Tag: ಮರದ ಪೆಟ್ಟಿಗೆ

  • ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ ಶವವಾಗಿ ಪತ್ತೆ

    – ಕಣ್ಣಾಮುಚ್ಚಾಲೆ ಆಡುತ್ತಾ ಸಿಲುಕಿಕೊಂಡಿರೋ ಶಂಕೆ

    ನವದೆಹಲಿ: ಇಬ್ಬರು ಮಕ್ಕಳು (Children) ನಾಪತ್ತೆಯಾದ ಕೆಲವೇ ಗಂಟೆಗಳ ಬಳಿಕ ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ (Wooden Box) ಶವವಾಗಿ ಪತ್ತೆಯಾದ ಘಟನೆ ದೆಹಲಿಯ (Delhi) ಜಾಮಿಯಾ ನಗರ (Jamia Nagar) ಪ್ರದೇಶದಲ್ಲಿ ನಡೆದಿದೆ.

    ನೀರಜ್ (8) ಮತ್ತು ಆರತಿ (6) ಶವವಾಗಿ ಪತ್ತೆಯಾಗಿರುವ ಮಕ್ಕಳು. ಇಬ್ಬರೂ ಸಹೋದರ – ಸಹೋದರಿಯಾಗಿದ್ದು, ಅದೇ ಮನೆಯಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಮ್ಮ ತಂದೆ ಬಲ್ಬೀರ್ ಅವರೊಂದಿಗೆ ವಾಸಿಸುತ್ತಿದ್ದರು. ಮಕ್ಕಳಿಬ್ಬರೂ ಆಟವಾಡುತ್ತಾ ಪೆಟ್ಟಿಗೆಯೊಳಗೆ ಸೇರಿಕೊಂಡು ಬಳಿಕ ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.

    ಮಂಗಳವಾರ ಮಧ್ಯಾಹ್ನ ಮಕ್ಕಳು ತಮ್ಮ ಪೋಷಕರೊಂದಿಗೆ ಸುಮಾರು 3 ಗಂಟೆ ವೇಳಗೆ ಊಟ ಮುಗಿಸಿದ್ದು, 3:30ರ ವೇಳೆಗೆ ನಾಪತ್ತೆಯಾಗಿದ್ದಾರೆ. ಸ್ಥಳೀಯರು ಹಾಗೂ ಇತರ ಮಕ್ಕಳು ಅವರಿಬ್ಬರನ್ನೂ ಹುಡುಕಿದಾಗ ಮನೆಯಲ್ಲಿ ಇದ್ದ ಮರದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ

    ಮಕ್ಕಳ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಮರದ ಪೆಟ್ಟಿಗೆಯೊಳಗೆ ಸಿಲುಕಿಕೊಂಡು ಬಳಿಕ ಉಸಿರುಕಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಜಾಮಿಯಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇದನ್ನೂ ಓದಿ: ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

  • ರಹಸ್ಯ ಬಯಲಾಗುತ್ತೆಂದು ಬಾಕ್ಸ್‌ನಲ್ಲಿ ಯುವಕ ಲಾಕ್ – ಖುಷಿಯಲ್ಲಿ ಮರೆತು ಮಲಗಿದ್ಳು

    ರಹಸ್ಯ ಬಯಲಾಗುತ್ತೆಂದು ಬಾಕ್ಸ್‌ನಲ್ಲಿ ಯುವಕ ಲಾಕ್ – ಖುಷಿಯಲ್ಲಿ ಮರೆತು ಮಲಗಿದ್ಳು

    – ಸಂಬಂಧಿ ಸೋದರನೊಂದಿಗೆ ಮಹಿಳೆ ಸಂಬಂಧ
    – ಉಸಿರುಗಟ್ಟಿ ಯುವಕ ಸಾವು

    ಇಸ್ಲಾಮಾಬಾದ್: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ನಡೆದಿದೆ.

    ಅಹ್ಮದ್ (22) ಮೃತ ಯುವಕ. ಈತ ತನ್ನ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಆದರೆ ಮನೆಯವರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಮರದ ಬಾಕ್ಸ್‌ನಲ್ಲಿ ಅವಿತು ಕುಳಿತಿದ್ದನು. ಇದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

    ಏನಿದು ಪ್ರಕರಣ?
    ಬೀಬಿ ಕೆಲವು ವರ್ಷಗಳ ಹಿಂದೆ ಪಂಜಾಬ್ ಪ್ರದೇಶದ ಹುಡುಗನೊಂದಿಗೆ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಉದ್ಯೋಗಕ್ಕಾಗಿ ವಿದೇಶದಲ್ಲಿದ್ದನು. ಬೇಬಿ ಮತ್ತು ಮಕ್ಕಳು ಪತಿಯ ಮನೆಯಲ್ಲಿದ್ದರು. ಅಹ್ಮದ್ ಮತ್ತು ಬೇಬಿ ಸಂಬಂಧಿಕರಾಗಿದ್ದು, ಸಂಬಂಧದಲ್ಲಿ ಸಹೋದರಿ-ಸಹೋದರ ಆಗಿದ್ದರು. ದಿನ ಕಳೆದಂತೆ ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು.

    ಬೇಬಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಳು. ಹೀಗಾಗಿ ಇವರಿಬ್ಬರು ಭೇಟಿ ಮಾಡಲು ತುಂಬಾ ಕಷ್ಟವಾಗುತ್ತಿತ್ತು. ಅದಕ್ಕಾಗಿ ಮನೆಯಲ್ಲಿ ಎಲ್ಲರೂ ನಿದ್ದೆ ಮಾಡಿದ ನಂತರ ಅಹ್ಮದ್, ಬೇಬಿಯ ರೂಮಿಗೆ ಬಂದು ಅನೈತಿಕ ಸಂಬಂಧ ಹೊಂದುತ್ತಿದ್ದನು. ಪ್ರತಿದಿನ ಇದೇ ರೀತಿ ಇವರಿಬ್ಬರು ಸಂಬಂಧ ಹೊಂದುತ್ತಿದ್ದರು.

    ಒಂದು ದಿನ ಬೇಬಿಯ ರೂಮಿನಲ್ಲಿ ಏನೋ ಶಬ್ದ ಕೇಳಿಬಂದಿದೆ. ಈ ವೇಳೆ ಅಹ್ಮದ್ ಮತ್ತು ಬೇಬಿ ರೂಮಿನಲ್ಲಿದ್ದರು. ತಕ್ಷಣ ಕುಟುಂಬದ ಎಲ್ಲ ಸದಸ್ಯರು ಎಚ್ಚರಗೊಂಡು ಮನೆಯೆಲ್ಲಾ ಹುಡುಕಾಡಲು ಶುರು ಮಾಡಿದ್ದಾರೆ. ಆಗ ಬೇಬಿ ತನ್ನ ಅನೈತಿಕ ಸಂಬಂಧ ಮನೆಯವರ ಮುಂದೆ ಬಹಿರಂಗವಾಗುತ್ತದೆ ಎಂಬ ಭಯದಿಂದ ಗೆಳೆಯ ಅಹ್ಮದ್‍ನನ್ನು ಮರದ ಪೆಟ್ಟಿಗೆಯಲ್ಲಿ ಅಡಗಿಸಿದ್ದಾಳೆ. ಬೇಬಿ ರೂಮಿನಲ್ಲೂ ಹುಡುಕಾಟ ಮಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಬೇಬಿ ತನ್ನ ಅನೈತಿಕ ಸಂಬಂಧದ ಬಗ್ಗೆ ಯಾರಿಗೂ ಗೊತ್ತಾಗಿಲ್ಲ ಎಂಬ ಖುಷಿಯಲ್ಲಿ ಅಹ್ಮದ್‍ನ ಬಾಕ್ಸ್‌ನಲ್ಲಿ ಲಾಕ್ ಮಾಡಿರುವುದನ್ನು ಮರೆತು ಮಲಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆದರೆ ಆ ಮರದ ಬಾಕ್ಸ್‌ನಲ್ಲಿ ಒಂದು ಸಣ್ಣ ರಂಧ್ರವೂ ಇರಲಿಲ್ಲ. ಹೀಗಾಗಿ ಅಹ್ಮದ್‍ಗೆ ಉಸಿರಾಟಕ್ಕೆ ತೊಂದರೆಯಾಗಿದೆ. ಆಗ ಅಹ್ಮದ್ ಕಿರುಚಿಕೊಂಡಿದ್ದಾನೆ. ಆದರೆ ಆ ಶಬ್ದ ಬೇಬಿಗೆ ಕೇಳಿಸಲಿಲ್ಲ. ಕೊನೆಗೆ ಉಸಿರುಗಟ್ಟಿ ಅಹ್ಮದ್ ಬಾಕ್ಸ್‌ನಲ್ಲಿಯೇ ಮೃತಪಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ಬೇಬಿ ತಕ್ಷಣ ಬಾಕ್ಸ್‌ನಲ್ಲಿ ಅಹ್ಮದ್‍ನ ಲಾಕ್ ಮಾಡಿರುವ ಬಗ್ಗೆ ನೆನಪಾಗಿದೆ. ಓಡಿ ಹೋಗಿ ಬಾಕ್ಸ್ ಓಪನ್ ಮಾಡಿದ್ದಾಳೆ. ಅಷ್ಟರಲ್ಲಿ ಅಹ್ಮದ್ ಸಾವನ್ನಪ್ಪಿದ್ದನು.

    ಸದ್ಯಕ್ಕೆ ಈ ಕುರಿತು ಮಾಹಿತಿ ತಿಳಿದು ಪಂಜಾಬ್ ಪ್ರದೇಶದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.