ಚಿತ್ರದುರ್ಗ: ಜಿಲ್ಲೆಯ ಕುರುಮರಡಿಕೆರೆ ಗ್ರಾಮ ಬಳಿ ಬೆಂಕಿ ಬಿದ್ದಿದೆ. ಪರಿಣಾಮ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.
ಶುಕ್ರವಾರ ರಾತ್ರಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಪ್ರದೇಶದ ನೂರಾರು ಮರಗಳು ಬೆಂಕಿಗಾಹುತಿ ಆಗಿವೆ.

2 ದಿನದ ಹಿಂದಷ್ಡೇ ಹೊರಕೆರೆ ದೇವರಪುರ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಇದರಿಂದ ಅರಣ್ಯದಲ್ಲಿದ್ದ 300 ಕುರಿಗಳು ಸಜೀವ ದಹನ ಆಗಿದ್ದವು. ಈ ಕುರಿಗಳೆಲ್ಲ ಹೊಸದುರ್ಗ ತಾಲೂಕಿನ ಅಮೃತಾಪುರ ಗ್ರಾಮದ ತಿಮ್ಮಪ್ಪ ಎಂಬವರಿಗೆ ಸೇರಿದ್ದಾಗಿವೆ. ಒಂದು ಸಾವಿರ ಕುರಿಗಳನ್ನು ಮೇಯಿಸಲು ಹೊರಕೆರೆದೇವರಪುರ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗಿಡಗಳಿಗೆ ಹತ್ತಿದ ಬೆಂಕಿಯಿಂದಾಗಿ 300 ಕುರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಉಳಿದ 700 ಕುರಿಗಳು ಪ್ರಾಣಾಪಾಯದಿಂದ ಪಾರಾಗಿದ್ದವು.
ಇದೀಗ ಮತ್ತೆ ಬೆಂಕಿ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.


ಇದಕ್ಕೆ ಖುದ್ದು ಅರಣ್ಯ ಇಲಾಖೆಯೇ ಅನುಮತಿ ಕೊಟ್ಟಿದೆ. ಈ ಸಂಬಂಧ ಪಬ್ಲಿಕ್ ಟಿವಿ ಜೂನ್ 6ರಿಂದು ನಿರಂತರವಾಗಿ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೊಡಗು ಡಿಸಿಎಫ್ ಮಂಜುನಾಥ್ ಅವರನ್ನು ಅಮಾನತು ಮಾಡಿದ್ದಾರೆ. ಅಲ್ಲದೆ ಮಂಜುನಾಥ್ ಅವರು ಜಾಗಕ್ಕೆ ಮಾರಿಯ ಕ್ರಿಸ್ಟು ರಾಜ ಅವರನ್ನು ಕೊಡಗಿನ ನೂತನ ಡಿಸಿಎಫ್ ಆಗಿ ಅರಣ್ಯ ಇಲಾಖೆ ನೇಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.


















