Tag: ಮರಿಸ್ವಾಮಿ

  • ಅಂದು ಸಿದ್ದರಾಮಯ್ಯಗೆ ಅವಾಜ್ – ಇಂದು ಯತೀಂದ್ರ ಜೊತೆ ಪ್ರಚಾರ!

    ಅಂದು ಸಿದ್ದರಾಮಯ್ಯಗೆ ಅವಾಜ್ – ಇಂದು ಯತೀಂದ್ರ ಜೊತೆ ಪ್ರಚಾರ!

    – ಕಾಂಗ್ರೆಸ್ ಅಭ್ಯರ್ಥಿ ಪರ ಮರಿಸ್ವಾಮಿ ಪ್ರಚಾರ
    – ನಾವು ಒಂದಾದ ಮೇಲೆ ಪ್ರಚಾರ ಮಾಡಬೇಕು

    ಮೈಸೂರು: ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ವೇಳೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಅವಾಜ್ ಹಾಕಿದ ಜೆಡಿಎಸ್ ಕಾರ್ಯಕರ್ತ ಮರಿಸ್ವಾಮಿ ಇಂದು ಅವರ ಪುತ್ರ ಶಾಸಕ ಡಾ. ಯತೀಂದ್ರ ಹಾಗೂ ಜಿ.ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಜೊತೆ ನಿಂತುಕೊಂಡು ವಿಜಯಶಂಕರ್ ಪರವಾಗಿ ಪ್ರಚಾರ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮರಿಸ್ವಾಮಿ, ಈಗ ಎರಡು ಸರ್ಕಾರ ಒಂದಾಗಿದೆ. ಆದರೆ ಅಂದು ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಪಕ್ಷ ಬೇರೆ ಬೇರೆ ಇತ್ತು. ಆಗ ನಾವು ನಮ್ಮ ಪಕ್ಷಕ್ಕಾಗಿ ಫೈಟ್ ಮಾಡಬೇಕಿತ್ತು. ಹಾಗಾಗಿ ನಾನು ಬರಲ್ಲ ಎಂದು ಹೇಳಿದ್ದೆ. ಆಗ ನಾನು ಜೆಡಿಎಸ್‍ನಲ್ಲಿದ್ದೇನೆ. ಜೆಡಿಎಸ್‍ನಲ್ಲೇ ಇರುತ್ತೇನೆ. ನಾನು ಕಾಂಗ್ರೆಸ್‍ಗೆ ಬರಲ್ಲ ಎಂದು ಹೇಳಿದ್ದೆ. ಈಗ ಇಬ್ಬರು ಒಂದಾಗಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಪಟ್ಟ ಕೂಡ ನಮ್ಮ ಪಕ್ಷಕ್ಕೆ ಕೊಟ್ಟಿದ್ದಾರೆ. ಅವರು ಎಂಪಿ ತೆಗೆದುಕೊಂಡಿದ್ದಾರೆ. ಈಗ ನಾವು ಒಂದಾದ ಮೇಲೆ ಪ್ರಚಾರ ಮಾಡಲೇಬೇಕು. ಇದರಲ್ಲಿ ಬೇಸರ ಇಲ್ಲ. ಏಕೆಂದರೆ ರಾಜಕೀಯದಲ್ಲಿ ಇದೆಲ್ಲ ಮಾಮೂಲಿ ಎಂದರು.

    ಸಿದ್ದರಾಮಯ್ಯ ಪ್ರಚಾರಕ್ಕೆ ಬಂದು ಬಾ ಮರಿಸ್ವಾಮಿ ಎಂದು ಕರೆದಾಗ ನಾನು ಹೋಗುತ್ತೇನೆ. ಏಕೆಂದರೆ ನಾವು ಈಗ ಒಂದಾಗಿದ್ದೇವೆ. ಸಿದ್ದರಾಮಯ್ಯ ಮಗನ ಜೊತೆ ಮಾತನಾಡಿದ್ದೇನೆ. ಸಿದ್ದರಾಮಯ್ಯ ಜೊತೆಗೂ ಮಾತನಾಡುತ್ತೇನೆ. ಆಗ ಅವರು ಕರೆದಾಗ ನಮ್ಮ ಪಕ್ಷ ಬೇರೆ ಅವರ ಪಕ್ಷ ಬೇರೆ ಆಗಿತ್ತು. ನಾನು ಅವರ ಪಕ್ಷಕ್ಕೆ ಹೋದಾಗ ನಮ್ಮ ಪಕ್ಷದ ಗತಿ ಏನೂ ಆಗಬೇಕಿತ್ತು. ಅವರು ಕರೆದಾಗ ನಾನು ಓಡಿ ಹೋಗಬೇಕಿತ್ತಾ? ನಾವು ನಮ್ಮ ಪಕ್ಷವನ್ನು ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಅಂದು ಕಾಂಗ್ರೆಸ್‍ಗೆ ಹೋಗಲ್ಲ ಎಂದಿದ್ದೆ ಎಂದು ಹೇಳಿದರು.

    ಎರಡು ಒಂದಾಗದೇ ಇದ್ದಾಗ ಜಗಳ ಮಾಡುವುದು ಸರಿ. ಈಗ ಒಂದಾದಾಗ ಜಗಳ ಮಾಡುವುದು ಸರಿಯಲ್ಲ. ಇದು ಹುಟ್ಟಿರೋದೇ ಮಂಡ್ಯದಿಂದ. ಮಂಡ್ಯ ಸರಿಯಾಗಿದ್ದರೆ, ಕರ್ನಾಟಕ ರಾಜ್ಯನೇ ಸರಿಯಾಗಿರುತ್ತೆ. ಮಂಡ್ಯದಲ್ಲಿ ಸರಿಯಾಗಿ ಹೊಂದಾಣಿಕೆ ಮಾಡಿಸಬೇಕು. ಹಾಸನ, ಮೈಸೂರಿನಲ್ಲಿ ಎಲ್ಲ ಸರಿಯಿದೆ. ಆದರೆ ಮಂಡ್ಯದಲ್ಲಿ ಸರಿಯಿಲ್ಲ ಎಂದು ಮರಿಸ್ವಾಮಿ ಹೇಳಿದರು.

    ಎರಡು ಪಕ್ಷ ಒಂದಾದ ಮೇಲೆ ಅವರ ಅಭ್ಯರ್ಥಿ ಜೊತೆ ಪರವಾಗಿಯೂ ಪ್ರಚಾರ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿಯೂ ಪ್ರಚಾರ ಮಾಡಬೇಕು. ಹಾಗಾಗಿ ನನಗೆ ಯಾವುದೇ ಬೇಸರ ಇಲ್ಲ ಎಂದು ತಿಳಿಸಿದರು.

  • ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಮಹಾದೇವಪ್ಪ ಆಪ್ತ ಗುತ್ತಿಗೆದಾರ ಮರಿಸ್ವಾಮಿ ಮನೆಯಲ್ಲಿ ಕೋಟಿ ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

    ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಹಿಂದೆ 10 ಮಂದಿ ಪಿಡಬ್ಲ್ಯೂಡಿ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮೈಸೂರಿನಲ್ಲಿ ಮರಿಸ್ವಾಮಿ ಮನೆಯ ಮೇಲೆ ನಡೆದ ದಾಳಿಯ ವೇಳೆ 6.76 ಕೋಟಿ ರೂ. ನಗದು ಹಣ ಸಿಕ್ಕಿದೆ.

    ಪತ್ತೆಯಾಗಿರುವ ಎಲ್ಲ ನೋಟುಗಳು 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳು ಆಗಿದ್ದು. ಎಲ್ಲವೂ ಬೇನಾಮಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಎಲ್ಲ ಕಡೆ ದಾಳಿ ನಡೆಸಿದಾಗ ಒಟ್ಟು 10.62 ಕೋಟಿ ರೂ. ನಗದು ಸಿಕ್ಕಿದ್ದು, 1.33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

    ಕೆಲ ದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಹಲವು ಕಡೆ ನಗದಿನ ಕೊರತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಹಣ ಇರುವ ಅಂಶ ದೃಢಪಟ್ಟಿದೆ ಎಂದು ಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಹಲವು ಗುತ್ತಿಗೆದಾರರು 500 ಮತ್ತು 2 ಸಾವಿರ ರೂ. ಮೌಲ್ಯದ ಭಾರೀ ಪ್ರಮಾಣದ ಹಣವನ್ನು ಹೊಂದಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ದಾಳಿಯಲ್ಲಿ ಪತ್ತೆಯಾದ ಹಣಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ, ದಾಳಿ ಮುಂದುವರಿದಿದೆ ಎಂದು ಐಟಿ ತಿಳಿಸಿದೆ.

    ಮರಿಸ್ವಾಮಿ ಸ್ಪಷ್ಟನೆ: ಸಿಎಂ ಜೊತೆಗಿರುವ ಫೋಟೋ ಪ್ರಕಟವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮರಿಸ್ವಾಮಿ, ನನ್ನ ಮನೆ ಮೇಲೆ ಐಟಿ ದಾಳಿ ಆಗಿಲ್ಲ. ನಾನು ಬೆಸಿಕಲಿ ಕೃಷಿಕ, ನಾನು ಕಂಟ್ರ್ಯಾಕ್ಟರ್ ಅಲ್ಲ. ಸುಖಸುಮ್ಮನೆ ನನ್ನ ಹೆಸರು ಇಲ್ಲಿಗೆ ತಗಲಿ ಕೊಂಡಿದೆ. ನಾನು ಯಾವ ವ್ಯವಹಾರ ಮಾಡಿಲ್ಲ. ಸಿಎಂ ಜೊತೆಗಿನ ಸಂಬಂಧ ಪವಿತ್ರ ಸ್ನೇಹ ಅಷ್ಟೇ. ಯಾವ ವ್ಯವಹಾರವೂ ಇಲ್ಲ. ಯಾವ ವಿಚಾರಣೆಯನ್ನು ನಾನು ಎದುರಿಸಿಲ್ಲ. ಐಟಿ ಅಧಿಕಾರಿಗಳು ಯಾವ ನೋಟಿಸ್ ಕೊಟ್ಟಿಲ್ಲ. ಐಟಿ ದಾಳಿಯಲ್ಲಿ ಸಿಕ್ಕಿರುವ ಮರಿಸ್ವಾಮಿ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

     

  • ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೇ ತಪ್ಪಾ: ಮರಿಸ್ವಾಮಿ ಮೇಲೆ ಮುಗಿಬಿದ್ದ ಸಿಎಂ ಬೆಂಬಲಿಗರು

    ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೇ ತಪ್ಪಾ: ಮರಿಸ್ವಾಮಿ ಮೇಲೆ ಮುಗಿಬಿದ್ದ ಸಿಎಂ ಬೆಂಬಲಿಗರು

    ಮೈಸೂರು: ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿದ್ದಕ್ಕೆ ಪಬ್ಲಿಕ್ ಟಿವಿಯ ಸಂದರ್ಶನ ಕಾರ್ಯಕ್ರಮದಲ್ಲಿ ಮರಿಸ್ವಾಮಿ ಮೇಲೆ ಸಿಎಂ ಬೆಂಬಲಿಗರು ಮುಗಿಬಿದ್ದಿದ್ದಾರೆ.

    ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಹಳೆಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯ ಮರಿಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆಯಿತು.

    ಒಂದು ಕಾಲದಲ್ಲಿ ಸಿಎಂ ಅವರ ಆಪ್ತನಾಗಿದ್ದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮರಿಸ್ವಾಮಿ ಅವರ ಜೊತೆ ಮಧ್ಯಾಹ್ನ ಸಂದರ್ಶನ ನಡೆಸುತಿತ್ತು. ಈ ವೇಳೆ ಸಂದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಸಿಎಂ ಬೆಂಬಲಿಗರು ದರ್ಬಾರ್ ನಡೆಸಿದ್ದಾರೆ. ಕಿವಿಗೆ ಹಾಕಿದ್ದ ಇಯರ್ ಫೋನ್ ಕಿತ್ತಾಕಿ ಸಂದರ್ಶನಕ್ಕೆ ಅಡ್ಡಿ ಪಡಿಸಿದ್ದಾರೆ. ಇದನ್ನೂ ಓದಿ: ನಿಮ್ ಜೊತೆ ಬರಲ್ಲ, ವೋಟು ಹಾಕಲ್ಲ- ಪ್ರಚಾರದ ವೇಳೆ ಸಿದ್ದು ಮರಿಸ್ವಾಮಿ ಮಾತಿನ ಜಟಾಪಟಿ

    ಪಬ್ಲಿಕ್ ಟಿವಿಯ ಮೈಕ್ ಕೂಡ ಕಿತ್ತೆಸೆದ ಬೆಂಬಲಿಗರು ಸಂದರ್ಶನ ನೀಡುತ್ತಿದ್ದ ಮರಿಸ್ವಾಮಿಯನ್ನು ಕರೆದೊಯ್ದಿದ್ದಾರೆ.