Tag: ಮರೀಗೌಡ

  • ಮುಡಾ ಕೇಸಲ್ಲಿ ಆಪ್ತರಿಗೆ ಸತತ 9 ಗಂಟೆ ಇಡಿ ಡ್ರಿಲ್; ಸಿಎಂಗೂ ಸಮನ್ಸ್ ಸಾಧ್ಯತೆ

    ಮುಡಾ ಕೇಸಲ್ಲಿ ಆಪ್ತರಿಗೆ ಸತತ 9 ಗಂಟೆ ಇಡಿ ಡ್ರಿಲ್; ಸಿಎಂಗೂ ಸಮನ್ಸ್ ಸಾಧ್ಯತೆ

    – ಮರೀಗೌಡ, ನಟೇಶ್ ಸೇರಿ ನಾಲ್ವರಿಗೆ ವಿಚಾರಣೆ

    ಬೆಂಗಳೂರು: ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸ್ತಿರುವ ತನಿಖೆ ಸಿಎಂ ಆಪ್ತೇಷ್ಠರ ಬುಡಕ್ಕೆ ಬಂದು ನಿಂತಿದೆ. ಮುಡಾ ಮಾಜಿ ಅಧ್ಯಕ್ಷ ಮರೀಗೌಡ, ಶಿವಣ್ಣ, ಮಾಜಿ ಆಯುಕ್ತ ನಟೇಶ್, 2004ರಲ್ಲಿ ಮೈಸೂರು ತಹಶೀಲ್ದಾರ್ ಆಗಿದ್ದ ಮಾಳಿಗೆ ಶಂಕರ್‌ರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.

    ಸತತ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಶಿವಣ್ಣ ಸಂಜೆ ಹೊತ್ತಿಗೆ ಅಸ್ವಸ್ಥಗೊಂಡ್ರು. ಕೂಡ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಇನ್ನು, ಈ ಕ್ಷಣದವರೆಗೂ ಮರೀಗೌಡ, ಮಾಳಿಗೆ ಶಂಕರ್ ವಿಚಾರಣೆಯನ್ನು ಇಡಿ ಮುಂದುವರೆಸಿದೆ. ಇನ್ನು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಇಡಿ ಸಮನ್ಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು

    ಈ ಮಧ್ಯೆ ಮುಡಾದ ಮತ್ತಷ್ಟು ಅಕ್ರಮಗಳು ಬಹಿರಂಗಗೊಂಡಿವೆ. ಸರಿಯಾದ ಮೂಲ ದಾಖಲೆಗಳೇ ಇಲ್ಲದೇ 1950 ಸೈಟ್ ಹಂಚಿಕೆಯಾಗಿವೆ. ಅಲ್ಲದೇ 5 ಸಾವಿರ ಸೈಟ್‌ಗಳಿಗೆ 2 ಸಾವಿರ ಬಾಂಡ್ ಪೇಪರ್‌ಗಳೇ ಇಲ್ಲ ಎನ್ನಲಾಗಿದೆ. ಇನ್ನು, ನನ್ನ ವಿರುದ್ಧದ ದೂರಿನಲ್ಲಿ ಸತ್ಯಾಂಶ ಇಲ್ಲ… ದಾಖಲೆ ನಕಲಿ ಆಗಿದ್ರೆ ಕಾನೂನು ಹೋರಾಟ ಮಾಡಲಿ ಎಂದು ಸಿಎಂಗೆ ದೂರುದಾರ ಸ್ನೇಹಮಯಿ ಕೃಷ್ಣ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ:  ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಈ ಮಧ್ಯೆ, ಮುಡಾ ಕೇಸಲ್ಲಿ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನವೆಂಬರ್ 23ಕ್ಕೆ ನಡೆಸಲು ಹೈಕೋರ್ಟ್ ತೀರ್ಮಾನಿಸಿದೆ. ಇದೇ ಶುಕ್ರವಾರ ಅಥ್ವಾ ಶನಿವಾರ ವಿಚಾರಣೆ ನಡೆಸಿ ಎಂಬ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ, ಕೆವಿ ಅರವಿಂದ್ ಅವರಿದ್ದ ಪೀಠ ತಿರಸ್ಕರಿಸಿದೆ.

    ಮುಡಾ ಕೇಸಲ್ಲಿ ಇಡಿ ವಿಚಾರಣೆಯ ಹಾದಿ…

    ಸೆಪ್ಟಂಬರ್ 7 ರಂದು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ
    ಅಕ್ಟೋಬರ್ 18 ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ
    ಅಕ್ಟೋಬರ್ 18 ರಂದು ಅಧಿಕಾರಿಗಳನ್ನ ವಿಚಾರಣೆ ಮಾಡಿದ್ದ ಇ.ಡಿ
    ಅಕ್ಟೋಬರ್ 19 ರಂದು ಭೂಮಿ ಮಾಲೀಕ ದೇವರಾಜುಗೆ ಡ್ರಿಲ್
    ಅಕ್ಟೋಬರ್ 27 ರಂದು ದೂರುದಾರ ಗಂಗರಾಜು ವಿಚಾರಣೆ
    ಅಕ್ಟೋಬರ್ 28 ರಂದು ಬಿಲ್ಡರ್ ಮಂಜುನಾಥ್ ಮನೆಯಲ್ಲಿ ಶೋಧ
    ಅಕ್ಟೋಬರ್ 28 ರಂದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಶಾಕ್
    ಅಕ್ಟೋಬರ್ 30 ದಿನೇಶ್ ಕುಮಾರ್ – ಮುಡಾ ಮಾಜಿ ಆಯುಕ್ತ
    ನವೆಂಬರಗ 11 ರಂದು ಸಿಎಂ ಖಾಸಗಿ ಪಿಎ ಸಿ.ಟಿ ಕುಮಾರ್‌ಗೆ ಗ್ರಿಲ್, ಪಾಲಯ್ಯ
    ನವೆಂಬರ್ 13 ರಂದು ರಾಯಚೂರು ಸಂಸದ ಕುಮಾರ್ ನಾಯಕ್ ಗೆ ಗ್ರಿಲ್
    ನವೆಂಬರ್ 14 ರಂದು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ವಿಚಾರಣೆ
    ನವೆಂಬರ್ 14 ರಂದು ನಿವೃತ್ತ ತಹಶೀಲ್ದಾರ್ ಮಾಳಿಗೆ ಶಂಕರ್ ವಿಚಾರಣೆ
    ನವೆಂಬರ್ 14 ರಂದು ಮೂಡಾ ಮಾಜಿ ಅಧ್ಯಕ್ಷ ಮರೀಗೌಡ ಆಪ್ತ ಶಿವಣ್ಣ ವಿಚಾರಣೆ

  • ಸೈಟ್ ಸಿದ್ದಪ್ಪನವರೇ, ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? – ಜೆಡಿಎಸ್ ಟೀಕೆ

    ಸೈಟ್ ಸಿದ್ದಪ್ಪನವರೇ, ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? – ಜೆಡಿಎಸ್ ಟೀಕೆ

    ಬೆಂಗಳೂರು: ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ(CM Siddaramaiah) ವಿರುದ್ಧ ಜೆಡಿಎಸ್ (JDS) ವಾಗ್ದಾಳಿ ನಡೆಸಿದೆ. ಎಕ್ಸ್‌ನಲ್ಲಿ ಸಿಎಂ ವಿರುದ್ಧ ಕಿಡಿಕಾರಿರುವ ಜೆಡಿಎಸ್ ಇಡಿ ಕುಣಿಕೆ ಬಿಗಿಗೊಳ್ಳುತ್ತಿರುವುದರಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದೆ.ಇದನ್ನೂ ಓದಿ:ರಿಷಬ್ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡ ಮಾಲಿವುಡ್ ನಟ ಜಯಸೂರ್ಯ

    ಜೆಡಿಎಸ್ ಟ್ವೀಟ್ ಏನು?
    ನಾನು ತಪ್ಪೇ ಮಾಡಿಲ್ಲ, ವೈಟ್ನರ್ ಹಾಕಿದ್ದು ನಾನಲ್ಲ, ನಾನು ಕ್ಲೀನ್ ಅಂಡ್ ಕ್ಲಿಯರ್. ಅದು ನಾನಲ್ಲ. ನಾನಲ್ಲ, ಆ ಸೈಟುಗಳಿಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಸೈಟ್ ಸಿದ್ದಪ್ಪನವರೇ. ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? ರಾಜೀನಾಮೆ ಕೊಡಿ ಎಂದು ನೀವೇ ಹೇಳಿದಿರೋ ಅಥವಾ ಮರಿಯೇ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿತೋ? ನೇಷನ್ ವಾಂಟ್ಸ್ ಟು ನೋ ಎಂದು ಪ್ರಶ್ನೆ ಮಾಡಿದೆ. ಇಡಿ ಕುಣಿಕೆ ಬಿಗಿದುಕೊಳ್ಳುತ್ತಿದೆ ಇದರ ಪರಿಣಾಮಗಳು ಇಲ್ಲಿವೆ ಎಂದು ಸಿಎಂ ವಿರುದ್ಧ ಕಿಡಿಕಾರಿದೆ.

    ಪರಿಣಾಮ 1: 14 ನಿವೇಶನಗಳು ಮೂಡಾಕ್ಕೆ ವಾಪಸ್!
    ಪರಿಣಾಮ 2: ಮೂಡಾ ಮರಿ ತಲೆದಂಡ
    ಪರಿಣಾಮ 3: ಇನ್ನಷ್ಟು ತಲೆದಂಡಗಳು ಕಾದಿವೆ.ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ – ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ

  • ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ

    ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ

    – ನನ್ನ ಮೇಲೆ ಯಾವುದೇ ಒತ್ತಡ ಇಲ್ಲ, ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

    ಮರೀಗೌಡ ಅವರು ಬುಧವಾರ ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪ ಚೋಳನ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ರಾಜೀನಾಮೆ ಕೊಡುವ ಬಗ್ಗೆ ಸಿಎಂಗೆ ಮೊದಲು ಮಾಹಿತಿ ನೀಡಿದ್ದರು.

    ರಾಜೀನಾಮೆ ಬಳಿಕ ಮಾತನಾಡಿದ ಮರೀಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಅವರು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ರು ಅದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಆರೋಗ್ಯವು ಸರಿಯಿಲ್ಲ. ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ಮುಡಾ ತನಿಖೆ ನಡೆಯುತ್ತಿದೆ. ತನಿಖೆ ನಡೆಯಲಿ. ಅಕ್ರಮ ಆಗಿದೆಯಾ ಇಲ್ಲ ಅಂತಾ ನಾನು ಹೇಳೊಲ್ಲ. ಈಗ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯ ಹೊರಬರುತ್ತೆ ಎಂದು ತಿಳಿಸಿದರು.

    ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ ಅಷ್ಟೆ. ಸೈಟ್ ವಿಚಾರವಾಗಿ ಸಿಎಂ ಅವರು ನನ್ನ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಸಿದ್ದರಾಮಯ್ಯ ನಮ್ಮ ನಾಯಕರು. 40 ವರ್ಷಗಳಿಂದ ಜೊತೆಯಲ್ಲಿ ಇದ್ದೇನೆ. ತಾಲೂಕು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ನನ್ನನ್ನು ಮಾಡಿದ್ದರು. ಯಾವತ್ತು ಕೂಡಾ ಸಿದ್ದರಾಮಯ್ಯ ಅವರು ಅಕ್ರಮ ಮಾಡಿ ಅಂತಾ ಹೇಳಿಲ್ಲ. ಮುಡಾ ವಿಚಾರದಲ್ಲೂ ಸಿಎಂ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

    ಎರಡು ಬಾರಿ ಸ್ಟ್ರೋಕ್ ಆಯ್ತು. ಆರೋಗ್ಯ ಸರಿಯಿಲ್ಲ. ಹೀಗಾಗಿ ಮುಡಾ ಅಧ್ಯಕ್ಷರಾಗಿ ಮುಂದುವರೆಯಲು ಆಗೊಲ್ಲ ಅಂತಾ ರಾಜೀನಾಮೆ ಕೊಟ್ಟಿದ್ದೇನೆ. ಇಲಾಖೆ ಸಚಿವರು ರಾಜೀನಾಮೆಗೆ ಒತ್ತಡ ಮಾಡಿದ್ರು ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದರು.