Tag: ಮರ್ಯಾದೆಹತ್ಯೆ

  • ಮರ್ಯಾದಾ ಹತ್ಯೆಗೆ ಬಾಲಕಿ ಬಲಿ – ತಂದೆ, ಅಣ್ಣನಿಂದಲೇ ಹತ್ಯೆ

    ಮರ್ಯಾದಾ ಹತ್ಯೆಗೆ ಬಾಲಕಿ ಬಲಿ – ತಂದೆ, ಅಣ್ಣನಿಂದಲೇ ಹತ್ಯೆ

    ಲಕ್ನೋ: ಉತ್ತರಪ್ರದೇಶದ ಬಾಂದಾದಲ್ಲಿ ನಡೆದ ಮರ್ಯಾದಾ ಹತ್ಯೆಗೆ 17 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಇಲ್ಲಿನ ಗುರ್ಹಾ ಕಾಲಾ ಗ್ರಾಮದ ನಿವಾಸಿಯೇ ತನ್ನ 17 ವರ್ಷದ ಮಗಳನ್ನು ಕತ್ತುಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ವರದಿಯನ್ನಾಧರಿಸಿ ತಂದೆ ಮತ್ತು ಮೃತಳ ಸಹೋದರನನ್ನು ಬಂಧಿಸಲಾಗಿದೆ. ಬಾಲಕಿಯ ತಂದೆ ದೇಶರಾಜ್ ಹಾಗೂ ಸಹೋದರ ಧನಂಜಯ್ ಎಂಬವರೇ ಆರೋಪಿಗಳು. ಇದನ್ನೂ ಓದಿ: ಪತ್ನಿಯನ್ನು ಗರ್ಭಿಣಿ ಮಾಡಲು ಜೀವಾವಧಿ ಕೈದಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

    CRIME 2

    ತನಿಖೆ ವೇಳೆ 17 ವರ್ಷದ ಬಾಲಕಿ ಅದೇ ಜಾತಿಯ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು. ಇದಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಬುಧವಾರವೇ ಆಕೆಯನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ. ಶವವನ್ನು ಮರೆಮಾಚಲು ದನದ ಕೊಟ್ಟಿಗೆಯ ಒಳಗೆ ಹೂತು ಹಾಕಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿತಿನ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವಕನಿಂದ ಹಿಂದೂ ಅತಿಥಿ ಶಿಕ್ಷಕಿಯ ಕಿಡ್ನಾಪ್ – ಲವ್ ಜಿಹಾದ್ ಆರೋಪ

    crime

    ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಶುಕ್ರವಾರ ಶವವನ್ನು ಹೊರತೆಗೆಯಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯು ಕತ್ತು ಹಿಸುಕಿದ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುದನ್ನು ಖಚಿತಪಡಿಸಿತು. ಹುಡುಗಿಯ ದೇಹದ ಮೇಲೆ ಗಾಯದ ಗುರುತುಗಳಾಗಿರುವುದು ಕಂಡುಬಂದಿತ್ತು. ಈ ಪ್ರಕರಣವು ಮರ್ಯಾದೆ ಗೇಡು ಹತ್ಯೆಗೆ ಸಂಬಂಧಿಸಿದ್ದು ಇಬ್ಬರನ್ನೂ ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದು ನಿತಿನ್‌ ಕುಮಾರ್ ಹೇಳಿದ್ದಾರೆ.