Tag: ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್

  • ಜಪಾನ್ ಯೋಧರನ್ನು ಬೀಳ್ಕೊಟ್ಟ ಭಾರತೀಯ ಸೇನೆ

    ಜಪಾನ್ ಯೋಧರನ್ನು ಬೀಳ್ಕೊಟ್ಟ ಭಾರತೀಯ ಸೇನೆ

    ಬೆಳಗಾವಿ: ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ನೇತೃತ್ವದಲ್ಲಿ ಫೆ.27ರಿಂದ ಪ್ರಾರಂಭವಾಗಿದ್ದ ಹನ್ನೆರಡು ದಿನಗಳ ಕಾಲ ನಡೆದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ ಇಂದು ಸಂಪನ್ನವಾಗಿದ್ದು, ಭಾರತೀಯ ಸೇನೆಯಿಂದ ಜಪಾನ್ ಯೋಧರಿಗೆ ಬೀಳ್ಕೊಡುಗೆ ನೀಡಲಾಯಿತು.

    ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿತ್ತು. ಹನ್ನೆರಡು ದಿನಗಳ ಕಾಲ ನಡೆದ ಜಂಟಿ ಸಮರಾಭ್ಯಾಸದಲ್ಲಿ ಎರಡು ದೇಶಗಳ ಯುದ್ಧದ ಕಾರ್ಯಾಚರಣೆ ಜೊತೆಗೆ ತಂತ್ರಜ್ಞಾನಗಳ ಬಗ್ಗೆ ತರಬೇತಿ ನಡೆಸಲಾಗಿತ್ತು.

    ಕೊನೆಯ ದಿನವಾದ ಇಂದು ಭಾರತೀಯ ಸೇನೆಯಿಂದ ಜಪಾನ್ ಯೋಧರಿಗೆ ಬಿಳ್ಕೊಡುಗೆ ನೀಡಲಾಯಿತು. ಭಾರತ- ಜಪಾನ್ ಜಂಟಿ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ 15ನೇ ಬೆಟಾಲಿಯನ್‍ನ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‍ನ 30ನೇ ದಳದ ತಲಾ 40 ಯೋಧರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಉಕ್ರೇನ್ ‌ನಿಂದ ಬಂದ ಕನ್ನಡಿಗ ವೈದ್ಯ‌ವಿದ್ಯಾರ್ಥಿಗಳಿಗೆ ಪ್ರವೇಶ

    ವಾರ್ಷಿಕ ತರಬೇತಿ ಆಗಿರುವ ಧರ್ಮ ಗಾರ್ಡಿಯನ್ ಕಾರ್ಯಕ್ರಮ ಅಂಗವಾಗಿ ಕರುನಾಡಿನಲ್ಲೇ ಈ ಸಮರಾಭ್ಯಾಸ ನಡೆದಿರೋದು ಮತ್ತೊಂದು ವಿಶೇಷವಾಗಿತ್ತು. ಮೂರು ದಿನಗಳ ಕಾಲ ನಡೆದ ಸಮರಾಭ್ಯಾಸದ ಯೋಧರ ಕಾರ್ಯಾಚರಣೆ ಮೈನವಿರೇಳಿಸುವಂತಿತ್ತು.

    ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗಿರುವ ಈ ಸಮರಾಭ್ಯಾಸದಲ್ಲಿ ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ, ಮನೆಗಳ ಮೇಲಿನ ಡ್ರಿಲ್‍ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಇದನ್ನೂ ಓದಿ: ಜೈಲಿನಿಂದಲೇ ಅಜಂ ಖಾನ್‌ ವಿಧಾನಸಭೆಗೆ ಎಂಟ್ರಿ

  • ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸ

    ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸ

    ಬೆಳಗಾವಿ: ನಗರದ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಬೆಳಗಾವಿಯಲ್ಲಿ ಭಾರತ – ಜಪಾನ್ ಜಂಟಿ ಸಮರಾಭ್ಯಾಸ ಆರಂಭಿಸಿದ್ದು ಇಂದು ಭಾರತ-ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ಜರುಗಿತು.

    ನಗರದ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್‍ಯಲ್ಲಿ ಫೆಬ್ರವರಿ 27ರಿಂದ ನಡೆಯುತ್ತಿರುವ ಭಾರತ ಜಪಾನ್ ಜಂಟಿ ಸಮರಾಭ್ಯಾಸ ಮಾರ್ಚ್ 10ರವರೆಗೆ ನಡೆಯಲಿದೆ. ಇಂದಿನ ಮೂರು ದಿನಗಳ ಕಾಲ ಭಾರತ ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ಕೂಡ ನಡೆಯುತ್ತಿದೆ. ವಾರ್ಷಿಕ ತರಬೇತಿ ಭಾಗವಾಗಿರುವ ‘ಧರ್ಮ ಗಾರ್ಡಿಯನ್ 2022’ ಕಾರ್ಯಕ್ರಮ ಇದ್ದಾಗಿದ್ದು 2018ರಿಂದಲೂ ಜಂಟಿ ಸಮರಾಭ್ಯಾಸ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

    ಭಾರತೀಯ ಸೇನೆಯ 15ನೇ ಬೆಟಾಲಿಯನ್‍ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‍ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿವೆ. ಸಮರಾಭ್ಯಾಸದಲ್ಲಿ ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಯಲಿದೆ. ಇದರ ಜೊತೆಗೆ ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ, ಮನೆಗಳ ಮೇಲಿನ ಡ್ರಿಲ್‍ಗಳು, ಭಯೋತ್ಪಾದಕ ಹಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಸೇರಿದಂತೆ ನಿರಾಯುಧ ಯುದ್ಧ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳ ಅಣಕು ಪ್ರದರ್ಶನ ನಡೆಯಲಿದೆ.  ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ