Tag: ಮಫ್ತಿ

  • ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅವರು ‘ವೇದ’ (Vedha) ಸೂಪರ್ ಸಕ್ಸಸ್ ನಂತರ ಕನ್ನಡ- ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾದ್ರೆ ಇತ್ತೀಚಿಗೆ ಅನೌನ್ಸ್ ಮಾಡಿದ್ದ ‘ಬೈರತಿ ರಣಗಲ್’ (Bhairathi Rangal) ಸಿನಿಮಾ ಶೂಟಿಂಗ್ ಯಾವಾಗ? ಶಿವಣ್ಣ ಜೋಡಿಯಾಗೋ ಆ ಲಕ್ಕಿ ನಟಿ ಯಾರು.? ಈ ಕುರಿತ ಅಪ್‌ಡೇಟ್ ಇಲ್ಲಿದೆ.

    ನರ್ತನ್ ನಿರ್ದೇಶನದ ‘ಮಫ್ತಿ’ (Mufti) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಶೇಕ್ ಆಗಿತ್ತು. ಈ ಚಿತ್ರದ ಪ್ರೀಕ್ವೆಲ್‌ಗೆ ಸಿದ್ಧತೆ ಭರದಿಂದ ಸಾಗುತ್ತಿದೆ. 5 ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ನರ್ತನ್- ಶಿವಣ್ಣ ಕಾಂಬೋ ಒಂದಾಗುತ್ತಿದೆ. ‘ಮಫ್ತಿ’ ಚಿತ್ರದಲ್ಲಿ ಮಾಫಿಯಾ ಡಾನ್ ‘ಬೈರತಿ ರಣಗಲ್ ಅವತಾರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ರಾಕ್ಷಸನಂತಹ ಆತ ಪಾತ್ರ ಕುತೂಹಲ ಕೆರಳಿಸಿತ್ತು. ಆದರೆ ಆತ ನಿಜಕ್ಕೂ ಅಷ್ಟು ಕ್ರೂರಿ ಆಗಿದ್ದು ಯಾಕೆ? ಆತನ ಹಿನ್ನೆಲೆ ಏನು ಎನ್ನುವ ಕಥೆ ಈ ಭಾಗದಲ್ಲಿ ರಿವೀಲ್ ಆಗಲಿದೆ. ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟ ನಡೆಸುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಾಯಕಿ (Heroine)  ಸಿಕ್ಕಿದ ಕೂಡಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಬೈರತಿ ರಣಗಲ್ ಜೋಡಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದನ್ನೂ ಓದಿ:ಪತಿ- ಮಗುವಿನೊಂದಿಗೆ ಮೆಕ್ಕಾ ಮದೀನಾಗೆ ಸಂಜನಾ ಗಲ್ರಾನಿ ಭೇಟಿ

    ನಾಯಕಿಯ ಹುಡುಕಾಟ ನಡೆಸುತ್ತಿರುವ ಚಿತ್ರತಂಡ, ಮತ್ತೊಂದು ಕಡೆ ಚಿತ್ರೀಕರಣಕ್ಕೆ ಬೇಕಾದ ತಯಾರಿ ಆರಂಭಿಸಿದೆ. ಜೂನ್ 16ರಿಂದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ ಎಂದು ನರ್ತನ್ ಮಾಹಿತಿ ನೀಡಿದ್ದಾರೆ. ‘ಮಫ್ತಿ’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ‘ವೇದ’ (Vedha) ಸಿನಿಮಾ ಗೆದ್ದಿರುವ ಗೀತಾ ಶಿವರಾಜ್‌ಕುಮಾರ್ ‘ಬೈರತಿ ರಣಗಲ್’ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

    ಶಿವಣ್ಣ ಆರೇಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನರ್ತನ್ ರಾಮ್ ಚರಣ್ ಜೊತೆ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಬೈರತಿ ರಣಗಲ್ ಕೆಲಸ ಕೂಡ ನಡೆಯುತ್ತಿದೆ. ಒಟ್ನಲ್ಲಿ ಶಿವಣ್ಣ- ನರ್ತನ್ ಕಾಂಬೋ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಡ್ರಗ್ಸ್ ಸೇವನೆ ದೂರು: ಶೂಟಿಂಗ್ ಸ್ಪಾಟ್ ಗೆ ಬರಲಿದ್ದಾರೆ ಪೊಲೀಸ್

    ಡ್ರಗ್ಸ್ ಸೇವನೆ ದೂರು: ಶೂಟಿಂಗ್ ಸ್ಪಾಟ್ ಗೆ ಬರಲಿದ್ದಾರೆ ಪೊಲೀಸ್

    ಸಿನಿಮಾ ರಂಗದಲ್ಲಿ ಡ್ರಗ್ಸ್ (Drugs) ಸೇವನೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಪೊಲೀಸರು (Police) ಮಫ್ತಿಯಲ್ಲಿ ಬರಲಿದ್ದಾರೆ ಎಂದು ಕೇರಳದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಚಿತ್ರೀಕರಣ ಸ್ಥಳದಲ್ಲಿ ನಟರೂ ಸೇರಿದಂತೆ ಅನೇಕರು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದರು.

    ಮೊನ್ನೆಯಷ್ಟೇ ಕೇರಳದ ಫಿಲ್ಮ್ ಚೇಂಬರ್ ಇಬ್ಬರು ನಟರ ಮೇಲೆ ಗುರುತರ ಆರೋಪ ಮಾಡಿತ್ತು. ಅವರಿಂದಾಗಿ ಚಿತ್ರೀಕರಣಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿತ್ತು. ಅದಕ್ಕೆ ಕಾರಣ ಸದಾ ಅವರು ಅಮಲಿನ ಸ್ಥಿತಿಯಲ್ಲಿ ಇರುತ್ತಾರೆ ಎನ್ನುವುದು ನಿರ್ಮಾಪಕರ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇಂಥದ್ದೊಂದು ಕ್ರಮ ತಗೆದುಕೊಂಡಿದ್ದಾರೆ. ಶೂಟಿಂಗ್ ಸ್ಪಾಟ್ ಗೆ ಮಫ್ತಿಯಲ್ಲಿ ಪೊಲೀಸರು ಕಾವಲು ಕಾಯಲಿದ್ದಾರಂತೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಕೇರಳ ಸಿನಿಮೋದ್ಯಮದಲ್ಲಿ ಡ್ರಗ್ಸ್ ಸೇವನೆ ವಿಪರೀತವಾಗಿದೆಯಂತೆ. ಹೀಗಾಗಿ ಸಿನಿಮಾ ರಂಗಕ್ಕೆ ಮಕ್ಕಳನ್ನು ಕಳುಹಿಸಲು ಭಯ ಆಗುತ್ತಿದೆ ಎಂದು ಮೊನ್ನೆಯಷ್ಟೇ ರಾಜಕಾರಣಿಯೊಬ್ಬರು ಮಾತನಾಡಿದ್ದರು. ಈ ಮಾತು ಕೂಡ ವೈರಲ್ ಆಗಿತ್ತು. ಈ ಮಾತಿನ ಬೆನ್ನಲ್ಲೇ ಸರಕಾರ ಕೂಡ ಎಚ್ಚೆತ್ತುಕೊಂಡಿತ್ತು. ಪೊಲೀಸರಿಗೆ ಬಿಸಿ ಮುಟ್ಟಿಸಿತ್ತು. ಹಾಗಾಗಿ ಡ್ರಗ್ಸ್ ವಿರುದ್ಧ ಪೊಲೀಸರು ತಿರುಗಿ ಬಿದ್ದಿದ್ದಾರೆ.

  • ಟಾಲಿವುಡ್ ಅಂಗಳಕ್ಕೆ ‘ಮಫ್ತಿ’ ಡೈರೆಕ್ಟರ್ ಕಾಲಿಡುವುದು ಪಕ್ಕಾ

    ಟಾಲಿವುಡ್ ಅಂಗಳಕ್ಕೆ ‘ಮಫ್ತಿ’ ಡೈರೆಕ್ಟರ್ ಕಾಲಿಡುವುದು ಪಕ್ಕಾ

    ಫ್ತಿ (Mufti) ಸಿನಿಮಾದ ನಂತರ ನರ್ತನ್ (Nartan) ಮೆಗಾ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲಿದ್ದಾರೆ ಎಂದು ಅನೇಕ ಬಾರಿ ಸುದ್ದಿ ಆಯಿತು. ಈ ಸಿನಿಮಾಗೆ ಯಶ್ ಹೀರೋ ಎಂದೂ ಹೇಳಲಾಯಿತು. ಈ ಚಿತ್ರಕ್ಕಾಗಿ ನರ್ತನ್ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂತು. ಆನಂತರ ಯಶ್ ಇವರ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ಹೊರ ಬಿದ್ದಿತು.

    ಈ ನೋವಿನ ವಿಚಾರ ಆಚೆ ಬರುತ್ತಿದ್ದಂತೆಯೇ ನರ್ತನ್ ಮತ್ತೆ ಸದ್ದು ಮಾಡಿದರು. ಅದು ಮತ್ತೊಂದು ಮೆಗಾ ಸಿನಿಮಾದ ವಿಷಯಕ್ಕಾಗಿ. ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ವಿಷಯ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಕೇಳಿ ಬಂದಿತ್ತು. ಈ ವಿಷಯ ಕೂಡ ಸುಳ್ಳಾಗಲಿದೆ ಎನ್ನುವ ಆತಂಕ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಅದು ನಿಜವಾಗಿದೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್

    ಹೌದು, ನರ್ತನ್ ಟಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಪ್ರಶಾಂತ್ ನೀಲ್, ಎ.ಹರ್ಷ ನಂತರ ಮತ್ತೋರ್ವ ನಿರ್ದೇಶಕ ಟಾಲಿವುಡ್ ಸ್ಟಾರ್ ನಟನಿಗೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಇದು  ಪಕ್ಕಾ ಮಾಹಿತಿ ಎಂದು ಸ್ವತಃ ನರ್ತನ್ ಅವರೇ ಹಂಚಿಕೊಂಡಿದ್ದಾರೆ. ಆದರೆ, ಆ ಸಿನಿಮಾ ಯಾವಾಗ ಬರುತ್ತದೆ ಎಂದು ಮಾತ್ರ ಹೇಳಿಕೊಂಡಿಲ್ಲ.

    ಸದ್ಯ ಭೈರತಿ ರಣಗಲ್ (Bhairati Rangal) ಸಿನಿಮಾದ ಕೆಲಸದಲ್ಲಿ ನರ್ತನ್ ಬ್ಯುಸಿಯಾಗಿದ್ದಾರೆ. ಮೇ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಶಿವರಾಜ್ ಕುಮಾರ್ (Shivraj Kumar) ಮತ್ತು ನರ್ತನ್ ಕಾಂಬಿನೇಷನ್ ನ ಎರಡನೇ ಸಿನಿಮಾ ಇದಾಗಲಿದೆ.  ಈ ಸಿನಿಮಾವನ್ನು ಸ್ವತಃ ಶಿವಣ್ಣ ಅವರೇ ತಮ್ಮ ಬ್ಯಾನರ್ ನಿಂದ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ನಂತರ ರಾಮ್ ಚರಣ್ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ ನರ್ತನ್.

  • ‘ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾ: ಮಾ.5ಕ್ಕೆ ಟೈಟಲ್ ಡಿಸೈನ್ ರಿಲೀಸ್

    ‘ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾ: ಮಾ.5ಕ್ಕೆ ಟೈಟಲ್ ಡಿಸೈನ್ ರಿಲೀಸ್

    ಫ್ತಿ (Mufti,) ಸಿನಿಮಾದ ನಂತರ ನಿರ್ದೇಶಕ ನರ್ತನ್ (Narthan) ಹಾಗೂ ನಟ ಶಿವರಾಜ್ ಕುಮಾರ್ (Shivraj Kumar) ಮತ್ತೆ ಒಂದಾಗಿದ್ದು, ಈ ಬಾರಿ ಜೋಡಿಯು ಪ್ಯಾನ್ ಇಂಡಿಯಾ (Pan India) ಸಿನಿಮಾವನ್ನು ಮಾಡಲಿದೆ. ‘ಭೈರತಿ ರಣಗಲ್’ (Bhairati Rangal) ಹೆಸರಿನಲ್ಲಿ ಈ ಸಿನಿಮಾ ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಸಿನಿಮಾದ ಟೈಟಲ್ ಡಿಸೈನ್ ಅನ್ನು ಮಾರ್ಚ್ 5ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

    ಗೀತಾ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದ್ದು,  ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ನರ್ತನ್ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಐದು ವರ್ಷಗಳ ನಂತರ ಮಫ್ತಿ ಸಿನಿಮಾದ ಭೈರತಿ ರಣಗಲ್ ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಸೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್.

    ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್

    ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್

    ಗೀತಾ ಪಿಕ್ಚರ್ಸ್ ತನ್ನ ಎರಡನೇ ಸಿನಿಮಾ ಘೋಷಣೆ ಮಾಡಿದ್ದು, ಶಿವರಾಜ್ ಕುಮಾರ್ (Shivraj Kumar) ಮತ್ತು ನಿರ್ದೇಶಕ ನರ್ತನ್ (Narthan) ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಐದು ವರ್ಷಗಳ ನಂತರ ಮಫ್ತಿ (Mufti) ಸಿನಿಮಾದ ಭೈರತಿ ರಣಗಲ್ (Bhairati Rangal) ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು.

    ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಶೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್.

    ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿರ್ದೇಶಕ ನರ್ತನ್ ಕೈ ಹಿಡಿದ ಶಿವರಾಜ್ ಕುಮಾರ್ : ಮತ್ತೆ ಬಂದ ಭೈರತಿ ರಣಗಲ್

    ನಿರ್ದೇಶಕ ನರ್ತನ್ ಕೈ ಹಿಡಿದ ಶಿವರಾಜ್ ಕುಮಾರ್ : ಮತ್ತೆ ಬಂದ ಭೈರತಿ ರಣಗಲ್

    ಫ್ತಿ (Mufti) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್ (Nartan), ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಸೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಶಿವರಾಜ್ ಕುಮಾರ್ (Shivraj Kumar) ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ (Bhairati Rangal) ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    ಶಿವರಾಜ್ ಕುಮಾರ್ ಮತ್ತು ನರ್ತನ್ ಕಾಂಬಿನೇಷನ್ ನಲ್ಲಿ ‘ಭೈರತಿ ರಣಗಲ್ ‘ ಸಿನಿಮಾ ಮೂಡಿ ಬರಲಿದ್ದು,  ಗೀತಾ ಶಿವರಾಜ್ ಕುಮಾರ್ ಈ ಸಿನಿಮಾದ ನಿರ್ಮಾಪಕರು. ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮೂಡಿ ಬರಲಿರುವ ಎರಡನೇ ಸಿನಿಮಾ ಇದಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿನಿಮಾಗಿಂತ ಸುದ್ದಿಯಲ್ಲೇ ಉಳಿದು ಬಿಡ್ತಾರಾ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್

    ಸಿನಿಮಾಗಿಂತ ಸುದ್ದಿಯಲ್ಲೇ ಉಳಿದು ಬಿಡ್ತಾರಾ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್

    ಳೆದೊಂದು ವರ್ಷದಿಂದ ಮಫ್ತಿ (Mufti) ಖ್ಯಾತಿಯ ನಿರ್ದೇಶಕ ನರ್ತನ್ (Nartan) ಕೇವಲ ಸುದ್ದಿಯಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅವರು ತಮ್ಮ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ಹಂಚಿಕೊಳ್ಳುತ್ತಿಲ್ಲ. ಹಾಗಾಗಿಯೇ ಸದಾ ಗಾಸಿಪ್ ಕಾಲಂನಲ್ಲೇ ಉಳಿದುಬಿಟ್ಟಿದ್ದಾರೆ. ಕೆಜಿಎಫ್ 2 (KGF 2) ಸಿನಿಮಾ ಮುಗಿಯುತ್ತಿದ್ದಂತೆಯೇ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿ ಆಯಿತು. ನರ್ತನ್ ಆಗಲಿ, ಯಶ್ ಆಗಲಿ ಖಚಿತ ಪಡಿಸೇ ಇದ್ದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಯಿತು.

    ಕೆಲ ತಿಂಗಳ ಹಿಂದೆಯಷ್ಟೇ ಯಶ್ ಗಾಗಿ ನರ್ತನ್ ಸಿನಿಮಾ ಮಾಡುತ್ತಿಲ್ಲ ಎನ್ನುವ ಸುದ್ದಿ ಹೊರ ಬಿತ್ತು. ನರ್ತನ್ ಮಾಡಿದ ಕಥೆ ಸದ್ಯಕ್ಕೆ ಯಶ್ (Yash) ಗೆ ಒಪ್ಪುತ್ತಿಲ್ಲ. ಹಾಗಾಗಿಯೇ ಕಥೆಯನ್ನು ಯಶ್ ತಿರಸ್ಕರಿಸಿದ್ದಾರೆ ಎಂದು ಗಾಂಧಿನಗರ ಮಾತನಾಡಿಕೊಂಡಿತು. ಈ ಕುರಿತಾಗಿಯೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಒಂದೂವರೆ ವರ್ಷದಿಂದ ಯಶ್ ಗಾಗಿಯೇ ಕಥೆ ಬರೆದುಕೊಂಡಿದ್ದ ನರ್ತನ್ ಮುಂದೇನು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಯಿತು. ಇದೀಗ ಮತ್ತೆ ನರ್ತನ್ ಸುದ್ದಿಯಾಗಿದ್ದಾರೆ. ಇವರ ಸಿನಿಮಾದಲ್ಲಿ ಯಶ್ ಗೆ ಬದಲಾಗಿ ಬೇರೆ ನಟರೊಬ್ಬರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಯಶ್ ಜೊತೆ ನರ್ತನ್ ಸಿನಿಮಾಡುತ್ತಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಇದೀಗ ಯಶ್ ಬದಲಾಗಿ ತೆಲುಗಿನ ರಾಮ್ ಚರಣ್ ತೇಜ ಅವರ ಹೆಸರು ಕೇಳಿ ಬರುತ್ತಿದೆ. ನರ್ತನ್ ಅವರ ಮುಂದಿನ ಸಿನಿಮಾದಲ್ಲಿ ರಾಮ್ ಚರಣ್ ತೇಜ (Ram Charan Teja) ಹೀರೋ ಆಗಿ ನಟಿಸಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ದೊಡ್ಡಮಟ್ಟದಲ್ಲಂತೂ ಇದು ಸುದ್ದಿ ಆಗಿದೆ. ಆದರೆ, ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ಅವರಿಬ್ಬರೇ ಹೇಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರ: ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರುಳಿ ಸೋಮವಾರ ತಮ್ಮ ಹೊಚ್ಚ ಹೊಸ ಮಫ್ತಿ ಸಿನಿಮಾದ ಪ್ರಮೋಷನ್ ಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು.

    ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಶ್ರೀಮುರುಳಿ ಹಾಗೂ ನಟ ಶಿವರಾಜ್ ಕುಮಾರ್ ಅಭಿನಯದ ಮಫ್ತಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಸೋಮವಾರ ಸಂಜೆ ನಟ ಶ್ರೀಮುರುಳಿ ಚಲನಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಆಭಿಮಾನಿಗಳ ಜೊತೆ ಮಾತುಕತೆ ನಡೆಸಿದರು.

    ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಶ್ರೀಮುರುಳಿಗೆ ಅಭಿಮಾನಿಗಳು ಆದರದ ಸ್ವಾಗತ ಕೋರಿ ಹೂಮಾಲೆ ಹಾಕಿ ಬರಮಾಡಿಕೊಂಡರು. ಇದೇ ವೇಳೆ ನಟ ಶ್ರೀಮುರುಳಿ ಅಭಿಮಾನಿಗಳ ಜೊತೆ ಸೆಲ್ಫೀ ತೆಗೆದುಕೊಂಡು ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಈ ವೇಳೆ ಮಾತನಾಡಿದ ಶ್ರೀ ಮುರುಳಿ, ಮಫ್ತಿ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಯಶಸ್ಸು ಅಭಿಮಾನಿಗಳಿಗೆ ಸಲ್ಲಬೇಕು ಎಂದು ಹೇಳಿದರು.