Tag: ಮನ್ಸೂಕ್‌ ಮಾಂಡವೀಯ

  • ಸಿಂಗ್‌ ಅವಧಿಯಲ್ಲಿ 2.9 ಕೋಟಿ, ಮೋದಿ ಕಾಲದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ

    ಸಿಂಗ್‌ ಅವಧಿಯಲ್ಲಿ 2.9 ಕೋಟಿ, ಮೋದಿ ಕಾಲದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ

    – UPAಗಿಂತ NDA ಕಾಲದಲ್ಲೇ ಅಧಿಕ ಉದ್ಯೋಗ: ಕೇಂದ್ರ ಸಚಿವ ಮಾಂಡವಿಯಾ

    ನವದೆಹಲಿ: ಯುಪಿಎ (UPA) ಅವಧಿಗಿಂತ ಎನ್‌ಡಿಎ (NDA) ಆಡಳಿತದಲ್ಲಿ 5 ಪಟ್ಟು ಅಧಿಕ ಉದ್ಯೋಗ ಸೃಷ್ಟಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    2014-15ರಲ್ಲಿ 47.15 ಕೋಟಿ ಇದ್ದ ಉದ್ಯೋಗಕ್ಕೆ ಹೋಲಿಸಿದರೆ 2023-24ರಲ್ಲಿ ಶೇ.36ರಷ್ಟು ಏರಿಕೆಯಾಗಿದ್ದು, ಎನ್‌ಡಿಎ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ತಿಳಿಸಿದ್ದಾರೆ.‌ ಇದನ್ನೂ ಓದಿ: ಬಾಂಗ್ಲಾ ಭಯೋತ್ಪಾದಕರು ಒಳನುಸುಳಲು BSF ಸಹಕಾರ: ದೀದಿ ಆರೋಪ

    2004-2014ರ ನಡುವಿನ ಕಾಂಗ್ರೆಸ್ ನೇತೃತ್ವದ ಆಡಳಿತದೊಂದಿಗೆ ದತ್ತಾಂಶವನ್ನು ಹೋಲಿಸಿದ ಸಚಿವರು, ಯುಪಿಎ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಉದ್ಯೋಗವು ಕೇವಲ 7 ಪ್ರತಿಶತದಷ್ಟು ಬೆಳೆದಿದೆ. 2.9 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮೋದಿ ಸರ್ಕಾರದ ಅಡಿಯಲ್ಲಿ, 2014-24 ರ ನಡುವೆ 17.19 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದಲ್ಲಿ ಸುಮಾರು 4.6 ಕೋಟಿ ಉದ್ಯೋಗಗಳು ಇವೆ ಎಂದು ಮಾಂಡವಿಯಾ ಹೇಳಿದ್ದಾರೆ. ಇದನ್ನೂ ಓದಿ: ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ನೀಡಿರುವ ಈ ಮಾಹಿತಿಯು ಮಹತ್ವದ್ದಾಗಿದೆ.

  • ರಾಯಚೂರಿನಲ್ಲಿ ಏಮ್ಸ್ ನಿರ್ಮಾಣಕ್ಕೆ ಒತ್ತಡ – ಕೇಂದ್ರ ಆರೋಗ್ಯ ಸಚಿವರ ಭೇಟಿಯಾದ ಹೈ.ಕ ನಾಯಕರ ನಿಯೋಗ

    ರಾಯಚೂರಿನಲ್ಲಿ ಏಮ್ಸ್ ನಿರ್ಮಾಣಕ್ಕೆ ಒತ್ತಡ – ಕೇಂದ್ರ ಆರೋಗ್ಯ ಸಚಿವರ ಭೇಟಿಯಾದ ಹೈ.ಕ ನಾಯಕರ ನಿಯೋಗ

    ನವದೆಹಲಿ: ರಾಯಚೂರು (Raichuru) ಜಿಲ್ಲೆಯಲ್ಲಿ ಏಮ್ಸ್ (AIIMS) ಸ್ಥಾಪನೆ ಮಾಡುವಂತೆ ಹೈದರಾಬಾದ್ ಕರ್ನಾಟಕದ ಸಚಿವರು, ಸಂಸದರು ಮತ್ತು ಶಾಸಕರ ನಿಯೋಗ ಮನವಿ ಮಾಡಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ (Mansukh Mandaviya) ಭೇಟಿಯಾದ ಸಚಿವ ಶರಣ ಪ್ರಕಾಶ್ ಪಾಟೀಲ್, ಎನ್‌.ಎಸ್ ಬೋಸರಾಜು ನೇತೃತ್ವದ ನಿಯೋಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದೆ.

    ಭೇಟಿ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ್, ಕೇಂದ್ರ ಆರೋಗ್ಯ ಸಚಿವರಿಗೆ ರಾಯಚೂರಿನಲ್ಲಿ ಏಮ್ಸ್ ನಿರ್ಮಾಣ ಮಾಡುವಂತೆ ಮನವಿ ಮಾಡಿದೆ. ಕರ್ನಾಟಕದಲ್ಲಿ ಈವರೆಗೂ ಏಮ್ಸ್ ಸ್ಥಾಪನೆಯಾಗಿಲ್ಲ. ರಾಜ್ಯ ಸರ್ಕಾರದ ವತಿಯಿಂದ ಎಲ್ಲ ಸೌಲಭ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದೇವೆ. ಇದನ್ನೂ ಓದಿ: BJPಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗ್ತಿದ್ದೀನಿ – ಎಸ್.ಟಿ ಸೋಮಶೇಖರ್

    ರಾಯಚೂರಿನಲ್ಲಿ ಏಮ್ಸ್ ಅಗತ್ಯತೆ ವಿವರಿಸಿದೆ. ಹಿಂದುಳಿದ ಭಾಗವಾದ ಈ ಪ್ರದೇಶದಲ್ಲಿ ತಾಯಿ ಶಿಶು ಮರಣ ಪ್ರಮಾಣ ಹೆಚ್ಚಿದೆ. ಗಣಿಗಾರಿಕೆಯೂ ಇರುವ ಹಿನ್ನಲೆ ಹೆಚ್ಚಿನ ಪ್ರಮಾಣದಲ್ಲಿ ಅತ್ಯುನ್ನತ ಆಸ್ಪತ್ರೆ ಅವಶ್ಯಕತೆ ಇದೆ ಎಂದು ಹೇಳಿದೆ. ಕೇಂದ್ರ ಸಚಿವರು ಕೂಡ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರ ಎಲ್ಲಿ ಹೇಳುತ್ತೋ ಅಲ್ಲಿ ಮಾಡುತ್ತೇವೆ ಎಂದಿದ್ದಾರೆ ಎಂದರು.

    ಬಳಿಕ ಮಾತನಾಡಿದ ಎನ್.ಎಸ್ ಬೋಸರಾಜು, ರಾಯಚೂರಿನಲ್ಲಿ ಏಮ್ಸ್ ಮಾಡುವುದು ಸೂಕ್ತ. ಕಲ್ಯಾಣ ಕರ್ನಾಟಕದ ಎಲ್ಲ ಪ್ರತಿನಿಧಿಗಳ ಒತ್ತಾಯವಿದೆ. ಏಮ್ಸ್ ಸ್ಥಾಪನೆಗೆ ಭೂಮಿ ಕೊಡಲಿದ್ದೇವೆ. ನೀರಿನ ವ್ಯವಸ್ಥೆ ಇದೆ. ರಾಯಚೂರಿನಲ್ಲಿ ಏಮ್ಸ್ ನಿರ್ಮಾಣವಾಗಬೇಕು ಎಂದು ಒಂದೇ ಹೆಸರು ಆಯ್ಕೆಗೆ ಕಳುಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ರಾಯಚೂರು ಹೆಸರಿಗೆ ಅನುಮೋದಿಸಿದ್ದಾರೆ. ರಾಜ್ಯ ಸರ್ಕಾರ ಆಶಯದ ಅನ್ವಯ ಏಮ್ಸ್ ನಿರ್ಮಿಸಲು ಮನವಿ ಮಾಡಿದೆ ಎಂದರು. ಇದನ್ನೂ ಓದಿ: ಆಪರೇಷನ್ ಹಸ್ತ ತಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ?

    ನಿಯೋಗದಲ್ಲಿ ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಶಾಸಕರಾದ ಬಾದರ್ಲಿ ಹಂಪನಾಗೌಡ, ಬಸನಗೌಡ ತುರವಿಹಾಳ್, ಬಸಣಗೌಡ ದದ್ದಲ್, ಡಾ. ಶಿವರಾಜ್ ಪಾಟೀಲ್, ಶರಣಗೌಡ ಭಯ್ಯಪೂರ, ಕರಿಯಮ್ಮ ದೇವದುರ್ಗ, ಕಲ್ಯಾಣ ಕರ್ನಾಟಕ ಹೋರಾಟಗಾರರಾದ ಡಾ. ಬಸವರಾಜ್ ಕಳಸ, ಲಕ್ಷ್ಮಣ್ ದಸ್ತಿ, ಅಶೋಕ್ ಕುಮಾರ್ ಇದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]