Tag: ಮರ್ಯಾದ ಹತ್ಯೆ

  • ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

    ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

    ಭೋಪಾಲ್: ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಆಕೆಯ ಪೋಷಕರೇ ಹತ್ಯೆ ಮಾಡಿ ಮೊಸಳೆಗಳಿಗೆ (Crocodile) ಎಸೆದ ಘಟನೆ ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ ನಡೆದಿದೆ.

    ಆರೋಪಿಗಳು ಹೇಳಿದ ಚಂಬಲ್ ನದಿಯ (Chambal River) ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದ್ದು ಇಲ್ಲಿಯವರೆಗೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಘಟನೆ ಎರಡು ವಾರಗಳ ಹಿಂದೆ ನಡೆದಿದ್ದು, ಕೆಲವು ಸಂಬಂಧಿಕರ ಜೊತೆ ಸೇರಿ ಆರೋಪಿಗಳು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಬಳಿಕ ನದಿಯಲ್ಲಿ ಮುಳುಗಿಸಿದ್ದಾರೆ. ಪ್ರಕರಣದಲ್ಲಿ ಮರ್ಯಾದ ಹತ್ಯೆಯ (Honour Killing) ಶಂಕೆ ವ್ಯಕ್ತವಾಗಿದೆ ಎಂದು ಮೊರೆನಾ ಎಸ್‍ಪಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು

    ರತನ್‍ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಶಿವಾನಿ (18) ಪಕ್ಕದ ಗ್ರಾಮದ ಬಲುಪುರ ನಿವಾಸಿ ರಾಧೇಶ್ಯಾಮ್ ತೋಮರ್ (21) ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಜಾತಿ ಸಮಸ್ಯೆಗಳಿಂದ ಯುವತಿ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.

    ಜೂನ್ 3 ರಿಂದ ಹುಡುಗ ಮತ್ತು ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದರು. ರಾಧೇಶ್ಯಾಮ್ ತೋಮರ್ ಅವರ ಕುಟುಂಬವು, ಯುವತಿಯ ಕುಟುಂಬದವರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಈ ವೇಳೆ ಆರೋಪಿಸಿತ್ತು. ಯುವಕನ ಕುಟುಂಬ ಪೊಲೀಸರಿಗೆ ಕೊಲೆ ಬಗ್ಗೆ ಆರೋಪಿಸಿ ತನಿಖೆ ಮಾಡುವಂತೆ ಮನವಿ ಮಾಡಿದ್ದರೂ, ಆರಂಭದಲ್ಲಿ ಇಬ್ಬರೂ ಬೇರೆಲ್ಲೋ ಹೋಗಿರಬಹುದು ಎಂದು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಬಳಿಕ ಪದೇ ಪದೇ ಇದೇ ಆರೋಪವನ್ನು ಮಾಡಿದ ಮೇಲೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಬಳಿಕ ಪೊಲೀಸರು ಯುವತಿಯ ಕುಟುಂಬದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಶವಗಳನ್ನು ನದಿಯಲ್ಲಿ ಎಸೆದು ಈಗಾಗಲೇ 15 ದಿನಗಳು ಕಳೆದಿವೆ. ಮೀನು ಮತ್ತು ಮೊಸಳೆಗಳಂತಹ ಜಲಚರಗಳು ಮೃತದೇಹಗಳನ್ನು ತಿಂದಿರುವ ಸಾಧ್ಯತೆ ಇದೆ. ಇದರಿಂದಾಗಿ ಮೃತದೇಹಗಳನ್ನು ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪ್ರಕರಣದಲ್ಲಿ 15 ಜನ ಭಾಗಿಯಾಗಿದ್ದಾರೆ. ಆದರೆ ಈವರೆಗೂ ಸೈಬರ್ ಪೊಲೀಸರಿಗಾಗಲಿ, ಗುಂಡು ಹಾರಿಸಿ ಕೊಲೆಗೈದಿರುವುದಕ್ಕೆ ಬಂದೂಕಿನ ಸಾಕ್ಷಿಯಾಗಲಿ ಪತ್ತೆಯಾಗಿಲ್ಲ. ಆದರೆ ಯುವತಿಯ ಪೋಷಕರು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮರಕ್ಕೆ ಕಟ್ಟಿ ಹಾಕಿ ಮುಸ್ಲಿಂ ವ್ಯಕ್ತಿಗೆ ಥಳಿತ

  • ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು

    ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು

    ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ಮಗಳನ್ನು ತಂದೆ ಮತ್ತು ತಾಯಿ ಇಬ್ಬರು ಸೇರಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

    ಎರಡನೇ ಪಿಯು ವಿದ್ಯಾರ್ಥಿನಿ ಶಾಲಿನಿ (17) ಕೊಲೆಗೀಡಾದ ಅಪ್ರಾಪ್ತೆ. ಈಗಾಗಲೇ ಮಗಳನ್ನು ಕೊಂದ ಆರೋಪದ ಮೇಲೆ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಬಂಧಿಸಿದ್ದಾರೆ.

    ಕೊಲೆಗೀಡಾದ ಅಪ್ರಾಪ್ತೆಯು ಪಕ್ಕದ ಗ್ರಾಮದ ಮೆಲ್ಲಹಳ್ಳಿಯ ಯುವಕ ಮಂಜು ಅನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಶಾಲಿನಿ ಪೋಷಕರು ವಿರೋಧಿಸಿದ್ದರು.  ಇದನ್ನೂ ಓದಿ: ಕಾಂಪೌಂಡ್ ಒಳಗಡೆ ನುಗ್ಗಿತು ಕಾರು

    ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದರು. ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಹೀಗಾಗಿ ಶಾಲಿನಿ ಬಾಲಮಂದಿರಕ್ಕೆ ಸೇರಿಕೊಂಡಿದ್ದಳು.  ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಟ್ವೀಟ್ – ಬಿಜೆಪಿ ಮುಖಂಡ ಅರೆಸ್ಟ್

    ಇತ್ತೀಚೆಗಷ್ಟೆ ಮಗಳನ್ನು ಪೋಷಕರಾದ ಸುರೇಶ್ ಹಾಗೂ ಬೇಬಿ ಮನೆಗೆ ಕರೆ ತಂದು ಮಗಳನ್ನು ಕೊಲೆ ಮಾಡಿದ್ದಾರೆ. ಶಾಲಿನಿ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ. ತಮಗೆ ಅವಮಾನ ಮಾಡಿದಕ್ಕೆ ಮಗಳನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

    ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

    ಹೈದರಾಬಾದ್: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಪ್ರಣಯ್ ಪತ್ನಿ ಅಮೃತಾ ಅವರು ಗಂಡು ಮಗುವಿಗೆ ಗುರುವಾರ ಜನ್ಮ ನೀಡಿದ್ದಾರೆ.

    ಅಮೃತಾ ಅವರನ್ನು ಅತ್ತೆ ಆಸ್ಪತ್ರೆಗೆ ದಾಖಲಿಸಿ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ:  ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ 

    ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿದ್ದು, ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರು ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ 2018 ಸೆಪ್ಟಂಬರ್ 14ರಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದ ವಿಚಾರ ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಕುಟುಂಬದವರಿಗೆ ರಾಜ್ಯ ಸರ್ಕಾರವೂ ಪರಿಹಾರ ಧನವನ್ನು ಫೋಷಿಸಿತ್ತು. ಕೆಲವು ದಿನಗಳ ಬಳಿಕ ಮೃತ ಪ್ರಣಯ್ ಪತ್ನಿ ಅಮೃತಾಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಕೂಡ ಭರವಸೆ ನೀಡಿತ್ತು.

    ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಮೃತ ಪ್ರಣಯ್ ಪತ್ನಿ ಅಮೃತ ವರ್ಶಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ಅವರ ಕುಟುಂಬಕ್ಕೆ ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬದವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ

    ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ

    -ಕೋರ್ಟ್ ನಲ್ಲಿ ಅಮೃತಾ ಹೇಳಿದ್ದೇನು?

    ಹೈದರಾಬಾದ್: ಇಡೀ ದೇಶದಲ್ಲಿ ಸಂಚಲನ ಹುಟ್ಟು ಹಾಕಿದ್ದ ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿ ನ್ಯಾಯಾಂಗ ಬಂಧನವನ್ನು ಮುಂದುವರೆಸುವಂತೆ ಆದೇಶಿಸಿದೆ.

    ಆರೋಪಿಗಳಾದ ಪ್ರಣಯ್ ಮಾವ ಮಾರುತಿ ರಾವ್, ಅಸ್ಗರ್ ಅಲಿ, ಮೊಹಮ್ಮದ್ ಅಬುಲ್ ಬರಿ, ಟಿ.ಶರವಣ ಮತ್ತು ಎಸ್.ಶಿವ ಆರೋಪಿಗಳು ತೆಲಂಗಾಣದ ನಾಲ್ಗೊಂಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

    ಅಮೃತಾ ಹೇಳಿದ್ದೇನು?
    ಗರ್ಭಿಣಿ ಅಮೃತಾ, ಪ್ರಣಯ್ ತಂದೆ ಬಾಲಸ್ವಾಮಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಮೊದಲ ಆರೋಪಿಯಾಗಿರುವ ನಮ್ಮ ತಂದೆ ಮಾರುತಿ ರಾವ್ ಗೆ ಜಾಮೀನು ನೀಡಬಾರದು. ಆತ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಹಣ ಬಲ ಬಳಸಿ ನನಗೂ ಮತ್ತು ನನ್ನ ಮಗುವಿಗೆಸ ತೊಂದರೆ ಮಾಡುವ ಸಾಧ್ಯತೆಗಳಿವೆ. ತಂದೆ ಕೋಪಿಷ್ಟನಾಗಿದ್ದು ತಾಳ್ಮೆ ಕಳೆದುಕೊಳ್ಳುತ್ತಿರುತ್ತಾನೆ. ಬಂಧನಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ಎಷ್ಟು ಕೋಪಿಷ್ಠ ಎಂಬುವುದು ಸಾಬೀತಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ನಿಮ್ಮ ಮುಂದಿವೆ ಅಂತಾ ಅಮೃತ ನ್ಯಾಯಾಲಯದ ಮುಂದೆ ಹೇಳಿದ್ದರು.

    ಸರ್ಕಾರ ಪರ ವಕೀಲರು ಸಹ ಆರೋಪಿಗಳಿಗೆ ಜಾಮೀನು ನೀಡಬಾರದು. ಸಾಕ್ಷ್ಯಗಳನ್ನು ನಾಶಗೊಳಿಸುವ ಸಾಧ್ಯತೆಗಳಿವೆ ಎಂಬ ವಾದ ಮಂಡಿಸಿದ್ದರು. ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿ ಜನೆವರಿಯಲ್ಲಿ ಮದುವೆ ಆಗಿದ್ದರು. ಪ್ರಣಯ್ ಓರ್ವ ದಲಿತ ಯುವಕ ಎಂದು ಅಮೃತಾ ತಂದೆ 1 ಕೋಟಿ ರೂ.ಗೆ ಸುಪಾರಿ ನೀಡಿ ಕೊಲ್ಲಿಸಿದ್ದನು. ಹಂತಕ ಪ್ರಣಯ್ ನನ್ನು ಕೊಲ್ಲುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಂತಕ ಬಿಹಾರ ಮೂಲದ ಸುಭಾಶ್ ಶರ್ಮಾ ಆಗಿದ್ದು, ಆತ ಈಗ ರಾಜಮಂಡ್ರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಮಾರುತಿ ರಾವ್ ಅಳಿಯನನ್ನು ಕೊಲ್ಲಲು ಅಸ್ಗರ್ ಅಲಿ ಮತ್ತು ಮೊಹಮ್ಮದ್ ಅಬುಲ್ ಬರಿ ಇಬ್ಬರನ್ನು ಸಂಪರ್ಕಿಸಿದ್ದನು. ಇಬ್ಬರು ಪ್ರಣಯ್ ಕೊಲ್ಲಲು ಮೊದಲಿಗೆ 2 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಮೂವರ ಮಧ್ಯೆ 1 ಕೋಟಿ ರೂ.ಗೆ ಒಪ್ಪಂದವಾಗಿತ್ತು. ಕೊಲೆಗೂ ಮುನ್ನ ಮಾರುತಿ ರಾವ್ ಹಂತಕರಿಗೆ 15 ಲಕ್ಷ ರೂ. ನೀಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

    ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

    ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗೊಲ್ಲನಬೀಡಿನಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಹಲವು ಮಜಲುಗಳು ಈಗ ಬೆಳಕಿಗೆ ಬರುತ್ತಿವೆ.

    ಈ ನಡುವೆ ಹತ್ಯೆಯಾದ ಸುಷ್ಮಾಳ ಪ್ರಿಯಕರ ಉಮೇಶ್ ಪ್ರಾಣಭಯದಿಂದ ಊರು ಬಿಟ್ಟಿದ್ದಾನೆ. ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ನಿವಾಸಿ ಉಮೇಶ್, ವರ್ಷದ ಹಿಂದೆ ತನ್ನ ಪ್ರೇಮ ಪ್ರಕರಣ ಬೆಳಕಿಗೆ ಬಂದಾಗ ಹೆಚ್.ಡಿ.ಕೋಟೆ ಠಾಣೆಗೆ ಹೋಗಿ ನಂತರ ಊರು ಬಿಟ್ಟಿದ್ದಾನೆ.

    ಸುಷ್ಮಾ ಪೋಷಕರಿಂದ ಕೊಲೆ ಬೆದರಿಕೆಗೆ ಹೆದರಿ ಉಮೇಶ್ ಊರು ಬಿಟ್ಟಿದ್ದಾನೆ ಎಂದು ಉಮೇಶ್ ತಂದೆ ದಾಸಯ್ಯ, ತಾಯಿ ನಂಜಮ್ಮಣ್ಣಿ ಆರೋಪಿಸುತ್ತಿದ್ದಾರೆ. ಈ ನಡುವೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮರ್ಯಾದಾ ಹತ್ಯೆ ನಡೆದಿದ್ದು ಪ್ರೀತಿಸಿದ್ದಕ್ಕಲ್ಲ ಬದಲಿಗೆ ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಎಂಬುದು ಬೆಳಕಿಗೆ ಬಂದಿದೆ.

    ಗೊಲ್ಲನಬೀಡಿನ ಸುಷ್ಮಾ ಹಾಗೂ ಉಮೇಶ್ ಒಂದು ವರ್ಷದ ಹಿಂದೆ ಮನೆಯಿಂದ ದೂರ ಹೋಗಿ ಮದುವೆಯಾಗಿದ್ದರು. ಮದುವೆಯಾದ ಈ ಜೋಡಿಯನ್ನು ಹುಡುಕಿ ಕರೆಸಿದ್ದ ಸುಷ್ಮಾ ಕುಟುಂಬಸ್ಥರು ನಂತರ ರಾಜಿ ಪಂಚಾಯ್ತಿ ನಡೆಸಿ ಜೋಡಿಯನ್ನು ಬೇರೆ ಮಾಡಿ ಸುಷ್ಮಾಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು ಎಂದು ಉಮೇಶ್ ತಂದೆ- ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ಏನಿದು ಪ್ರಕರಣ?: ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾಗಿದ್ದ ಸುಷ್ಮಾ(20) ತಂದೆಯಿಂದಲೇ ಕೊಲೆಯಾಗಿದ್ದು, ತಾನೇ ಹತ್ಯೆ ಮಾಡಿರುವುದಾಗಿ ತಂದೆ ಗುರುವಾರ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ಫೆಬ್ರವರಿ 21ರಂದು ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸಿದಾಗ ಮಗಳನ್ನು ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದ.

    ವಿಚಾರಣೆ ವೇಳೆ, “ನಾನೇ ಮಗಳಿಗೆ ವಿಷ ಕುಡಿಸಿ ನಂತರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದಿದ್ದೇನೆ. ದಲಿತ ಯುವಕನನ್ನು ಪ್ರೀತಿ ಮಾಡೋದು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಎಂಟು ದಿನಗಳ ಹಿಂದೆ ಮಗಳನ್ನು ಕೊಂದಿದ್ದೇನೆ” ಎಂದು ಸುಷ್ಮಾ ತಂದೆ ಕುಮಾರ್ ಪೊಲೀಸರ ಮುಂದೆ ಹೇಳಿದ್ದ. ಇದನ್ನೂ ಓದಿ: ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!

  • ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!

    ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!

    ಮೈಸೂರು: ನಗರದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಕೇಸ್‍ನ್ನು ಪೊಲೀಸರು ಬೇಧಿಸಿದ್ದು, ತಂದೆಯೇ ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಸುಷ್ಮಾ(20) ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಗಳು. ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾಗಿದ್ದು, ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇವರ ಪ್ರೀತಿಗೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಪೋಷಕರು ಸುಷ್ಮಾಳನ್ನು ಕಾಲೇಜಿನಿಂದ ಬಿಡಿಸಿದ್ದರು.

    ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್  ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ “ನಾನೇ ಮಗಳಿಗೆ ವಿಷ ಕುಡಿಸಿ ನಂತರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದಿದ್ದೇನೆ. ದಲಿತ ಯುವಕನನ್ನು ಪ್ರೀತಿ ಮಾಡೋದು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಎಂಟು ದಿನಗಳ ಹಿಂದೆ ಮಗಳನ್ನು ಕೊಂದಿದ್ದೇನೆ” ಎಂದು ಸುಷ್ಮಾ ತಂದೆ ಕುಮಾರ್ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಓದಿ: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

  • ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ಮೈಸೂರು: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಪೋಷಕರೇ ತಮ್ಮ ಮಗಳನ್ನ ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾದ ಸುಷ್ಮಾ(20) ಮೃತ ಯುವತಿ. ಪೋಷಕರು ಸುಷ್ಮಾಳಿಗೆ ಜಮೀನಿನಲ್ಲಿ ವಿಷ ಕುಡಿಸಿ ಸುಟ್ಟು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸುಷ್ಮಾ ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ, ಆಕೆಯನ್ನು ಕಾಲೇಜಿನಿಂದ ಬಿಡಿಸಿದ್ದರು ಎಂದು ತಿಳಿದುಬಂದಿದೆ.

    ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿದೆ.

    ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.