟ್ಟಿದ್ದಾರೆ ನಿರ್ದೇಶಕ ಸುದಿಪ್ತೋ ಸೇನ್.

    ನಿರ್ದೇಶಕರು ಕೇವಲ ಘೋಷಣೆ ಮಾಡಿಲ್ಲ, ಟೀಸರ್ ಕೂಡ ರಿಲೀಸ್ ಮಾಡಿದ್ದಾರೆ. ಆ ಟೀಸರ್ ನಲ್ಲಿ ಭಯಾನಕ ಸತ್ಯವೊಂದನ್ನು ಹೊರಗೆಡವಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕೇರಳದ ಮಾಜಿ ಸಿಎಂ ಅಚ್ಯುತಾನಂದ್ ಅವರ ವಿಡಿಯೋ ತುಣಕಕ್ಕೂ ಟೀಸರ್ ನಲ್ಲಿ ಸೇರಿಸಿದ್ದಾರೆ. ಹೀಗಾಗಿ ದಿ ಕೇರಳ  ಸ್ಟೋರಿ ಟೀಸರ್ ನಿಂದಲೇ ಕೇರಳದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಈ ಸಿನಿಮಾದಲ್ಲಿ ಕೇರಳದಲ್ಲಿ ನಡೆದಿದೆ ಎನ್ನಲಾದ ಮಾನವ ಕಳ್ಳಸಾಗಣೆಯ ಕುರಿತಾದ ಸ್ಟೋರಿಯನ್ನು ಹೇಳಲು ಹೊರಟಿದ್ದಾರಂತೆ ನಿರ್ದೇಶಕ ಸೇನ್. ದಶಕವೊಂದರ ಕಾಲದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮಾನವ ಕಳ್ಳಸಾಗಣೆ ಕುರಿತಾದ ಸಂಶೋಧನೆ ಇದರಲ್ಲಿ ಇದೆಯಂತೆ. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಮುಸ್ಲಿಂ ಸಂಘಟನೆಯೊಂದರು ಸಂಚು ರೂಪಿಸಿದ್ದ ಮತ್ತು ನಿಷೇಧಿತ ಸಂಘಟನೆ ಎನ್.ಡಿ.ಎಫ್ ಸಹ ಇಂಥದ್ದೇ ಆಲೋಚನೆ ಹೊಂದಿತ್ತು. ಇವರ ಗುರಿಯು ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವುದೇ ಆಗಿತ್ತು ಎಂದು ಕೇರಳ ಮಾಜಿ ಸಿಎಂ ಅಚ್ಯುತಾನಂದ್ ಹೇಳಿದ್ದರು ಎನ್ನಲಾದ ವಿಡಿಯೋವನ್ನು ಟೀಸರ್ ನಲ್ಲಿ ಹಾಕಿದ್ದಾರೆ. ಈಗ ಅದು ವೈರಲ್ ಕೂಡ ಆಗಿದೆ. ಇದನ್ನೂ ಓದಿ : ಈ ವಾರ ಕರ್ನಾಟಕದಲ್ಲೇ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಆರ್.ಆರ್.ಆರ್’: ಪುನೀತ್ ‘ಜೇಮ್ಸ್’ ಏನಾಗತ್ತೆ?

    ಕಳೆದ ಹತ್ತು ವರ್ಷಗಳಲ್ಲಿ ಕೇರಳದಿಂದ 32 ಸಾವಿರಕ್ಕೂ ಹೆಚ್ಚು ಯುವತಿಯರನ್ನು ಯುದ್ಧ ಪೀಡಿತ ದೇಶಗಳಿಗೆ ರವಾನಿಸಲಾಗಿದೆ ಎನ್ನುವ ಮಾಹಿತಿಯನ್ನೂ ಆ ಟೀಸರ್ ಬಿಟ್ಟುಕೊಡುತ್ತದೆ. ಈ ಹುಡುಗಿಯರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ ಎಂದಿದ್ದಾರೆ ನಿರ್ದೇಶಕರು. ಆ ಯುವತಿಯರ ಬದುಕಿನ ಬಗ್ಗೆ ಈಗಾಗಲೇ ಸಂಶೋಧನೆ ಮಾಡಿರುವ ನಿರ್ದೇಶಕರು ಈ ಸತ್ಯ ಘಟನೆಯನ್ನು ಯಥಾವತ್ತಾಗಿ ತರಲು ನಿರ್ದೇಶಕರು ನಿರ್ಧರಿಸಿದ್ದಾರಂತೆ.