Tag: ಮರು ಮತದಾನ

  • Lok Sabha Elections 2024: ಮಣಿಪುರದ 11 ಬೂತ್‌ಗಳಲ್ಲಿ ಇಂದು ಮರು ಮತದಾನ

    Lok Sabha Elections 2024: ಮಣಿಪುರದ 11 ಬೂತ್‌ಗಳಲ್ಲಿ ಇಂದು ಮರು ಮತದಾನ

    ಇಂಫಾಲ: ಈಶಾನ್ಯ ರಾಜ್ಯದ ಮಣಿಪುರ (Manipura) ಸಂಸದೀಯ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಇಂದು (ಸೋಮವಾರ) ಮರು ಮತದಾನ ಆರಂಭವಾಗಿದೆ.

    ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ (Loksabha Elections 2024) ಮೊದಲ ಹಂತದ ಮತದಾನದ ವೇಳೆ ಕೆಲವು ಕಿಡಿಗೇಡಿಗಳು ಈ ಮತಗಟ್ಟೆಗಳಲ್ಲಿ ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿತ್ತು. ಅದರಂತೆ ಇಂದು ಮತದಾನ ನಡೆಯುತ್ತಿದೆ.

    ಯಾವುದೇ ಅವಘಡ ಸಂಭವಿಸದಂತೆ ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಸಂಬಂಧ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ಮರು ಮತದಾನ ನಡೆಯುತ್ತಿದ್ದು, ನಾವೆಲ್ಲ ಮತದಾನ ಮಾಡಲು ಬಂದಿದ್ದೇವೆ. ಇಂದು ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.

    ಖುರೈ ವಿಧಾನಸಭಾ ಕ್ಷೇತ್ರದಲ್ಲಿ ಮೊಯಿರಂಗ್ಯಾಂಪು ಸಾಜೆಬ್ ಅಪ್ಪರ್ ಪ್ರೈಮರಿ ಶಾಲೆ ಮತ್ತು ಎಸ್. ಇಬೋಬಿ ಪ್ರಾಥಮಿಕ ಶಾಲೆ (ಪೂರ್ವ ಭಾಗ), ಕ್ಷೇತ್ರಗಾವೊದಲ್ಲಿ ನಾಲ್ಕು, ತೊಂಗ್ಜುನಲ್ಲಿ ಒಂದು, ಉರಿಪೋಕ್‌ನಲ್ಲಿ ಮೂರು ಮತ್ತು ಕೊಂತೌಜಮ್‌ ಮರುಮತದಾನ ಕೇಂದ್ರಗಳಾಗಿವೆ.

    ಸಂಘರ್ಷ ಪೀಡಿತ ಮಣಿಪುರದ ಕೆಲವು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿರುವ ಘಟನೆಗಳು ವರದಿಯಾಗಿದ್ದವು. ಈ ನಡುವೆಯೂ ಶುಕ್ರವಾರ ಸಂಜೆ 7 ಗಂಟೆಯವರೆಗೆ ಮಣಿಪುರದಲ್ಲಿ ಶೇ.69.18ರಷ್ಟು ಮತದಾನವಾಗಿತ್ತು.

  • ಇಂದು ಲೊಟ್ಟೆಗೊಲ್ಲಹಳ್ಳಿ, ಮನ್ನೇರಾಳದಲ್ಲಿ ಮರು ಮತದಾನ- ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ

    ಇಂದು ಲೊಟ್ಟೆಗೊಲ್ಲಹಳ್ಳಿ, ಮನ್ನೇರಾಳದಲ್ಲಿ ಮರು ಮತದಾನ- ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ

    ಬೆಂಗಳೂರು: ತಾಂತ್ರಿಕ ದೋಷದಿಂದಾಗಿ ಸ್ಥಗಿತ ಗೊಂಡಿದ್ದ ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿ ಹಾಗು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಇಂದು ಮರು ಮತದಾನ ನಡೆಯಲಿದೆ.

    ಮೇ 12ರಂದು ಲೊಟ್ಟೆಗೊಲ್ಲಹಳ್ಳಿಯ ಪೊಲಿಂಗ್ ಬೂತ್ 2ರಲ್ಲಿನ ಮತಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿದರಿಂದ ಮತದಾನವನ್ನು ಸ್ಥಗಿತ ಮಾಡಲಾಗಿತ್ತು. ಅಲ್ಲದೆ ಕುಷ್ಟಗಿಯ ಬೂತ್ ನಂಬರ್ 20ರಲ್ಲಿ ಮತಗಟ್ಟೆ ಕೇಂದ್ರ ಬದಲಾಗಿದರಿಂದ ಅಲ್ಲಿನ 21 ಮತಗಟ್ಟೆಯ ಮತದಾರರು 20 ನಂಬರಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು. ಇದರಿಂದ ಈ ಮತಗಟ್ಟೆ ಕೇಂದ್ರದಲ್ಲಿನ ಮತದಾನವನ್ನು ಸ್ಥಗಿತ ಮಾಡಲಾಗಿತ್ತು.

    ಎರಡು ಮತಗಟ್ಟೆ ಕೇಂದ್ರಗಳಲ್ಲೂ ಇಂದು ಮರು ಮತದಾನ ನಡೆಸುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿರುವ ಅವರು, ತಾಂತ್ರಿಕ ದೋಷಗಳಿಂದಾಗಿ ಸ್ಥಗಿತಗೊಂಡಿರುವ ಲೊಟ್ಟೆಗೊಲ್ಲಹಳ್ಳಿಯ ಬೂತ್ ನಂಬರ್ 2 ಹಾಗು ಕೊಪ್ಪಳದ ಕುಷ್ಟಗಿಯ 21 ನಂಬರಿನ ಮತಗಟ್ಟೆ ಕೇಂದ್ರದಲ್ಲಿ ಇಂದು ಮರು ಮತದಾನ ನಡೆಸಲು ತೀರ್ಮಾನಿಸಲಾಗಿದೆ ಅಂತಾ ತಿಳಿಸಿದ್ರು.

    ಇಂದು ನಡೆಯುವ ಮರು ಮತದಾನಕ್ಕೆ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, ಮರು ಮತದಾನ ಮಾಡುವರಿಗೆ ಎಡಗೈ ತೋರುಬೆರಳು ಬದಲು ಮಧ್ಯದ ಬೆರಳಿಗೆ ಶಾಹಿಯನ್ನು ಹಾಕಲಾಗುವುದು. ಇನ್ನು ಕುಷ್ಟಗಿಯ ಮತಗಟ್ಟೆ ಕೇಂದ್ರಗಳಲ್ಲಿ ಉದ್ದೇಶಪೂರ್ವಕಾಗಿ ಅಧಿಕಾರಿಗಳು ತಪ್ಪು ಎಸಗಿದ್ರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಇಂದು ಮರುಮತದಾನ ನಡೆಯುವ ಸರ್ಕಾರಿ ಹಾಗು ಖಾಸಗಿ ಕಂಪನಿಯ ನೌಕರರಿಗೆ ರಜೆ ಕೊಡಲಾಗಿದ್ದು, ತಪ್ಪದೇ ಮತದಾನ ಮಾಡುವಂತೆ ಸಂಜೀವ್ ಕುಮಾರ್ ಹೇಳಿದ್ದಾರೆ.

    ರಾಜ್ಯದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ ಸಕಲ ಸಿದ್ದತೆ ಮುಗಿದಿದ್ದು, ಪ್ರತಿಯೊಂದು ಜಿಲ್ಲೆಯಲ್ಲೂ ಮತ ಎಣಿಕೆ ಕೇಂದ್ರ ಮಾಡಲಾಗಿದೆ. ಚಿತ್ರದುರ್ಗ -2, ದಕ್ಷಿಣ ಕನ್ನಡ – 2, ಮೈಸೂರು – 2, ತುಮಕೂರಿನಲ್ಲಿ -3ಕಡೆ ಮತ್ತು ಬೆಂಗಳೂರಲ್ಲಿ ನಾಲ್ಕು ಕಡೆ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ 11,160 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಶನಿವಾರ ನಡೆದ ಮತದಾನದಲ್ಲಿ ಶೇ 72.13 ರಷ್ಟು ದಾಖಲೆಯ ಮತದಾನವಾಗಿದ್ದು, ಹೋಸಕೊಟೆಯಲ್ಲಿ ಅತಿಹೆಚ್ಚು ಅಂದ್ರೇ ಶೇ.89 ರಷ್ಟು ಮತದಾನವಾಗಿದ್ದು, ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ.