Tag: ಮರು ಮತ ಎಣಿಕೆ

  • 1 ಮತದಿಂದ ಸೋತು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗೆ ಮುಖಭಂಗ

    1 ಮತದಿಂದ ಸೋತು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗೆ ಮುಖಭಂಗ

    ಚಿಕ್ಕೋಡಿ: 1 ವರ್ಷ, 10 ತಿಂಗಳ ಹಿಂದೆ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ (Gram Panchayat Election) ಪರಾಭವಗೊಂಡು ಮರು ಮತ ಎಣಿಕೆಗೆ (Recounting) ಕೋರ್ಟ್ (Court) ಮೆಟ್ಟಿಲೇರಿದ್ದ ಅಭ್ಯರ್ಥಿಗೆ ಮತ್ತೆ ಮುಖಭಂಗವಾಗಿದೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಸರಿಯಾಗಿ ಆಗಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ ರಾವಸಾಹೇಬ್ ಪಾಟೀಲ್ ಅವರು ನ್ಯಾಯಾಲಯದಲ್ಲಿ ನಡೆದ ಮರು ಮತ ಎಣಿಕೆಯಲ್ಲೂ ಸೋಲು ಅನುಭವಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಕುಂಟಿಕೊಂಡು ಏನ್ ಮಾಡ್ತಾರೆ, ಬಿಎಸ್‍ವೈಗೆ ನೆನಪಿನ ಶಕ್ತಿಯೇ ಇಲ್ಲ: ಮೊಯ್ಲಿ ಲೇವಡಿ

    2020 ರ ಡಿಸೆಂಬರ್ 30 ರಂದು ನಡೆದಿದ್ದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮತ ಎಣಿಕೆ ಸರಿಯಾಗಿಲ್ಲ ಎಂದು ಆರೋಪಿಸಿ ಅಭ್ಯರ್ಥಿ ರಾವಸಾಹೇಬ್ ಸಂಕೇಶ್ವರದ ಜೆಎಂಎಫ್‌ಸಿ ಕೋರ್ಟ್ ಮೊರೆ ಹೋಗಿದ್ದರು. 505 ಮತ ಪಡೆದು ಪರಾಭವಗೊಂಡಿದ್ದ ರಾವಸಾಹೇಬ್ ಪಾಟೀಲ್ ವಿರುದ್ಧ 506 ಮತ ಪಡೆದು ತವನಪ್ಪ ಹೊಸೂರ ಎಂಬ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಅರ್ಕಾವತಿ ನದಿಯಲ್ಲಿ ಅಪರಿಚಿತ ಕಾರ್ ಪತ್ತೆ – ಮಾಲೀಕರಿಗಾಗಿ ತಲಾಶ್

    ಇಂದು ಸಂಕೇಶ್ವರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಡ್ಜ್ ಹಾಗೂ ಹುಕ್ಕೇರಿ ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಸಮ್ಮುಖದಲ್ಲಿ ಮತ್ತೊಮ್ಮೆ ಮರು ಮತ ಎಣಿಕೆ ನಡೆಯಿತು. ಮರು ಮತ ಎಣಿಕೆಯಲ್ಲೂ ಸಹ ತವನಪ್ಪ ಹೊಸುರ ಜಯಶಾಲಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 1 ಮತ ಅಂತರದ ಗೆಲುವು – ಚುನಾವಣೆ ಮುಗಿದು 1 ವರ್ಷ, 10 ತಿಂಗಳ ಬಳಿಕ ಮರು ಮತ ಎಣಿಕೆ

    1 ಮತ ಅಂತರದ ಗೆಲುವು – ಚುನಾವಣೆ ಮುಗಿದು 1 ವರ್ಷ, 10 ತಿಂಗಳ ಬಳಿಕ ಮರು ಮತ ಎಣಿಕೆ

    ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23 ರಂದು ಚುನಾವಣೆ (Panchayat Election) ನಡೆದು, ಅದರ ಫಲಿತಾಂಶ ಕೂಡ ಅದೇ ಡಿಸೆಂಬರ್ 30 ರಂದು ಹುಕ್ಕೇರಿಯಲ್ಲಿ ಹೊರಬಿದ್ದಿತ್ತು. ಈ ಚುನಾವಣೆಯಲ್ಲಿ ಹೆಬ್ಬಾಳ ಗ್ರಾಮದ ವಾರ್ಡ್ ನಂ.2 ರ ಹಿಂದುಳಿದ ‘ಬ’ ಸ್ಥಾನಕ್ಕೆ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಕೊನೆಗೆ 1 ಮತದ ಅಂತರದಿಂದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ ಈ ಬಗ್ಗೆ ಅಸಮಾಧಾನಗೊಂಡಿದ್ದ ಪರಾಜಿತ ಅಭ್ಯರ್ಥಿ ಮರು ಮತ ಎಣಿಕೆ (votes Re-counting)ನಡೆಸುವಂತೆ ಕೋರ್ಟ್ ಮೇಟ್ಟಿಲೇರಿದ್ದರು.

    ಚುನಾವಣೆ ಮುಗಿದು ಬರೋಬ್ಬರಿ 1 ವರ್ಷ, 10 ತಿಂಗಳು ಕಳೆದ ಬಳಿಕ ಈಗ ಮತ್ತೆ ಮರು ಮತ ಎಣಿಕೆಗೆ ಕೋರ್ಟ್ ಆದೇಶ ನೀಡಿದೆ. ಇದೇ ಬರುವ ಅಕ್ಟೋಬರ್ 20 ರಂದು ಕೋರ್ಟ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆ ನಡೆಯಲಿದ್ದು, ಎಲ್ಲರ ಚಿತ್ತ ಈಗ ಕೋರ್ಟ್‌ನತ್ತ ನೆಟ್ಟಿದೆ.

    1 ಮತದಿಂದ ಸೋತಿದ್ದ ರಾವಸಾಹೇಬ ಪಾಟೀಲ್, ತನ್ನ ದೃಢ ನಂಬಿಕೆಯಿಂದ ಕೋರ್ಟ್‌ನಲ್ಲಿ ತನ್ನ ವಕೀಲರ ಮೂಲಕ ವಾದ ಮಂಡಿಸಿದರು. ಮರು ಮತ ಎಣಿಕೆ ನಡೆಸುವಂತೆ ಕೋರ್ಟ್ ಆದೇಶ ನೀಡಿದ್ದು, ಈಗ ಮರು ಎಣಿಕೆ ವೇಳೆ ರಾವಸಾಹೇಬ ಪಾಟೀಲ್ ಗೆದ್ದರೆ ಮತ್ತಷ್ಟು ಗೊಂದಲ ಹಾಗೂ ಕೂತಹಲಕ್ಕೂ ಕಾರಣವಾಗಲಿದೆ. ಇದನ್ನೂ ಓದಿ: ಸೇ ಸಿಎಂ ಅಭಿಯಾನ ಉದ್ಯೋಗವಿಲ್ಲದವರು ಮಾಡುತ್ತಿದ್ದಾರೆ: ಬೊಮ್ಮಾಯಿ

    2020ರ ಡಿಸೆಂಬರ್ 30 ರಂದು ನಡೆದ ಮತ ಎಣಿಕೆ ವೇಳೆ ಗೆದ್ದ ಅಭ್ಯರ್ಥಿ 506 ಮತ ಪಡೆದಿದ್ದು, ಪರಾಜಿತ ಅಭ್ಯರ್ಥಿ ರಾವಸಾಹೇಬ ಪಾಟೀಲ್ 505 ಮತ ಪಡೆದಿದ್ದರು. ಅಂದು ಮರು ಮತ ಎಣಿಕೆ ನಡೆಸುವಂತೆ ಮನವಿ ಮಾಡಿದ್ದರೂ ಚುನಾವಣಾ ಅಧಿಕಾರಿಗಳು ಗೆದ್ದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಯೇ ಬಿಟ್ಟಿದ್ದರು. ಇದರಿಂದ ಅಸಮಾಧಾನಗೊಂಡ ರಾವಸಾಹೇಬ ಪಾಟೀಲ್ ಕೋರ್ಟ್ ಮೂಲಕ ಮರು ಮತ ಎಣಿಕೆ ನಡೆಸಲು ಮುಂದಾಗಿದ್ದಾರೆ.

    ಒಟ್ಟಿನಲ್ಲಿ ಕೋರ್ಟ್ ಇದೀಗ 1 ವರ್ಷ 10 ತಿಂಗಳ ಬಳಿಕ ಮರು ಎಣಿಕೆಗೆ ಆದೇಶಿಸಿದ್ದು, ಹಲವು ಗೊಂದಲಕ್ಕೂ ಕಾರಣವಾಗಿದೆ. ಈಗ ಮರು ಮತ ಎಣಿಕೆ ವೇಳೆ ರಾವಸಾಹೇಬ ಪಾಟೀಲ್ ಗೆದ್ದರೆ, ಸೋತ ಅಭ್ಯರ್ಥಿ 2 ವರ್ಷ ಅಧಿಕಾರ ಅನುಭವಿಸಿದ ದಾಖಲೆ ಒಂದು ಕಡೆಯಾಗುತ್ತದೆ. ಜೊತೆಗೆ ರಾವಸಾಹೇಬ ಪಾಟೀಲ್ ಜಯ ಗಳಿಸಿದರೂ 2 ವರ್ಷ ಅಧಿಕಾರ ವಂಚಿತರಾಗುತ್ತಾರೆ. 2 ವರ್ಷದಿಂದ ಪಂಚಾಯಿತಿ ಸದಸ್ಯನಾಗಿರುವ ವ್ಯಕ್ತಿಗೆ ಅನರ್ಹತೆ ಭೀತಿ ಈಗ ಎದುರಾಗಿದೆ. ಇದನ್ನೂ ಓದಿ: ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ

    Live Tv
    [brid partner=56869869 player=32851 video=960834 autoplay=true]