Tag: ಮರ್ಸಿಸೈಡ್

  • ಚಹಾ ವ್ಯಸನಿಯಾದ ಪೊಲೀಸ್ ಕುದುರೆ

    ಚಹಾ ವ್ಯಸನಿಯಾದ ಪೊಲೀಸ್ ಕುದುರೆ

    – 15 ವರ್ಷದಿಂದ ಚಹಾ ಸೇವನೆ

    ಲಂಡನ್: ಮರ್ಸಿಸೈಡ್ ದೇಶದ ಪೊಲೀಸರ ಕುದುರೆಯೊಂದು ಚಹಾ ವ್ಯಸನಿಯಾಗಿದ್ದು, ಬೆಳಗ್ಗೆ ಟೀ ಕುಡಿಯದೆ ಕೆಲಸ ಮಾಡಲ್ಲ.

    ಜ್ಯಾಕ್ ಎಂಬ ಹೆಸರಿನ 20 ವರ್ಷದ ಪೊಲೀಸ್ ಕುದುರೆಯು, ಸುಮಾರು 15 ವರ್ಷಗಳಿಂದ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಂಡಿದೆ. ಜ್ಯಾಕ್‍ಗಾಗಿ ಪ್ರತಿದಿನ ಬೆಳಗ್ಗೆ ಒಂದು ಕಪ್ ಚಹಾವನ್ನು ಅಶ್ವಶಾಲೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಒಂದು ವೇಳೆ ಚಹಾ ಕೊಡದಿದ್ದರೆ ಜ್ಯಾಕ್ ತನ್ನ ಬೆಳಗ್ಗಿನ ಪಾಳಿಯ ಯಾವುದೇ ಕೆಲಸ ಮಾಡುವುದಿಲ್ಲ.

    ಜ್ಯಾಕ್ ಮುಂದಿನ ವರ್ಷ ಪೊಲೀಸ್ ಸೇನೆಯಿಂದ ನಿವೃತ್ತಿ ಹೊಂದಲಿದ್ದಾನೆ. ವಿಚಿತ್ರವೆಂದರೆ ಜ್ಯಾಕ್ ತನ್ನ ಜಾಕಿ ಕಪ್‍ನಲ್ಲಿ ಉಳಿದ ಚಹಾವನ್ನು ನೆಕ್ಕುವ ಮೂಲಕ ಟೀ ಪ್ರೀಯನಾದ. ಬಳಿಕ ನಾಲಿಗೆಯನ್ನು ಕಪ್‍ನಲ್ಲಿ ಅದ್ದಿ ಟೀಯನ್ನ ಬಾಯಿಗೆ ತರುವುದನ್ನು ಕಲಿತ. ಜ್ಯಾಕ್‍ನ ಈ ಅಭ್ಯಾಸವು ಮರ್ಸಿಸೈಡ್ ಪೊಲೀಸರ ಮೌಂಟ್ ವಿಭಾಗದ ಎಲ್ಲ ಸಿಬ್ಬಂದಿಗೆ ತಿಳಿದಿದೆ. ಹೀಗಾಗಿ ಅಧಿಕಾರಿಗಳು ಜ್ಯಾಕ್‍ಗೆ ನೀಡುವ ಚಹಾವನ್ನು ಎಂದಿಗೂ ತಪ್ಪಿಸುವುದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ವಿಡಿಯೋ ವೈರಲ್:
    ಜ್ಯಾಕ್ ಟೀ ಕುಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮರ್ಸಿಸೈಡ್ ಪೊಲೀಸ್ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ, ಜ್ಯಾಕ್‍ಗೆ ದೊಡ್ಡ ಕಪ್ ಚಹಾಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಕೆಲಸಕ್ಕೆ ಕಳುಹಿಸುವ ಮೊದಲು ಅವನಿಗೆ ಟೀ ನೀಡಲಾಗುವುದು. ಜ್ಯಾಕ್ ಟೀ ಕುಡಿಯುವ ವಿಡಿಯೋ ಕಳೆದ ಎರಡು ವಾರಗಳಿಂದ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್‍ಗಳು ಕೂಡ ಬಂದಿವೆ ಎಂದು ತಿಳಿಸಿದ್ದಾರೆ.

    ಅಶ್ವಶಾಲೆಯಲ್ಲಿ ಚಹಾ ಕುಡಿಯುವ 12 ಕುದುರೆಗಳ ಪೈಕಿ ಜ್ಯಾಕ್ ಕೂಡ ಒಬ್ಬನಾಗಿದ್ದಾನೆ. ಆದರೆ ಅವನಿಗೆ ನೀಡುವ ಟೀ ಭಿನ್ನವಾಗಿರುತ್ತದೆ. ಜ್ಯಾಕ್‍ಗೆ ತುಂಬಾ ಬಿಸಿ ಅಥವಾ ಕೆನೆ ಚಹಾ ಇಷ್ಟವಾಗುವಿಲ್ಲ. ಅವನಿಗೆ 1 ಟೀ ಚಮಚ ಸಕ್ಕರೆ, ಸ್ವಲ್ಪ ತಣ್ಣೀರಿನೊಂದಿಗೆ ಹಾಲಿನಲ್ಲಿ ಕುದಿಸಿದ ಚಹಾವನ್ನು ನೀಡಲಾಗುತ್ತದೆ. ಆದರೆ ಎರಡು ಚಮಚ ಸಕ್ಕರೆ ಹಾಕಿದರೆ ಜಾಕ್ ಹೆಚ್ಚು ಖುಷಿಯಾಗುತ್ತಾನೆ ಎಂದು ಮರ್ಸಿಸೈಡ್ ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.