Tag: ಮನೋಜ್ ಭಾಂಡ

  • RCB ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ

    RCB ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ

    ರಾಯಚೂರು: ಕೇರಳದಲ್ಲಿ ನಡೆದ ಐಪಿಎಲ್ (IPL) ಬಿಡ್‌ನಲ್ಲಿ ಜಿಲ್ಲೆಯ ಸಿಂಧನೂರಿನ ಕ್ರಿಕೆಟಿಗ 24 ವರ್ಷದ ಮನೋಜ್ ಭಾಂಡಗೆ (Manoj Bhandge) ಆಯ್ಕೆಯಾಗಿದ್ದಾರೆ.

    ಆಟಗಾರರ ಬಿಡ್‌ನಲ್ಲಿ 20 ಲಕ್ಷ ರೂ.ಗಳಿಗೆ ಆರ್‌ಸಿಬಿ (RCB) ತಂಡದ ಪಾಲಾಗುವ ಮೂಲಕ ಪ್ರತಿಷ್ಠಿತ ಐಪಿಎಲ್ ಅಂಗಳ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ರಿಷಭ್ ಪಂಚ್ – ಭಾರತಕ್ಕೆ 80 ರನ್‌ಗಳ ಅಲ್ಪ ಮುನ್ನಡೆ

    ಮನೋಜ್ ಐಪಿಎಲ್‌ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ (Sindhanur) ಕ್ರಿಕೆಟ್ ಅಭಿಮಾನಿಗಳು (Cricket Fans) ಬೈಕ್ ರ‍್ಯಾಲಿ ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಿದ್ದಾರೆ. ಸಿಂಧನೂರಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಪಾಕ್‌ ಮೂಲದ ಆಟಗಾರ – ಪಂಜಾಬ್‌ ಪಾಲಾದ ರಾಜಾ

    ಸಿಂಧನೂರಿನ ರುದ್ರೇಗೌಡ ಕ್ರಿಕೆಟ್ ಅಸೋಸಿಯೇಷನ್ ಮೂಲಕ ರಾಯಚೂರು ಝೋನ್ ಪರವಾಗಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮನೋಜ್ ಕೆಪಿಎಲ್, ಮಹಾರಾಜ ಟ್ರೋಫಿ, ಮುಸ್ತಕ್ ಅಲಿ ಟ್ರೋಫಿಯಲ್ಲಿ ಉತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದ್ದರು. 16 ಮತ್ತು 19 ವರ್ಷದೊಳಗಿನ ರಾಜ್ಯ ತಂಡವನ್ನೂ ಪ್ರತಿನಿಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]