Tag: ಮಲತಾಯಿ

  • 9 ವರ್ಷದ ಮಗಳನ್ನು ಕೊಂದ ಮಲತಾಯಿಗೆ ಜೀವಾವಧಿ ಶಿಕ್ಷೆ!

    9 ವರ್ಷದ ಮಗಳನ್ನು ಕೊಂದ ಮಲತಾಯಿಗೆ ಜೀವಾವಧಿ ಶಿಕ್ಷೆ!

    ನ್ಯೂಯಾರ್ಕ್: 9 ವರ್ಷದ ಮಗಳನ್ನು ಕೊಂದ ಭಾರತದ ಪಂಜಾಬ್ ಮೂಲದ ಮಲತಾಯಿಗೆ ಅಮೇರಿಕದ ಕ್ವೀನ್ಸ್ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    ನ್ಯೂಯಾರ್ಕ್‍ನ ಕ್ವೀನ್ಸ್ ನಲ್ಲಿ ನೆಲೆಸಿದ್ದ ಶಾಂದೈ ಅರ್ಜುನ್ (55 ) ತನ್ನ 9 ವರ್ಷದ ಅಶ್‍ದೀಪ್ ಕೌರ್‍ನನ್ನು ಬಾತ್‍ರೂಮಿನಲ್ಲಿ ಹೊಡೆದು ಕೊಲೆ ಮಾಡಿದ್ದಳು.

    ಭಾರತದಿಂದ ತಂದೆಯನ್ನು ನೋಡಲು ಬಂದಿದ್ದ ಬಾಲಕಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಮೇರಿಕ ನ್ಯಾಯಾಲಯದ ನ್ಯಾಯಮೂರ್ತಿ ಕೆನ್ನೆತ್ ಹೋಲ್ಡರ್ ಅವರು ಶಾಂದೈ ಅರ್ಜುನ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

    ಈ ಪ್ರಕರಣ ತುಂಬಾ ಭಯಾನಕವಾಗಿದೆ. ತನ್ನ ಮಗಳನ್ನು ರಕ್ಷಿಸಬೇಕಾದ ಮಲತಾಯಿಯೇ ಆಕೆಯನ್ನು ಘೋರವಾಗಿ ಕೊಲೆ ಮಾಡಿರುವುದು ತುಂಬಾ ದೊಡ್ಡ ಅಪರಾಧ. ಈ ಮಹಿಳೆಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದು ಕ್ವೀನ್ಸ್ ಜಿಲ್ಲೆಯಾ ವಕೀಲರಾದ ಜಾನ್ ರಾಯಾನ್ ಅವರು ಹೇಳಿದ್ದಾರೆ.

    ಏನಿದು ಪ್ರಕರಣ?
    2016ರಲ್ಲಿ ಭಾರತದಿಂದ ತನ್ನ ತಂದೆಯನ್ನು ನೋಡಲು ಅಮೇರಿಕಕ್ಕೆ ಬಂದಿದ್ದ ಅಶ್‍ದೀಪ್ ಕೌರ್ ಎಂಬ 9 ವರ್ಷದ ಬಾಲಕಿಯನ್ನು ಬಾತ್‍ರೂಮಿನಲ್ಲಿ ಕೊಲೆ ಮಾಡಲಾಗಿತ್ತು. ಅಮೇರಿಕದ ಕ್ವೀನ್ಸ್ ನಲ್ಲಿ ಅಪಾಟ್ರ್ಮೆಂಟ್‍ವೊಂದಲ್ಲಿ ವಾಸವಿದ್ದ ಶಾಂದೈ ಅರ್ಜುನ್ ಅವರು ತಮ್ಮ ಮನೆಯ ಬಾತ್‍ರೂಮಿನಲ್ಲಿ ಮಲಮಗಳನ್ನು ಹತ್ಯೆ ಮಾಡಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಮಾಡಲಾಗಿದೆ ಎನ್ನುವ ಫಲಿತಾಂಶ ಪ್ರಕಟವಾಗಿತ್ತು. ಶಾಂದೈ ಅರ್ಜುನ್ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಳು.

  • 9ರ ಬಾಲಕಿ ಮೇಲೆ ಮಲ ಸಹೋದರ, ಸ್ನೇಹಿತರಿಂದ ಗ್ಯಾಂಗ್‍ರೇಪ್, ಕೊಲೆ

    9ರ ಬಾಲಕಿ ಮೇಲೆ ಮಲ ಸಹೋದರ, ಸ್ನೇಹಿತರಿಂದ ಗ್ಯಾಂಗ್‍ರೇಪ್, ಕೊಲೆ

    ಶ್ರೀನಗರ: 9 ವರ್ಷದ ಬಾಲಕಿ ಮೇಲೆ ಮಲ ಸಹೋದರ ಸೇರಿದಂತೆ ಆತನ ಸ್ನೇಹಿತರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ ತಾಯಿ ಮತ್ತು ಮಲ ಸಹೋದರ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಅಗಸ್ಟ್ 23 ರಂದು ಉರಿ ನಿವಾಸಿಯಾಗಿರುವ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಭಾನುವಾರ ಬಾಲಕಿಯ ಮೃತದೇಹ ಹತ್ತಿರದ ಅರಣ್ಯ ಪ್ರದೇಶದ ಪತ್ತೆಯಾಗಿದ್ದು, ಈ ಸಂಬಂಧ ಈ ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ಮಿರ್ ಹೇಳಿದ್ದಾರೆ.

    ಎಸ್‍ಐಟಿ ಈ ಕುರಿತು ಮಲ ತಾಯಿಯನ್ನು ನಿರಂತರ ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿರುವ ವಿಚಾರ ಬಳಕಿಗೆ ಬಂದಿದೆ.

    ಪತಿಯ ಎರಡನೆಯ ಹೆಂಡತಿ ಮತ್ತು ಆಕೆಯ ಮಕ್ಕಳ ಮೇಲೆ ಮಲತಾಯಿ ದ್ವೇಷ ಹೊಂದಿದ್ದಳು. ಹರಿತವಾದ ಚಾಕುವನ್ನು ತಯಾರಿ ಮಾಡಿ ಬಾಲಕಿಯನ್ನು ಹತ್ತಿರವಾದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಲ ತಾಯಿಯ 14 ವರ್ಷದ ಮಗ ಹಾಗೂ ಆತನ ಸ್ನೇಹಿತರು ಸೇರಿ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ಬಾಲಕಿಯನ್ನು ಕಟ್ಟಿ ಹಾಕಿ ಸಹೋದರ ಕೊಡಲಿಯಿಂದ ತಲೆ ಹೊಡೆದಿದ್ದಾನೆ. ಮತ್ತೊಬ್ಬ ಆರೋಪಿ ಬಾಲಕಿಯ ಕಣ್ಣುಗಳ ಮೇಲೆ ಚಾಕುವಿನಿಂದ ಇರಿದಿದ್ದಾನೆ. ನಂತರ ಮೃತ ದೇಹವನ್ನು ಪೊದೆಯೊಳಗೆ ಎಸೆದು ಕೊಂಬೆಗಳಿಂದ ಮರೆಮಾಡಿದ್ದಾರೆ. ಈ ಎಲ್ಲ ಕೃತ್ಯ ನಡೆಯುವಾಗ ಸ್ಥಳದಲ್ಲೇ ಮಲತಾಯಿ ನಿಂತಿದ್ದಳು ಎಂದು ಪೊಲೀಸರು ತಿಳಿಸಿದರು.

    ಕೃತ್ಯಕ್ಕೆ ಬಳಸಿದ್ದ ಕೊಡಲಿ ಮತ್ತು ಚಾಕುವನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗಳನ್ನು ಮನೆಗೆ ಕರೆದೊಯ್ಯಲೊಪ್ಪದ ತಂದೆ: ಯುವತಿಯ ಜೊತೆ ಪೊಲೀಸರ ಅಮಾನವೀಯತೆ

    ಮಗಳನ್ನು ಮನೆಗೆ ಕರೆದೊಯ್ಯಲೊಪ್ಪದ ತಂದೆ: ಯುವತಿಯ ಜೊತೆ ಪೊಲೀಸರ ಅಮಾನವೀಯತೆ

    ಕಾರವಾರ: ಮೂರು ದಿನಗಳ ಹಿಂದೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿ ಅಮಾನವೀಯವಾಗಿ ಎಳೆದುಕೊಂಡು ಹೋದ ಘಟನೆ ನಗರದಲ್ಲಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದ ಚಾಂದಿನಿ (17) (ಹೆಸರು ಬದಲಾಯಿಸಲಾಗಿದೆ) ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿ. ಚಾಂದಿನಿಯ ತಂದೆ ಜಗದೀಶ್ ಆಕೆಯನ್ನು ಸಾಕಲಾಗದೆ ಏಳು ತಿಂಗಳ ಹಿಂದೆಯೇ ಸ್ವೀಕಾರ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಕಾಣೆಯಾಗಿದ್ದ ಮಗಳು ಪತ್ತೆಯಾಗಿದ್ದರೂ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಜಗದೀಶ್ ಹಿಂದೇಟು ಹಾಕಿದ್ದಾರೆ.

    ನಡೆದದ್ದು ಏನು?: ಚಾಂದಿನಿ, ಜಗದೀಶ್ ನ ಮೊದಲ ಪತ್ನಿಯ ಮಗಳು. ಚಾಂದಿನಿ ಚಿಕ್ಕವಳಿದ್ದಾಗ ತಾಯಿ ಮೃತಪಟ್ಟಿದ್ದಳು. ತಂದೆ ಜಗದೀಶ್ ಮತ್ತೊಂದು ಮದುವೆ ಆಗಿದ್ದಾರೆ. ಇದರಿಂದಾಗಿ ಚಾಂದಿನಿ ನಿಷ್ಕಾಳಜಿಗೆ ಒಳಗಾಗಿದ್ದು, ಮಲತಾಯಿ ಧೋರಣೆಗೆ ತುತ್ತಾದ ಅವಳನ್ನು ಜಗದೀಶ್ 9ನೇ ತರಗತಿಯಲ್ಲಿಯೇ ಬೆಂಗಳೂರಿನ ಬಾಲ ಮಂದಿರಕ್ಕೆ ಸೇರಿಸಿದ್ದರು. ಅಲ್ಲಿ ದೈಹಿಕ ಹಿಂಸೆ ನೀಡುತ್ತಿದ್ದರು ಅಂತಾ ಚಾಂದಿನಿ ತಪ್ಪಿಸಿಕೊಂಡು, ಪುನಃ ಮನೆಗೆ ಬಂದಿದ್ದಾಳೆ.

    ಮನೆಯಲ್ಲಿಯೇ ಇದ್ದು ವ್ಯಾಸಂಗ ಮಾಡುತ್ತಿದ್ದ ಚಾಂದಿನಿ ಜಗದೀಶ್ ನನ್ನು ದ್ವೇಷಿಸಲು ಪ್ರಾರಂಭಿಸಿದ್ದಳು. ನಿತ್ಯವೂ ಮಲತಾಯಿ ಜೊತೆಗೆ ಜಗಳವಾಡುತ್ತಿದ್ದಳು. ಅಷ್ಟೇ ಅಲ್ಲದೆ ಮನೆ ಬಿಟ್ಟು ಸುಮಾರು ದಿನ ಸ್ನೇಹಿತೆಯರ ಮನೆಯಲ್ಲಿ ತಂಗುತ್ತಿದ್ದಳು. ಇದರಿಂದ ಬೇಸತ್ತ ದಂಪತಿ ಆಕೆಗೆ ಮಾನಸಿಕ ಕಾಯಿಲೆಯಿದೆ, ನಮ್ಮಿಂದ ಸಾಕಲು ಆಗುವುದಿಲ್ಲವೆಂದು ಕಾರವಾರದ ಸ್ವೀಕಾರ ಕೇಂದ್ರಕ್ಕೆ ತಂದು ಬಿಟ್ಟಿದ್ದರು. ಪಿಯುಸಿ ಪೂರ್ಣಗೊಳಿಸಿದ್ದು, ಮನೆಯಲ್ಲಿ ಇರುವ ಇಚ್ಛೆಯನ್ನು ತಂದೆಗೆ ಹೇಳಿದ್ದರೂ, ಜಗದೀಶ್ ಆಕೆಯನ್ನು ಮನೆಗೆ ಕರೆದುಕೊಂಡೊಯ್ಯಲು ಒಪ್ಪುತ್ತಿರಲಿಲ್ಲ. ಹೀಗಾಗಿ ಮೂರು ದಿನಗಳ ಹಿಂದೆ ಆಕೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದಾಳೆ.

    ಚಾಂದಿನಿ ಕಾಣೆಯಾಗಿರುವ ಕುರಿತು ತಂದೆ ಜಗದೀಶ್ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬುಧವಾರ ರಾತ್ರಿ ಕಾರವಾರದ ಎಂ.ಜಿ.ರೋಡ್‍ನಲ್ಲಿ ಚಾಂದಿನಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಬಂದ ಸ್ವೀಕಾರ ಕೇಂದ್ರದ ಅಧಿಕಾರಿಗಳು, ಮಲ್ಲಾಪುರ ಪೊಲೀಸರು ಹಾಗೂ ಜಗದೀಶ್ ಚಾಂದಿನಿಯನ್ನು ಸ್ವೀಕಾರ ಕೇಂದ್ರಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಚಾಂದಿನಿ ಚರಂಡಿಯಲ್ಲಿ ಅರ್ಧ ಗಂಟೆ ಬಚ್ಚಿಟ್ಟುಕೊಂಡಿದ್ದಳು. ಅವಳ ಮನವೊಲಿಕೆಗಾಗಿ ಪೊಲೀಸರು ನಾವು ನಿನ್ನನ್ನು ಸ್ವೀಕಾರ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಜಗದೀಶ್ ಮಾತ್ರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ಧರಿರಲಿಲ್ಲ. ಯುವತಿಯ ಪ್ರತಿರೋಧದ ನಡುವೆಯೇ ಮಳೆಯನ್ನು ಲೆಕ್ಕಿಸದೇ ಸ್ವೀಕಾರ ಕೇಂದ್ರದ ಮಹಿಳಾ ಅಧಿಕಾರಿ ಹಾಗೂ ಮಹಿಳಾ ಪೊಲೀಸ್ ಅಮಾನವೀಯವಾಗಿ ಎಳೆದು ಆಟೋದಲ್ಲಿ ಸ್ವೀಕಾರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 6 ವರ್ಷದ ಮಗನನ್ನ ಕೊಂದು ಸೂಟ್‍ ಕೇಸ್ ನಲ್ಲಿ ತುಂಬಿದ್ಳು ಮಲತಾಯಿ

    6 ವರ್ಷದ ಮಗನನ್ನ ಕೊಂದು ಸೂಟ್‍ ಕೇಸ್ ನಲ್ಲಿ ತುಂಬಿದ್ಳು ಮಲತಾಯಿ

    ಅಹಮದಾಬಾದ್: ಮಲತಾಯಿಯೊಬ್ಬಳು 6 ವರ್ಷದ ಮಗನನ್ನು ಕೊಲೆ ಮಾಡಿ ಸೂಟ್‍ಕೇಸ್ ನಲ್ಲಿ ಶವವನ್ನ ತುಂಬಿದ್ದ ಘಟನೆ ಗುಜರಾತ್‍ನ ಕೃಷ್ಣನಗರ್ ನಲ್ಲಿ ನಡೆದಿದೆ.

    ಝೀನಲ್ ಮಗನನ್ನು ಕೊಲೆ ಮಾಡಿದ ಪಾಪಿ ತಾಯಿ. 6 ವರ್ಷದ ಧ್ರುವ್ ನನ್ನು ಕೊಂದ ಬಳಿಕ ಸೂಟ್‍ಕೇಸ್‍ನಲ್ಲಿ ಶವವನ್ನ ತುಂಬಿದ್ದ ಈಕೆ, 2 ಗಂಟೆಗಳಿಂದ ಮಗ ಕಾಣೆಯಾಗಿದ್ದಾನೆಂದು ಹುಡುಕಾಡುವ ನಾಟಕವಾಡಿದ್ದಳು. ಗಂಡ ಶಾಂತಿಲಾಲ್ ಜೊತೆ ಸೇರಿ ಎಲ್ಲಾ ಕಡೆ ಮಗನಿಗಾಗಿ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೊಲೀಸರು ಮನೆಗೆ ಬಂದು ತಪಾಸಣೆ ಮಾಡಿದಾಗ ಸೂಟ್‍ಕೇಸ್ ಪತ್ತೆಯಾಗಿತ್ತು. ಅದನ್ನ ತೆಗೆದು ನೋಡಿದಾಗ ಬಾಲಕನ ಮೃತದೇಹವಿತ್ತು. ಬಾಲಕನನ್ನ ದಾವಣಿಯಿಂದ ಸುತ್ತಲಾಗಿತ್ತು. ಪೊಲೀಸರಿಗೆ ಮಲತಾಯಿ ಝೀನಲ್ ಮೇಲೆ ಅನುಮಾನ ಬಂದು ಕೂಡಲೇ ಆಕೆಯನ್ನ ವಿಚಾರಣೆಗೆ ಒಳಪಡಿಸಿದಾಗ ಮಗನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

    ಝೀನಲ್ ಹಾಗೂ ಶಾಂತಿಲಾಲ್ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಶಾಂತಿಲಾಲ್‍ಗೆ ಮೊದಲನೇ ಮದುವೆಯಿಂದ ಮಗನಿದ್ದರೆ, ಝೀನಲ್‍ಗೆ ಮಗಳಿದ್ದಳು. ಇಬ್ಬರೂ ಮೂರನೇ ಮಗು ಬೇಡವೆಂಬ ಷರತ್ತಿನ ಮೇಲೆ ಮದುವೆಯಾಗಿದ್ದರು. ಆದ್ರೆ ಝೀನಲ್ ಯಾವಾಗ್ಲೂ ತನ್ನ ಮಗಳ ಬಗ್ಗೆಯೇ ಚಿಂತಿಸುತ್ತಿದ್ದು, ಕೊನೆಗೆ ಬಾಲಕನನ್ನು ಕೊಲೆ ಮಾಡಿದ್ದಾಳೆ.

    ಶಾಂತಿಲಾಲ್ ಅವರ ಎಲ್ಲಾ ಆಸ್ತಿ ಮಗನಿಗೆ ಸೇರಿದ್ದಾಗಿದ್ದು, ಮಗಳ ಪಾಡೇನು ಎಂದು ಝೀನಲ್ ಚಿಂತೆಯಲ್ಲಿದ್ದಳು. ಇದೇ ಕಾರಣದಿಂದ ಧ್ರುವ್ ನನ್ನು ಆತನ ಪ್ಯಾಂಟ್ ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ನಂತರ ಜನರ ಮುಂದೆ ನಾಟಕವಾಡಿದ್ದಾಳೆ.

    ಸದ್ಯ ಝೀನಲ್ ಳನ್ನು ಪಲೀಸರು ಬಂಧಿಸಿದ್ದಾರೆ.