Tag: ಮರ್ಸಿಡಿಸ್ ಬೆಂಜ್

  • ಸೈರಸ್ ಮಿಸ್ತ್ರಿ ಕಾರು ಅಪಘಾತಕ್ಕೂ 5 ಸೆಕೆಂಡ್ ಮುನ್ನ ಬ್ರೇಕ್ ಹಾಕಲಾಗಿದೆ: ಮರ್ಸಿಡಿಸ್ ಕಂಪನಿ

    ಸೈರಸ್ ಮಿಸ್ತ್ರಿ ಕಾರು ಅಪಘಾತಕ್ಕೂ 5 ಸೆಕೆಂಡ್ ಮುನ್ನ ಬ್ರೇಕ್ ಹಾಕಲಾಗಿದೆ: ಮರ್ಸಿಡಿಸ್ ಕಂಪನಿ

    ಮುಂಬೈ: ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (Cyrus Mistry) ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗುವ 5 ಸೆಕೆಂಡ್‍ಗಳ ಮುನ್ನ ಬ್ರೇಕ್ ಹಾಕಲಾಗಿದೆ ಎಂದು ಐಷಾರಾಮಿ ಕಾರು ಮರ್ಸಿಡಿಸ್ (Mercedes-Benz) ಕಂಪನಿ ಪೊಲೀಸರಿಗೆ ಮಾಹಿತಿ ನೀಡಿದೆ.

    ಸೆಪ್ಟೆಂಬರ್ 4 ಭಾನುವಾರದಂದು ಗುಜರಾತ್‍ನಿಂದ ಮುಂಬೈಗೆ ತೆರಳುತ್ತಿದ್ದಾಗ ಪಾಲ್ಘರ್‌ನ ಚರೋತಿಯ ಸೂರ್ಯ ನದಿ ಸೇತುವೆ ಮೇಲೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸೇರಿ ಇಬ್ಬರು ಮೃತಪಟ್ಟಿದ್ದರು. ಮತ್ತಿಬ್ಬರೂ ಗಾಯಗೊಂಡಿದ್ದರು. ಇದನ್ನೂ ಓದಿ: ಇಂದು ಬಿಜೆಪಿಯಿಂದ ಜನಸ್ಪಂದನ – ದೊಡ್ಡಬಳ್ಳಾಪುರದಲ್ಲಿ ಶಕ್ತಿ ಪ್ರದರ್ಶನ

    ಘಟನೆಯ ಬಳಿಕ ಐಷಾರಾಮಿ ಕಾರು ಅಪಫಾತದ ಕುರಿತಾಗಿ ಹಲವು ಅನುಮಾನಗಳು ಮೂಡಿತ್ತು. ಈ ಬಗ್ಗೆ ಕಾರನ್ನು ಪರಿಶೀಲಿಸಲು ಮರ್ಸಿಡಿಸ್-ಬೆಂಜ್ ತಜ್ಞರ ತಂಡ ಹಾಂಗ್ ಕಾಂಗ್‍ನಿಂದ ಮುಂಬೈಗೆ ಭೇಟಿ ನೀಡಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಜರ್ಮನ್ ವಾಹನ ತಯಾರಕ ಕಂಪನಿ, ಕಾರು ಅಪಘಾತದ ತನಿಖೆಯಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಗ್ರಾಹಕರ ಗೌಪ್ಯತೆಯನ್ನು ಗೌರವಿಸುವುದಕ್ಕಾಗಿ ಅವರೊಂದಿಗೆ ಮಾತ್ರ ವರದಿಯ ವಿವರ ಹಂಚಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

    ಈ ಬಗ್ಗೆ ಪ್ರಾಥಮಿಕ ಮಾಹಿತಿ ಹಂಚಿಕೊಂಡಿರುವ ಮರ್ಸಿಡಿಸ್ ಕಂಪನಿ, ಅಪಘಾತಕ್ಕೂ ಮುನ್ನ ಕಾರು 100 ಕಿ.ಮೀ ವೇಗದಲ್ಲಿತ್ತು. ಬಳಿಕ ಸೂರ್ಯ ನದಿ ಸೇತುವೆ ಮೇಲೆ ಬರುತ್ತಿದ್ದಂತೆ ವೇಗ 89 ಕಿ.ಮೀ ಇಳಿಕೆ ಕಂಡಿತ್ತು. ಅಪಘಾತಕ್ಕೂ 5 ಸೆಕೆಂಡ್‍ಗೂ ಮುನ್ನ ಬ್ರೇಕ್ ಹಾಕಲಾಗಿತ್ತು. ಅಪಘಾತವಾಗುತ್ತಿದ್ದಂತೆ 4 ಏರ್‌ಬ್ಯಾಗ್‌ಗಳ ಪೈಕಿ 3 ಏರ್‌ಬ್ಯಾಗ್‌ಗಳು ತೆರೆದುಕೊಂಡಿತ್ತು ಎಂದು ಮುಂಬೈನ ಪಾಲ್ಘರ್ ಪೊಲೀಸರಿಗೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

    ಭಾನುವಾರ ಮಧ್ಯಾಹ್ನ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿದ ಮರ್ಸಿಡಿಸ್ ಕಾರು ಅಪಘಾತದಲ್ಲಿ ಸೈರಸ್ ಮಿಸ್ತ್ರಿ (54) ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಅವರು ಸಾವನ್ನಪ್ಪಿದ್ದರು. ಕಾರಿನಲ್ಲಿದ್ದ ಮತ್ತಿಬ್ಬರು ಅನಾಹಿತಾ ಪಾಂಡೋಲೆ (55) ಹಾಗೂ ಅವರ ಪತಿ ಡೇರಿಯಸ್ ಪಾಂಡೋಲೆ (60) ಗಾಯಗೊಂಡಿದ್ದರು ಅವರಿಬ್ಬರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಜ್ ಕಾರನ್ನು ಹೆಲಿಕಾಪ್ಟರ್‌ನಿಂದ ಎಸೆದು ಕೋಪ ತೀರಿಸಿಕೊಂಡ ಮಾಲೀಕ

    ಬೆಂಜ್ ಕಾರನ್ನು ಹೆಲಿಕಾಪ್ಟರ್‌ನಿಂದ ಎಸೆದು ಕೋಪ ತೀರಿಸಿಕೊಂಡ ಮಾಲೀಕ

    ಮಾಸ್ಕೋ: ಎರಡು ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಎಸ್‍ಯುವಿ ಕಾರನ್ನು ಮಾಲೀಕನೊಬ್ಬ 1 ಸಾವಿರ ಅಡಿ ಎತ್ತರದಿಂದ ಎಸೆದು ತನ್ನ ಕೋಪವನ್ನು ತೀರಿಸಿಕೊಂಡಿದ್ದಾನೆ.

    ರಷ್ಯಾದ ಇಗೊರ್ ಮೊರಾಜ್ 2.70 ಲಕ್ಷ ಡಾಲರ್ (ಅಂದಾಜು 2 ಕೋಟಿ ರೂ.) ನೀಡಿ ಮರ್ಸಿಡಿಸ್ ಬೆಂಜ್ ಎಎಂಜಿ ಜಿ63 ಕಾರನ್ನು ಖರೀದಿ ಮಾಡಿದ್ದ. ಬೆಂಜ್ ಕಾರಿನ ಮಾಲೀಕನಾಗುವ ಕನಸು ನನಸು ಆಗಿದ್ದರೂ ಕಾರಿನಲ್ಲಿ ತಾಂತ್ರಿಕ ದೋಷ ಇತ್ತು. ಹಾಗಾಗಿ ಕಾರನ್ನು ಹೆಲಿಕಾಪ್ಟರ್ ನಲ್ಲಿ 1000 ಅಡಿ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಅದನ್ನು ಕೆಳಗೆ ಬೀಳಿಸಿ ಸಂಪೂರ್ಣವಾಗಿ ದ್ವಂಸ ಮಾಡಿದ್ದಾನೆ.

    ಕಾರನ್ನು ಗ್ಯಾರೆಜ್‍ಗೆ ಬಿಟ್ಟರೆ ಮ್ಯೆಕಾನಿಕ್ ಕೂಡ ಕೆಲ ತಾಂತ್ರಿಕ ತೊಂದರೆಗಳು ಸರಿಯಾಗುವುದಿಲ್ಲ ಎಂದು ಹೇಳುತ್ತಿದ್ದ. ಬಹಳ ಕನಸು ಕಟ್ಟಿಕೊಂಡು ಕಾರನ್ನು ತೆಗೆದುಕೊಂಡ ನನಗೆ ಬಹಳ ನಿರಾಸೆಯಾಗಿತ್ತು, ಆದ್ದರಿಂದ ನಾನು ಈ ಕಾರನ್ನು 1000 ಅಡಿ ಎತ್ತರದಿಂದ ಬೀಳಿಸಿದ್ದೇನೆ ಎಂದು ಹೇಳಿದ್ದಾನೆ. ಈ ವಿಚಾರದ ಬಗ್ಗೆ 7 ನಿಮಿಷಗಳ ವಿಡಿಯೋ ಮಾಡಿ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ಮೊರಾಜ್, ಈ ವಿಡಿಯೋದಲ್ಲಿ ಕಾರು ಖರೀದಿಸಿದ ನಂತರ ಕಾರು ಹೆಚ್ಚು ಸಮಯ ಗ್ಯಾರೆಜ್‍ನಲ್ಲೇ ಇತ್ತು ಎಂದು ಹೇಳಿದ್ದಾನೆ.

    ರಷ್ಯಾದ ಮಾಧ್ಯಮವೊಂದು ಸುದ್ದಿ ಮಾಡಿದ್ದು, ಕಾರಿನಲ್ಲಿ ಯಾವ ರೀತಿಯ ತೊಂದರೆಯು ಇರಲಿಲ್ಲ. ಬದಲಿಗೆ ಇಗೊರ್ ಮೊರಾಜ್ ಬಹಳ ಶೋಕಿ ವ್ಯಕ್ತಿಯಾಗಿದ್ದು, ಆತ ತನ್ನ ಗೆಳಯರ ಜೊತೆ ಚಾಲೆಂಜ್ ಕಟ್ಟಿಕೊಂಡು ಕಾರನ್ನು ಹೆಲಿಕಾಪ್ಟರ್ ಮೂಲಕ ಮೇಲೆ ತೆಗೆದುಕೊಂಡು ಹೋಗಿ ಕೆಳಗೆ ಬೀಳಿಸಿದ್ದಾನೆ. ಅದನ್ನು ಸಂಪೂರ್ಣ ವಿಡಿಯೋ ಮಾಡಿ ಯೂಟ್ಯೂಬ್ ಗೆ ಹಾಕಿದ್ದಾನೆ ಎಂದು ವರದಿ ಮಾಡಿದೆ.

    ಇಗೊರ್ ಮೊರಾಜ್‍ಗೆ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ವಿಡಿಯೋವನ್ನು 5 ಲಕ್ಷ ಜನ ವೀಕ್ಷಿಸಿದ್ದು, ಈ ಘಟನೆಯ ಸಂಬಂಧ ರಷ್ಯಾದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

    ಕಾರಿನ ವಿಶೇಷತೆ ಏನು?
    ಮರ್ಸಿಡಿಸ್-ಎಎಂಜಿ ಜಿ 63 ಅನ್ನು 2018 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು 4.0-ಲೀಟರ್ ಬೈ-ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಹೊಂದಿದೆ. 585 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕಾರಿನ ಹೊಸ ಆವೃತ್ತಿಯು 9-ಸ್ಪೀಡ್ ಆಟೋಮ್ಯಾಟಿಕ್ ಎಎಂಜಿ ಸ್ಪೀಡ್‍ಶಿಫ್ಟ್ ಟ್ರಾನ್ಸ್ ಮಿಷನ್ ಹೊಂದಿದೆ. ಕಾರು ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ ಗಂಟೆಗೆ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮಥ್ರ್ಯವನ್ನು ಹೊಂದಿದೆ. ಎಎಂಜಿ ಜಿ 63 ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.