Tag: ಮರಣದಂಡನೆ

  • ಪತ್ನಿ, ಸ್ವಂತ ಮಕ್ಕಳು ಸೇರಿ ಐವರನ್ನ ಕೊಂದಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ

    ಪತ್ನಿ, ಸ್ವಂತ ಮಕ್ಕಳು ಸೇರಿ ಐವರನ್ನ ಕೊಂದಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ

    ಬಳ್ಳಾರಿ: ಹೆಂಡತಿಯ ಶೀಲ ಶಂಕಿಸಿ ಐವರನ್ನು ಕೊಚ್ಚಿ ಕೊಲೆ ಮಾಡಿದ್ದ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಧಾರವಾಡ ಹೈಕೋರ್ಟ್‌ (Dharwad High Court) ಆದೇಶ ಹೊರಡಿಸಿದೆ.

    ಗಣಿ ನಾಡು ಬಳ್ಳಾರಿ (Bellari) ಜಿಲ್ಲೆ ಕಂಪ್ಲಿ ತಾಲ್ಲೂಕಿನ ಚಪ್ಪರದಳ್ಳಿ ನಿವಾಸಿ ವಡ್ಡರ ತಿಪ್ಪಯ್ಯಾ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಬಳ್ಳಾರಿ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಮರಣದಂಡನೆ ಶಿಕ್ಷೆ ಆದೇಶವನ್ನು ಧಾರವಾಡ ಹೈಕೋರ್ಟ್‌ ಈಗ ಎತ್ತಿ ಹಿಡಿದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು

    ಪ್ರಕರಣ ಏನು?
    2017ರ ಫೆಬ್ರವರಿ 25 ರಂದು ಕೊಲೆ ನಡೆದಿತ್ತು. ಪತ್ನಿಯ ಶೀಲ ಶಂಕಿಸಿ ಪತ್ನಿ, ಆಕೆಯ ತಂಗಿ, ಹೆತ್ತ ಮೂರು ಮಕ್ಕಳು ಸೇರಿ ಒಟ್ಟು ಐವರನ್ನ ತಿಪ್ಪಯ್ಯ‌ ಕೊಲೆ ಮಾಡಿದ್ದ. ಪತ್ನಿ ಪಕ್ಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9), ರಾಜಪ್ಪ (8), ಪವಿತ್ರ (6) ಹತ್ಯೆಯಾಗಿದ್ದ ದುರ್ದೈವಿಗಳು. ಈ ಸಂಬಂಧ ಕಂಪ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ್ದ, ನ್ಯಾಯಾಲಯವು ತಿಪ್ಪಯ್ಯನಿಗೆ 2019ರ ಡಿಸೆಂಬರ್ 3ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಿದ್ದ ತಿಪ್ಪಯ್ಯ, ಧಾರವಾಡ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯವು ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ. ಕೆಳ ನ್ಯಾಯಾಲಯ ನೀಡಿದ ಆದೇಶದಂತೆ ಮರಣದಂಡನೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್‌ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ

  • ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್

    ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್

    ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು (Terror Funding Case) ನೀಡಿದ್ದ ಪ್ರಕರಣದಲ್ಲಿ ಮರಣದಂಡನೆ (Death Penalty) ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮಾಡಿದ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ (Delhi High Court) ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‍ಗೆ (Yasin Malik) ಸೋಮವಾರ ನೋಟಿಸ್ ಜಾರಿ ಮಾಡಿದೆ.

    ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರ ಪೀಠವು ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಲಿಕ್‍ನನ್ನು ಆಗಸ್ಟ್ 9ರ ಒಳಗಾಗಿ ಕೋರ್ಟ್‍ಗೆ ಹಾಜರುಪಡಿಸುವಂತೆ ಆದೇಶದಲ್ಲಿ ತಿಳಿಸಿದೆ. ಎನ್‍ಐಎ (NIA) ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಯು ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅಲ್ಲದೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಪರಾಧಿಗೆ ಮರಣದಂಡನೆ ನೀಡಬೇಕು ಎಂದು ವಾದಿಸಿದರು. ಇದನ್ನೂ ಓದಿ: ಹುಟ್ಟಿನಿಂದ ಸ್ತ್ರೀ, ಬಳಿಕ ಪುರುಷ- ದಾಖಲೆಯಲ್ಲಿ ಲಿಂಗ ಬದಲಾವಣೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?

    ಯಾಸಿನ್ ಮಲಿಕ್ ಅಪರಾಧ ಒಪ್ಪಿಕೊಂಡ ಕಾರಣಕ್ಕೆ ಐಪಿಸಿ ಸೆಕ್ಷನ್ 121ರ ಅಡಿಯಲ್ಲಿ (121 IPC) ಮರಣ ದಂಡನೆಯ ಬದಲಾಗಿ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಲಾಗಿದೆ ಎಂದು ಕೋರ್ಟ್ ಉಲ್ಲೇಖಿಸಿದೆ. 2022ರ ಮೇ 24 ರಂದು ನ್ಯಾಯಾಲಯವು ಮಲಿಕ್‍ಗೆ ದೇಶದ್ರೋಹ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.

    ಮರಣದಂಡನೆ ನೀಡುವಂತೆ ಎನ್‍ಐಎ ಹೈಕೋರ್ಟ್‍ಗೆ ಸಲ್ಲಿಸಿದ ಮನವಿಯಲ್ಲಿ, ಉಗ್ರರಿಗೆ ತಪ್ಪೊಪ್ಪಿಕೊಂಡ ಕಾರಣಕ್ಕೆ ಮರಣದಂಡನೆಯನ್ನು ನೀಡದಿದ್ದರೆ ಅದರಿಂದ ತಪ್ಪಿಸಿಕೊಳ್ಳಲು ದಾರಿಯಾಗುತ್ತದೆ ಎಂದು ಉಲ್ಲೇಖಿಸಿತ್ತು. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ

  • 1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

    1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

    ಸಿಂಗಾಪುರ: ಸುಮಾರು 1 ಕೆಜಿ ತೂಕದಷ್ಟು ಗಾಂಜಾವನ್ನು ಕಳ್ಳಸಾಗಣೆ (Cannabis Smuggling) ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯನ್ನು (Indian) ಸಿಂಗಾಪುರ (Singapore) ಗಲ್ಲಿಗೇರಿಸಿದೆ.

    ಅಂತಾರಾಷ್ಟ್ರೀಯ ಮಟ್ಟದ ವಿರೋಧದ ನಡುವೆಯೂ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು (46) ಸಿಂಗಾಪುರದ ಚಾಂಗಿ ಜೈಲು ಸಂಕೀರ್ಣದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ (Hanging) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2017 ರಲ್ಲಿ ತಂಗರಾಜು 1,017.9 ಗ್ರಾಂ. ಗಾಂಜಾವನ್ನು ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ತೊಡಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ. ಸಿಂಗಾಪುರದ ಕಾನೂನಿನ ಪ್ರಕಾರ ಗಲ್ಲುಶಿಕ್ಷೆಗೆ ಗುರಿಪಡಿಸಲು ಇರುವ ಪ್ರಮಾಣದ 2 ಪಟ್ಟು ಮಾದಕ ವಸ್ತು ಆತನ ಬಳಿ ಸಿಕ್ಕಿತ್ತು. 2018ರಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಮೇಲ್ಮನವಿ ನ್ಯಾಯಾಲಯ ಕೂಡಾ ಬಳಿಕ ಎತ್ತಿ ಹಿಡಿದಿತ್ತು.

    ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ತಂಗರಾಜುವಿನ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಸಿಂಗಾಪುರ ಸರ್ಕಾರವನ್ನು ಒತ್ತಾಯಿಸಿವೆ. ಆದರೆ ಇವಾವುದಕ್ಕೂ ಕಿವಿಗೊಡದ ಅಲ್ಲಿನ ಸರ್ಕಾರ ತಂಗರಾಜುನನ್ನು ಗಲ್ಲಿಗೇರಿಸಿದೆ. ಇದನ್ನೂ ಓದಿ: 40 ಮಹಿಳೆಯರಿಗೆ ಒಬ್ನೇ ಪತಿ

    ತಂಗರಾಜುನನ್ನು ಬಂಧಿಸಲಾದ ಸಂದರ್ಭ ಆತನ ಬಳಿ ಎಲ್ಲಿಯೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಅಮಾಯಕ ವ್ಯಕ್ತಿಯನ್ನು ವಿನಾಕಾರಣ ಕೊಲ್ಲಲಾಗುತ್ತಿದೆ ಎಂದು ಜಿನೀವಾ ಮೂಲದ ಮಾದಕ ವಸ್ತು ನೀತಿಗಳ ಜಾಗತಿಕ ಆಯೋಗದ ಸದಸ್ಯ ರಿಚರ್ಡ್ ಬ್ರಾನ್ಸರ್ ಅವರು ತಮ್ಮ ಬ್ಲಾಗ್‌ನಲ್ಲಿ ಸೋಮವಾರ ಬರೆದಿದ್ದರು. ಆದರೆ ತಂಗರಾಜುವಿನ ತಪ್ಪನ್ನು ಸಮಂಜಸವಾದ ಅನುಮಾನದಾಚೆಗೂ ಸಾಬೀತುಪಡಿಸಲಾಗಿದೆ ಎಂದು ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.

    ಜಗತ್ತಿನ ಅತ್ಯಂತ ಕಠಿಣ ಮಾದಕವಸ್ತು ವಿರೋಧಿ ಕಾನೂನುಗಳಿರುವ ದೇಶಗಳಲ್ಲಿ ಸಿಂಗಾಪುರ ಒಂದಾಗಿದೆ. ಅಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಮರಣ ದಂಡನೆ ಶಿಕ್ಷೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದರೆ ಸಿಂಗಾಪುರದ ವಾದವನ್ನು ವಿಶ್ವಸಂಸ್ಥೆಗಳ ಮಾನವ ಹಕ್ಕುಗಳ ಹೈ ಕಮಿಷನ್ ಖಂಡಿಸಿದೆ.

    ಕಳೆದ 6 ತಿಂಗಳಲ್ಲಿ ಸಿಂಗಾಪುರದಲ್ಲಿ ಜಾರಿಗೊಳಿಸಲಾದ ಮೊದಲ ಮರಣದಂಡನೆ ತಂಗರಾಜುವಿನದ್ದಾಗಿದೆ. 2 ವರ್ಷಗಳ ಅಂತರದ ಬಳಿಕ 2022ರ ಮಾರ್ಚ್‌ನಲ್ಲಿ ಸಿಂಗಾಪುರ ಮರಣದಂಡನೆ ಶಿಕ್ಷೆಯನ್ನು ಮತ್ತೆ ಆರಂಭಿಸಿತು. ಅದರಲ್ಲಿ ಇದು 12ನೇ ಶಿಕ್ಷೆಯಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂದ್ರೆ ಗೂಂಡಾ ರಾಜ್ಯ ಅನ್ನೋ ವಾತಾವರಣವಿತ್ತು – ಸುಮಲತಾ

  • ತಾಯಿಯ ಶಿರಚ್ಛೇದ ಮಾಡಿದ್ದ ಮಗನಿಗೆ ಮರಣದಂಡನೆ ವಿಧಿಸಿದ ಕೋರ್ಟ್

    ತಾಯಿಯ ಶಿರಚ್ಛೇದ ಮಾಡಿದ್ದ ಮಗನಿಗೆ ಮರಣದಂಡನೆ ವಿಧಿಸಿದ ಕೋರ್ಟ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಮ್‍ಪುರ (Udhampur) ಜಿಲ್ಲೆಯಲ್ಲಿ 2014 ರಲ್ಲಿ ತನ್ನ ತಾಯಿಯ ಶಿರಚ್ಛೇದ ಮಾಡಿದ್ದ 45 ವರ್ಷದ ಅಪರಾಧಿಗೆ ಸ್ಥಳೀಯ ನ್ಯಾಯಾಲಯ (Court) ಮರಣದಂಡನೆ (Death penalty) ವಿಧಿಸಿ ಶನಿವಾರ ತೀರ್ಪು (Judgement) ಪ್ರಕಟಿಸಿದೆ.

    ಅಪರಾಧಿಯು ವೃದ್ಧ ತಾಯಿಯ ಕುತ್ತಿಗೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದ. ನಂತರ ಅತ್ಯಂತ ಅಮಾನವೀಯ ಮತ್ತು ಬರ್ಬರವಾಗಿ ಆಕೆಯ ತಲೆಯನ್ನು ಕೊಡಲಿಯಿಂದ ಕಡಿದು ಕೊಲೆ (Murder) ಮಾಡಿದ್ದ. ಈ ಕೃತ್ಯವನ್ನು ಅಪರಾಧಿ ಸಂಚು ರೂಪಿಸಿ ಎಸಗಿದ್ದ ಎಂದು ಉಧಮ್‍ಪುರದ ಪ್ರಧಾನ ಸೆಷನ್ಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಹಳೆ ದ್ವೇಷ – ಮಡಿಕೇರಿಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ

    ರಾಮನಗರದ ನಿವಾಸಿ ಜೀತ್ ಸಿಂಗ್ ಅಪರಾಧಿಯಾಗಿದ್ದು, ತಾಯಿಯೊಂದಿಗೆ ಜಮೀನು ನೀಡುವಂತೆ ಆಗಾಗ ಗಲಾಟೆ ಮಾಡುತ್ತಿದ್ದ. ಇನ್ನೊಬ್ಬ ಮಗ ಮುಲಾಖ್ ರಾಜ್‍ನೊಂದಿಗೆ ವಾಸಿಸುವಂತೆ ಒತ್ತಾಯಿಸುತ್ತಿದ್ದ. 2014ರ ಡಿಸೆಂಬರ್ 7ರಂದು ತಾಯಿ ವೈಷ್ಣೋದೇವಿಯನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದ. ಪತ್ನಿ ಸಂತೋಷ್ ದೇವಿ ಅತ್ತೆಯನ್ನು ರಕ್ಷಿಸಲು ಮುಂದಾದಾಗ ಅವರನ್ನೂ ಕೊಲೆ ಮಾಡಲು ಯತ್ನಿಸಿದ್ದ.

    ಆ ವೇಳೆ ಪತ್ನಿ ತಪ್ಪಿಸಿಕೊಳ್ಳದೆ ಅಲ್ಲೇ ಉಳಿದುಕೊಂಡಿದ್ದರೆ ಅವನು ಖಂಡಿತವಾಗಿಯೂ ತನ್ನ ಹೆಂಡತಿಯನ್ನೂ ಕೊಲ್ಲುತ್ತಿದ್ದ ಎಂದು ನ್ಯಾಯಾಧೀಶ ಹಕ್ ನವಾಜ್ ಜರ್ಗರ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

  • ಅತ್ಯಾಚಾರಗೈದು ಬಾಲಕಿಯ ಕೊಲೆ- ಕಾಮುಕನಿಗೆ ಗಲ್ಲುಶಿಕ್ಷೆ

    ಅತ್ಯಾಚಾರಗೈದು ಬಾಲಕಿಯ ಕೊಲೆ- ಕಾಮುಕನಿಗೆ ಗಲ್ಲುಶಿಕ್ಷೆ

    ಲಕ್ನೋ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣದ (Rape And Murder) ಅಪರಾಧಿಗೆ ವಿಶೇಷ ನ್ಯಾಯಾಲಯ (Court) ಮರಣದಂಡನೆ (Death Sentence) ವಿಧಿಸಿದೆ.

    ವ್ಯಕ್ತಿಯು 9 ವರ್ಷದ ಬಾಲಕಿಯ (Minor Girl) ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ.

    ಗಾಜಿಯಾಬಾದ್ ಪೋಕ್ಸೋ ನ್ಯಾಯಾಲಯವು ( Ghaziabad POCSO Court) ಶಿಕ್ಷೆಯನ್ನು ಪ್ರಕಟಿಸಿದೆ. ಘಟನೆ ನಡೆದ ಸುಮಾರು 6 ತಿಂಗಳ ನಂತರ ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ ಸೆಕ್ಷನ್ 302 (ಮರಣದಂಡನೆ), 363 (ಅಪಹರಣ) ಮತ್ತು 376 (ಅತ್ಯಾಚಾರ) ರ ಅಡಿಯಲ್ಲಿ ಶಿಕ್ಷೆ ವಿಧಿಸಿದೆ ಎಂದು ಗಾಜಿಯಾಬಾದ್ ಗ್ರಾಮಂತರದ ಡಿಸಿಪಿ ರವಿ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: 20 ವರ್ಷದ ಯುವಕನನ್ನು 100ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಂದು ಪೊದೆಗೆ ಎಸೆದ!

    2022ರ ಆ. 18ರಂದು ಮೋದಿನಗರ ಪ್ರದೇಶದ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿಯು ಶವವಾಗಿ ಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಅದೇ ಗ್ರಾಮದ ವ್ಯಕ್ತಿಯನ್ನು ಬಂಧಿಸಿದ್ದರು. ಇದನ್ನೂ ಓದಿ: 8 ವರ್ಷದ ಮಗ, ಪತ್ನಿಯನ್ನು ಹತ್ಯೆಗೈದು, ತಾನು ಆತ್ಮಹತ್ಯೆಗೆ ಶರಣಾದ ಟೆಕ್ಕಿ

  • ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

    ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

    ರಿಯಾದ್: ಕಳೆದ 10 ದಿನಗಳಲ್ಲಿ ಮಾದಕವಸ್ತು ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ (Saudi Arabia) 12 ಜನರನ್ನು ಗಲ್ಲಿಗೇರಿಸಿದೆ. ಇವುಗಳಲ್ಲಿ ಕೆಲವು ಅಪರಾಧಿಗಳನ್ನು ಕತ್ತಿಯಿಂದ ಶಿರಚ್ಛೇದ (Beheading) ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.

    ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಜೈಲಿನಲ್ಲಿದ್ದ 12 ಜನರಿಗೆ ಮರಣದಂಡನೆ (Death Penalty) ವಿಧಿಸಲಾಗಿದೆ. ಅದರಲ್ಲಿ ಮೂವರು ಪಾಕಿಸ್ತಾನಿಗಳು, 4 ಸಿರಿಯನ್ನರು, ಇಬ್ಬರು ಜೋರ್ಡಾನ್ ಮೂಲದವರು ಹಾಗೂ ಮೂವರು ಸೌದಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

    ಈ ವರ್ಷ ಮಾರ್ಚ್‌ನಲ್ಲಿ ಸೌದಿ ಅರೇಬಿಯಾದ ಆಧುನಿಕ ಇತಿಹಾಸದಲ್ಲೇ ಅತಿ ದೊಡ್ಡ ಸಾಮೂಹಿಕ ಮರಣದಂಡನೆ ನೀಡಲಾಗಿತ್ತು. ಹತ್ಯೆ, ಉಗ್ರಗಾಮಿ ಗುಂಪು ಸೇರಿದಂತೆ ವಿವಿಧ ಅಪರಾಧಗಳಿಂದ ಶಿಕ್ಷೆಗೊಳಗಾದ 81 ಜನರನ್ನು ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: ಪಂಪ್‌ವೆಲ್‌ ಫ್ಲೈ ಓವರ್‌ ಬಳಿ ಬಾಂಬ್‌ ಸ್ಟೋಟಿಸಲು ಮುಂದಾಗಿದ್ದ ಶಾರೀಕ್‌

    ಕಳೆದ 2 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮರಣದಂಡನೆಗಳಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಅಲ್ಲಿನ ಆಡಳಿತ ಪ್ರತಿಜ್ಞೆ ಮಾಡಿತ್ತು. 2018ರಲ್ಲಿ ಟರ್ಕಿಯಲ್ಲಿ ಅಮೆರಿಕದ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ಬಳಿಕ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹೊಸ ಆದೇಶವನ್ನು ನೀಡಿದ್ದರು.

    2018ರ ಬಳಿಕ ಸೌದಿ ಆಡಳಿತ ಮರಣದಂಡನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದು, ಕೊಲೆ ಅಥವಾ ನರಹತ್ಯೆಯ ತಪ್ಪಿತಸ್ಥರನ್ನು ಮಾತ್ರವೇ ಮರಣದಂಡನೆಗೆ ಒಳಪಡಿಸಲು ಪ್ರಾರಂಭಿಸಿತು. ಇದೀಗ ಮತ್ತೆ ಮರಣದಂಡನೆ ಶಿಕ್ಷೆಗಳನ್ನು ಹೆಚ್ಚಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಂಡೋನೇಷ್ಯಾ ಬಳಿಕ ಸೊಲೊಮನ್ ದ್ವೀಪದಲ್ಲಿ ಭಾರೀ ಭೂಕಂಪ – ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

    Live Tv
    [brid partner=56869869 player=32851 video=960834 autoplay=true]

  • ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

    ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

    ಟೆಹ್ರಾನ್: ಹಿಜಬ್ ವಿರೋಧಿ ಭಾರೀ ಪ್ರತಿಭಟನೆ (Anti Hijab Protest) ನಡೆಯುತ್ತಿರುವ ಇರಾನ್‌ನಲ್ಲಿ (Iran) ಮೊದಲ ಬಾರಿಗೆ ಆರೋಪಿಗೆ ಮರಣದಂಡನೆ ಶಿಕ್ಷೆ (Death Sentence) ವಿಧಿಸಲಾಗಿದೆ.

    ದೇಶಲ್ಲಿ ಹಿಜಬ್ ಅನ್ನು ವಿರೋಧಿಸಿ ನಿರಂತರವಾಗಿ ಅಶಾಂತಿ ಮುಂದುವರಿದಿದ್ದು, ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಸಿರುವ ಆರೋಪದಲ್ಲಿ ಕೆಲವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕ್ಲೆರಿಕಲ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿರುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಮೊದಲ ಬಾರಿಗೆ ಮರಣದಂಡನೆ ವಿಧಿಸಿದೆ.

    ಪ್ರತಿಭಟನೆಯಲ್ಲಿ ತೊಡಗಿದ ವ್ಯಕ್ತಿಯೊಬ್ಬರು ಕಟ್ಟಡಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಇನ್ನೂ 5 ಜನರಿಗೆ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಯ ಆರೋಪದ ಮೇಲೆ 5 ರಿಂದ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು!

    ಈ ತೀರ್ಪುಗಳನ್ನು ಕ್ರಾಂತಿಕಾರಿ ನ್ಯಾಯಾಲಯದ ಪ್ರತ್ಯೇಕ ಶಾಖೆಗಳು ನೀಡಿವೆ. ಆದರೆ ವಿಚಾರಣೆಯಲ್ಲಿರುವ ಪ್ರತಿಭಟನಾಕಾರರ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಅವರು ಈ ನಿರ್ಧಾರಗಳನ್ನು ಮೇಲ್ಮನವಿಗೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇರಾನ್‌ನಲ್ಲಿ ಕ್ಲೆರಿಕಲ್ ಆಡಳಿತವನ್ನು ವಿರೋಧಿಸುವವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವುದಕ್ಕೆ ಹೆಸರುವಾಸಿಯಾಗಿದೆ. 1979ರಲ್ಲಿ ಇಸ್ಲಾಮಿಕ್ ಕ್ರಾಂತಿಯಾದ ಬಳಿಕ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿರುವ ನೂರಾರು ಜನರನ್ನು ಬಂಧಿಸಲಾಗಿದೆ. ಅವರಿಗೆ ಸಾರ್ವಜನಿಕವಾಗಿ ವಿಚಾರಣೆ ನಡೆಸುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಬೆಳ್ಳಂಬೆಳಗ್ಗೆ 4.1 ತೀವ್ರತೆಯ ಭೂಕಂಪ

    Live Tv
    [brid partner=56869869 player=32851 video=960834 autoplay=true]

  • ಭಾರೀ ಭ್ರಷ್ಟಾಚಾರ – ಚೀನಾದ ಉನ್ನತ ಭದ್ರತಾ ಅಧಿಕಾರಿಗೆ ಮರಣದಂಡನೆ ಶಿಕ್ಷೆ

    ಭಾರೀ ಭ್ರಷ್ಟಾಚಾರ – ಚೀನಾದ ಉನ್ನತ ಭದ್ರತಾ ಅಧಿಕಾರಿಗೆ ಮರಣದಂಡನೆ ಶಿಕ್ಷೆ

    ಬೀಜಿಂಗ್: ಬರೋಬ್ಬರಿ 19 ಮಿಲಿಯನ್ ಡಾಲರ್(ಸುಮಾರು 154 ಕೋಟಿ ರೂ.) ಲಂಚ (Bribe) ಸ್ವೀಕರಿಸಿದ್ದಕ್ಕೆ ಚೀನಾದ ನ್ಯಾಯಾಲಯ (Chinese Court) ಶುಕ್ರವಾರ ತನ್ನ ಉನ್ನತ ಭದ್ರತಾ ಅಧಿಕಾರಿಯೊಬ್ಬರಿಗೆ (Security Official) 2 ವರ್ಷಗಳ ಕಾಲಾವಕಾಶದೊಂದಿಗೆ ಮರಣದಂಡನೆ (Death Sentence) ವಿಧಿಸಿದೆ.

    ಚೀನಾದ ಸಾರ್ವಜನಿಕ ಭದ್ರತಾ ಮಾಜಿ ಉಪ ಮಂತ್ರಿ ಸನ್ ಲಿಜುನ್ (Sun Lijun) ಲಂಚ, ಷೇರು ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮವಾಗಿ ಬಂದೂಕುಗಳನ್ನು ಹೊಂದಿದ್ದಕ್ಕೆ ಮರಣದಂಡನೆ ವಿಧಿಸಲಾಗಿದೆ. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ

    ಸನ್ ಲಿಜು ಅವರು ತನ್ನ ವೈಯಕ್ತಿಕ ಜೀವನಕ್ಕಾಗಿ ರಾಜಕೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    ಈ ವಾರದ ಆರಂಭದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ 5 ಮಾಜಿ ಪೊಲೀಸ್ ಮುಖ್ಯಸ್ಥರಿಗೆ ಚೀನಾ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಸನ್ ಲಿಜುನ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಂಸದ ಸೇರಿ ನಾಲ್ವರಿಗೆ ಗಲ್ಲು

    ಮಾಜಿ ಸಂಸದ ಸೇರಿ ನಾಲ್ವರಿಗೆ ಗಲ್ಲು

    ಬ್ಯಾಂಕಾಕ್: ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಮಾಜಿ ಸಂಸದ, ಡೆಮಾಕ್ರಸಿ ಪಕ್ಷದ ಕಾರ್ಯಕರ್ತ ಸೇರಿದಂತೆ ನಾಲ್ವರನ್ನು ಗಲ್ಲಿಗೇರಿಸಿದ ಘಟನೆ ಮ್ಯಾನ್ಮಾರ್‌ಲ್ಲಿ  ನಡೆದಿದೆ.

    ಡೆಮಾಕ್ರಸಿ ಪ್ರಚಾರಕ ಕ್ಯಾವ್ ಮಿನ್ ಯು ಮಾಜಿ ಸಂಸದ ಮತ್ತು ಹಿಪ್-ಹಾಪ್ ಕಲಾವಿದ ಫಿಯೋ ಝೆಯಾ ಥಾವ್, ಹ್ಲಾ ಮೈಯೋ ಆಂಗ್ ಮತ್ತು ಆಂಗ್ ತುರಾ ಜಾವ್ ಮರಣ ದಂಡನೆಗೆ ಒಳಗಾದವರಾಗಿದ್ದಾರೆ. ಸುಮಾರು 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮರಣದಂಡನೆಯ ಶಿಕ್ಷೆಯಾಗಿದೆ ಎಂದು ಮ್ಯಾನ್ಮಾರ್‌ ಸರ್ಕಾರ ತಿಳಿಸಿದೆ. ನಾಲ್ವರು ರಾಜಕೀಯ ಕೈದಿಗಳಿಗೆ ಕ್ಷಮಾದಾನಕ್ಕಾಗಿ ವಿಶ್ವಾದ್ಯಂತ ಮನವಿ ಮಾಡಿದ್ದರೂ ಮರಣದಂಡನೆಯನ್ನು ವಿಧಿಸಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಕ್ರಿಶ್ಚಿಯನ್ನರು ಇಲ್ಲದಿದ್ರೆ ರಾಜ್ಯ ಬಿಹಾರ ಆಗ್ತಿತ್ತು: ತಮಿಳುನಾಡು ಸ್ಪೀಕರ್

    ಕಳೆದ ವರ್ಷ ಸೇನೆಯು ದೇಶದ ಆಡಳಿತವನ್ನು ತನ್ನ ವಶಕ್ಕೆ ಪಡೆದ ಬಳಿಕ ಹಿಂಸಾತ್ಮಕ ಮತ್ತು ಅಮಾನವೀಯ ಕೃತ್ಯಗಳನ್ನು ಪ್ರೇರೇಪಿಸಿದ ಆರೋಪ ಸಂಬಂಧ ಕಾನೂನಿಗೆ ಅನುಗುಣವಾಗಿ ನಾಲ್ವರನ್ನು ಬಂಧಿಸಿತ್ತು. ಇದೀಗ ಗಲ್ಲಿಗೇರಿಸಲಾಗಿದೆ. ಇದನ್ನೂ ಓದಿ: ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಕೊಡಬಾರದು: ಸಿಎಂಗೆ ಸುಮಲತಾ ಪತ್ರ

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

    ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

    ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದಲ್ಲಿ ದೋಷಿಯಾಗಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸಿನ್ ಮಲಿಕ್‌ಗೆ ರಾಷ್ಟ್ರೀಯ ತನಿಖಾದಳದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,00,000 ರೂ. ದಂಡ  ವಿಧಿಸಿದೆ.

    ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ವಿವಿಧ ಪ್ರಕರಣಗಳು ಯಾಸಿನ್ ಮಲಿಕ್ ಮೇಲೆ ದಾಖಲಾಗಿತ್ತು. ತನ್ನ ಮೇಲೆ ದಾಖಲಾದ ಆರೋಪಗಳ ಸಂಬಂಧ ಮೇ 10ರಂದು ಕೋರ್ಟ್‌ನಲ್ಲಿ ಮಲಿಕ್ ತಪ್ಪೊಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಲಿಕ್‌ಗೆ ಮರಣದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕೋರ್ಟ್‌ಗೆ ಮನವಿ ಮಾಡಿತ್ತು. ಇದನ್ನೂ ಓದಿ: ಯಾಸಿನ್ ಮಲಿಕ್ ಮರಣದಂಡನೆ ನೀಡಿ – ನ್ಯಾಯಾಯಲಕ್ಕೆ ಎನ್‌ಐಎ ಮನವಿ

    ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ವಿವಿಧ ಪ್ರಕರಣಗಳ ಮೇಲೆ 2017ರಲ್ಲಿ ಮಲಿಕ್ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿತ್ತು. ಇದನ್ನೂ ಓದಿ: ಹೆಲ್ಮೆಟ್ ಧರಿಸದಿದ್ರೆ 3 ತಿಂಗಳು ಲೈಸನ್ಸ್ ರದ್ದು

    ಜಮ್ಮು-ಕಾಶ್ಮೀರದಲ್ಲಿ ಬಿಗಿ ಭದ್ರತೆ:
    ಯಾಸಿನ್ ಮಲಿಕ್ ಬಗ್ಗೆ ನ್ಯಾಯಾಲಯ ತೀರ್ಪು ಹೊರಬೀಳುವ ಹಿನ್ನೆಲೆ ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆಯನ್ನು ಮಾಡಲಾಗಿದೆ. ನಗರದಲ್ಲಿ ಕಲ್ಲು ತೂರಾಟದಂತಹ ಕೃತ್ಯಗಳನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶ್ರೀನಗರಲ್ಲಿ ಇಂಟರ್‌ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.