ಚಾಮರಾಜನಗರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿ ಜನವರಿ 9ರಂದು ರಾಜ್ಯಾದ್ಯಂತ ರೈಲು ತಡೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದ ಡಿಸಿ ಕಚೇರಿ ಮುಂಭಾಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಮರಾಠ ಅಭಿವೃದ್ಧಿ ನಿಗಮ ರದ್ದಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ಜ.9 ರಂದು ರಾಜ್ಯಾದ್ಯಂತ ರೈಲು ತಡೆ ನಡೆಸುವ ಎಚ್ಚರಿಕೆ ನೀಡಿದರು.
ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರೈಲು ಹಳಿಗಳ ಮೇಲೆ ಸತ್ಯಾಗ್ರಹ ಕೂರಿಸ್ತಿವಿ. ಜನಗಳ ಮೇಲೆ ರೈಲು ಬಿಡಬೇಕು ಹೊರತು, ರೈಲು ಹೋಗಲೂ ಸಾಧ್ಯವಿಲ್ಲ. ಬೀದರ್ ನಿಂದ ಚಾಮರಾಜನಗರದವರೆಗೆ, ಮಂಗಳೂರಿನಿಂದ ಕೋಲಾರದವರೆಗೆ ರೈಲು ನಿಲ್ದಾಣ ಸೇರಿದಂತೆ ಹಳಿಗಳ ಮೇಲೆ ಕುಳಿತು ಹೋರಾಟ ಮಾಡ್ತೀವಿ. ಎರಡು ಸಾವಿರ ಸಂಘಟನೆಯಿಂದ ರೈಲು ತಡೆಗೆ ಬೆಂಬಲ ಸಿಕ್ಕಿದ್ದು, ಅಂದು ಯಾರೂ ಕೂಡ ಸಾರ್ವಜನಿಕರು ರೈಲಿನಲ್ಲಿ ಪ್ರಯಾಣಿಸಬೇಡಿ. ನಿಲ್ದಾಣಕ್ಕೆ ಬರಬೇಡಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.
– ಮೆಜೆಸ್ಟಿಕ್‌ನಿಂದ ಎಂದಿನಂತೆ ಬಸ್ ಸಂಚಾರ – ಬೆಳಗ್ಗೆ 4 ಗಂಟೆಯಿಂದಲೇ ಪೊಲೀಸರಿಂದ ಗಸ್ತು
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯದ ಕರ್ನಾಟಕ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಸ್ತೆಯಲ್ಲಿ ಎಂದಿನಂತೆ ಜನರು ಸಂಚರಿಸುತ್ತಿದ್ದು, ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿದಿದೆ. ಕೆ.ಆರ್. ಮಾರುಕಟ್ಟೆಗೆ ಜನರು ಆಗಮಿಸಿ ಖರೀದಿಯಲ್ಲಿ ತೊಡಗಿದ್ದಾರೆ. ಅಂಗಡಿ, ಹೋಟೆಲ್‌ಗಳು ತೆರೆದಿದ್ದು ಗ್ರಾಹಕರು ಆಗಮಿಸುತ್ತಿದ್ದಾರೆ.
ಕರ್ನಾಟಕ ಬಂದ್‌ಗೆ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಯಾರೇ ಚೇಷ್ಟೆ ಮಾಡಿದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶುಕ್ರವಾರವೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಕೆ ನೀಡಿದ್ದರು. ಹೀಗಾಗಿ ಬೆಳ್ಳಬೆಳಗ್ಗೆ ಬೆಂಗಳೂರಿನ ಪ್ರಮುಖ ರಸ್ತೆ ಗಳು, ಸಿಗ್ನಲ್‌ಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ.
ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಅಯಾಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸಿಪಿ, ಎಸಿಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲಾಗಿದೆ.
ಇಂದು ಬೆಳಗ್ಗೆ 10:30ರಿಂದ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ರ‍್ಯಾಲಿ ಹೊರಡಲಿದ್ದಾರೆ. ಹೀಗಾಗಿ ಟೌನ್ ಹಾಲ್ ಬಳಿ ಪೊಲೀಸ್ ಭದ್ರತೆ ಹೆಚ್ಚು ಮಾಡಲಾಗಿದೆ. ಒಬ್ಬರು ಇಬ್ಬರು ಎಸಿಪಿ, ಒಬ್ಬರು ಡಿಸಿಪಿ ನೇತೃತ್ವದಲ್ಲಿ 200 ಜನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರತಿಭಟನೆ ನಿಯಂತ್ರಣಕ್ಕೆ ವಾಟರ್ ಜೆಟ್ ಕೂಡ ತರಲಾಗಿದೆ.
ಮೆಜೆಸ್ಟಿಕ್‌ನಿಂದ ವಿವಿಧ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.
– ಬಂದ್ಗೆ ಯಾರು ಅನುಮತಿ ನೀಡಿಲ್ಲ – ಚೇಷ್ಟೆ ಮಾಡಿದ್ರೆ ಕ್ರಮ – ಪಂಥ್ – ಬಸ್ ಓಡಿಸಿದ್ರೆ ಗಲಾಟೆ – ವಾಟಾಳ್
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕನ್ನಡ ಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಕೆಲವೊಂದು ಸಂಘಟನೆಗಳು ಬಂದ್ ಬೆಂಬಲಿಸಿದರೆ ಇನ್ನು ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ಘೋಷಿಸಿವೆ.
ಬಂದ್ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿನಾದ್ಯಂತ ಬಿಗಿ ಭದ್ರತೆ ಮಾಡಲಾಗಿದೆ. ಬಸ್ ಸ್ಟ್ಯಾಂಡ್, ಮೆಟ್ರೋ ಸ್ಟೇಷನ್ ಬಳಿ ಹೆಚ್ಚಿನ ನಿಯೋಜನೆ ಮಾಡಲಾಗಿದೆ. ಬಂದ್‍ಗೆ ಯಾರೂ ಅನುಮತಿ ಕೇಳಿಲ್ಲ, ನಾವು ಕೊಟ್ಟಿಲ್ಲ. ಬಿಎಂಟಿಸಿ, ಕೆಎಸ್‍ಆರ್‌ಟಿಸಿ ಬೆಂಬಲ ಕೊಟ್ಟಿಲ್ಲ. ಜನ ನಿರ್ಭಯವಾಗಿ ಓಡಾಡಬಹುದು. ಚೇಷ್ಟೆ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕನ್ನಡ ಸಂಘಟನೆಗಳು ಕಿಡಿ:
ಮರಾಠ ನಿಗಮ ಒಂದ್ಕಡೆಯಾದರೆ ರೋಲ್‍ಕಾಲ್‍ಗಳು, ವಸೂಲಿಕೋರರು ಅಂತ ಟೀಕಿಸಿರುವ ಹಿನ್ನೆಲೆಯಲ್ಲಿ ಕನ್ನಡ ಹೋರಾಟಗಾರರು ಮಾತ್ರ ಜಿದ್ದಿಗೆ ಬಿದ್ದಿದ್ದಾರೆ. ಬಂದ್‍ನ ಮುಂಚೂಣಿ ನಾಯಕ ವಾಟಾಳ್ ನಾಗರಾಜ್ ಅವರು, ನಾವೇನ್ ಚೇಷ್ಟೆ ಮಾಡಲ್ಲ. ಯಡಿಯೂರಪ್ಪ ಪೊಲೀಸರನ್ನು ಮಾರು ವೇಷದಲ್ಲಿ ಕಳಿಸಿ ಏನಾದ್ರೂ ಅನಾಹುತ ಮಾಡಿದರೆ ನಾವು ಜವಾಬ್ದಾರಿ ಅಲ್ಲ ಎಂದಿದ್ದಾರೆ.
ನಾವ್ ಯಾಕ್ರೀ ಅನುಮತಿ ಕೇಳಬೇಕು. ಇತಿಹಾಸದಲ್ಲಿ ಕರ್ನಾಟಕ ಬಂದ್‍ಗೆ ನಾವು ಪೊಲೀಸರ ಅನುಮತಿ ಕೇಳಿಲ್ಲ ಕೇಳಲ್ಲ. ನಾಳೆ ರ‍್ಯಾಲಿ ಇರುತ್ತದೆ. ನಾವ್ಯಾರಿಗೂ ಜಗ್ಗಲ್ಲ. ಗುಂಡೇಟು ಹೊಡೀತಾರ ಹೊಡಿಲಿ ನೋಡೋಣ ಅಂತ ಪೊಲೀಸ್ ಕಮೀಷನರ್‌ಗೆ ವಾಟಾಳ್ ಸವಾಲ್ ಹಾಕಿದ್ದಾರೆ. ಇವತ್ತು ಸಾಂಕೇತಿಕವಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಉರುಳು ಸೇವೆ ಮಾಡಿದ್ದಾರೆ. ಅಲ್ಲದೆ, ಮಾರ್ಕೆಟ್, ಮೆಜೆಸ್ಟಿಕ್‍ನಲ್ಲಿ ಬಂದ್‍ಗೆ ಸಹಕರಿಸುವಂತೆ ಪ್ರಚಾರ ಆಂದೋಲನ ನಡೆಸಿದರು.
ಬಸ್ ಓಡಿಸಿದರೆ ಗಲಾಟೆ ಪಕ್ಕಾ ಆಗುತ್ತದೆ. ಮಾಲ್, ಥಿಯೇಟರ್ ಓಪನ್ ಮಾಡ್ಬೇಡಿ. ರಸ್ತೆ ರಸ್ತೆಗಳಲ್ಲಿ ಹೋರಾಟ ಮಾಡುತ್ತೇವೆ. ನಿಗದಿತ ಸ್ಥಳಕ್ಕೆ ಹೋರಾಟ ಸೀಮಿತ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಸಾರಾಗೋವಿಂದು ಕೂಡ ಯಡಿಯೂರಪ್ಪರನವೇ ನಿಮ್ಮ ಮನವಿ ಯಾರಿಗೆ ಬೇಕು. ಮರಾಠ ನಿಗಮ ಹಿಂಪಡೀತಿವಿ ಅಂತೇಳಿ. ಆ ಕ್ಷಣವೇ ಬಂದ್ ವಾಪಸ್ ಪಡೀತೀವಿ ಅಂದಿದ್ದಾರೆ. ಬಂದ್‍ಗೆ ಬೆಂಬಲ ಕೊಡದವರಿಗೆ ನಾಚಿಕೆ ಆಗ್ಬೇಕು ಅಂತ ಕಿಡಿಕಾರಿದ್ದಾರೆ.
ಕರವೇ ನಾರಾಯಣಗೌಡ , ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಂದ್ ಮಾಡ್ತೀವಿ. ನಿಮ್ಮ ಭಂಡತನ ಬಿಡಿ. ನಾಳೆ ಬೇರೆ ಸಮುದಾಯಗಳು ಕೇಳಿದರೆ ಆಗ ಏನ್ ಮಾಡ್ತೀರಿ? ಮರಾಠಿ ನಿಗಮಕ್ಕೆ ಕೊಟ್ಟಿರೋ ಹಣನಾ ಉತ್ತರ ಕರ್ನಾಟಕದ ಪ್ರವಾಹ ಬಾಧಿತರಿಗೆ ಕೊಡಿ ಅಂತ ಕಿಡಿಕಾರಿದ್ದಾರೆ.
ಬಂದ್ಗೆ ಯಾರ ಬೆಂಬಲ?
ಕರವೇ ನಾರಾಯಣಗೌಡರ ಬಣ, ಕರವೇ ಶಿವರಾಮೇಗೌಡರ ಬಣ, ಜಯಕರ್ನಾಟಕ ಸಂಘಟನೆ, ಕರ್ನಾಟಕ ನವ ನಿರ್ಮಾಣ ಸೇನೆ, ಕರ್ನಾಟಕ ಸ್ವಾಭಿಮಾನಿ ಬಳಗ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕೆಲವು ಆಟೋ ಚಾಲಕರ ಸಂಘ, ಓಲಾ, ಊಬರ್ ಚಾಲಕರ ಸಂಘ, ಟ್ಯಾಕ್ಸಿ ಯೂನಿಯನ್ ಬೆಂಬಲ ನೀಡಿವೆ.
ನೈತಿಕ ಬೆಂಬಲ ಕೊಟ್ಟವರು
* ಹೋಟೆಲ್ ಮಾಲೀಕರ ಸಂಘ – ಹೋಟೆಲ್ ಓಪನ್ ಇರುತ್ತೆ
* ರಸ್ತೆ ಬದಿ ವ್ಯಾಪಾರಿಗಳ ಸಂಘ – ರಸ್ತೆ ಬದಿ ವ್ಯಾಪಾರ ಇರುತ್ತೆ
* ಪೆಟ್ರೋಲ್ ಬಂಕ್ ಮಾಲೀಕರ ಸಂಘ – ಪೆಟ್ರೋಲ್ ಬಂಕ್ ಓಪನ್ ಇರುತ್ತೆ
* ಆಟೋ ಚಾಲಕರ ಸಂಘ
* ಲಾರಿ ಮಾಲೀಕರ ಸಂಘ
* ಮ್ಯಾಕ್ಸಿಕ್ಯಾಬ್ ಚಾಲಕರ ಸಂಘ
* ಪೀಣ್ಯ ಕೈಗಾರಿಕಾ ಸಂಘ – ಕಾರ್ಮಿಕರು, ಕೈಗಾರಿಕೋದ್ಯಮಿಗಳ ಹಿತದೃಷ್ಟಿಯಿಂದ 1 ಗಂಟೆ ಹೆಚ್ಚು ಕೆಲಸ ಮಾಡಿ ನೈತಿಕ ಬೆಂಬಲ
* ರೈತ ಸಂಘ
* ಕರವೇ ಪ್ರವೀಣ್ ಶೆಟ್ಟಿ ಬಣ
* ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್
ಯಾರ ಬೆಂಬಲ ಇಲ್ಲ?
* ಬಿಎಂಟಿಸಿ, ಕೆಎಸ್‍ಆರ್‌ಟಿಸಿ – ಓಡಾಡುತ್ತೆ
* ಖಾಸಗಿ ಸಾರಿಗೆ ಸಂಘ – ಓಡಾಡುತ್ತೆ
* ಹೋಟೆಲ್, ಬೇಕರಿ, ಅಂಗಡಿಗಳು – ತೆರೆಯುತ್ತದೆ
* ಸರ್ಕಾರಿ ಕಚೇರಿ, ಬ್ಯಾಂಕ್‍ಗಳು – ಓಪನ್ ಇರಲಿದೆ
* ಎಐಟಿಯುಸಿ ಸಂಘಟನೆ
ದಾವಣಗೆರೆ: ರಾಜಕೀಯ, ಚುನಾವಣೆ ದೃಷ್ಟಿಯಿಂದ ಮರಾಠ ಅಭಿವೃದ್ದಿ ನಿಗಮ ಸ್ಥಾಪಿಸಿಲ್ಲ. ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ನಿಗಮ ಸ್ಥಾಪಿಸಲಾಗಿದೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮರಾಠ ಭಾಷೆಗೆ ಆದ್ಯತೆ ಕೊಟ್ಟಿಲ್ಲ. ಸಮಾಜದವರ ಏಳಿಗೆಗೆ, ಅಭಿವೃದ್ದಿಗೆ ನಿಗಮ ಮಾಡಿದೆ. ನನ್ನ ಕ್ಷೇತ್ರದಲ್ಲಿ ಸಹ ಸಾಕಷ್ಟು ಜನ ಮರಾಠರು ಇದ್ದಾರೆ. ಬಂಜಾರ ನಿಗಮ, ಅಂಬೇಡ್ಕರ್ ಇದೆ. ಅದರಂತೆ ಮರಾಠ ನಿಗಮ ಸ್ಥಾಪಿಸಲಾಗಿದೆ. ಇದಕ್ಕೆ ಭೆರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಅಕ್ರಮ ಕೃತ್ಯ ಎಸಗಿದವರಿಗೆ ಬೆಂಬಲ ನೀಡುತ್ತಾರೆ. ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಲು ಕಾಂಗ್ರೆಸ್ ನವರೇ ಪ್ರಚೋದನೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರು ಸಂಪತ್ ರಾಜ್ ರಕ್ಷಣೆ ಮಾಡಿದ್ದಾರೆ. ಇದು ಅವರಿಗೆ ಮುಳ್ಳಾಗುತ್ತೆ. ಈ ಹಿಂದೆ ಸಿದ್ದರಾಮಯ್ಯರನ್ನು ಮರೀಗೌಡರ ಬಚಾವ್ ಮಾಡಿದ್ದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪತ್ ರಾಜ್‍ನನ್ನು ಬಚಾವ್ ಮಾಡಲು ಹೊರಟಿದ್ದಾರೆ. ಈ ಮೂಲಕ ಮೌಲ್ಯವಿಲ್ಲದ ರಾಜಕಾರಣ ಮಾಡುತ್ತಿದ್ದಾರೆ. ನೀಚ ಕೃತ್ಯಕ್ಕೆ ಬೆಂಬಲ ಕೊಟ್ಟರೆ ಮುಂದೆ ಅವರೇ ಅನುಭವಿಸುತ್ತಾರೆ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.
ಚುನಾವಣೆಗೆ ಸ್ಪರ್ಧೆ ಮಾಡಿ, ಜನರಿಂದ ಆಯ್ಕೆಯಾದವರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದು ನನ್ನ ಅಭಿಪ್ರಾಯ. ಒಂದೆರಡು ಸ್ಥಾನ ಇರುತ್ತೆ, ಆದರೆ ಇದೇ ಪುನಾರಾವರ್ತನೆ ಆಗಬಾರದು. ಸಿಎಂ ದೆಹಲಿ ಪ್ರವಾಸ ಇದೆ. ಸಮತೋಲನ ಸಚಿವ ಸಂಪುಟ ಆಗುವ ಕುರಿತು ಅಚಲ ವಿಶ್ವಾಸ ಇದೆ. ಒಬ್ಬರಿಗೆ ಕೊಡಿ ಎಂದು ನಾನು ಸಹಿ ಮಾಡಿಲ್ಲ, ಮಧ್ಯ ಕರ್ನಾಟಕಕ್ಕೆ, ಅವಕಾಶ ಕೊಡಿ ಎಂದಿದ್ದೇವೆ. ಸಿಎಂಗೆ ಒಂದೇ ಹೆಸರು ಸೂಚಿಸಿಲ್ಲ. ಯಾರಿಗೆ ಕೊಟ್ಟರು ವಿಶ್ವಾಸದಿಂದ ಜಿಲ್ಲೆ ಅಭಿವೃದ್ದಿ ಮಾಡುತ್ತೇವೆ. ವಿಜಯೇಂದ್ರ ಅವರು ನಾನೇ ಕೆ.ಆರ್.ಪೇಟೆ, ಶಿರಾ ಗೆಲ್ಲಿಸಿದ್ದೇನೆ ಎಂದಿಲ್ಲ. ಮುಖಂಡರು, ಸಂಘಟನೆ, ವಿಜಯೇಂದ್ರ ಕಾರ್ಯರೂಪದಿಂದ ಗೆದ್ದಿದ್ದೇವೆ. ಎಲ್ಲ ಶಕ್ತಿ ಕೃಢೀಕರಣದಿಂದ ಜಯ ಆಗಿದೆ ಎಂದರು.
ಚಿಕ್ಕಮಗಳೂರು: ಇತರ ಅಭಿವೃದ್ಧಿ ನಿಗಮಗಳಂತೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಹಿತಾಸಕ್ತಿಯೇ ಮುಖ್ಯ ಎನ್ನುವುದಾದರೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಯಾಕೆ ಬೇಕು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾಕೆ ಬೇಕು? ಭೋವಿ, ಅಂಬೇಡ್ಕರ್, ಕಾಡುಗೊಲ್ಲ, ಉಪ್ಪಾರ ಸೇರಿದಂತೆ ಹತ್ತಾರು ಅಭಿವೃದ್ಧಿ ನಿಗಮಗಳಿವೆ. ಅದೇ ರೀತಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ತಪ್ಪು ಹುಡುಕುವರು ಟಿಪ್ಪು ಜಯಂತಿ ವೇಳೆ ಯಾಕೆ ಸುಮ್ಮನಿದ್ದರುಮ, ಟಿಪ್ಪು ಕನ್ನಡ ಪ್ರೇಮಿನಾ, ಅವನ ಕಾಲದಲ್ಲೇ ಊರುಗಳ ಹೆಸರು ಬದಲಾಗಿದ್ದು ಎಂದು ಕಿಡಿಕಾರಿದರು.
ಮರಾಠಿಗರು ರಾಜ್ಯಾದ್ಯಂತ ಇದ್ದಾರೆ, ನಮ್ಮ ಜಿಲ್ಲೆಯಲ್ಲಿ ಸಹ ಇದ್ದಾರೆ. ಹೀಗಾಗಿ ಅವರ ಅಭಿವೃದ್ಧಿಗೋಸ್ಕರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ. ಕರ್ನಾಟದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆಧ್ಯತೆ. ಮರಾಠರು ಬೆಳಗಾವಿ, ಬೀದರ್ ಮಾತ್ರವಲ್ಲ ನಮ್ಮ ಜಿಲ್ಲೆಯಲ್ಲೂ ಇದ್ದಾರೆ. ಕನ್ನಡ ರಾಜ್ಯಭಾಷೆಯಾಗಿಟ್ಟುಕೊಂಡೇ ವಿವಿಧ ಭಾಷೆಗಳ ಅಕಾಡೆಮಿಗಳನ್ನು ಮಾಡಿದ್ದೇವೆ. ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇದರಲ್ಲಿ ಎರಡು ಮಾತಿಲ್ಲ. ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲಾಗಿದೆ ಅಷ್ಟೆ ಎಂದು ಅವರು ತಿಳಿಸಿದರು.
ಸಂಪತ್ ರಾಜ್ ಬಂಧನ ಪ್ರಕರಣದ ಕುರಿತು ಮಾತನಾಡಿದ ಅವರು, ಸಂಪತ್ ರಾಜ್‍ಗೆ ಯಾರು ರಕ್ಷಣೆ ಕೊಟ್ಟಿದ್ದರು, ಯಾರು ಮುಚ್ಚಿಟ್ಟಿದ್ದರು ಎಂಬುದನ್ನು ಡಿ.ಕೆ.ಶಿವಕುಮಾರ್ ಅವರು ಹೇಳಬೇಕು. ಅವರು ಬಹಳ ದಿನಗಳ ಹಿಂದೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಇದನ್ನು ಮುಚ್ಚಿಟ್ಟಿದ್ದವರು ಯಾರು, ಕಾಂಗ್ರೆಸ್‍ನ 2 ಗುಂಪುಗಳ ಜಗಳ ಶಾಸಕನ ಮನೆಗೆ ಬೆಂಕಿ ಹಾಕಲು ಕಾರಣವಾಯಿತು. ಅವರಿಗೆ ಒಂದು ನೆಪ ಬೇಕಿತ್ತು. ಅದನ್ನು ಬಳಸಿಕೊಂಡು ಬೆಂಕಿ ಹಾಕುವ ಕೆಲಸ ಮಾಡಿದರು. ಒಂದು ಗುಂಪು ಬೆಂಕಿ ಹಾಕೋದರ ಪರ, ಮತ್ತೊಂದು ಹಾಕಿಸಿಕೊಂಡವರ ಪರ. ಇದರಿಂದ ಅವರದ್ದೇ ಪಕ್ಷದ ದಲಿತ ಶಾಸಕರಿಗೆ ರಕ್ಷಣೆ ಇಲ್ಲದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯಿತು. ಕಾನೂನು ಯಾರ ಕೈಗೊಂಬೆಯಲ್ಲ, ಅದು ಅದರ ಕೆಲಸ ಮಾಡಿದೆ ಎಂದು ತಿಳಿಸಿದರು.