Tag: ಮರ್ಸಿಡಿಸ್ ಬೆನ್ಜ್ ಕಾರು

  • ಪಿಎ ಹುಟ್ಟುಹಬ್ಬಕ್ಕೆ ಬೆನ್ಜ್ ಕಾರು ಗಿಫ್ಟ್ ಕೊಟ್ಟ ಸ್ಟಾರ್ ಗಾಯಕಿ

    ಪಿಎ ಹುಟ್ಟುಹಬ್ಬಕ್ಕೆ ಬೆನ್ಜ್ ಕಾರು ಗಿಫ್ಟ್ ಕೊಟ್ಟ ಸ್ಟಾರ್ ಗಾಯಕಿ

    -35 ಲಕ್ಷ ರೂ.ಮೌಲ್ಯದ ಬೆನ್ಜ್ ಕಾರು ಗಿಫ್ಟ್

    ಲಂಡನ್: ಪಿಎ ಹುಟ್ಟುಹಬ್ಬಕ್ಕೆ ಯಾವುದೇ ಸ್ಟಾರ್ ನಟರು ಸಣ್ಣ ಪಾರ್ಟಿಯನ್ನು ಏರ್ಪಡಿಸುವುದು ಸಾಮಾನ್ಯ. ಆದ್ರೆ ಗಾಯಕಿ ಮ್ಯಾಡಿಸನ್ ಬಿಯರ್ ತಮ್ಮ ಪಿಎ 30ನೇ ಬರ್ತ್ ಡೇಗೆ ಸುಮಾರು 35 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಕಾರು ಗಿಫ್ಟ್ ನೀಡಿ ಅಚ್ಚರಿ ಕೊಟ್ಟಿದ್ದಾರೆ.

    ಪಿಎ ಹುಟ್ಟುಹಬ್ಬದ ಸಂದರ್ಭದ ಹಿನ್ನೆಲೆಯಲ್ಲಿ ಲಂಚ್ ಆಯೋಜಿಸಿದ್ದ ಮ್ಯಾಡಿಸನ್ ಬಿಯರ್ ಆ ಬಳಿಕ ಬ್ಯಾಗ್ ಒಂದನ್ನು ನೀಡಿದ್ದರು. ಆ ಬ್ಯಾಗ್‍ನಲ್ಲಿ ಮರ್ಸಿಡಿಸ್ ಬೆನ್ಜ್-ಸಿ300 ಮಾದರಿಯ ಕಾರಿನ ಕೀಯನ್ನು ಇಟ್ಟು ತಮ್ಮ ಪಿಎಗೆ ಬಹುಮಾನವಾಗಿ ನೀಡಿದ್ದರು. ಸ್ವತಃ ಅವರನ್ನೇ ಕಾರಿನ ಬಳಿ ಕರೆದುಕೊಂಡು ಹೋಗಿ ಮ್ಯಾಡಿಸನ್ ಅಚ್ಚರಿ ಮೂಡಿಸಿದ್ದರು.

    ಮರ್ಸಿಡಿಸ್ ಬೆನ್ಜ್ ಕಾರನ್ನು ಖರೀದಿ ಮಾಡಬೇಕೆಂಬುವುದು ಮ್ಯಾಡಿಸನ್ ಬಿಯರ್ ಪಿಎ ಅವರ ಬಹುದಿನಗಳ ಕನಸಾಗಿತ್ತು. 12 ವರ್ಷಗಳ ಹಳೆಯ ಕಾರನ್ನು ಮ್ಯಾಡಿಸನ್ ಪಿಎ ಬಳಸುತ್ತಿದ್ದರು. ಇದನ್ನು ವೀಕ್ಷಿಸಿದ್ದ ಮ್ಯಾಡಿಸನ್ ಪಿಎ ಕನಸನ್ನು ನನಸು ಮಾಡಿದ್ದಾರೆ. ಅಂದಹಾಗೇ ಮ್ಯಾಡಿಸನ್ ಬಿಯರ್ 13ಕ್ಕೆ ಗಾಯಕಿಯಾಗಿ ಹೆಸರು ಪಡೆದಿದ್ದರು. ಆಕೆ ಮಾಡಿದ್ದ ಯೂಟ್ಯೂಬ್ ವಿಡಿಯೋಗಳು 20 ವರ್ಷದ ಗಾಯಕಿಗೆ ಮೊದಲು ಬ್ರೇಕ್ ನೀಡಿತ್ತು.

  • ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    – ವೀರೇಂದ್ರ ಹೆಗ್ಗಡೆಯವರಿಗೆ ಕಾರು ಹಸ್ತಾಂತರಿಸಿದ ರಾಜಸ್ತಾನದ ನಂದಜೀ

    ಮಂಗಳೂರು: ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರನ್ನು ರಾಜಸ್ತಾನದ ಸ್ವಾಮೀಜಿಯೊಬ್ಬರು ಕೊಡುಗೆ ನೀಡಿದ್ದಾರೆ.

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿಂಟೇಜ್ ಕಾರ್ ಸಂಗ್ರಹದ ಅಭಿರುಚಿಯನ್ನು ನೋಡಿ ರಾಜಸ್ತಾನದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜೀ ಪ್ರಶಂಸಿದ್ದರು. ಈಗ ಅವರು 1972ರ ಮೋಡೆಲ್‍ನ ಮರ್ಸಿಡಿಸ್ ಬೆನ್ಜ್ ಕಾರನ್ನು ವೀರೇಂದ್ರ ಹೆಗ್ಗಡೆ ಅವರಿಗೆ ಕೊಡುಗೆಯಾಗಿ ನೀಡಿದರು.

    280 ಎಸ್.ಮಾದರಿಯ ಈ ಅತ್ಯುತ್ತಮ ಕಾರುನ್ನು ಸ್ವತಃ ಸ್ವಾಮಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆ ಅವರ ನಿವಾಸಕ್ಕೆ ಬಂದು ಕಾರಿನ ಕೀ ಹಸ್ತಾಂತರಿದ್ದಾರೆ. ಈ ಮೂಲಕ ಕಾರನ್ನು ಕೊಡುಗೆಯಾಗಿ ನೀಡಿದರು. ಬಳಿಕ ವೀರೆಂದ್ರ ಹೆಗ್ಗಡೆಯವರು ಕಾರನ್ನು ಚಲಾಯಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು. ಈ ಸಂದರ್ಭ ಡಿ.ಹರ್ಷೇಂದ್ರ ಕುಮಾರ್ ಜೊತೆಗಿದ್ದರು.

    ಕೆಲವು ವರ್ಷಗಳ ಹಿಂದೆ ಜಾಗತಿಕ ಯೋಗ ಸಮ್ಮೇಳನ ಉದ್ಘಾಟಿಸಲು ಸ್ವಾಮೀಜಿ ಧರ್ಮಸ್ಥಳಕ್ಕೆ ಬಂದಾಗ ಇಲ್ಲಿನ ಕಾರ್ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಯುರೋಪ್ ಖಂಡದ ಆಸ್ಟ್ರೀಯಾ ದೇಶದಲ್ಲಿ ತಮ್ಮ ಆಶ್ರಮ ಪ್ರಾರಂಭಿಸಿ ಅಲ್ಲಿ ಯೋಗ ಪ್ರಚಾರ ಮತ್ತು ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತರಾಗಿದ್ದಾರೆ.