Tag: ಮನ್ಸೂರ್ ಅಲಿಖಾನ್

  • ತ್ರಿಷಾ ಪ್ರಕರಣ: ಮನ್ಸೂರ್ ಅಲಿಖಾನ್ ಗೆ ದಂಡ ವಿಧಿಸಿದ ಹೈಕೋರ್ಟ್

    ತ್ರಿಷಾ ಪ್ರಕರಣ: ಮನ್ಸೂರ್ ಅಲಿಖಾನ್ ಗೆ ದಂಡ ವಿಧಿಸಿದ ಹೈಕೋರ್ಟ್

    ಹೆಸರಾಂತ ನಟಿ ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಲ್ಲದೇ, ತಿಶ್ರಾ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಿದ್ದ ನಟ ಮನ್ಸೂರ್ ಅಲಿಖಾನ್ (Mansoor Alikhan) ಗೆ ಮದ್ರಾಸ್ ಹೈಕೋರ್ಟ್ (Madras High Court) ಒಂದು ಲಕ್ಷ ರೂಪಾಯಿ ದಂಡವಿಧಿಸಿದೆ. ಜೊತೆಗೆ ತ್ರಿಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿಯನ್ನೂ ನಿರಾಕರಿಸಿದೆ.

    ಈ ಹಿಂದೆ ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌ‍ಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ.

    ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿರಲಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದರು. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಕೂಡ ಆಗಿತ್ತು.

     

    ತ್ರಿಷಾ ಬಗೆಗಿನ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು. ಈಗ ಕೋರ್ಟ್ ಕೂಡ ದಂಡವಿಧಿಸಿದೆ.

  • ತ್ರಿಷಾ ಪ್ರಕರಣ: ನಟನಿಗೆ ಮತ್ತೆ ಎಚ್ಚರಿಸಿದ ಕೋರ್ಟ್

    ತ್ರಿಷಾ ಪ್ರಕರಣ: ನಟನಿಗೆ ಮತ್ತೆ ಎಚ್ಚರಿಸಿದ ಕೋರ್ಟ್

    ದಕ್ಷಿಣದ ಹೆಸರಾಂತ ನಟಿ ತ್ರಿಷಾ (Trisha) ಅವರಿಗೆ ಮಾನಹಾನಿ ರೀತಿಯಲ್ಲಿ ಮಾತನಾಡಿದ್ದ ತಮಿಳಿನ ಖ್ಯಾತ ನಟ ಮನ್ಸೂರ್ ಅಲಿಖಾನ್ (Mansoor Ali Khan) ಗೆ ಮದ್ರಾಸ್ ಹೈಕೋರ್ಟ್ ಮತ್ತೆ ಎಚ್ಚರಿಕೆಯ ಮಾತುಗಳನ್ನು ಆಡಿದೆ. ತ್ರಿಷಾ ಅವರಿಗೆ ನಾನು ಮಾನ ಹಾನಿ ಆಗುವಂತಹ ಮಾತುಗಳನ್ನು ಆಡಿಲ್ಲ. ನನ್ನ ಮಾತುಗಳನ್ನು ಎಡಿಟ್ ಮಾಡಲಾಗಿದೆ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದು ಮನ್ಸೂರ್ ನುಡಿದಿದ್ದರು. ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ನಿರೀಕ್ಷನಾ ಜಾಮೀನು ನೀಡುವಂತೆ ಚೆನ್ನೈನ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಈ ಹಿಂದೆ ಮನ್ಸೂರ್ ಮೊರೆ ಹೋಗಿದ್ದರು. ಆಗಲೂ ಸೆಷನ್ಸ್ ನ್ಯಾಯಾಲಯ ಛೀಮಾರಿ ಹಾಕಿತ್ತು.

    ಈ ಪ್ರಕರಣ ಸುಖಾಂತ್ಯಗೊಳಲಿದೆ ಎನ್ನುವ ಹೊತ್ತಿನಲ್ಲಿ, ಮನ್ಸೂರ್ ಅಲಿಖಾನ್ ಮತ್ತೆ ತ್ರಿಷಾ ಹಾಗೂ ಇನ್ನೂ ಇಬ್ಬರ ಕಲಾವಿದರ ಬಗ್ಗೆ ಅಬ್ಬರಿಸಿದ್ದರು. ತ್ರಿಷಾ ವಿಚಾರದಲ್ಲಿ ಸುಖಾಸುಮ್ಮನೆ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ನಟಿ ಖುಷ್ಭೂ (Khushboo) ಹಾಗೂ ಚಿರಂಜೀವಿ (Chiranjeevi) ಅವರ ಮೇಲೆ ಹರಿಹಾಯ್ದಿದ್ದರು. ಅವರ ಮೇಲೆ ಮಾನನಷ್ಟ (Defamation) ಮೊಕದ್ದಮೆ ಹೂಡುವುದಾಗಿ ಹೇಳಿಕೊಂಡಿದ್ದರು.

    ಅದರಂತೆ ಮದ್ರಾಸ್ ಹೈಕೋರ್ಟಿಗೆ ಮನ್ಸೂರ್ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಇಂದು ಈ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಸತೀಶ್ ಕುಮಾರ್ ಅವರು, ಮನ್ಸೂರ್ ಅಲಿಖಾನ್ ಅವರಿಗೆ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕವಾಗಿ ಹೀಗೆ ಅಸಭ್ಯವಾಗಿ ವರ್ತಿಸಲು ಅನುಮತಿ ಇದೆಯೇ? ಎಂದು ಪ್ರಶ್ನೆ ಮಾಡಿದರು. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದು ಅರಿವಿರಬೇಕು. ಇಂತಹ ಪ್ರಕರಣಗಳನ್ನು ಮುಂದುವರೆಸಿಕೊಂಡು ಹೋಗಬಾರದು ಎಂದು ಹೇಳಿದ ನ್ಯಾಯಮೂರ್ತಿಗಳು, ಪ್ರಕರಣವನ್ನು ಡಿ.22ಕ್ಕೆ ಮುಂದೂಡಿದಿದ್ದಾರೆ.

    ತ್ರಿಷಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಳಹಂತದ ನ್ಯಾಯಾಲಯದಲ್ಲಿ ಮನ್ಸೂರ್ ಅಲಿಖಾನ್ ಪಾಠ ಮಾಡಿಸಿಕೊಂಡಾಗಿದೆ. ಈಗ ಹೈಕೋರ್ಟ್ ನಲ್ಲೂ ಅಂಥದ್ದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ. ಡಿ.22ಕ್ಕೆ ನ್ಯಾಯಾಲಯವು ಈ ಪ್ರಕರಣವನ್ನು ಯಾವ ರೀತಿಯಲ್ಲಿ ನೋಡುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

  • ಮನ್ಸೂರ್ ಅಲಿಖಾನ್ ವಿವಾದ: ತ್ರಿಷಾಗೆ ವಿವರಣೆ ಕೇಳಿ ಪೊಲೀಸರಿಂದ ಪತ್ರ

    ಮನ್ಸೂರ್ ಅಲಿಖಾನ್ ವಿವಾದ: ತ್ರಿಷಾಗೆ ವಿವರಣೆ ಕೇಳಿ ಪೊಲೀಸರಿಂದ ಪತ್ರ

    ಖ್ಯಾತ ನಟ ಮನ್ಸೂರ್ ಅಲಿಖಾನ್ ನಟಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ದೊಡ್ಡ ಸುದ್ದಿ ಆಗಿತ್ತು. ನಟಿ ತ್ರಿಷಾ ಕುರಿತಂತೆ ಆಡಿದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತಂತೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಈ ಪ್ರಕರಣದ ಕುರಿತಂತೆ ವಿವರಣೆ ಕೇಳಿ ನಟಿ ತ್ರಿಷಾ ಪೊಲೀಸರು (Police) ಪತ್ರ ಬರೆದಿದ್ದಾರೆ. ಘಟನೆ ಕುರಿತಂತೆ ವಿವರಣೆ ಕೇಳಿದ್ದಾರೆ.

    ಕ್ಷಮೆ ಕೇಳಿದ್ದಾರೆ ಮನ್ಸೂರ್

    ತ್ರಿಷಾಗೆ ಮಾನಹಾನಿ ಆಗುವಂತಹ ಹೇಳಿಕೆ ನೀಡಿದ್ದ ಹಿರಿಯ ನಟ ಮನ್ಸೂರ್ ಅಲಿ ಖಾನ್ ಈಗಾಗಲೇ ಕ್ಷಮೆ ಕೇಳಿದ್ದಾರೆ. ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಏರುತ್ತಿದ್ದಂತಯೆ ಎಚ್ಚೆತ್ತುಕೊಂಡ ಮನ್ಸೂರ್, ತನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದರು. ನಿಮ್ಮ ವಿವಾಹದ ದಿನದಂದು ಮಾಂಗಲ್ಯವನ್ನು ಮುಟ್ಟಿ ಆಶೀರ್ವದಿಸುವಂತಹ ಅವಕಾಶ ನನಗೆ ಬರಲಿ ಎಂದು ಅವರು ಹೇಳಿದ್ದರು.

    ಮನ್ಸೂರ್ ಅಲಿ ಖಾನ್ ಮೇಲೆ ಈ ಪ್ರಕರಣದ ಕುರಿತಂತೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌ‍ಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ.

    ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಆಗಿದೆ ಎಂದು ವರದಿ ಆಗಿತ್ತು.

     

    ಮನ್ಸೂರ್ ಅಲಿ ಖಾನ್ (Mansoor Ali Khan) ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮಿಳು ಚಿತ್ರೋದ್ಯಮದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ (Trisha) ಅವರನ್ನು ರೇಪ್ (Rape) ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

  • ಮನ್ಸೂರ್ ಅಲಿ ಖಾನ್ ರೇಪ್ ಸೀನ್ ವಿವಾದ: ಖುಷ್ಭೂ ಕಿಡಿಕಿಡಿ

    ಮನ್ಸೂರ್ ಅಲಿ ಖಾನ್ ರೇಪ್ ಸೀನ್ ವಿವಾದ: ಖುಷ್ಭೂ ಕಿಡಿಕಿಡಿ

    ಮಿಳಿನ ಖ್ಯಾತ ಖಳನಟ ಮನ್ಸೂರ್ ಅಲಿ ಖಾನ್ (Mansoor Ali Khan) ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮಿಳು ಚಿತ್ರೋದ್ಯಮದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ (Trisha) ಅವರನ್ನು ರೇಪ್ (Rape) ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

    ತ್ರಿಷಾ ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು.

     

    ಇದೀಗ ಖಷ್ಬೂ (Khushboo) ಈ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಮನ್ಸೂರ್ ಅಲಿ ಖಾನ್ ನಂತಹ ಕೊಳಕು ಮನಸ್ಥಿತಿಯವರಿಗೆ ಕಾನೂನು ಮೂಲಕ ಪಾಠ ಕಲಿಸಬೇಕು. ಇಲ್ಲದಿದ್ದರೆ ಇಂತಹ ಗಂಡಸರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮಾತನಾಡಿದ್ದಾರೆ. ಮತ್ತು ತಾವು ಕಾನೂನು ಮೂಲಕವೇ ಉತ್ತರಿಸುವುದಾಗಿ ತಿಳಿಸಿದ್ದಾರೆ.