Tag: ಮರಾಠಿ ಸಿನಿಮಾ

  • ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಷಾ ವಿವಾದದ ಕಿಡಿ – ಮರಾಠಿ ಸಿನಿಮಾ ಪೋಸ್ಟರ್‌ಗಳಿಗೆ ಮಸಿ

    ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಷಾ ವಿವಾದದ ಕಿಡಿ – ಮರಾಠಿ ಸಿನಿಮಾ ಪೋಸ್ಟರ್‌ಗಳಿಗೆ ಮಸಿ

    ಕಾರವಾರ: ಗಡಿಜಿಲ್ಲೆ ಉತ್ತರ ಕನ್ನಡಕ್ಕೂ (Uttara Kannada) ಭಾಷಾ ವಿವಾದದ (Language Controversy) ಕಿಡಿ ಹೊತ್ತಿಕೊಂಡಿದ್ದು, ಕನ್ನಡ ಸಿನಿಮಾ ಪ್ರದರ್ಶನದ ಬದಲು ಮಾರಾಠಿ ಸಿನಿಮಾ (Marathi Cinema) ಪ್ರದರ್ಶನ ಮಾಡುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮರಾಠಿ ಪೋಸ್ಟರ್‌ಗಳಿಗೆ ಮಸಿ (Ink) ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾರವಾರ (Karwar) ನಗರದ ಕಾಜುಬಾಗ್‌ನ ಅರ್ಜುನ ಸಿನಿಮಾ ಮಂದಿರದಲ್ಲಿ ಕನ್ನಡ ಸಿನಿಮಾ ಬದಲು ಮರಾಠಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿತ್ತು. ಮಾತ್ರವಲ್ಲದೇ ಕನ್ನಡ ಸಿನಿಮಾ ಪೋಸ್ಟರ್‌ಗಳನ್ನು ಕೆಳಭಾಗದಲ್ಲಿ ಹಾಕಿ, ಮೇಲ್ಭಾಗದಲ್ಲಿ ಮರಾಠಿ ಸಿನಿಮಾ ಪೋಸ್ಟರ್ ಅಳವಡಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ ತಂದೆಯ ಆತ್ಮ ವಿಲವಿಲ ಅಂತ ಒದ್ದಾಡುತ್ತಿರಬಹುದು : ಸಿ.ಟಿ.ರವಿ

    ಇದರಿಂದ ಆಕ್ರೋಶಕ್ಕೊಳಗಾದ ಕನ್ನಡ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಮರಾಠಿ ಪೋಸ್ಟರ್‌ಗಳನ್ನು ತೆಗೆಸಿ ನಂತರ ಪೋಸ್ಟರ್‌ಗೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಕನ್ನಡ ಸಿನಿಮಾ ಪ್ರದರ್ಶನ ಮಾಡುವಂತೆ ಚಿತ್ರಮಂದಿರದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ

    Live Tv
    [brid partner=56869869 player=32851 video=960834 autoplay=true]

  • ಅಕ್ಷಯ್ ಕುಮಾರ್ ನಟನೆಯ ಮರಾಠಿ ಚಿತ್ರದ ಫಸ್ಟ್ ಲುಕ್ ರಿಲೀಸ್

    ಅಕ್ಷಯ್ ಕುಮಾರ್ ನಟನೆಯ ಮರಾಠಿ ಚಿತ್ರದ ಫಸ್ಟ್ ಲುಕ್ ರಿಲೀಸ್

    ತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ಖ್ಯಾತ ನಟ  ಅಕ್ಷಯ್ ಕುಮಾರ್, ಇದೀಗ ಮತ್ತೊಂದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮರಾಠಿ ಸಿನಿಮಾ ರಂಗಕ್ಕೆ ಹಾರಿದ್ದು, ಅಲ್ಲಿ ಛತ್ರಿಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವಾಜಿ ಮಹಾರಾಜ್ ಪಾತ್ರವನ್ನು ಅವರು ನಿರ್ವಹಿಸಲಿದ್ದು, ಇದು ಶಿವಾಜಿ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ. ಈ ಚಿತ್ರಕ್ಕೆ ‘ವೇಡಾತ್ ಮರಾಠೆ ವೀರ್ ದೌಡಲೆ ಸಾತ್’ ಎಂದು ಹೆಸರು ಇಡಲಾಗಿದ್ದು, ಈ ಸಿನಿಮಾದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದೆ.

    ಇತ್ತೀಚೆಗಷ್ಟೇ ರಿಲೀಸ್ ಆದ, ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಈ ಹಿಂದಿನ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಗೆಲ್ಲುವಲ್ಲಿ ವಿಫಲವಾದವು. ಈ ಕಾರಣದಿಂದಾಗಿಯೇ ಅವರು ಮರಾಠಿ ಸಿನಿಮಾ ರಂಗದತ್ತ ಹೊರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಪ್ರಯತ್ನದಲ್ಲೇ ಅವರು ಮರಾಠ ಸಾಮ್ರಾಜ್ಯದ ದೊರೆ ಆಗಿದ್ದ ಛತ್ರಪತಿ ಶಿವಾಜಿ ಅವರ ಜೀವನವನ್ನು ಆಧರಿಸಿದ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ಈ ಸಿನಿಮಾವನ್ನು ಮಹೇಶ್ ಮಂಜರೇಕರ್ ನಿರ್ದೇಶನ ಮಾಡುತ್ತಿದ್ದು, ವಸೀಮ್ ಖುರೇಷಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮತ್ತೊಂದು ವಿಶೇಷ ಅಂದರೆ, ಇದೇ ಕಾರ್ಯಕ್ರಮದಲ್ಲಿ ಎಂ.ಎನ್.ಸಿ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಭಾಗಿಯಾಗಿ, ಏಕನಾಥ್ ಶಿಂಧೆಗೆ ಮುಖಾಮುಖಿ ಆಗಿದ್ದಾರೆ.

    ಸಿನಿಮಾ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಇಂತಹ ದೊಡ್ಡ ಪಾತ್ರ ನನಗೆ ಸಿಕ್ಕಿದ್ದು ಖುಷಿಯಾಗಿದೆ. ಇದು ನನ್ನ ಕನಸಿನ ಪಾತ್ರ ಕೂಡ ಆಗಿತ್ತು. ಇದೇ ಮೊದಲ ಬಾರಿಗೆ ನಿರ್ದೇಶಕ ಮಹೇಶ್ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ತೆರೆಯ ಮೇಲೆ ನನ್ನನ್ನು ನಾನು ನೋಡಲು ಉತ್ಸುಕನಾಗಿದ್ದೇನೆ; ಎಂದು ಅವರು ಹೇಳಿದ್ದಾರೆ. ನಿರ್ದೇಶಕರು ಈ ಚಿತ್ರಕ್ಕಾಗಿ ಸತತ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮರಾಠಿ `ಉಗ್ರಂ’ ಸಿನಿಮಾಗೆ ಶಾನ್ವಿ ಶ್ರೀವಾಸ್ತವ್‌ ನಾಯಕಿ

    ಮರಾಠಿ `ಉಗ್ರಂ’ ಸಿನಿಮಾಗೆ ಶಾನ್ವಿ ಶ್ರೀವಾಸ್ತವ್‌ ನಾಯಕಿ

    ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ನಟನೆಯ `ಉಗ್ರಂ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಈ ಸಿನಿಮಾ ಅದೆಷ್ಟು ಜನರ ಪಾಲಿಗೆ ಗಾಂಧಿನಗರದಲ್ಲಿ ನೆಲೆ ನಿಲ್ಲಲು ಕಾರಣವಾಯ್ತು. ಇದೀಗ ಈ ಉಗ್ರಂ ಸಿನಿಮಾ ಪರಭಾಷೆಯಲ್ಲಿ ತೆರೆ ಕಾಣಲು ಸಜ್ಜಾಗಿದೆ. ಮರಾಠಿಯಲ್ಲಿ ಉಗ್ರಂ ಸಿನಿಮಾ ರಿಮೇಕ್ ಆಗಲಿದೆ.

    `ಉಗ್ರಂ’ ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರಳಿ ಕೆರಿಯರ್‌ಗೆ ಮರು ಜೀವ ಕೊಟ್ಟಂತಹ ಸಿನಿಮಾ. ಈ ಚಿತ್ರದಿಂದ ಶ್ರೀಮುರುಳಿ ಸಿನಿ ಕೆರಿಯರ್‌ಗೆ ಬಿಗ್ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಇದೀಗ ಈ ಸಿನಿಮಾ ಮೇಲೆ ಪರಭಾಷಿಗರ ಕಣ್ಣು ಬಿದ್ದಿದೆ. 8 ವರ್ಷಗಳ ನಂತರ ಈ ಚಿತ್ರವನ್ನು ಮರಾಠಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    ಉಗ್ರಂ ಸಿನಿಮಾ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಸುಮಿತ್ ಕಕ್ಕಡ್ ಎಂಬುವವರು ಈ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ. ಶ್ರೀಮುರುಳಿ ನಟಿಸಿದ ಪಾತ್ರಕ್ಕೆ ಶರದ್ ಖೇಳ್ಕರ್ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಳ್ತಿದ್ದಾರೆ. ಹರಿಪ್ರಿಯಾ ಪಾತ್ರಕ್ಕೆ ಶಾನ್ವಿ ಜೀವತುಂಬಲಿದ್ದಾರೆ. ಕನ್ನಡದಲ್ಲಿ `ಉಗ್ರಂ’ ಸಿನಿಮಾ ಸೌಂಡ್ ಮಾಡಿದಷ್ಟು, ಮರಾಠಿಯಲ್ಲೂ ಸೌಂಡ್ ಮಾಡುತ್ತಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹೃದಯಾಘಾತದಿಂದ ಮರಾಠಿ ನಟ ಪ್ರದೀಪ್ ಪಟವರ್ಧನ್ ನಿಧನ

    ಹೃದಯಾಘಾತದಿಂದ ಮರಾಠಿ ನಟ ಪ್ರದೀಪ್ ಪಟವರ್ಧನ್ ನಿಧನ

    ರಾಠಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟ ಪ್ರದೀಪ್ ಪಟವರ್ಧನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರದೀಪ್ ಅಗಲಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಸಂತಾಪ ಸೂಚಿಸಿದ್ದಾರೆ.‌‌

    ರಂಗಭೂಮಿ ಹಿನ್ನಲೆ ಇರುವ ನಟ ಪ್ರದೀಪ್, ಮರಾಠಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಳ್ತಿದ್ದಾರೆ. ಕಿರುತೆರೆ ಜತೆಗೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದರು. ಇನ್ನು ೬೪ ವರ್ಷದ ನಟ ಪ್ರದೀಪ್ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ನಟ ಪ್ರದೀಪ್ ನಿಧನದಿಂದ ಮರಾಠಿ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ:ನಾನು ಎಷ್ಟೋ ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಲೆಕ್ಕವಿಲ್ಲ: ಅರ್ಜುನ್ ರಮೇಶ್

    ಮರಾಠಿ ಸಿನಿಮಾಗಳಲ್ಲಿನ ತಮ್ಮ ಅದ್ಭುತ ನಟನೆಯಿಂದಾಗಿ ಪ್ರದೀಪ್ ಪಟವರ್ಧನ್ ಅವರು ಪ್ರೇಕ್ಷಕರ ಹೃದಯ ಗೆದ್ದಿದ್ದರು. ಇಂದು ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಮರಾಠಿ ಕಲಾ ಪ್ರಪಂಚಕ್ಕೆ ತೀವ್ರ ನಷ್ಟ ಆಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ನೆಚ್ಚಿನ ನಟನ ನಿಧನಕ್ಕೆ ಅಭಿಮಾನಿಗಳು, ಸಹಕಲಾವಿದರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉದ್ಧವ್‌, ಏಕನಾಥ್‌ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣ?

    ಉದ್ಧವ್‌, ಏಕನಾಥ್‌ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣ?

    ಬೆಳಗಾವಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣವಾಯ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.

    ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿ ಏಳಲು ಮೇ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ‘ಧರ್ಮವೀರ ಮುಕ್ಕಾಂ ಪೋಸ್ಟ್ ಥಾಣೆ’ ಸಿನಿಮಾವೂ ಒಂದು ಕಾರಣವಾಗಿರಬಹುದು ಎಂಬ ವಿಶ್ಲೇಷಣೆ ಈಗ ಕೇಳಿ ಬಂದಿದೆ.

    ಶಿವಸೇನೆ ಪ್ರಭಾವಿ ಮುಖಂಡರಾಗಿದ್ದ ದಿ‌.ಆನಂದ ದಿಘೇ ಜೀವನಾಧಾರಿತ ‘ಧರ್ಮವೀರ’ ಚಿತ್ರ ಮೇ 13 ರಂದು ಬಿಡುಗಡೆಯಾಗಿತ್ತು. ಶಿವಸೇನೆಯ ಥಾಣೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ದಿ.ಆನಂದ ದಿಘೇಯ ‘ಧರ್ಮವೀರ’ ಚಿತ್ರದಲ್ಲಿನ ಕೆಲ ದೃಶ್ಯಗಳಿಗೆ ಉದ್ಧವ್ ಠಾಕ್ರೆ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.

    ಶಿವಸೇನೆ ಮಾಜಿ ನಾಯಕರಾದ ನಾರಾಯಣ ರಾಣೆ, ರಾಜ್ ಠಾಕ್ರೆ ಕುರಿತ ದೃಶ್ಯಕ್ಕೆ ಅಸಮಾಧಾನಗೊಂಡಿದ್ದ ಉದ್ಧವ್‌ ಚಿತ್ರ ವೀಕ್ಷಣೆ ವೇಳೆ ಕ್ಲೈಮ್ಯಾಕ್ಸ್ ನೋಡದೇ ಹೊರಬಂದಿದ್ದರು. ಇದನ್ನೂ ಓದಿ: 55 ಶಾಸಕರು ನಮ್ಮ ಬಳಿ ಇದ್ದಾರೆ – ಉದ್ಧವ್ ಬೆದರಿಕೆಗೆ ಜಗ್ಗದ ರೆಬೆಲ್ಸ್

    ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಾಜ್ ಠಾಕ್ರೆ ಹಾಗೂ ದಿ‌.ಆನಂದ ದಿಘೇ ಸಂಭಾಷಣೆಯಿದೆ. ಅಪಘಾತದಲ್ಲಿ ಗಾಯವಾಗಿ ಆಸ್ಪತ್ರೆ ಸೇರಿದ್ದ ಆನಂದ ದಿಘೇ ಅವರನ್ನು ರಾಜ್ ಠಾಕ್ರೆ ಭೇಟಿಯಾಗುತ್ತಾರೆ. ಆ ವೇಳೆ ಅಂದು ಶಿವಸೇನೆ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದ ರಾಜ್ ಠಾಕ್ರೆ,”ಹೀಗೆ ಮಲಗಿದ್ರೆ ಹೇಗೆ? ಹಿಂದುತ್ವದ ಕೆಲಸ ಇನ್ನೂ ಮಾಡಬೇಕಿದೆ” ಎಂದು ಆನಂದ್ ದಿಘೇ ಉದ್ದೇಶಿಸಿ ಹೇಳುತ್ತಾರೆ. ಈ ಪ್ರಶ್ನೆಗೆ “ಹಿಂದುತ್ವದ ಜವಾಬ್ದಾರಿ ಈಗ ನಿಮ್ಮ ಮೇಲಿದೆ” ಎಂದು ರಾಜ್ ಠಾಕ್ರೆಗೆ ಆನಂದ ದಿಘೇ ಉತ್ತರಿಸುತ್ತಾರೆ. ಚಿತ್ರದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಂದೇ ಭಾರೀ ವೈರಲ್ ಆಗಿತ್ತು.

    ಚಿತ್ರದಲ್ಲಿ ಬರುವ ಈ ದೃಶ್ಯದಿಂದ ಉದ್ಧವ್ ಠಾಕ್ರೆ – ಏಕನಾಥ್ ಶಿಂಧೆ ಮಧ್ಯೆ ವೈಮನಸ್ಸು ಹೆಚ್ಚಾಗಿದೆ ಎನ್ನಲಾಗುತ್ತಿದೆ. ದಿ.ಆನಂದ ದಿಘೇ ಕಟ್ಟಾ ಶಿಷ್ಯರಾಗಿರುವ ಏಕನಾಥ್ ಶಿಂಧೆ ಉದ್ಧವ್‌ ನಡೆಯಿಂದ ಮೊದಲೇ ಅಸಮಾಧಾನಗೊಂಡಿದ್ದರು. ಈ ಸಿನಿಮಾದ ಬಳಿಕ ಬಂಡಾಯದ ಕಿಚ್ಚು ಹೆಚ್ಚಾಯಿತು ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ.

    Live Tv