Tag: ಮಲವಿಸರ್ಜನೆ

  • ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

    ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

    ಚಾಮರಾಜನಗರ: ಬ್ಯಾಂಕ್ ಹಾಗೂ ಎಟಿಎಂ ಬಾಗಿಲಿನಲ್ಲೇ ಮಲ ವಿಸರ್ಜನೆ ಮಾಡಿದ್ದಲ್ಲದೆ ಬ್ಯಾಂಕ್ ಬಾಗಿಲು ಹಾಗೂ ಬೀಗಕ್ಕೂ ಹೇಸಿಗೆ ಮೆತ್ತಿ ವಿಕೃತ ಮೆರೆದಿರುವ ಘಟನೆ ನಗರದ ಕೆನರಾ ಬ್ಯಾಂಕ್‍ನಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಕರ್ತವ್ಯಕ್ಕೆ ಬಂದ ಸಿಬ್ಬಂದಿ ಶಾಕ್ ಆಗಿ ಬಾಗಿಲು ಹಾಗೂ ಬೀಗಗಳಿಗೆ ಮಲ ಮೆತ್ತಿದ ಕಾರಣ ಬಾಗಿಲು ತೆರೆಯಲಾರದೆ ಪರದಾಡುವಂತಾಯಿತು. ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ

    ಬಳಿಕ ನಗರಸಭೆ ಪೌರಕಾರ್ಮಿಕರು ಗಲೀಜು ಸ್ವಚ್ಛಗೊಳಿಸಿದರು. 11 ಗಂಟೆಯ ನಂತರ ಬ್ಯಾಂಕ್ ಸೇವೆ ಆರಂಭಗೊಂಡಿತು. ಇದನ್ನೂ ಓದಿ: 1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ಬೇಕಿದೆ: ಉಕ್ರೇನ್‌ನಲ್ಲಿ ಗುಂಡೇಟು ತಿಂದಿದ್ದ ಭಾರತದ ವಿದ್ಯಾರ್ಥಿ

  • ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಊರಿಡೀ ಸುತ್ತಿದ

    ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಊರಿಡೀ ಸುತ್ತಿದ

    ಭುವನೇಶ್ವರ: ಮಲವಿಸರ್ಜನೆಗೆ ತೆರಳಿದ್ದ 8 ವರ್ಷದ ಬಾಲಕಿಯ ತಲೆ ಕಡಿದು, ರುಂಡದೊಂದಿಗೆ ಊರಿಡೀ ತಿರುಗಾಡಿದ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯ, ಮಾನಕಿರಾ ಮಂಡಲದ ಗ್ರಾಮದಲ್ಲಿ ನಡೆದಿದೆ.

    8 ವರ್ಷದ ಬಾಲಕಿ ಮೃತಳಾಗಿದ್ದಾಳೆ. ಈಕೆಯ ತಲೆಯನ್ನು ಕತ್ತರಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು?: ಬಾಲಕಿ ಬೆಳಿಗ್ಗೆ ಮಲವಿಸರ್ಜನೆಗೆಂದು ಹೊಲಕ್ಕೆ ಹೋಗಿದ್ದಳು. ಈ ವೇಳೆ ಅಲ್ಲಿ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ನಿಂತಿದ್ದನು. ಆಕೆ ನೋಡಿದವನೆ ಆಕೆಯ ಹತ್ತಿರಕ್ಕೆ ಬಂದು ತಲೆ ಕಡಿದು ಕೊಡಲಿಯಿಂದ ಕತ್ತರಿಸಿಬಿಟ್ಟಿದ್ದಾನೆ. ನಂತರ ತುಂಡರಿಸಿದ ತಲೆಯನ್ನು ಹೊತ್ತು ಊರೆಲ್ಲ ಸುತ್ತಿದ್ದಾನೆ. ಆರೋಪಿ ಪತ್ನಿ ಕೈಯಲ್ಲಿ ತುಂಡರಿಸಿದ ತಲೆಯನ್ನು ಕಂಡಾಗ ಆತನೊಂದಿಗೆ ಜಗಳವಾಡಿದ್ದಾಳೆ. ಆದರೆ ಅವನು ಕೊಡಲಿಯಿಂದ ಹೆಂಡತಿಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಆರೋಪಿ ಅಲ್ಲೇ ನೆಲದ ಮೇಲೆ ಮಲಗಿ ನಿದ್ದೆಗೆ ಜಾರಿದ್ದಾನೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

    ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆತ ಮಾದಕ ವ್ಯಸನಿ, ಆದರೆ ಬುದ್ಧಿ ಮಾಂದ್ಯನಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಅಪರಾಧವನ್ನು ಮಾಡುವಾಗ ಅವನ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ಖಚಿತವಾಗಿಲ್ಲ. ಆದರೆ ಈತನಿಗೆ ಮತ್ತು ಕೊಲೆಯಾದ ಬಾಲಕಿ ಕುಟುಂಬಕ್ಕೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಮಾನಕಿರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌  ಪ್ರೇಮ್‍ಜಿತ್ ದಾಸ್ ತಿಳಿಸಿದ್ದಾರೆ.

  • ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

    ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

    ನವದೆಹಲಿ: ಕೊರೊನಾ ಕ್ವಾರಂಟೈನ್ ಕೋಣೆಯ ಮುಂದೆಯೇ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಬ್ಲಿಘಿಗಳು ಕ್ವಾರಂಟೈನ್ ಕೊಠಡಿಯ ಮುಂದೆಯೇ ಮಲವಿಸರ್ಜನೆ ಮಾಡಿ ವಿಕೃತಿ ಮರೆದಿರುವಂತಹ ಘಟನೆ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಕ್ವಾರಂಟೈನ್ ಕೋಣೆಯ ಮುಂದೆ ಮುಲವಿಸರ್ಜನೆ ಮಾಡಿದ ಇಬ್ಬರ ಮೇಲೆ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಬರಾಬಂಕಿ ನಿವಾಸಿಗಳಾಗಿದ್ದು, ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಕ್ವಾರಂಟೈನ್ ಸೆಂಟರ್‍ನ ಸಿಬ್ಬಂದಿ ಅವರು ಕ್ವಾರಂಟೈನ್ ಕೋಣೆ 212 ಮುಂದೆಯೇ ಮಲವಿಸರ್ಜನೆ ಮಾಡಿದ್ದಾರೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಅವರ ಈ ಕೃತ್ಯದಿಂದ ನಮಗೆ ಅಸಹ್ಯವಾಗಿದೆ. ಇಲ್ಲಿರುವ ಕೆಲ ಕೊರೊನಾ ಶಂಕಿತರು ಆರೋಗ್ಯ ಇಲಾಖೆ ಮತ್ತು ಸರ್ಕಾರ ನೀಡುತ್ತಿರುವ ಕೊರೊನಾ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

    ಇವರು ನಾವು ಹೇಳಿದ್ದನ್ನು ಕೇಳುತ್ತಿಲ್ಲ. ಸರ್ಕಾರದ ನಿಯಮದಂತೆ ನಡೆಯುತ್ತಿಲ್ಲ. ಇದರಿಂದ ಇವರ ಜೀವಕ್ಕೂ ಅಪಾಯವಿದೆ. ಅವರ ಜೊತೆಗೆ ಬೇರೆಯವರ ಮತ್ತು ನಮ್ಮ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಪೊಲೀಸರು ಈಗ ಇಬ್ಬರ ಮೇಲೆ ಕೇಸ್ ದಾಖಲಿಸಿದ್ದಾರೆ.

    ಇಲ್ಲಿಯವರೆಗೆ ಮಾರ್ಚ್‍ನಲ್ಲಿ ನಡೆದ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 400ಕ್ಕೂ ಹೆಚ್ಚು ಮಂದಿ ಕೊರೊನಾ ಪೀಡಿತರಾಗಿದ್ದಾರೆ. ಜೊತೆಗೆ 15 ಸಾವನ್ನಪ್ಪಿದ್ದಾರೆ. ಕಳೆದ ಮಾರ್ಚ್ ತಿಂಗಳು ದೆಹಲಿ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದೇಶದ ನಾನಾ ಭಾಗದಿಂದ ಸರಿ ಸುಮಾರು 9,000 ಜನರು ಭಾಗವಹಿಸಿದ್ದರು. ದೆಹಲಿ, ತಮಿಳುನಾಡು ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳಿಂದ ಈ ಧಾರ್ಮಿಕ ಸಭೆಗೆ ಬಂದಿದ್ದರು.

    ದೇಶದ 4 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 1,445 ತಬ್ಲಿಘಿ ಕಾರ್ಯಕ್ರಮದಿಂದಲೇ ದಾಖಲಾಗಿದೆ. ತಬ್ಲಿಘಿಗಳು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಸೇರಿದಂತೆ ಒಟ್ಟು 26 ಸಾವಿರ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.