Tag: ಮನೋಹರಿ ಟೀ ಎಸ್ಟೇಟ್

  • ಅಸ್ಸಾಂನ ಟೀ ಪುಡಿ ಬರೋಬ್ಬರಿ 99,999 ರೂ.ಗೆ ಮಾರಾಟ!

    ಅಸ್ಸಾಂನ ಟೀ ಪುಡಿ ಬರೋಬ್ಬರಿ 99,999 ರೂ.ಗೆ ಮಾರಾಟ!

    ಗುವಾಹಟಿ: ಅಸ್ಸಾಂ ಮೂಲದ ಟೀ ಎಸ್ಟೇಟ್‌ನಲ್ಲಿ ಬೆಳೆದ 1 ಕೆ.ಜಿ ಸಾಂಪ್ರದಾಯಿಕ ಗೋಲ್ಡನ್ ಟಿಪ್ ಟೀ ಪುಡಿ ಬರೋಬ್ಬರಿ 99,999 ರೂ.ಗೆ ಹರಾಜಾಗಿದ್ದು, ದೇಶದಲ್ಲೇ ಅತಿ ಹಚ್ಚು ಬೆಲೆಗೆ ಮಾರಾಟವಾದ ಟೀ ಪುಡಿಯಾಗಿದೆ.

    ಕಳೆದ ವರ್ಷ ಮನೋಹರಿ ಗೋಲ್ಡ್ ಟೀ ಪುಡಿ 75,000 ರೂ.ಗೆ ಮಾರಾಟವಾಗಿತ್ತು. ಆದರೆ ಈ ವರ್ಷ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಗುವಾಹಟಿ ಮೂಲದ ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್, ಮನೋಹರಿ ಟೀ ಎಸ್ಟೇಟ್‌ನಲ್ಲಿ ಬೆಳೆದ ವಿಶೇಷ ಟೀ ಬ್ರ್ಯಾಂಡ್ ನ ಟೀ ಪುಡಿಯನ್ನು ಖರೀದಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ವಿಶೇಷ ತಳಿಯನ್ನು 2018ರಿಂದ ಉತ್ಪಾದನೆ ಮಾಡಲಾಗುತ್ತಿದೆ. ಟೀ ಎಲೆಗಳ ಬದಲಾಗಿ ಟೀ ಮೊಗ್ಗುಗಳಿಂದ ಮನೋಹರಿ ಗೋಲ್ಡ್ ಟೀ ಪುಡಿಯನ್ನು ತಯಾರಿಸುತ್ತಾರೆ. ಈ ಪ್ರಕ್ರಿಯೆಯು ಬಹಳ ಕಷ್ಟಕರವಾಗಿರುತ್ತದೆ.

    ಈ ಬಗ್ಗೆ ಮನೋಹರಿ ಟೀ ಎಸ್ಟೇಟ್‌ನ ಮಾಲೀಕ ರಾಜನ್ ಲೋಹಿಯಾ ಮಾತನಾಡಿ, ಟೀ ಉತ್ಪಾದನೆಗೆ ಅಸ್ಸಾಂನ ಮಣ್ಣು ಮತ್ತು ಹವಾಮಾನ ಹೆಚ್ಚು ಪೂರಕವಾಗಿದೆ. ಗುಣಮಟ್ಟದ ಟೀ ಪುಡಿಗಳನ್ನು ಗ್ರಾಹಕರಿಗೆ ನೀಡಲು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೇವೆ. ಇದರಲ್ಲಿ ನಾವು ಎಂದಿಗೂ ರಾಜಿ ಆಗುವುದಿಲ್ಲ. ಮತ್ತೊಮ್ಮೆ ದಾಖಲೆಯಲ್ಲಿ ಟೀ ಪುಡಿ ಮಾರಾಟವಾಗುವ ಮೂಲಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಾವುದೇ ಖರ್ಚಿಲ್ಲದೇ ಮುಂಬಯಿಂದ ಅಬುಧಾಬಿಗೆ ಹೋದ

    ಮನೋಹರಿ ಟೀ ಎಸ್ಟೇಟ್ 1,000 ಎಕರೆ ಪ್ರದೇಶದಲ್ಲಿದ್ದು, ಸುಮಾರು 600 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ಮನೋಹರಿ ಬ್ರಾಂಡ್‌ನ 1 ಕೆ.ಜಿ ಟೀ ಪುಡಿ 39,000 ರೂ.ಗೆ ಸೌರಭ್ ಟೀ ಟ್ರೇಡರ್ಸ್ ಖರೀದಿಸಿತ್ತು. 2019ರಲ್ಲಿ ಇದೇ ಕಂಪನಿ 50,000 ರೂ. ಬೆಲೆಗೆ ಖರೀದಿಸಿತ್ತು. ಆದರೆ 2020ರಲ್ಲಿ 1 ಕೆ.ಜಿ ಟೀ ಪುಡಿಯನ್ನು 75,000 ರೂ.ಗೆ ವಿಷ್ಣು ಟೀ ಕಂಪನಿ ಹರಾಜಿಲ್ಲಿ ಪಡೆದುಕೊಂಡಿತ್ತು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡ ಸಿಂಹಗಳು!

  • ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ಗುವಾಹಟಿ: ಅಸ್ಸಾಂನ ದಿಬ್ರುಗಡ್ ಜಿಲ್ಲೆಯ ಮನೋಹರಿ ಟೀ ಎಸ್ಟೇಟ್ ತನ್ನ ಚಹಾದ ಎಲೆಗಳ ಮಾರಾಟದಲ್ಲಿ ವಿಶ್ವದಾಖಲೆ ಬರೆದಿದೆ. ಇದೇ ಮೊದಲಿಗೆ ಪ್ರತಿ ಕೆ.ಜಿ ಗೆ 39,001 ರೂ. ಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿ ಸುದ್ದಿಯಾಗಿದೆ.

    ರಾಷ್ಟ್ರಮಟ್ಟದಲ್ಲಿ ಚಹಾದ ಎಲೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಇದೇ ಮೊದಲಿಗೆ ಇಷ್ಟೊಂದು ಬೆಲೆಗೆ ಮಾರಾಟವಾಗಿದ್ದು, ಇತಿಹಾಸದ ದಾಖಲೆಯನ್ನೇ ಸೃಷ್ಟಿಸಿದೆ ಎಂದು ಗುವಾಹಟಿನ ಚಹಾದ ಹರಾಜು ಕೇಂದ್ರ ತಿಳಿಸಿದೆ.

    ವಿಶ್ವಾದ್ಯಂತ ಯಾವುದೇ ಹರಾಜು ಕೇಂದ್ರದಲ್ಲಿ ಚಹಾ ಈ ರೀತಿ ಹೆಚ್ಚಿನ ಬೆಲೆಗೆ ಮಾರಾಟವಾಗಿರಲಿಲ್ಲ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಹರಾಜಾಗಿದೆ. ಇದು ಹೆಮ್ಮೆ ಪಡುವಂತಹ ಕ್ಷಣವಾಗಿದೆ. ನಮ್ಮ ಸಂಸ್ಥೆ ವಿಶೇಷ ವೈವಿಧ್ಯತೆಗಳಿಗೆ ವೇದಿಕೆಯಾಗಿದ್ದು, ಇತರ ಚಹಾದ ಬೆಳೆಗಾರರಿಗೆ ಪ್ರೋತ್ಸಾಹದಾಯಕವಾಗಿದೆ. ಚಹಾದ ಎಲೆಗಳನ್ನು ದೆಹಲಿ ಮತ್ತು ಅಹಮದಾಬಾದ್‍ನಲ್ಲಿದ್ದ ಖರೀದಿಗಾರರಿಗೆ ಮಾರಲಾಯಿತು ಎಂದು ಗುವಾಹಟಿಯ ಚಹಾದ ಹರಾಜು ಕೇಂದ್ರದ ದಿನೇಶ್ ಬಿಹಾನಿರವರು ಹೇಳಿದರು.

    ಮನೋಹರಿ ಟೀ ಎಸ್ಟೇಟ್ ಮಾಲೀಕರಾದ ರಾಜನ್ ಲೋಹಿಯಾರವರ ಮಾರ್ಗದರ್ಶನದಲ್ಲಿ ಸಿ.ಕೆ. ಪರಾಶರವರು ಚಹಾವನ್ನು ಬೆಳೆಸುತ್ತಿದ್ದರು. ಅವರು ಬೆಳೆಯುವುದಕ್ಕೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸುವ ಮೂಲಕ ಎಲೆಗಳ ಗುಣಮಟ್ಟ, ಸಾಕಷ್ಟು ಶ್ರಮವಹಿಸಿ ಬೆಳದಿದ್ದರಿಂದ ಈ ರೀತಿಯ ಬೆಲೆ ಪಡೆಯಲು ಸಾಧ್ಯವಾಯಿತು. ಚಹಾದ ಎಲೆಗಳು ನೋಡಲು 24 ಕ್ಯಾರೆಟ್ ಚಿನ್ನದ ಹಾಗೇ ಇವೆ ಎಂದು ಲೋಹಿಯ ಹೇಳಿದರು.

    ನಮ್ಮ ಗ್ರಾಹಕರು ಉತ್ತಮ ಗುಣಮಟ್ಟದ ಚಹಾವನ್ನು ಹೆಚ್ಚಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಕಳೆದ ವರ್ಷ ಡೋನಿ ಪ್ಲೋ ಟೀ ಎಸ್ಟೇಟ್‍ನ ಚಹಾದ ಎಲೆಗಳನ್ನು 18,801 ರೂ ಗೆ ಮಾರಾಟ ಮಾಡಲಾಗಿತ್ತು. ಗುವಾಹಟಿ ಚಹಾದ ಕೇಂದ್ರವೇ ಅತಿ ದೊಡ್ಡ ಹರಾಜು ಕೇಂದ್ರವಾಗಿದ್ದು, ಪ್ರತಿ ಬಾರಿ ದಾಖಲೆಯ ಬೆಲೆ ಪ್ರತಿ ಕೆ.ಜಿಗೆ 511 ರೂ ಮಾತ್ರವಿತ್ತು ಎಂದು ಸೌರಭ್ ಟೀ ಎಸ್ಟೇಟ್ ನ ಮಾಲೀಕ ಎಂ.ಎಲ್ ಮಹೇಶ್ವರಿರವರು ಹೇಳಿದರು.