Tag: ಮನೋಜ್ ಬಾಜಪೇಯಿ

  • 38th Leeds International Film: ಮನೋಜ್ ಬಾಜಪೇಯಿ ‘ದಿ ಫ್ಯಾಬಲ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

    38th Leeds International Film: ಮನೋಜ್ ಬಾಜಪೇಯಿ ‘ದಿ ಫ್ಯಾಬಲ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

    ಪ್ರತಿಷ್ಠಿತ ‘ಲೀಡ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌’ನಲ್ಲಿ (38th Leeds International Film) ಮನೋಜ್ ಬಾಜಪೇಯಿ ನಟನೆಯ ‘ದಿ ಫ್ಯಾಬಲ್’ (The Fable) ಸಿನಿಮಾವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದನ್ನೂ ಓದಿ:BBK 11: ಕಳಪೆ ಎಂದ ಮೋಕ್ಷಿತಾಗೆ ಅಸಲಿ ಆಟ ಈಗ ಶುರು ಎಂದು ಸವಾಲೆಸೆದ ಧನರಾಜ್

    ಯುಕೆಯಲ್ಲಿ ನಡೆದ 38ನೇ ಲೀಡ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮನೋಜ್ ಬಾಜಪೇಯಿ (Manoj Bajpayee)  ನಟನೆಯ ‘ದಿ ಫ್ಯಾಬಲ್’ಗೆ ಅತ್ಯುತ್ತಮ ಚಿತ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಲೀಡ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌’ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು (Best Film Award) ಗೆದ್ದ ಮೊದಲ ಭಾರತೀಯ ಸಿನಿಮಾ ಇದಾಗಿದೆ.

     

    View this post on Instagram

     

    A post shared by Sikhya Entertainment (@sikhya)

    ಇನ್ನೂ ಈ ಚಿತ್ರವನ್ನು ಬರಹಗಾರ, ನಿರ್ದೇಶಕ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಭಾರತೀಯ ಚಿತ್ರರಂಗ ಈ ಹಿಂದೆ ಯಾವುದೇ ಭಾರತೀಯ ಚಿತ್ರಕ್ಕೂ ಈ ಪ್ರಶಸ್ತಿಯ ಗೌರವ ಸಿಕ್ಕಿರಲಿಲ್ಲ. ‘ದಿ ಫ್ಯಾಬಲ್’ ಚಿತ್ರ ಇದೀಗ ಹೊಸ ದಾಖಲೆ ಬರೆದಿದೆ.

  • ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ಬಾಲಿವುಡ್ ನಟ ಮನೋಜ್ ಬಾಜಪೇಯಿ (Manoj Bajpayee) ನಟಿಸಿದ ‘ಭಾಯ್ಯಾ ಜಿ’ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಅವರ ಕೆರಿಯರ್‌ನ 100ನೇ ಚಿತ್ರವಾಗಿದೆ. ಈ ಸಂದರ್ಶನವೊಂದರಲ್ಲಿ ಅವರು ಆಡಿದ ಮಾತು ವೈರಲ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

    ಯಾರ ಇದುವರೆಗೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ಗುಲ್ಜಾರ್ ಸಾಬ್, ಗೋವಿಂದ್ ನಿಹಲಾನಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಸಂಜಯ್ ಲೀಲಾ ಬನ್ಸಾಲಿ ಹೆಸರು ತೆಗೆದುಕೊಂಡು ಅವರ ಜೊತೆ ಕೆಲಸ ಮಾಡುವ ಆಸಕ್ತಿಯಿದೆ ಎಂದಿದ್ದಾರೆ.

    ನಟ ಮನೋಜ್ ನಗುತ್ತಲೇ, ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಚಿತ್ರಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದಿದ್ದಾರೆ. ಅವರು ವಿಭಿನ್ನ ರೀತಿಯ ನಿರ್ಮಾಪಕ, ನಿರ್ದೇಶಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ಈ ಹಿಂದೆ ‘ದೇವದಾಸ್’ ಸಿನಿಮಾದಲ್ಲಿ ಚುನ್ನಿ ಲಾಲ್ ಪಾತ್ರವನ್ನು ನೀಡಿದರು. ಆದರೆ ಮನೋಜ್ ಅದನ್ನು ರಿಜೆಕ್ಟ್ ಮಾಡಿದ್ದರು. ದೇವದಾಸ್ ಪಾತ್ರದಲ್ಲಿ ನಟಿಸಲು ಇಷ್ಟವಿದ್ದ ಕಾರಣ ಆ ಪಾತ್ರವನ್ನು ಕೈ ಬಿಟ್ಟಿರೋದಾಗಿಯೂ ಹೇಳಿಕೊಂಡಿದ್ದಾರೆ.

  • ‘ದಿ ಫ್ಯಾಮಿಲಿ ಮ್ಯಾನ್ 3’ ಸಿರೀಸ್ ಬಗ್ಗೆ ಸಿಹಿಸುದ್ದಿ ಕೊಟ್ಟ ಮನೋಜ್ ಬಾಜಪೇಯಿ

    ‘ದಿ ಫ್ಯಾಮಿಲಿ ಮ್ಯಾನ್ 3’ ಸಿರೀಸ್ ಬಗ್ಗೆ ಸಿಹಿಸುದ್ದಿ ಕೊಟ್ಟ ಮನೋಜ್ ಬಾಜಪೇಯಿ

    ಬಾಲಿವುಡ್‌ನಲ್ಲಿ (Bollywood) ‘ದಿ ಫ್ಯಾಮಿಲಿ ಮ್ಯಾನ್’ 2 ಸಿರೀಸ್‌ಗಳು ಸೂಪರ್ ಹಿಟ್ ಆಗಿವೆ. ಇದರ ಮುಂದಿನ ಸರಣಿ ಯಾವಾಗ ಎಂದು ಕಾಯುತ್ತಿದ್ದವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ‘ದಿ ಫ್ಯಾಮಿಲಿ ಮ್ಯಾನ್ 3’ (The Family Man-3) ಬಗ್ಗೆ ನಟ ಮನೋಜ್ ಬಾಜಪೇಯಿ (Manoj Bajpayee) ಮಾಹಿತಿ ನೀಡಿದ್ದಾರೆ.

    ರಾಜ್ & ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್ 3’ ಬರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದೆ ಎಂದು ನಟ ಮನೋಜ್ ಬಾಜಪೇಯಿ ಮಾಹಿತಿ ನೀಡಿದ್ದಾರೆ. ಮತ್ತೆ ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮನೋಜ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಹೆಜ್ಜೇನು ದಾಳಿಗೆ ಜ್ಯೂನಿಯರ್ ಎನ್.ಟಿ.ಆರ್ ಟೀಮ್ ತತ್ತರ: ಆಸ್ಪತ್ರೆಗೆ ದಾಖಲು

    ವೈಯಕ್ತಿಕ ಜೀವನ, ಹೆಂಡತಿ ಜೊತೆಗಿನ ಮನಸ್ತಾಪ, ಮಕ್ಕಳು ಹಾಗೂ ರಾಷ್ಟ್ರದ ಭದ್ರತೆಯ ಕೆಲಸವನ್ನು ಶ್ರೀಕಾಂತ್ ಹೇಗೆ ನಿಭಾಯಿಸಿಕೊಂಡು ಹೋಗ್ತಾರೆ ಎಂಬುದು ಈ ಹೊಸ ಸಿರೀಸ್‌ನ ಕಥೆಯ ಎಳೆ ಎನ್ನಲಾಗಿದೆ. ಇದನ್ನೂ ಓದಿ:‘ಪುಷ್ಪ 2’ ಚಿತ್ರದ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಫಹಾದ್ ಫಾಸಿಲ್

    ಅಂದಹಾಗೆ, 2019ರಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ಒಟಿಟಿಯಲ್ಲಿ ತೆರೆಕಂಡಿತ್ತು. ಮನೋಜ್, ಸಮಂತಾ (Samantha), ಪ್ರಿಯಾಮಣಿ (Priyamani) ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

  • `ಪುಷ್ಪ 2’ನಲ್ಲಿ ಅಲ್ಲು ಅರ್ಜುನ್‌ಗೆ ಟಕ್ಕರ್ ಕೊಡಲಿದ್ದಾರೆ ಈ ಬಾಲಿವುಡ್ ಸ್ಟಾರ್

    `ಪುಷ್ಪ 2’ನಲ್ಲಿ ಅಲ್ಲು ಅರ್ಜುನ್‌ಗೆ ಟಕ್ಕರ್ ಕೊಡಲಿದ್ದಾರೆ ಈ ಬಾಲಿವುಡ್ ಸ್ಟಾರ್

    `ಪುಷ್ಪ’ ಸೂಪರ್ ಡೂಪರ್ ಸಕ್ಸಸ್ ನಂತರ `ಪುಷ್ಪ 2′ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಹೀಗಿರುವಾಗ ಪುಷ್ಪ ದಿ ರೂಲ್‌ನಲ್ಲಿ ಅಲ್ಲು ಅರ್ಜುನ್‌ಗೆ ಬಾಲಿವುಡ್ ಸ್ಟಾರ್ ನಟ ಮನೋಜ್ ಬಾಜಪೇಯಿ ಟಕ್ಕರ್ ಕೊಡಲಿದ್ದಾರೆ.

    ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸೌಂಡ್ ಮಾಡಿರುವ ಸಿನಿಮಾ `ಪುಷ್ಪ’ ಸಿನಿಮಾ ನಂತರ ಅಲ್ಲು ಅರ್ಜುನ್ `ಪುಷ್ಪ 2’ಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಮುಂದೆ ಅಬ್ಬರಿಸಲು ಈ ಬಾರಿ ಬಾಲಿವುಡ್ ಸ್ಟಾರ್ ಮನೋಜ್ ಬಾಜಪೇಯಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ʻಬೊಂಬೆʼಯಂತ ಅದಿತಿ‌, ಬೊಮ್ಮರಿಲ್ಲು ಹೀರೋ ಜೊತೆ ರೊಮ್ಯಾನ್ಸ್

    ಅಲ್ಲು ಅರ್ಜುನ್ ರಶ್ಮಿಕಾ ನಟನೆಯ ಪುಷ್ಪ 2ನಲ್ಲಿ ಮನೋಜ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ `ಹ್ಯಾಪಿ’ ಚಿತ್ರದಲ್ಲಿ ಅಲ್ಲು ಅರ್ಜುನ್ ಜತೆ ಮನೋಜ್ ನಟಿಸಿದ್ದರು. ಇದೀಗ ಮತ್ತೆ ಈ ಚಿತ್ರಕ್ಕಾಗಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಪ 2ನಲ್ಲಿ ಪವರ್‌ಫುಲ್ ಪಾತ್ರದ ಮೂಲಕ ಮನೋಜ್ ಕಮಾಲ್ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಜಯ್ ದೇವಗನ್ ವಿರುದ್ಧವೇ ನಿಂತ ಬಾಲಿವುಡ್ ಇಬ್ಬರೂ ಸ್ಟಾರ್ ನಟರು

    ಅಜಯ್ ದೇವಗನ್ ವಿರುದ್ಧವೇ ನಿಂತ ಬಾಲಿವುಡ್ ಇಬ್ಬರೂ ಸ್ಟಾರ್ ನಟರು

    ಹಿಂದಿ ರಾಷ್ಟ್ರ ಭಾಷೆ ಅಂತ ಒಪ್ಪಿಕೊಳ್ಳದಿದ್ದರೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡಬೇಡಿ ಎಂದು ನಿನ್ನೆಯಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಹೇಳಿದ್ದರು. ಈ ಹೇಳಿಕೆಗೆ ಕಾರಣ ಸುದೀಪ್ ಅವರು ಆಡಿದ ಮಾತುಗಳಾಗಿತ್ತು. ಆದರೆ, ಅದರ ಹಿಂದೆ ಬೇರೆಯೇ ಕಾರಣವಿದೆ ಎಂದಿದ್ದಾರೆ ಬಾಲಿವುಡ್ ನ ಇಬ್ಬರು ಸ್ಟಾರ್ ನಟರು.  ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಿಯಲ್ ಹೀರೋ ಸೋನು ಸೂದ್, ‘ಸಿನಿಮಾಗಳಿಗೆ ಯಾವುದೇ ಭಾಷೆಯಿಲ್ಲ. ರಂಜಿಸುವುದಷ್ಟೇ ಅದರ ಭಾಷೆ. ಸಿನಿಮಾಗಳ ವಿಷಯದಲ್ಲಿ ಭಾಷೆಯನ್ನು ಎಳೆದು ತರಬಾರದು. ನಾವೆಲ್ಲರೂ ಒಂದೇ ಎಂದು ರಂಜಿಸಬೇಕು’ ಎಂದು ಅಜಯ್ ದೇವಗನ್ ಗೆ ಕಿವಿ ಹಿಂಡುವಂತೆ ಹೇಳಿಕೆ ಕೊಟ್ಟಿದ್ದಾರೆ. ಕಲಾವಿದರು ಯಾವುದೇ ಕಾರಣಕ್ಕೂ ಈ ರೀತಿ ಕಿತ್ತಾಟ ಮಾಡಬಾರದು ಎಂದು ಸಲಹೆ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    ಫ್ಯಾಮಿಲಿ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಮನೋಜ್ ಬಾಜಪೇಯಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣದವರ ಸಿನಿಮಾಗಳ ಹಿಂದಿಯಲ್ಲಿ ಗೆಲ್ಲುತ್ತಿವೆ. ನೂರಾರು ಕೋಟಿ ವ್ಯವಹಾರ ಮಾಡಲಾಗುತ್ತಿದೆ. ಹಾಗಾಗಿ ಭಾಷೆಯನ್ನು ಮುಂದಿಟ್ಟುಕೊಂಡು ವಾತಾವರಣವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಬಾಲಿವುಡ್ ನಟರು ಎಂದು ಪರೋಕ್ಷವಾಗಿ ಅಜಯ್ ದೇವಗನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಅಲ್ಲದೇ, ಹಿಂದಿ ರಾಷ್ಟ್ರ ಭಾಷೆಯ ವಿಚಾರ ಸಿನಿಮಾಗಳಿಗೆ ಸಂಬಂಧಿಸಿದ್ದಲ್ಲ. ಅದನ್ನು ಕಲಾವಿದರು ಈ ರೀತಿಯಲ್ಲಿ ಎಳೆದಾಡುವುದು ಸರಿಯಾದದ್ದು ಅಲ್ಲ. ಮನರಂಜನೆಯ ಇಂಡಸ್ಟ್ರಿ ಒಂದೇ ಎಂದು ಎಲ್ಲರೂ ಕೆಲಸ ಮಾಡಬೇಕು ಎಂದು ಕೆಲವರು ಸಲಹೆ ಕೊಟ್ಟಿದ್ದಾರೆ. ಈ ಚರ್ಚೆ ಈಗ ಕೇವಲ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಮಾತ್ರ ಉಳಿದುಕೊಂಡಿಲ್ಲ, ರಾಜಕಾರಣಿಗಳು ಮತ್ತು ಕನ್ನಡ ಪರ ಹೋರಾಟಗಾರರು ಕೂಡ ಅಜಯ್ ದೇವಗನ್ ವಿರುದ್ಧ ಕಿಡಿಕಾರಿದ್ದಾರೆ.