Tag: ಮಲಯಾಳಂ ಗಾಯಕ

  • ವೇದಿಕೆ ಮೇಲೆ ಹಾಡು ಹೇಳುತ್ತಾ ಪ್ರಾಣಬಿಟ್ಟ ಮಲಯಾಳಂ ಗಾಯಕ

    ವೇದಿಕೆ ಮೇಲೆ ಹಾಡು ಹೇಳುತ್ತಾ ಪ್ರಾಣಬಿಟ್ಟ ಮಲಯಾಳಂ ಗಾಯಕ

    ತಿರುವನಂತಪುರಂ: ವೇದಿಕೆ ಮೇಲೆ ಹಾಡು ಹೇಳುವ ವೇಳೆ ಕುಸಿದು ಬಿದ್ದು ಮಲಯಾಳಂ ಗಾಯಕ ಎಡವ ಬಶೀರ್(87) ಶನಿವಾರ ಸಾವನ್ನಪ್ಪಿದ್ದಾರೆ.

    ಕೇರಳದಲ್ಲಿ ನಡೆಯುವ ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುವ ಮೂಲಕ ಎಡವ ಬಶೀರ್ ಹೆಚ್ಚು ಜನಪ್ರಿಯರಾಗಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 1978ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಟೂಟ್ ಟಾಯ್ಸ್‍ನ ಪ್ರಸಿದ್ಧ ಭಾರತೀಯ ಗಾಯಕ ಕೆಜೆ ಯೇಸುದಾಸ್ ಅವರ ಮಾನ ಹೋ ತುಮ್ ಬೇಹದ್ ಹಸೀನ್… ಹಾಡನ್ನು ಹಾಡುವಾಗ ಎಡವ ಬಶೀರ್ ಕುಸಿದುಬಿದ್ದಿದ್ದಾರೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್

    ಹಾಡು ಹಾಡುತ್ತಾ ವೇದಿಕೆ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ ಅವರು ಇದ್ದಕ್ಕಿದಂತೆ ಕೆಳಗೆ ಕುಸಿದು ಬಿದ್ದಿದ್ದಾರೆ. ಜೊತೆಗೆ ಅವರ ಕೈಯಲ್ಲಿದ್ದ ಮೈಕ್ ಕೂಡ ಕೆಳಗೆ ಬಿದ್ದಿದೆ. ನಂತರ ಕೂಡಲೇ ವೇದಿಕೆಯತ್ತ ಜನರು ಆಗಮಿಸಿ, ಬಶೀರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಜಗ್ಗೇಶ್‍ಗೆ ರಾಜ್ಯಸಭಾ ಟಿಕೆಟ್- ರಾಯರ ಕೃಪೆ, ಪವಾಡಕ್ಕೆ ಧನ್ಯ ಅಂದ್ರು ನವರಸ ನಾಯಕ