Tag: ಮನೋಜ್ ಠಾಕ್ರೆ

  • ವಾಕಿಂಗ್ ಹೋಗಿದ್ದ ಬಿಜೆಪಿ ನಾಯಕ ಶವವಾಗಿ ಪತ್ತೆ

    ವಾಕಿಂಗ್ ಹೋಗಿದ್ದ ಬಿಜೆಪಿ ನಾಯಕ ಶವವಾಗಿ ಪತ್ತೆ

    ಭೋಪಾಲ್: ಮಧ್ಯ ಪ್ರದೇಶದ ಬರ್ವಾನಿಯ ಬಿಜೆಪಿ ನಾಯಕ ಮನೋಜ್ ಠಾಕ್ರೆ ಮೃತದೇಹ ಅನುಮಾನಾಸ್ಪದವಾಗಿ ವಾರ್ಲಾ ಠಾಣೆ ವ್ಯಾಪ್ತಿಯ ಮೈದಾನದಲ್ಲಿ ಪತ್ತೆಯಾಗಿದೆ.

    ಮೃತ ಮನೋಜ್ ಠಾಕ್ರೆ ಇಂದು ಮುಂಜಾನೆ ವಾಕಿಂಗ್ ಗೆಂದು ಮೈದಾನಕ್ಕೆ ಹೋಗಿದ್ದರು. ಆದರೆ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ರಕ್ತವಾಗಿರುವ ಕಲ್ಲುಗಳು ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿರಬಹುದು ಎಂದು ಬರ್ವಾನಿ ಎಎಸ್‍ಪಿ ಹೇಳಿದ್ದಾರೆ.

    ಠಾಕ್ರೆಯವರ ಮೃತ ದೇಹವು ಬರ್ವಾನಿ ಗ್ರಾಮದ ರಾಧಾ ಸ್ವಾಮಿ ಭವನದ ಸಮೀಪದ ರಸ್ತೆಯ ಸಮೀಪದಲ್ಲಿ ಪತ್ತೆಯಾಗಿದೆ. ಅವರನ್ನು ಅಪರಿಚಿತ ಜನರು ಕೊಲೆ ಮಾಡಿದ್ದಾರೆ ಎಂದು ಸ್ಟೇಷನ್ ಇನ್ ಚಾರ್ಜ್ ದಿನೇಶ್ ಕುಶ್ವಾಹಾ ಹೇಳಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಾರ್ಲಾ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇತ್ತೀಚೆಗಷ್ಟೆ ಅಂದರೆ ಜನವರಿ 17ರಂದು ರಾಜ್ಯದ ಮಂದ್‍ಸೌರ್ ನ ಮುನಿಸಿಪಾಲ್ ಕಾರ್ಪೋರೇಟರ್ ಅಧ್ಯಕ್ಷ ಪ್ರಹ್ಲಾದ್ ಬಂದ್ವಾರ್ ಅವರ ಹತ್ಯೆಯಾಗಿತ್ತು. ಈ ಕೃತ್ಯದ ಬೆನ್ನಲ್ಲೆ ಪಕ್ಷದ ಇನ್ನೊಬ್ಬ ನಾಯಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಹ್ಲಾದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮನೀಶ್ ಬೈರಾಗಿ ಎಂಬಾತನನ್ನು ಬಂಧಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv