Tag: ಮಲಯಾಳಂ ನಟ

  • ಐಷಾರಾಮಿ ಕಾರುಗಳ ತೆರಿಗೆ ವಂಚನೆ ಆರೋಪ; ನಟ ದುಲ್ಕರ್ ಸಲ್ಮಾನ್‌ಗೆ ಸಮನ್ಸ್ ಜಾರಿ

    ಐಷಾರಾಮಿ ಕಾರುಗಳ ತೆರಿಗೆ ವಂಚನೆ ಆರೋಪ; ನಟ ದುಲ್ಕರ್ ಸಲ್ಮಾನ್‌ಗೆ ಸಮನ್ಸ್ ಜಾರಿ

    ಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ (Dulquer Salmaan) ನಿವಾಸದ ಮೇಲೆ ಕಸ್ಟಮ್ ಅಧಿಕಾರಿಗಳು ದಾಳಿ ಮಾಡಿ 2 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ದಾಖಲೆಗಳನ್ನು ಹಾಜರುಪಡಿಸುವಂತೆ ಸಮನ್ಸ್ ನೀಡಿದ್ದಾರೆ.

    ದುಲ್ಕರ್ ಸಲ್ಮಾನ್ ಅವರು ಕಾರ್‌ಗಳ ಕ್ರೇಜ್ ಹೊಂದಿದ್ದ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಹಲವಾರು ವಿದೇಶಿ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೇ ವಿದೇಶಗಳಿಂದ ಲಿಮಿಟೆಡ್ ಎಡಿಷನ್‌ನ ಕಾರುಗಳನ್ನು ಖರೀದಿಸಿದ್ದಾರೆ.

    ಮಂಗಳವಾರ ಡಿಕ್ಯೂ ಮನೆಗೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಎರಡು ಕಾರುಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

    ಕೇರಳದ ಕೊಚ್ಚಿಯ ತೇವರದಲ್ಲಿರುವ ನಟ ಪೃಥ್ವಿರಾಜ್ ಸುಕುಮಾರನ್ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಅಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲ ಎನ್ನಲಾಗಿದೆ. ನಟರು ಮಾತ್ರವಲ್ಲದೆ ಕೆಲವು ಉದ್ಯಮಿಗಳ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಗೆ `ನುಮ್ಖೂರ್’ ಎಂದು ಹೆಸರಿಡಲಾಗಿದೆ. ವಾಹನಗಳನ್ನು ಮಲಯಾಳಂನಲ್ಲಿ ನುಮ್ಖೂರ್ ಎನ್ನಲಾಗುತ್ತದೆ.

  • ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

    ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

    – ಪೋಸ್ಟ್ ಮಾರ್ಟಂ ಬಳಿಕ ಸಾವಿಗೆ ನಿಖರ ಕಾರಣ ಬಯಲು

    ಲಯಾಳಂ ನಟ, ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ (Kalabhavan Navas) (51) ಅವರು ಕೊಚ್ಚಿಯ ಚೊಟ್ಟನಿಕ್ಕಾರಾದಲ್ಲಿರುವ (Chottanikkaraa) ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಿನಿಮಾ ಚಿತ್ರೀಕರಣಕ್ಕಾಗಿ ಹೋಟೆಲ್‌ವೊಂದರಲ್ಲಿ ತಂಗಿದ್ದ ಅವರು ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೋಟೆಲ್ ಸಿಬ್ಬಂದಿ ರೂಂಗೆ ಹೋದಾಗ ವಿಷಯ ತಿಳಿದಿದ್ದು, ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ತೇಜಸ್ವಿ ಯಾದವ್ ಆರೋಪ ಸುಳ್ಳು – ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದೆ: ಚುನಾವಣಾ ಆಯೋಗ ಸ್ಪಷ್ಟನೆ

    ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಕೂಡ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದರು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಳಿಕ ಸಾವಿಗೆ ನಿಖರವಾದ ಕಾರಣವೇನು ಎನ್ನೋದು ತಿಳಿದು ಬರಲಿದೆ.

    ನವಾಸ್ ಅವರು ಮಲಯಾಳಂ ಚಿತ್ರರಂಗದಲ್ಲಿ ನಟ, ಮಿಮಿಕ್ರಿ ಕಲಾವಿದ, ಹಿನ್ನೆಲೆ ಗಾಯಕರಾಗಿ ವ್ಯಾಪಕ ಮೆಚ್ಚುಗೆ ಗಳಿಸಿದ್ದರು. ನವಾಸ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಹೋರಾಟಕ್ಕೆ ಟಕ್ಕರ್ – ಆ.5ರಂದು ಗಾಂಧಿ ಪ್ರತಿಮೆ ಬಳಿ ಬಿಜೆಪಿಯೂ ಪ್ರತಿಭಟನೆ: ಬಿವೈವಿ

  • ನನ್ನನ್ನ ಬೆತ್ತಲೆಗೊಳಿಸಿ ಲೈಂಗಿಕ ಕಿರುಕುಳ ನೀಡಿದ್ರು – ನಿರ್ದೇಶಕ ರಂಜಿತ್‌ ವಿರುದ್ಧ ನಟ ದೂರು, ಕೇಸ್‌ ದಾಖಲು

    ನನ್ನನ್ನ ಬೆತ್ತಲೆಗೊಳಿಸಿ ಲೈಂಗಿಕ ಕಿರುಕುಳ ನೀಡಿದ್ರು – ನಿರ್ದೇಶಕ ರಂಜಿತ್‌ ವಿರುದ್ಧ ನಟ ದೂರು, ಕೇಸ್‌ ದಾಖಲು

    ತಿರುವನಂತಪುರಂ/ಬೆಂಗಳೂರು: ಆಡಿಷನ್‌ ನೆಪದಲ್ಲಿ ಹೋಟೆಲ್‌ಗೆ ಕರೆದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 31 ವರ್ಷದ ಪುರುಷನ ನಟರೊಬ್ಬರು ಮಲಯಾಳಂನ ಖ್ಯಾತ ನಿರ್ದೇಶಕ ರಂಜಿತ್‌ ಬಾಲಕೃಷ್ಣನ್‌ (Ranjith Balakrishnan) ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನ್ಯಾ.ಹೇಮಾ ಸಮಿತಿ ವರದಿ (Hema Committee report) ಬಿಡುಗಡೆಯಾದ ನಂತರ ರಂಜಿತ್‌ ಬಂಗಾಳಿ ನಟಿಯೊಬ್ಬರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದರು. ಈ ಬೆನ್ನಲ್ಲೇ ಮತ್ತೊಂದು ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿದ್ದಾರೆ. ನಟನೊಬ್ಬನನ್ನ ಐಷಾರಾಮಿ ಹೋಟೆಲ್‌ಗೆ ಕರೆಸಿ, ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಈ ಕುರಿತು ಬೆಂಗಳೂರು ಈಶಾನ್ಯ ವಿಭಾಗದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

    ಕೇರಳ ಪೊಲೀಸರು ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಿದ ನಂತರ ರಂಜಿತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ರಂಜಿತ್ ವಿರುದ್ಧ ಐಟಿ ಕಾಯ್ದೆಯ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು 66-ಇ (ಗೌಪ್ಯತೆಯ ಉಲ್ಲಂಘನೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಕೋಝಿಕ್ಕೋಡ್ ಮೂಲದ ಕಲಾವಿದ ಎಂದು ಗುರುತಿಸಿಕೊಂಡಿರುವ ದೂರುದಾರರು, 2012ರಲ್ಲಿ ಬಾವುಟ್ಟಿಯುಡೆ ನಾಮತ್ತಿಲ್’ ಚಿತ್ರದ ಚಿತ್ರೀಕರಣದ ವೇಳೆ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಕೇರಳದ ಈಸ್ಟ್ ಹಿಲ್‌ಗೆ ಹೋಗಿದ್ದ ಸಂದರ್ಭದಲ್ಲಿ ರಂಜಿತ್ ನನ್ನನ್ನು ಭೇಟಿಯಾಗಿದ್ದರು. ಬಳಿಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಳಿಯ ಐಷಾರಾಮಿ ಹೋಟೆಲ್‌ಗೆ ನನ್ನನ್ನು ಕರೆಸಿಕೊಂಡಿದ್ದ ರಂಜಿತ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ

    ನನ್ನನ್ನು ಬೆತ್ತಲೆಯಾಗಿ ನಿಲ್ಲುವಂತೆ ರಂಜಿತ್ ಹೇಳಿದ್ದರು. ನಾನು ಅವರು ಹೇಳಿದಂತೆಯೇ ಮಾಡಿದೆ. ಇದೇ ಸಂದರ್ಭದಲ್ಲಿ ರಂಜಿತ್ ಅವರು ನಟಿ ರೇವತಿ ಅವರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ರಂಜಿತ್ ಮತ್ತು ರೇವತಿ ನಡುವೆ ಯಾವ ರೀತಿಯ ಸಂಬಂಧವಿದೆ ಎಂದು ನನಗೆ ಗೊತ್ತಿಲ್ಲ. ಆದರೆ, ರಂಜಿತ್ ನನ್ನ ಬೆತ್ತಲೆ ಫೋಟೊಗಳನ್ನು ರೇವತಿ ಅವರಿಗೆ ಕಳುಹಿಸಿದ್ದರು. ಆ ಫೋಟೊಗಳನ್ನು ನೋಡಿ ರೇವತಿ ಇಷ್ಟಪಟ್ಟಿದ್ದಾಳೆ ಎಂದು ರಂಜಿತ್ ಹೇಳಿದ್ದರು ಎಂದು ನಟ ದೂರಿನಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌ 

  • ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಸೀಜ್

    ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಸೀಜ್

    ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ವಿಜಯ್ ಬಾಬು ಅವರ ಪಾಸ್‌ಪೋರ್ಟ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಟ್ಟುಗೋಲು ಹಾಕಿದೆ. ಪಾಸ್‌ಪೋರ್ಟ್ ಕೂಡ ಜಪ್ತಿ ಆಗಿರುವುದರಿಂದ ವಿಜಯ್ ಬಾಬು ಅವರ ವೀಸಾ ಕೂಡ ರದ್ದಾಗಲಿದೆ ಎಂದು ಕೊಚ್ಚಿ ನಗರದ ಪೊಲೀಸ್ ಆಯುಕ್ತ ಸಿ.ಎಚ್ ನಾಗರಾಜು ತಿಳಿಸಿದ್ದಾರೆ.

    ಮಾಜಿ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ನಟ ವಿಜಯ್ ಬಾಬು ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಕೊಚ್ಚಿ ನಗರ ಪೊಲೀಸರ ಮನವಿಯ ಮೇರೆಗೆ ಆರೋಪಿ ವಿಜಯ್ ಬಾಬು ಅವರ ಪಾಸ್‌ಪೋರ್ಟ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜಪ್ತಿ ಮಾಡಲಾಗಿದೆ. ವಿಜಯ್ ಬಾಬು ಹೆಸರಿನಲ್ಲಿರುವ ಎಲ್ಲಾ ದೇಶದ ವೀಸಾಗಳು ಈಗ ಅಮಾನ್ಯವಾಗಿದೆ. ಅವರು ಬೇರೆ ದೇಶಕ್ಕೆ ಹೋಗುವ ಸೂಚನೆಯಿದ್ದು, ವಿಜಯ್ ವಿರುದ್ಧ ನ್ಯಾಯಾಲಯದ ವಾರೆಂಟ್ ಇದೆ ಎಂದು ತಿಳಿದು ಬಂದಿದೆ. ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಜಪ್ತಿಯ ಹಿನ್ನೆಲೆ ಮೇ.24 ರಂದು ವಿಜಯ್ ಬಾಬು ಕಚೇರಿಗೆ ಹಾಜರಾಗದಿದ್ದರೆ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

    ಈ ಹಿಂದೆ ಏಪ್ರಿಲ್ 22ರಂದು ವಿಜಯ್ ಬಾಬು ವಿರುದ್ಧ ದಕ್ಷಿಣ ಎರ್ನಾಕುಲಂ ಪೊಲೀಸರು ಮಹಿಳೆಯೊಬ್ಬರು ನೀಡಿರುವ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಟ, ನಿರ್ಮಾಪಕ ವಿಜಯ್ ಬಾಬು ಸಿನಿಮಾಗಳಲ್ಲಿ ಪಾತ್ರ ಕೊಡುವ ನೆಪದಲ್ಲಿ ಮಹಿಳೆಯ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಜತೆ ಫೇಸ್‌ಬುಕ್ ಲೈವ್‌ನಲ್ಲಿ ಮಹಿಳೆಯ ಹೆಸರನ್ನು ಬಹಿರಂಗಪಡಿಸಿದ್ದ ಕಾರಣ ವಿಜಯ್ ಬಾಬು ಮೇಲೆ ಮತ್ತೊಂದು ದೂರು ದಾಖಲಾಗಿತ್ತು.

  • ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಬೆಂಗಳೂರು: ನಟಿ ಮೇಘನಾ ರಾಜ್ ಹಾಗೂ ಜ್ಯೂನಿಯರ್ ಚಿರು ನೋಡಲು ಮಲಯಾಳಂ ಸ್ಟಾರ್ ದಂಪತಿ ಇಂದು ಆಸ್ಪತ್ರೆಗೆ ಆಗಮಿಸಿದ್ದಾರೆ.

    ಮಲಯಾಳಂ ಸೂಪರ್ ಸ್ಟಾರ್ ಫಹದ್ ಫಾಸಿಲ್ ಮತ್ತು ನಜ್ರಿಯಾ ದಂಪತಿ ಆಸ್ಪತ್ರೆಗೆ ಧಾವಿಸಿ ತಾಯಿ ಹಾಗೂ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಈ ಜೋಡಿ ಕೇರಳದಿಂದ ಕಾರಿನಲ್ಲೇ ಆಗಮಿಸಿದೆ.

    ಆಸ್ಪತ್ರೆಯಲ್ಲಿ ಮೇಘನಾ ರಾಜ್ ಮತ್ತು ಮಗು ಆರೋಗ್ಯ ವಿಚಾರಿಸಿದ ಬಳಿಕ ದಂಪತಿ ನಿರ್ದೇಶಕ ಪನ್ನಗಾಭರಣ ಜೊತೆ ಚಿರು ಸರ್ಜಾ ಸಮಾಧಿಗೆ ತೆರಳಿದ್ದಾರೆ. ಕನಕಪುರ ರಸ್ತೆಯ ಧ್ರುವ ಸರ್ಜಾ ಒಡೆತನದ ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿಗೆ ತೆರಳಿ ನಮಸ್ಕರಿಸಿದ್ದಾರೆ.

    ಮೂರು ದಿನಗಳ ಹಿಂದೆಯಷ್ಟೇ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಅರ್ಜುನಾ ಸರ್ಜಾ ಅವರ ಕುಟುಂಬ ಮಗುವನ್ನು ನೋಡಲು ಬಂದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಅರ್ಜುನ್ ಸರ್ಜಾ, 20 ವರ್ಷದ ಬಳಿಕ ಬಹುಶಃ ನಾನೇ ಚಿರು ಮಗನನ್ನು ಲಾಂಚ್ ಮಾಡುತ್ತೇನೆ. ಸೀಮಂತದ ಸಮಯದಲ್ಲಿ ಹಾಟ್ರ್ಲಿ ವೆಲ್ಕಮ್ ಜೂನಿಯರ್ ಚಿರು ಅಂತ ಎಲ್ಲರೂ ಹಾಡಿದ್ವಿ. ನಮಗೂ ಗಂಡು ಮಗು ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದರು.

    ಚಿರು ಅಗಲಿಕೆ ಪ್ರತಿಯೊಬ್ಬರಿಗೂ ಜೀರ್ಣಿಸಿಕೊಳ್ಳಲು ಆಗದಷ್ಟು ನೋವಾಗಿತ್ತು. ಈಗ ಎಲ್ಲರ ಮುಖದಲ್ಲಿ ಕಾಂತಿ ಬಂದಿದೆ. ಸಣ್ಣ ನಗು ಕಾಣಿಸಿಕೊಂಡಿದೆ. ಚಿರು ಈ ಸಮಯದಲ್ಲಿ ಇರಬೇಕಾಗಿತ್ತು ಈ ಸಂಭ್ರಮ ನೋಡಬೇಕಿತ್ತು ಎಂದು ಗದ್ಗದಿತರಾದರು. 36 ವರ್ಷದ ಹಿಂದೆ ಶೂಟಿಂಗ್ ನಿಲ್ಲಿಸಿ ಚಿರು ನೋಡಲು ಬೆಂಗಳೂರಿಗೆ ಬಂದಿದ್ದೆ. ಈಗ ಅವನ ಮಗನನ್ನ ನೋಡಲು ಬಂದಿದ್ದೇನೆ ಎಂದು ಅರ್ಜುನ್ ಸರ್ಜಾ ಖುಷಿ ಹಂಚಿಕೊಂಡಿದ್ದರು.

  • ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ಮಲೆಯಾಳಂ ನಟ ದಿಲೀಪ್ ಬಂಧನವಾಗಿದ್ದು ಯಾಕೆ?

    ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ಮಲೆಯಾಳಂ ನಟ ದಿಲೀಪ್ ಬಂಧನವಾಗಿದ್ದು ಯಾಕೆ?

    ತಿರುವನಂತಪುರಂ: ಬಹುಭಾಷಾ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10 ರಂದು ಕೇರಳ ಪೊಲೀಸರು ಮಲೆಯಾಳಂ ನಟ ದಿಲೀಪ್‍ರನ್ನು ಬಂಧಿಸಿದ್ದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

    ಫೆಬ್ರವರಿಯಲ್ಲಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆಗಳು ನಡೆದಿದ್ದವು. ಆದ್ರೆ ನಟ ದಿಲೀಪ್ ಅವರ ಬಂಧನದಿಂದ ಪ್ರಮುಖ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಗೆ ‘ಲಕ್ಷ್ಯ’ದಿಂದ 2 ಲಕ್ಷ ರೂ. ನೀಡಿರೋ ಬಗ್ಗೆ ಸಾಕ್ಷಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಲಕ್ಷ್ಯ ಆನ್‍ಲೈನ್ ಬಟ್ಟೆ ಅಂಗಡಿಯಾಗಿದ್ದು ದಿಲೀಪ್ ಅವರ ಪತ್ನಿ ಹಾಗೂ ನಟಿ ಕಾವ್ಯಾ ಮಾಧವನ್ ಅವರ ಮಾಲೀಕತ್ವದಲ್ಲಿದೆ. ಆದ್ರೆ ಇದನ್ನ ಅವರ ತಾಯಿ ನಿರ್ವಹಿಸುತ್ತಿದ್ದಾರೆ.

    ಇದಲ್ಲದೆ ಪೊಲೀಸರ ಸಂಶಯ ಬಲವಾಗೋದಕ್ಕೆ ಕಾರಣವಾಗಿದ್ದೆಂದರೆ ಫೆಬ್ರವರಿಯಲ್ಲಿ ಈ ಘಟನೆ ನಡೆದ ಮುಂದಿನ ಮೂರು ದಿನಗಳ ಸಿಸಿಟಿವಿ ದೃಶ್ಯಾವಳಿಯನ್ನ ತೆಗೆದುಹಾಕಲಾಗಿದೆ. ದೃಶ್ಯಾವಳಿಗಳನ್ನ ತೆಗೆದುಹಾಕಿದವರಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಮುಚ್ಚಿಡಲು ಏನೂ ಇಲ್ಲವಾದ್ರೆ ಸಿಸಿಟಿವಿ ದೃಶ್ಯಾವಳಿಯನ್ನ ಯಾಕೆ ತೆಗೆದುಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ ಪಲ್ಸರ್ ಸುನಿ ದಿಲೀಪ್ ಅವರಿಗೆ ಬರೆದಿದ್ದ ಪತ್ರದಲ್ಲಿ ತಾನು ಶೋರೂಮ್‍ಗೆ ಭೇಟಿ ನೀಡಿ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಮೆಮೋರಿ ಕಾರ್ಡ್ ನೀಡಿದ್ದಾಗಿ ಹೇಳಿದ್ದಾನೆ.

    ದಿಲೀಪ್ ಹಾಗು ಅವರ ಸ್ನೇಹಿತರಾದ ನಿರ್ದೇಶಕ ಹಾಗೂ ನಿರ್ಮಾಪಕ ನಾದಿರ್ ಶಾ ಅವರ ಹೇಳಿಕೆಗಳು ಒಂದಕ್ಕೊಂದು ವಿರುದ್ಧವಾಗಿವೆ ಎಂದು ಮೂಲಗಳು ಹೇಳಿವೆ. ಪೊಲೀಸ್ ಮೂಲಗಳ ಪ್ರಕಾರ, ದಿಲೀಪ್ ಹಾಗೂ ನಟಿ ಹಲವು ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದು, ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದಂತೆ ಹಾಗೂ ಕೆಲವು ಹಣಕಾಸು ವ್ಯವಹಾರ ಹೊಂದಿದ್ದರು ಎನ್ನಲಾಗಿದೆ.

    ದಿಲೀಪ್ ಹಾಗೂ ಅವರ ಮೊದಲ ಪತ್ನಿ ಮಂಜು ವಾರಿಯರ್ ಅವರ ವೈವಹಿಕ ಜೀವನದಲ್ಲಿ ಬಿರುಕು ಉಂಟಾದಾಗ ನಟಿ ಮಂಜು ಅವರನ್ನು ಬೆಂಬಲಿಸಿದ್ರು. ಆಗಿನಿಂದಲೇ ಇಬ್ಬರನಡುವೆ ಅಪಸ್ವರ ಉಂಟಾಗಿತ್ತು. ನಟಿಯ ಮೇಲೆ ದಾಳಿಗೆ ಚರ್ಚೆ ನಡೆದಿತ್ತು ಎಂದು ಪಲ್ಸರ್ ಸುನಿ ಹೇಳಿಕೊಂಡಿದ್ದಾನೆಂದು ಮೂಲಗಳು ಹೇಳಿವೆ. ಎರಡನೇ ಕಾರಣವೆಂದರೆ ಹಣಕಾಸಿನ ವಿಷಯ. ಆಗಲೇ ದಿಲೀಪ್ ಅವರ ಮ್ಯಾನೇಜರ್ ಹಾಗೂ ಇತರರು ಇದರಲ್ಲಿ ಭಾಗಿಯಾದ್ರು ಎನ್ನಲಾಗಿದೆ.

    ಅಲ್ಲದೆ ಪಲ್ಸರ್ ಸುನಿ ಹಾಗೂ ಆತನ ಸ್ನೇಹಿತರು ಸೇರಿದಂತೆ ಈ ಎಲ್ಲರ ಮಧ್ಯೆ ಫೋನ್ ಕರೆಗಳು ಮಾಡಲಾಗಿರುವ ಬಗ್ಗೆ ಪೊಲೀಸರಿಗೆ ಸಾಕ್ಷಿ ಸಿಕ್ಕಿದೆ. ಕೆಲವು ತಿಂಗಳ ಹಿಂದಿನಿಂದಲೂ ಇವರ ಮಧ್ಯೆ ಸಂಭಾಷಣೆ ನಡೆದಿದೆ. ಫೆಬ್ರವರಿಗಿಂತಲೂ ಹಿಂದೆಯೇ ಸಂಚು ರೂಪಿಸಿದ್ದಾರೆ. ಘಟನೆಗೆ ಮುಂಚೆ ಹಾಗೂ ಘಟನೆಯ ಬಳಿಕ ವಿವಿಧ ಫೋನ್‍ಗಳಿಂದ ಮಡಲಾಗಿರುವ ಕರೆಗಳು ಈ ಪ್ರಕರಣದ ಪ್ರಮುಖ ಸಾಕ್ಷಿಗಳು ಎಂದು ಪೊಲೀಸರು ಹೇಳಿದ್ದಾರೆ.

    ಸುನಿ ಕೂಡ ಈ ಹಿಂದೆ ಮುಖೇಶ್ ಸೇರಿದಂತೆ ಹಲವು ನಟರೊಂದಿಗೆ ನಟಿಸಿದ್ದಾನೆ. ಪೊಲೀಸರ ಪ್ರಕಾರ ಮುಖೇಶ್‍ರಿಂದಲೇ ದಿಲೀಪ್ ಅವರಿಗೆ ಸುನಿಯ ಪರಿಚಯವಾಗಿತ್ತು. ಆದ್ರೆ ಮೊದಲು ಸುನಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಮುಖೇಶ್ ಆತನನ್ನು ತೆಗೆದುಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ನಮಗೆ ತಿಳಿದಿರುವ ಮಾಹಿತಿಯ ಪ್ರಕಾರ ದಿಲೀಪ್ ಮತ್ತು ಪಲ್ಸರ್ ಸುನಿ ತುಂಬಾ ಆತ್ಮೀಯತೆ ಹೊಂದಿದ್ದರು. ಚಿತ್ರೀಕರಣದ ಸೆಟ್‍ನಲ್ಲಿ ತೆಗೆಯಲಾದ ಕೆಲವು ಫೋಟೋಗಳು ಇದಕ್ಕೆ ಪುಷ್ಠಿ ನೀಡುತ್ತವೆ. ಕೆಲವು ಸಮಯದಿಂದ ದಿಲೀಪ್ ಅವರೊಂದಿಗೆ ಈತ ಒಡನಾಟ ಹೊಂದಿದ್ದಾನೆ. ಆದ್ರೆ ಇವರ ಮೂಲ ಉದ್ದೇಶ ಬ್ಲಾಕ್‍ಮೇಲ್ ಮಾಡುವುದಾಗಿತ್ತು. ನಟಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.