Tag: ಮನ್ನಾರಾ ಚೋಪ್ರಾ

  • ಸಹೋದರಿ ಮನ್ನಾರಾ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ

    ಸಹೋದರಿ ಮನ್ನಾರಾ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ

    ಬಿಗ್ ಬಾಸ್ ಹಿಂದಿ ಸೀಸನ್ 17 (Bigg Boss Hindi 17)  ಫೈನಲಿಸ್ಟ್ ಮನ್ನಾರಾ ಚೋಪ್ರಾ (Mannara Chopra) ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸಹೋದರಿ ಮನ್ನಾರಾ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಸ್ ದಂಪತಿ ಹಾಜರಿ ಹಾಕಿದ್ದಾರೆ.‌ ಇದನ್ನೂ ಓದಿ:ಗುಟ್ಟಾಗಿ ಮದುವೆಯಾದ್ರಾ ತಮಿಳಿನ ’96’ ಚಿತ್ರದ ಗೌರಿ, ಆದಿತ್ಯ?

     

    View this post on Instagram

     

    A post shared by Patty Cardona (@jerryxmimi)

    ಮಗಳು ಮತ್ತು ಪತಿ ಜೊತೆ ಪ್ರಿಯಾಂಕಾ ಇಂಡಿಯಾದಲ್ಲಿ ಟೂರ್ ಮಾಡುತ್ತಿದ್ದಾರೆ. ಮತ್ತೆ ಭಾರತಕ್ಕೆ ಮರಳಿರುವ ಪ್ರಿಯಾಂಕಾ, ತವರು ಊರಿನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ಮನ್ನಾರಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪ್ರಿಯಾಂಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮನ್ನಾರಾ ಬರ್ತ್‌ಡೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Patty Cardona (@jerryxmimi)

    ಮನ್ನಾರಾ ಬರ್ತ್‌ಡೇ ಪಾರ್ಟಿಯಲ್ಲಿ ಬಿಗ್ ಬಾಸ್ ಸಹಸ್ಪರ್ಧಿಗಳು ಮತ್ತು ಕೆಲ ನಟ-ನಟಿಯರು ಭಾಗಿಯಾಗಿದ್ದು, ಅದರಲ್ಲಿ ಹೈಲೆಟ್ ಆಗಿದ್ದು ಪ್ರಿಯಾಂಕಾ ಆಗಮನ. ಬಿಳಿ ಬಣ್ಣದ ಶೋಲ್ಡರ್ ಲೆಸ್ ಡ್ರೆಸ್‌ನಲ್ಲಿ ಸಖತ್ ಹಾಟ್ & ಬ್ಯೂಟಿಫುಲ್ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಬರ್ತ್‌ಡೇ ಗರ್ಲ್ ಮನ್ನಾರಾ ರೆಡ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು

    ಅಂದಹಾಗೆ, ಇತ್ತೀಚೆಗೆ ಪ್ರಿಯಾಂಕಾ ಕುಟುಂಬ ಅಯೋಧ್ಯೆಗೆ ಭೇಟಿ ನೀಡಿದ್ದರು. ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿತ್ತು. ವಿದೇಶದಲ್ಲಿ ಸೆಟಲ್ ಆಗಿದ್ರು ಕೂಡ ನಮ್ಮ ಸಂಸ್ಕೃತಿಯನ್ನು ನಟಿ ಮರೆತಿಲ್ಲ ಎಂದು ಫ್ಯಾನ್ಸ್ ಬೆನ್ನು ತಟ್ಟಿದ್ದರು.

  • ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಪ್ರಿಯಾಂಕಾ ಚೋಪ್ರಾ ಸಹೋದರಿಗೆ ಚುಂಬಿಸಿದ ನಿರ್ದೇಶಕ

    ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಪ್ರಿಯಾಂಕಾ ಚೋಪ್ರಾ ಸಹೋದರಿಗೆ ಚುಂಬಿಸಿದ ನಿರ್ದೇಶಕ

    ಕೆಲವು ಬಾರಿ ಹೀರೋಯಿನ್‌ಗಳ(Actress) ಜೊತೆ ಅಭಿಮಾನಿಗಳು ಅನುಚಿತ ವರ್ತನೆ ಮಾಡುವುದುಂಟು. ಆದರೆ ನಿರ್ದೇಶಕರು ಕೂಡ ಅದೇ ರೀತಿ ವರ್ತಿಸಿದರೆ ಹೇಗೆ? ಅಂಥದೊಂದು ಘಟನೆ ಇದೀಗ ನಡೆದಿದೆ. ಸಿನಿಮಾ ಪ್ರಚಾರ ಕಾರ್ಯದಲ್ಲಿ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಮನ್ನಾರಾ ಚೋಪ್ರಾಗೆ (Mannara Chopra) ನಿರ್ದೇಶಕ ರವಿ ಕುಮಾರ್ (Ravikumar) ಕಿಸ್ ಮಾಡಿದ್ದಾರೆ. ನಿರ್ದೇಶಕನ ನಡೆಗೆ ನೆಟ್ಟಿಗರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

    ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ತಮ್ಮ ಮುಂಬರುವ ಸಿನಿಮಾ ‘ತಿರಗಬಡರ ಸಾಮಿ’ ಚಿತ್ರದ ಪ್ರಚಾರಕ್ಕೆ ನಟಿ ಮನ್ನಾರ ಅವರ ಜೊತೆಗೆ ಬಂದಿದ್ದರು. ಈ ವೇಳೆ ಕ್ಯಾಮೆರಾಗಳ ಎದುರು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಸಹೋದರ ಸಂಬಂಧಿ ನಟಿ ಮನ್ನಾರಾ ಅವರನ್ನು ನಿರ್ದೇಶಕ ಚುಂಬಿಸಿದ್ದಾರೆ. ಇದಕ್ಕೆ ಹಲವರು ನಿರ್ದೇಶಕನಿಗೆ ಸರಿಯಾಗಿ ಉಗಿದಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ನಟಿ ಮನ್ನಾರ ಅವರು ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ಅವರ ಜೊತೆಗೆ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಈ ವೇಳೆ ನಿರ್ದೇಶಕ ಆಕೆಯ ಭುಜದ ಸುತ್ತ ಕೈ ಹಾಕಿದ್ದರು. ಇದೇ ವೇಳೆ ಆಕೆಯನ್ನು ಎಳೆದು ಚುಂಬಿಸಿದ್ದಾರೆ. ಇದನ್ನೂ ಓದಿ:ಕುಡಿತದ ಚಟದಿಂದ ಮದುವೆ ಮುರಿದೋಯ್ತು, ಮಗಳು ಕೈ ತಪ್ಪಿ ಹೋದಳು- ನಟಿ ಊರ್ವಶಿ

    ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ನಟಿ ಮನ್ನಾರ ಆಶ್ಚರ್ಯದಿಂದ ನಿಂತಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಲವರು ಹಂಚಿಕೊಂಡಿದ್ದು, ವೈರಲ್ ಆಗಿತ್ತು. ನಿರ್ದೇಶಕನ ನಡವಳಿಕೆಗೆ ಅನೇಕರು ದೂಷಿಸಿದ್ದಾರೆ.

    ನಟಿ ಮನ್ನಾರಾ ಚೋಪ್ರಾ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು 9 ವರ್ಷಗಳಾಗಿದೆ. ನಟಿಯ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿಲ್ಲ. ‘ತಿರಗಬಡರ ಸಾಮಿ’ ಚಿತ್ರದಿಂದ ನಟಿಗೆ ಯಶಸ್ಸು ಸಿಗುತ್ತಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]