Tag: ಮರಾಠಾ ಸಮುದಾಯ

  • ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

    ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

    ಬೆಳಗಾವಿ: ರಾಜ್ಯದಲ್ಲಿ ಮರಾಠಾ ದೊಡ್ಡ ಪ್ರಮಾಣದಲ್ಲಿ ಇದೆ. ಹೀಗಾಗಿ ಅದನ್ನು ಪ್ರತಿನಿಧಿಸುವ ಸಲುವಾಗಿ ಸಮಾಜದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ನೀಡಬೇಕು ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಆಗ್ರಹಿಸಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇದೆ. ಆದರೆ, ಹೈಕಮಾಂಡ್ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

    ರಾಜ್ಯದಲ್ಲಿ ಮರಾಠ ದೊಡ್ಡ ಸಮುದಾಯವಿದ್ದು ಅದನ್ನ ಪ್ರತಿನಿಧಿಸುವುದಕ್ಕೆ ನಮ್ಮ ಸಮಾಜದವರಿಗೆ ಸಚಿವ ಸ್ಥಾನ ಬೇಕು ಎಂಬುವುದು ಸಮಾಜದ ಬೇಡಿಕೆ ಆಗಿದೆ. ಪಕ್ಷ ನಮ್ಮ ಸಮಾಜದ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹೀಗಾಗಿ ಸಮಾಜದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ನೀಡಬೇಕು. ಯಾರಿಗೆ ಕೊಟ್ಟರು ತೊಂದರೆ ಇಲ್ಲ. ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.

  • 8 ಲಕ್ಷಕ್ಕೂ ಹೆಚ್ಚು ಜನರಿಂದ ಮುಂಬೈನಲ್ಲಿ ಪ್ರತಿಭಟನೆ- ಟ್ರಾಫಿಕ್ ಜಾಮ್

    8 ಲಕ್ಷಕ್ಕೂ ಹೆಚ್ಚು ಜನರಿಂದ ಮುಂಬೈನಲ್ಲಿ ಪ್ರತಿಭಟನೆ- ಟ್ರಾಫಿಕ್ ಜಾಮ್

     

    ಮುಂಬೈ: ಸರ್ಕಾರಿ ಕೆಲಸದಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಮರಾಠ ಸಮುದಾಯದ 8 ಲಕ್ಷಕ್ಕೂ ಹೆಚ್ಚು ಜನ ಇಂದು ಬೆಳಿಗ್ಗೆ ಮುಂಬೈನಲ್ಲಿ ಮನ ಮೆರವಣಿಗೆ ನಡೆಸಿದ್ದಾರೆ.

    ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ಮರಾಠ ಕ್ರಾಂತಿ ಮೊರ್ಚಾದಿಂದ ಈ ಜಾಥಾ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ರೈಲು ಸಂಚಾರಕ್ಕೂ ಕೂಡ ತೊಂದರೆಯಾಗಿದೆ. ಮರಾಠ ಸಮುದಾಯದ ಯುವಕ ಯುವತಿಯರು ಹಾಗೂ ಹಿರಿಯ ನಾಗರೀಕರು ಕೇಸರಿ ಧ್ವಜಗಳನ್ನ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆಗೆ ಭದ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

    ಮುಂಬೈನ ಬಹುತೇಕ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸುವಂತೆ ಸುಚಿಸಲಾಗಿದೆ. ಅಲ್ಲದೆ ಇಲ್ಲಿನ ಅನೇಕ ಶಾಲೆಗಳನ್ನ ಇಂದು ಮುಚ್ಚಲಾಗಿದೆ. ಮುಂಬೈನಲ್ಲಿ ಕಚೇರಿಗಳಿಗೆ ಮಧ್ಯಾಹ್ನದ ಊಟದ ಡಬ್ಬಗಳನ್ನ ತಲುಪಿಸೋ ಡಬ್ಬಾವಾಲಾಗಳು ಇಂದು ತಮ್ಮ ಸೇವೆಯನ್ನ ಸ್ಥಗಿತಗೊಳಿಸಿದ್ದಾರೆ.

    ಕೃಷಿಯಿಂದ ಅಗತ್ಯ ಆದಾಯ ಬರುತ್ತಿಲ್ಲ. ಹಾಗೇ ಉದ್ಯೋಗ ಸಿಗುತ್ತಿಲ್ಲ. ಮೀಸಲಾತಿಯಿಂದ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಸಿಗುವ ಭರವಸೆ ಇರುತ್ತದೆ ಅಂತ ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆದೀ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಪ್ರತಿಭಟನೆಯನ್ನ ನಿಲ್ಲಿಸುವುದಿಲ್ಲೆ ಂಧು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

    https://twitter.com/Liberal_India1/status/895168252065796096?ref_src=twsrc%5Etfw&ref_url=http%3A%2F%2Fzeenews.india.com%2Fmumbai%2Fmaratha-kranti-morcha-delegation-arrives-at-vidhan-bhavan-to-meet-maharashtra-cm-2031383.html