Tag: ಮರಳುದಂಧೆ

  • ಸ್ವಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್‌ಗೆ ಗ್ರಾಮಸ್ಥರಿಂದ ಕ್ಲಾಸ್

    ಸ್ವಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್‌ಗೆ ಗ್ರಾಮಸ್ಥರಿಂದ ಕ್ಲಾಸ್

    ಕಲಬುರಗಿ: ಸ್ವ ಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್ (Ajay Singh) ಅವರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಕಲಬುರಗಿಯ (Kalaburagi) ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಧರಮ್ ಸಿಂಗ್ (N.Dharam Singh) ಪುತ್ರ ಶಾಸಕ ಅಜಯ್ ಸಿಂಗ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಲೋಗಿ (Nelogi) ಗ್ರಾಮದ ದಡದಲ್ಲಿರುವ ಭೀಮಾ ನದಿಯಲ್ಲಿ (Bhima River) ಅಕ್ರಮ ಮರಳು ದಂಧೆ (Sand trade) ನಡೆಯುತ್ತಿದ್ದು, ಮರಳುಗಾರಿಕೆ ತಡೆಯುವಂತೆ ರಸ್ತೆಗೆ ಕಲ್ಲು ಅಡ್ಡ ಹಾಕಿ, ಶಾಸಕರ ಕಾರು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ

    ಅಕ್ರಮ ಮರಳುಗಾರಿಕೆ ದಂಧೆಯಿಂದ ರೋಸಿ ಹೋದ ಜನ, ನಮಗೆ ಮನೆಕಟ್ಟಲು ಮರಳು ಕೊಡುತ್ತಿಲ್ಲ. ಬೇರೆಯವರು ಬಂದು ಇಲ್ಲಿ ಮರಳು ದಂಧೆ ಮಾಡುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಅಕ್ರಮ ಮರಳುಗಾರಿಕೆ ತಡೆಯಲು ಎಸ್‌ಪಿಗೆ ತಿಳಿಸಲಾಗಿದೆ ಎಂದು ಶಾಸಕ ಅಜಯ್ ಸಿಂಗ್ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 50 ಟಿಕೆಟ್ ಹೊಸಬರಿಗೆ ಫಿಕ್ಸ್?

  • ಮರಳಿಗೆ ಸರ್ಕಾರಿ ಬೆಲೆ 4 ಸಾವಿರದ 800- ದಂಧೆಕೋರರು ಪಡೆಯೋದು 14 ಸಾವಿರ

    ಮರಳಿಗೆ ಸರ್ಕಾರಿ ಬೆಲೆ 4 ಸಾವಿರದ 800- ದಂಧೆಕೋರರು ಪಡೆಯೋದು 14 ಸಾವಿರ

    – ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಕೋರರು ಆಡಿದ್ದೇ ಆಟ, ಅಧಿಕಾರಿಗಳು ಮಾಡಿದ್ದೇ ಕಾರುಬಾರು ಎನ್ನುವ ಪರಿಸ್ಥಿತಿ ಎದುರಾಗಿದೆ.

    ಬಾದಾಮಿ ಜನರು ಸಿದ್ದರಾಮಯ್ಯ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಈಗ ಹುಸಿಯಾಗುತ್ತಿದೆ. ಯಾಕೆಂದರೆ ಓರ್ವ ಮಾಜಿ ಸಿಎಂ ಈ ಕ್ಷೇತ್ರದ ಶಾಸಕರಾದರೂ ಕ್ಷೇತ್ರದಲ್ಲಿನ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಬಾದಾಮಿ ತಾಲೂಕಿನ ಜಾಲಿಹಾಳ, ಚೊಳಚಗುಡ್ಡ, ನಾಗರಾಳ, ಸುಳ್ಳ, ಹೆಬ್ಬಳ್ಳಿ, ಕಿತ್ತಳಿ ಸೇರಿದಂತೆ 11 ಖಾಸಗಿ ಜಾಗದಲ್ಲಿ ಲೀಸ್ ಮೇಲೆ ಸರ್ಕಾರಿ ಬೆಲೆ ಮೂಲಕ ಮರಳು ಮಾರಾಟ ನಡೆಯುತ್ತಿದೆ. 10 ಟನ್ ಮರಳಿಗೆ 4 ಸಾವಿರ 800 ರೂಪಾಯಿ ಸರ್ಕಾರಿ ಬೆಲೆ ಇದೆ. ಆದರೆ ಲೀಸ್‍ದಾರರು 14 ಸಾವಿರ ಹಣ ಪಡೆಯುತ್ತಿದ್ದಾರೆ. ಲೀಸ್‍ದಾರರ ಜೊತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

    ಬಾದಾಮಿ ಕ್ಷೇತ್ರದ ಹನ್ನೊಂದು ಮರಳು ಬ್ಲಾಕ್‍ನಲ್ಲಿ ಅಲ್ಲಿನ ಲೀಸ್‍ದಾರರೆ ಯಜಮಾನರಾಗಿದ್ದಾರೆ. ಟಿಪ್ಪರ್ ಮಾಲೀಕರಿಗೆ ನೀಡಿದ ಮರಳಿಗೆ ಇಲ್ಲಿ ಯಾವುದೇ ಬಿಲ್‍ನ್ನು ನೀಡಲ್ಲ. ಟಿಪ್ಪರ್ ಮಾಲೀಕರು ವಾಹನ ಬಾಡಿಗೆ ಡ್ರೈವರ್ ಖರ್ಚು ಸೇರಿ ಜನರಿಗೆ 17 ಸಾವಿರಕ್ಕೆ ಮರಳನ್ನು ತಲುಪಿಸುತ್ತಿದ್ದಾರೆ. ಜೊತೆಗೆ ಮರಳಿಗಾಗಿ ಮಲಪ್ರಭಾ ನದಿಯನ್ನು ಕೂಡ ಬಗೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಬೇರೆನೇ ಕಾರಣಗಳನ್ನು ಹೇಳುತ್ತಿದ್ದಾರೆ.

    ಮಾಜಿ ಸಿಎಂ ಕ್ಷೇತ್ರದಲ್ಲಿ ಸಕ್ರಮವಾಗಿ ನಡೆಯಬೇಕಿದ್ದ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಸಿದ್ದರಾಮಯ್ಯನವರು ಇತ್ತ ಗಮನಹರಿಸಿ ಈ ಮರಳು ದಂಧೆಗೆ ಕಡಿವಾಣ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಮಶಾನವನ್ನೂ ಬಿಡದ ಮರಳುದಂಧೆಕೋರರು- ಅರೆಬರೆ ಕೊಳೆತ ಶವ, ಅಸ್ಥಿಪಂಜರ ಬೇರ್ಪಡಿಸಿ ಮರಳು ಲೂಟಿ

    ಸ್ಮಶಾನವನ್ನೂ ಬಿಡದ ಮರಳುದಂಧೆಕೋರರು- ಅರೆಬರೆ ಕೊಳೆತ ಶವ, ಅಸ್ಥಿಪಂಜರ ಬೇರ್ಪಡಿಸಿ ಮರಳು ಲೂಟಿ

    ಚಿತ್ರದುರ್ಗ: ಮರಳು ದಂಧೆಕೋರರಿಗೆ ಮರಳು ಯಾವ ಜಾಗದಾದ್ರೂ ಬರವಾಗಿಲ್ಲಾ. ಕೈ ತುಂಬಾ ಗರಿ ಗರಿ ನೋಟು ಸಿಕ್ಕರೆ ಸಾಕು. ಸ್ಮಶಾನದಲ್ಲಿ ಸಿಗೋ ಉತ್ಕೃಷ್ಠ ಮರಳಿಗಾಗಿ ಅರೆಬರೆ ಕೊಳೆತ ಶವ, ಅಸ್ಥಿಪಂಜರಗಳನ್ನೂ ಬೇರ್ಪಡಿಸಿ ರಾಜಾರೋಷವಾಗಿ ಮರಳು ಲೂಟಿ ಮಾಡ್ತಾರೆ.

    ಚಿತ್ರದುರ್ಗದ ಪರಶುರಾಂಪುರ ಗ್ರಾಮದ ಹೊರವಲಯದಲ್ಲಿರುವ ಸ್ಮಶಾನದಲ್ಲಿ ಮರಳು ಕುಳಗಳು ಸಮಾಧಿ ಅಂತಾನೂ ನೋಡದೇ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸ್ತಿದ್ದಾರೆ. ಪರಿಣಾಮ ಹೂತು ಹಾಕಿದ ಹೆಣಗಳ ಕೈ ಕಾಲು ಮೂಳೆ, ತಲೆಬುರುಡೆ ಮೇಲೆದ್ದು ಬರ್ತಿದೆ. ಶವಸಂಸ್ಕಾರ ಮಾಡಿ ಕೆಲವೇ ದಿನವೇ ಆದ ಶವದ ಕೆಲ ಭಾಗಗಳು ಕಾಗೆ, ತೋಳಗಳಿಗೆ ಆಹಾರವಾಗ್ತಿದೆ.

    ಸ್ಮಶಾನದ ಬಳಿ ರಸ್ತೆ ಇರುವುದಿಂದ ಜನ ನಿತ್ಯ ಓಡಾಡ್ತಾರೆ. ಈ ವೇಳೆ ಅಲ್ಲಲ್ಲಿ ಬಿದ್ದಿರೋ ಮೂಳೆ, ಅಸ್ಥಿಪಂಜರ ನೋಡಿ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಅನ್ನದ ಮರಳು ಧಂದೆಕೋರರು ಎಗ್ಗಿಲ್ಲದೇ ಅಕ್ರಮ ಮರಳುಗಾರಿಗೆ ನಡೆಸ್ತಿದ್ದಾರೆ. ಗ್ರಾಮದ ಬೇರೆ ಕಡೆ ಪ್ರತ್ಯೇಕ ರುದ್ರಭೂಮಿ ನಿರ್ಮಿಸಲಾಗಿದೆ. ಆದ್ರೆ ಅಲ್ಲಿನ ನೆಲ ಗಟ್ಟಿ ಅನ್ನೋ ಕಾರಣಕ್ಕೆ ನದಿ ಮರಳಲ್ಲೇ ಶವ ಹೂಳ್ತಿದ್ದಾರೆ. ಇದಕ್ಕೆ ಸ್ಥಳೀಯ ಪಂಚಾಯತ್ ಕಡಿವಾಣ ಹಾಕಬೇಕಿದೆ.

    ಒಟ್ಟಿನಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು. ಇಲ್ಲವೆಂದಲ್ಲಿ ಬೇರೆಡೆ ಶವ ಹೂಳುವ ವ್ಯವಸ್ಥೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.