Tag: ಮಯಾಂಕ್ ಅಗರವಾಲ್

  • ಗೆಳೆಯನ ವಿವಾಹ ಸಮಾರಂಭದಲ್ಲಿ ಕೆಎಲ್ ರಾಹುಲ್ ಸಂಭ್ರಮ

    ಗೆಳೆಯನ ವಿವಾಹ ಸಮಾರಂಭದಲ್ಲಿ ಕೆಎಲ್ ರಾಹುಲ್ ಸಂಭ್ರಮ

    ಬೆಂಗಳೂರು: ಟೀಂ ಇಂಡಿಯಾ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ತಮ್ಮ ಬಹುದಿನಗಳ ಗೆಳೆಯ ಮಯಾಂಕ್ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.

    ಗೆಳೆಯನ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ರಾಹುಲ್‍ರ ಕೆಲ ಫೋಟೋಗಳನ್ನು ರಾಹುಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದು, ನವ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

    ನಗರದಲ್ಲಿ ಸೋಮವಾರ ನಡೆದ ವಿವಾಹ ಸಮಾರಂಭದಲ್ಲಿ ಟೀಂ ಇಂಡಿಯಾ `ಎ’ ತಂಡದ ಬ್ಯಾಟ್ಸ್ ಮನ್ ಮಯಾಂಕ್ ಅಗರವಾಲ್ ತಮ್ಮ ಬಹುಕಾಲದ ಗೆಳತಿ ಆಶಿತಾ ಸೂದ್‍ರೊಂದಿಗೆ ಸಪ್ತಪದಿ ತುಳಿದರು. ಈ ಸಮಾರಂಭಕ್ಕೆ ಟೀಂ ಇಂಡಿಯಾ ಹಲವು ಕ್ರಿಕೆಟ್ ಆಟಗಾರರು ಭಾಗವಹಿಸಿ ಶುಭಕೋರಿದ್ದರು. ಕಾರ್ಯಕ್ರಮದಲ್ಲಿ ರಾಹುಲ್ ಅವರೊಂದಿಗೆ ಭಾಗವಹಿಸಿದ್ದ ಕರ್ನಾಟಕ ತಂಡದ ವೇಗದ ಬೌಲರ್ ರೋನಿಟ್ ಮೋರ್ ಸಾಥ್ ನೀಡಿದ್ದಾರೆ.

    ಪ್ರಮುಖವಾಗಿ ರಾಹುಲ್ ಅಭಿಮಾನಿಗಳು ಪೋಸ್ಟ್ ಮಾಡಿರುವ ಫೋಟೋ ಒಂದರಲ್ಲಿ ಮುಂದಿನ ವಿವಾಹ ಸರದಿ ಯಾರದ್ದು ಎಂದು ಚರ್ಚೆ ನಡೆಸುತ್ತಿದ್ದಾಗಿ ಬರೆದುಕೊಂಡಿದ್ದಾರೆ. 2018 ರ ಐಪಿಎಲ್ ಮುಕ್ತಾಯದ ಬಳಿಕ ಕೆಎಲ್ ರಾಹುಲ್ ಬಾಲಿವುಟ್ ನಟಿ ನಿಧಿ ಅಗರವಾಲ್ ಅವರೊಂದಿಗೆ ಮುಂಬೈನಲ್ಲಿ ಸುತ್ತಾಟ ನಡೆಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ರಾಹುಲ್ ನಾವಿಬ್ಬರು ಸ್ನೇಹಿತರು. ತಮ್ಮ ಗೆಳತಿಯ ಬಗ್ಗೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ ಎಂದು ಹೇಳಿದ್ದರು.