Tag: ಮರಾಠಿ ನಟಿ

  • ಮುಂಬೈ | ಮರಾಠಿ ನಟಿ ಉರ್ಮಿಳಾ ಕಾರು ಹರಿದು ಓರ್ವ ಕಾರ್ಮಿಕ ಸಾವು

    ಮುಂಬೈ | ಮರಾಠಿ ನಟಿ ಉರ್ಮಿಳಾ ಕಾರು ಹರಿದು ಓರ್ವ ಕಾರ್ಮಿಕ ಸಾವು

    ಮುಂಬೈ: ಇಲ್ಲಿನ ಕಂಡಿವಲಿಯಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಮರಾಠಿ ನಟಿ (Marathi Actress) ಉರ್ಮಿಳಾ ಕೊಠಾರೆ (Urmila Kothare) ಅವರ ಕಾರು ಹರಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

    ನಟಿ ಉರ್ಮಿಳಾ ಕೊಠಾರೆ ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೆಟ್ರೋ ರೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ನಟಿಯ ಕಾರು ಡಿಕ್ಕಿ ಹೊಡೆದಿದೆ.ಇದನ್ನೂ ಓದಿ: ಡಿ.ಕೆ ಸುರೇಶ್ ತಂಗಿ ಅಂತ ಹೇಳ್ಕೊಂಡು ವಂಚನೆ ಕೇಸ್ -ಆರೋಪಿ ಐಶ್ವರ್ಯ ಗೌಡ, ಪತಿ ಹರೀಶ್‌ ಅರೆಸ್ಟ್

    ಈ ಕುರಿತು ಅಧಿಕಾರಿಗಳು ಮಾತನಾಡಿ, ನಟಿಯ ಕಾರು ಅತಿವೇಗದಲ್ಲಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಪರಿಣಾಮ ಮೆಟ್ರೋ ರೈಲಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ನಟಿ ಉರ್ಮಿಳಾ ಹಾಗೂ ಚಾಲಕ ಕೂಡ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಸದ್ಯ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಅಪಘಾತದಲ್ಲಿ ನಟಿಯ ಕಾರಿಗೆ ಭಾರೀ ಹಾನಿಯಾಗಿದೆ.

    ನಟಿ ಮರಾಠಿಯ ದುನಿಯಾದಾರಿ, ಹಿಂದಿಯ ಥ್ಯಾಂಕ್ ಗಾಡ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಕೋಲಾರದ ಯುವತಿ ಆಯ್ಕೆ

  • ಸಿನಿಮಾಗಾಗಿ ನಿರ್ಮಾಪಕರ ಜೊತೆ ಮಲಗಬೇಕು- ಕರಾಳ ಘಟನೆ ಬಿಚ್ಚಿಟ್ಟ ಮರಾಠಿ ನಟಿ

    ಸಿನಿಮಾಗಾಗಿ ನಿರ್ಮಾಪಕರ ಜೊತೆ ಮಲಗಬೇಕು- ಕರಾಳ ಘಟನೆ ಬಿಚ್ಚಿಟ್ಟ ಮರಾಠಿ ನಟಿ

    ರಾಠಿ ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿರುವ ಸಾಯಿ ತಮ್ಹಂಕರ್ (Sai Tamhankar) ಇದೀಗ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಆಫರ್ ನೀಡಿ ನಿರ್ಮಾಪಕರ ಜೊತೆ ಮಲಗಲು ಹೇಳ್ತಾರೆ ಎಂದು ನಟಿ ಸಾಯಿ ಕರಾಳ ಘಟನೆ ಬಗ್ಗೆ ಮಾತನಾಡಿದ್ದಾರೆ.

    ಒಂದು ಬಾರಿ ನನಗೆ ಚಿತ್ರತಂಡದಿಂದ ಫೋನ್ ಕರೆ ಬಂದಿತ್ತು. ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂದು ಹೇಳಿದರು. ಬಳಿಕ ಕತೆ ಬಗ್ಗೆ ವಿಚಾರಿಸಿದಾಗ ಇದಕ್ಕೂ ಮುನ್ನ ಒಮ್ಮೆ ನೀವು ನಿರ್ಮಾಪಕರ ಜೊತೆ ಮಲಗಬೇಕು ಎಂದರು. ನೀವಾಗಿರುವ ಕಾರಣ ಹೀರೋ ಜೊತೆ ಮಲಗಿ ಎಂದು ನಾನು ಹೇಳಲ್ಲ ಎಂದು ಮಾತನಾಡಿದರು. ಇದನ್ನೂ ಓದಿ:ಪತ್ತೆದಾರಿ ಸಿನಿಮಾದಲ್ಲಿ ಆಲಿಯಾ ಭಟ್- ಜು.15ರಿಂದ ಶೂಟಿಂಗ್ ಸ್ಟಾರ್ಟ್

    ಅವರ ಆ ಮಾತು ನನಗೆ ಕೆರಳಿಸಿತ್ತು. ಕೊಡಲೇ ನಿಮ್ಮ ತಾಯಿಯನ್ನು ಅವರ ಜೊತೆ ಮಲಗಿಸಿ ಎಂದೆ. ಅವರ ಕಡೆಯಿಂದ ಉತ್ತರ ಬರಲಿಲ್ಲ. ಇನ್ನೋಮ್ಮೆ ಕಾಲ್ ಮಾಡಿದರೆ ನೆಟ್ಟಗೆ ಇರಲ್ಲ ಎಂದು ಗದರಿದೆ. ಆ ನಂತರ ಕರೆ ಬರಲಿಲ್ಲ ಎಂದು ನಟಿ ಸಾಯಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.


    ವಿರೋಧಿಸಿದರೆ ಇಂತಹ ಕೆಟ್ಟ ಸಂದರ್ಭಗಳಿಂದ ನಾವು ದೂರ ನಿಲ್ಲಬಹುದು ಎಂದು ನಟಿ ಮಾತನಾಡಿದ್ದಾರೆ.

  • ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಸ್ಟಡಿಗೆ ಮರಾಠಿ ನಟಿ

    ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಸ್ಟಡಿಗೆ ಮರಾಠಿ ನಟಿ

    ಮುಂಬೈ: ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಚಲನಚಿತ್ರ ಮತ್ತು ಕಿರುತೆರೆ ನಟಿ ಎಂ.ಎಸ್.ಕೇತಕಿ ಚಿತಾಲೆ(29) ಅವರು ಶರದ್ ಪವಾರ್ ಅವರನ್ನು ನಿಂದಿಸಿರುವ ಮರಾಠಿ ಭಾಷೆಯ ಪದ್ಯವನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆ ನಟಿ ವಿರುದ್ಧ ಉತ್ತರ ಮಹಾರಾಷ್ಟ್ರದ ಧುಲೆಯಲ್ಲಿ ಎನ್‍ಸಿಪಿ ಮುಖಂಡರೊಬ್ಬರು ದೂರನ್ನು ಕೊಟ್ಟಿದ್ದರು. ಅದಕ್ಕೆ ಚಿತಾಲೆ ಅವರನ್ನು ಪೊಲೀಸರು ಬಂಧಿಸಿದ್ದು, ಹಾಲಿಡೇ ಕೋರ್ಟ್(ರಜಾ ನ್ಯಾಯಾಲಯ) ಮುಂದೆ ಹಾಜರುಪಡಿಸಿದ್ದಾರೆ. ಪರಿಣಾಮ ಚಿತಾಲೆ ಅವರನ್ನು ನ್ಯಾಯಾಲಯ ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ

    ಪವಾರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಶೇರ್ ಮಾಡಿದ ಆರೋಪದ ಮೇಲೆ ಎಂಎಸ್ ಚಿತಾಲೆ ಮತ್ತು 23 ವರ್ಷದ ಫಾರ್ಮಸಿ ವಿದ್ಯಾರ್ಥಿ ನಿಖಿಲ್ ಭಾಮ್ರೆ ಅವರನ್ನು ಶನಿವಾರ ಬಂಧಿಸಲಾಗಿದೆ. ಚಿತಾಲೆ ಅವರನ್ನು ಥಾಣೆ ಪೊಲೀಸರು ಬಂಧಿಸಿದರೆ, ಭಾಮ್ರೆ ಅವರನ್ನು ನಾಸಿಕ್‍ನಲ್ಲಿ ಬಂಧಿಸಲಾಯಿತು.

    ಪದ್ಯ ರೂಪದಲ್ಲಿದ್ದ ಕೇತಕಿ ಚಿತಾಲೆ ಅವರು ಶೇರ್ ಮಾಡಿರುವ ಪೋಸ್ಟ್ ಬೇರೆಯವರು ಬರೆದಿದ್ದು, ಇದರಲ್ಲಿ ‘ನರಕ ಕಾಯುತ್ತಿದೆ’ ಮತ್ತು ‘ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ’ ಎಂಬ ಪದಗಳನ್ನು ಒಳಸಿದ್ದು, ಶರದ್ ಪವಾರ್ ಅವರನ್ನು ಉಲ್ಲೇಖಿಸಲಾಗಿತ್ತು.

    ಚಿತಾಲೆ ವಿರುದ್ಧ ಐಪಿಸಿ ಸೆಕ್ಷನ್ 500(ಮಾನನಷ್ಟ), 501 (ಮಾನಹಾನಿಕರ ಎಂದು ತಿಳಿದಿರುವ ವಿಷಯವನ್ನು ಪ್ರಕಟಿಸುವುದು), 505 (2) (ಯಾವುದೇ ಹೇಳಿಕೆ, ವದಂತಿ ಅಥವಾ ವರದಿಯನ್ನು ಮಾಡುವುದು) ಮತ್ತು 153 ಎ(ಜನರಲ್ಲಿ ಅಶಾಂತಿ ಹರಡುವುದು) ಅಡಿ ದೂರು ದಾಖಲಾಗಿದೆ.

    ಈ ಕುರಿತು ಶರದ್ ಪವಾರ್ ಅವರನ್ನು ಮಾಧ್ಯಮಗಳು ಪ್ರಶ್ನೆ ಕೇಳಿದ್ದು, ಚಿತಾಲೆ ಯಾರೆಂದು ನನಗೆ ತಿಳಿದಿಲ್ಲ. ಅವರು ನನ್ನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಏನೂ ಪೋಸ್ಟ್ ಮಾಡಿದ್ದಾರೆ ಎಂಬುದೇ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ 

    ಯಾರು ಈ ನಟಿ?
    ಕೇತಕಿ ಚಿತಾಲೆ ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದು, ‘ತುಜಾ ಮಜಾ ಬ್ರೇಕಪ್’ ಸರಣಿಯ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ಚಿತಾಲೆ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕುಖ್ಯಾತರಾಗಿದ್ದಾರೆ.

  • ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

    ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

    ಮುಂಬೈ: ಸೈಬರ್ ಮೋಸಕ್ಕೆ ಹಲವು ಜನರು ಸಿಕ್ಕಿ ತಮ್ಮ ಆಸ್ತಿಯನ್ನೆ ಕಳೆದುಕೊಂಡಿರುವ ಸುದ್ದಿಯನ್ನು ನೋಡಿದ್ದೇವೆ. ಈಗ ನಟಿಯೊಬ್ಬರು ಸೈಬರ್ ಮೋಸದ ಜಾಲಕ್ಕೆ ಸಿಕ್ಕಿ, 1.48 ಲಕ್ಷ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    64 ವರ್ಷದ ಪಾರ್ಲೆಯ ಮರಾಠಿ ಸಿನಿಮಾ ನಟಿಯೊಬ್ಬರು ಟೆಲಿಕಾಂ ಆಪರೇಟರ್ ಏರ್‍ಟೆಲ್ ಕಳುಹಿಸಿದ ಸಂದೇಶವನ್ನು ಸ್ವೀಕರಿಸಿದ್ದಾರೆ. ಈ ವೇಳೆ ನಟಿಗೆ ಕರೆ ಬಂದಿದ್ದು, ವಂಚಕರು ಎಟಿಎಂ ಕಾರ್ಡ್‍ನ ಪೂರ್ತಿ ವಿವರವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈ ನಟಿ ವಂಚಕರಿಗೆ ತನ್ನ ಕೆವೈಸಿ ನಂಬರ್ ಸಹ ಕೊಟ್ಟಿದ್ದಾರೆ. ಪರಿಣಾಮ ಆಕೆಯ ಖಾತೆಯಿಂದ ವಂಚಕರು 1.48 ಲಕ್ಷ ರೂ. ವಂಚಿಸಿದ್ದಾರೆ. ಇದನ್ನೂ ಓದಿ: ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

    Representative Image 
 | Pixabay

    ಏನಿದು ಘಟನೆ?
    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನನ್ನ ಗಂಡನ ಫೋನ್‍ಗೆ ಒಂದು ಸಂದೇಶ ಬಂತು. ಏರ್‍ಟೆಲ್‍ನಿಂದ ನನಗೆ ಕರೆ ಸಹ ಬಂದ್ದಿತ್ತು. ಆಗ ನಾನು ಅವರು ಕೇಳಿದ ಎಲ್ಲ ವಿವರಗಳನ್ನು ಕೊಟ್ಟಿದ್ದು, ಕೆವೈಸಿ ಸಹ ಹೇಳಿದ್ದೇನೆ ಎಂದು ವಿವರಿಸಿದ್ದಾರೆ.

    ನಂತರ ಅವರು ನನಗೆ ಅಪ್ಲಿಕೇಶನ್‍ವೊಂದನ್ನು ಡೌನ್‍ಲೋಡ್ ಮಾಡಲು ತಿಳಿಸಿದರು. ಅದರಂತೆ ನಾನು ಸಹ ಮಾಡಿದೆ. ಬೇರೊಬ್ಬರಿಗೂ ಅಪ್ಲಿಕೇಶನ್‍ನಲ್ಲಿ ಅನುವು ಮಾಡಿಕೊಡುವಂತೆ ತಿಳಿಸಿದರು. ನಾನು ಒಪ್ಪಿಗೆ ಕೊಟ್ಟೆ. ಅವರು ಹೇಳಿದಂತೆ ನನ್ನ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿ, 10 ರೂ. ಪಾವತಿಸಬೇಕು ಎಂದರು. ನಾನು ಅದೇ ರೀತಿ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!

    ಪೊಲೀಸರು ಈ ಕುರಿತು ಪ್ರತಿಕ್ರಿಯಿಸಿದ್ದು, ನಟಿ ತನ್ನ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದ್ದು, ಅಪ್ಲಿಕೇಶನ್ ಸಹಾಯದಿಂದ ವಂಚಕರು ಎಲ್ಲ ವಿವರಗಳನ್ನು ನೋಡಿಕೊಂಡಿದ್ದಾರೆ. ನಂತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆಯಾಗಿರುವುದನ್ನು ನೋಡಿ ನಟಿ ಶಾಕ್ ಆಗಿದ್ದಾರೆ. ತಕ್ಷಣ ಆ ನಟಿ ಹತ್ತಿರದಲ್ಲಿದ್ದ ಏರ್‍ಟೆಲ್ ಶಾಪ್ ಗೆ ಭೇಟಿ ಕೊಟ್ಟಿದ್ದು, ನಟಿಗೆ ಯಾವುದೇ ಕರೆಯನ್ನು ಏರ್‍ಟೆಲ್ ಮಾಡಿಲ್ಲ ಎಂಬುದನ್ನು ತಿಳಿದುಕೊಂಡಿದ್ದಾರೆ ಎಂದು ವಿವರಿಸಿದರು.

    ನಂತರ ನಟಿ ಬ್ಯಾಂಕಿಗೂ ಹೋಗಿ ಮಾಹಿತಿ ತಿಳಿಸಿದ್ದು, 1.48 ಲಕ್ಷ ರೂ. ವರ್ಗಾವಣೆಯಾಗಿರುವುದು ಸತ್ಯ ಎಂಬುದು ತಿಳಿದುಬಂದಿದೆ. ತಕ್ಷಣ ನಟಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ತನಿಖೆ ನಡೆಯುತ್ತಿದೆ ಎಂದರು.