Tag: ಮರುಬಳಕೆ

  • ಹೊಸ 500, 2 ಸಾವಿರ ರೂ. ನೋಟುಗಳ ಕುರಿತ ಸ್ಫೋಟಕ ಸುದ್ದಿ..!

    ಹೊಸ 500, 2 ಸಾವಿರ ರೂ. ನೋಟುಗಳ ಕುರಿತ ಸ್ಫೋಟಕ ಸುದ್ದಿ..!

    ಬೆಂಗಳೂರು: ಹೊಸ 500 ಮತ್ತು 2000 ರೂ ಮುಖಬೆಲೆಯ ನೋಟುಗಳ ಮರು ಬಳಕೆಯೇ ಅಸಾಧ್ಯ ಎಂದು ನೂತನ ನೋಟುಗಳ ಕುರಿತ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

    500 ಮತ್ತು 1000 ರೂ. ನೋಟುಗಳನ್ನು ಒಂದು ಬಾರಿ ಬಳಕೆಯಾದರೆ, ಮತ್ತೆ ಆ ನೋಟುಗಳನ್ನು ಬಳಸಲು ಸಾಧ್ಯವೇ ಇಲ್ಲ. ಎಟಿಎಂಗಳಲ್ಲಿ ಈ ನೋಟುಗಳನ್ನು ಇಡಲು ಸಾಧ್ಯವಾಗುತ್ತಿಲ್ಲ. ಈಗ ನೋಟು ನಿಷೇಧ ಬಳಿಕ ಬಂದಿರುವ 500 ಮತ್ತು 2 ಸಾವಿರ ರೂ. ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ ಎಂದು ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ.

    2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರರು ನೋಟು ನಿಷೇಧ ಮಾಡಿದ್ದರು. ಬಳಿಕ 500 ಹಾಗೂ 2000 ರೂ. ಮುಖಬೆಲೆಯನ್ನು ಚಲಾವಣೆಗೆ ತಂದಿದ್ದಾರೆ. ಈ ಮೊದಲೆ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ಮತ್ತೆ ಹೊಸ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

    ಒಂದು ಬಾರಿ ನೂತನ ನೋಟುಗಳನ್ನು ಬಳಸಿದರೆ ಮತ್ತೆ ಎಟಿಎಂಗೆ ಬಳಸಿದ ನೋಟುಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬಳಸಿದ ನೋಟನ್ನು ಎಟಿಎಂಗೆ ಹಾಕಿದರೆ, ಜನರು ಹಣ ಡ್ರಾ ಮಾಡುವಾಗ ಎಟಿಎಂನಲ್ಲಿ ಅಳವಡಿಸಿರುವ ಸೆನ್ಸಾರ್ ಬಳಸಿದ ನೋಟನ್ನು ಸೆನ್ಸಾರ್ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಳಸಿದ ನೋಟುಗಳನ್ನು ‘ಅನುಪಯುಕ್ತ ನೋಟು’ ಗಳೆಂದು ವಿಂಗಡಿಸಿ ಆರ್ ಬಿಐ  ಗೆ ಬ್ಯಾಂಕುಗಳು ವಾಪಸ್ ಕಳಿಸುತ್ತಿದೆ ಎಂದು ವರದಿಯಾಗಿದೆ.

    ಆರ್ ಬಿಐ ಈ ಬಗ್ಗೆ ಪ್ರತಿಕ್ರಿಯಿಸಿ, ನೋಟಿನ ಗುಣಮಟ್ಟ ಉತ್ತಮವಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ. ಆದರೆ ಬ್ಯಾಂಕ್ ಗಳು ಮಾತ್ರ ಬಳಸಿದ ನೋಟುಗಳನ್ನು ಅನುಪಯುಕ್ತ ನೋಟು ಎಂದು ವಾಪಸ್ ಕಳುಹಿಸುತ್ತಿದೆ. ಇದೇ ರೀತಿ ಅನುಪಯುಕ್ತ ನೋಟುಗಳನ್ನು ವಾಸಪ್ ಕಳುಹಿಸಿದರೆ ನೋಟುಗಳ ಚಲಾವಣೆಯಲ್ಲಿ ಕಡಿಮೆಯಾಗುತ್ತದೆ. ಮತ್ತೆ ಹೊಸ ನೋಟುಗಳನ್ನು ಮುದ್ರಣ ಮಾಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv